ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
“ವೈದ್ಯಕೀಯ ಸಾಧನಗಳು ಮತ್ತು ಔಷಧ ವಲಯದಲ್ಲಿ ಅವಕಾಶಗಳು ಮತ್ತು ಪಾಲುದಾರಿಕೆ” ಕುರಿತ ಹೂಡಿಕೆದಾರರ ಶೃಂಗ ಸಭೆ ಉದ್ದೇಶಿಸಿ 2021 ರ ಅಕ್ಟೋಬರ್ 27 ರಂದು ಡಾ. ಮನ್ಸುಖ್ ಮಾಂಡವೀಯ ಭಾಷಣ
ಇನ್ವೆಸ್ಟ್ ಇಂಡಿಯಾ ಪಾಲುದಾರಿಕೆಯಲ್ಲಿ ಔಷಧ ಇಲಾಖೆಯಿಂದ ಹೂಡಿಕೆದಾರರ ಶೃಂಗ ಸಭೆ ಆಯೋಜನೆ
ಮುಂದಿನ ಕೆಲ ವರ್ಷಗಳಲ್ಲಿ ವೈದ್ಯಕೀಯ ಸಾಧನಗಳ ವಲಯ ಹಾಲಿ 11 ಶತಕೋಟಿ ಡಾಲರ್ ನಿಂದ 50 ಶತಕೋಟಿ ಡಾಲರ್ ಗೆ ಬೆಳವಣಿಗೆಯಾಗುವ ನಿರೀಕ್ಷೆ
ವೈದ್ಯಕೀಯ ಸಾಧನಗಳ ಉತ್ಪಾದನೆಗೆ ಪಿ.ಎಲ್.ಐ ಯೋಜನೆಯಡಿ 13 ಕಂಪೆನಿಗಳನ್ನು ಈಗಾಗಲೇ ಗುರುತಿಸಲಾಗಿದೆ.
Posted On:
25 OCT 2021 1:11PM by PIB Bengaluru
ಔಷಧ ಮತ್ತು ವೈದ್ಯಕೀಯ ಸಾಧನಗಳ ವಲಯದಲ್ಲಿ ಜಾಗತಿಕವಾಗಿ ಭಾರತದ ಪರಿಸ್ಥಿತಿಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಇನ್ವೆಸ್ಟ್ ಇಂಡಿಯಾ ಸಹಯೋಗದಲ್ಲಿ ಔಷಧ ಇಲಾಖೆ 2021 ರ ಅಕ್ಟೋಬರ್ 27 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರ ವರೆಗೆ ಹೂಡಿಕೆದಾರರ ಶೃಂಗ ಸಭೆ ಆಯೋಜಿಸಿದೆ.
“ವೈದ್ಯಕೀಯ ಸಾಧನಗಳು ಮತ್ತು ಔಷಧ ವಲಯದಲ್ಲಿ ಅವಕಾಶಗಳು ಮತ್ತು ಪಾಲುದಾರಿಕೆ” ಎಂಬ ವಿಷಯದಡಿ ಶೃಂಗ ಸಭೆ ನಡೆಯುತ್ತಿದೆ: ಉದ್ಯಮದಲ್ಲಿ ಪಾಲ್ಗೊಳ್ಳುವವರಿಗೆ ಈ ಕೆಳಕಂಡ ವಿಷಯಗಳಲ್ಲಿ ತಾಂತ್ರಿಕ ಅಧಿವೇಶನದಲ್ಲಿ ಸಮಗ್ರವಾಗಿ ತೊಡಗಿಸಿಕೊಳ್ಳಲು ಅವಕಾಶ ಒದಗಿಸುತ್ತದೆ.
ಅಧಿವೇಶನ – 1: ಜೈವಿಕ ಔಷಧ ಕ್ಷೇತ್ರದ ಅವಕಾಶವನ್ನು ಮುಕ್ತಗೊಳಿಸುವುದು: ಜೈವಿಕ ಔಷಧ ಕೇಂದ್ರವಾಗಿ ಭಾರತದ ಖ್ಯಾತಿಯನ್ನು ಜಾಗತಿಕವಾಗಿ ಬಲಪಡಿಸುವುದು
ಅಧಿವೇಶನ II; ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳು: ಭಾರತೀಯ ವೈದ್ಯಕೀಯ ಸಾಧನಾ ವಲಯದಲ್ಲಿನ ಯಶೋಗಾಥೆಗಳು
ಅಧಿವೇಶನ III: ವ್ಯಾಕ್ಸ್ ವಲಯದಲ್ಲಿ ಗುರಿ: ಲಸಿಕೆ ತಯಾರಿಕೆ ಸಾಮರ್ಥ್ಯ ವರ್ಧಿಸಲು ಕೊನೆಯಿಂದ ಕೊನೆಯವರೆಗೆ ಒಟ್ಟುಗೂಡಿಸುವುದು
ಅಧಿವೇಶನ IV: ಔಷಧ ಮತ್ತು ವೈದ್ಯಕೀಯ ಸಾಧನಗಳ ವಲಯದಲ್ಲಿ ಹಣಕಾಸು ಪೂರೈಸುವ ನವೋದ್ಯಮಗಳು: ವಿಸಿ ಹೂಡಿಕೆಗಳ ಭವಿಷ್ಯ?
ಅಧಿವೇಶನ V : ತಳಮಟ್ಟದಿಂದ ಬೃಹತ್ ಔಷಧಗಳು ಮತ್ತು ವೈದ್ಯಕೀಯ ಸಾಧನಾ ಕ್ಷೇತ್ರಕ್ಕೆ ಉತ್ಪಾದನೆ ಆಧರಿತ ಪ್ರೋತ್ಸಾಹ ಯೋಜನೆ [ಪಿ.ಎಲ್.ಐ] ಯಡಿ ಅನುಮೋದಿಸಲಾದ ಹೂಡಿಕೆದಾರರಿಗೆ ನಿಯಂತ್ರಣ ಪ್ರಕ್ರಿಯೆ ಸುಗಮಗೊಳಿಸುವ ಕುರಿತು ಚರ್ಚಿಸಲಾಗುತ್ತದೆ.
ವೈದ್ಯಕೀಯ ವಲಯಕ್ಕೆ ಸಂಬಂಧಿಸಿದ ಅಧಿವೇಶನಗಳಲ್ಲಿ ಜೈವಿಕ – ಔಷಧಗಳ ನಾವೀನ್ಯತಾ ವಲಯದಲ್ಲಿ ಅವಕಾಶಗಳು, ಜೀವಶಾಸ್ತ್ರ/ ಜೈವಿಕ ಸ್ವಾಮ್ಯಗಳು, ಜೀವಕೋಶ ಮತ್ತು ಆನುವಂಶೀಯ ಧಾತು ಚಿಕಿತ್ಸೆ ಹಾಗೂ ಲಸಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತ ಚರ್ಚೆಗಳನ್ನು ಇದು ಒಳಗೊಂಡಿದೆ. ಉತ್ಪಾದನೆ ಆಧರಿತ ಪ್ರೋತ್ಸಾಹ ಯೋಜನೆ – ಪಿ.ಎಲ್.ಐ ನ ಔಷಧ ವಲಯದಡಿ ತಮ್ಮನ್ನು ಪರಿಗಣಿಸುವಂತೆ ಕೋರಿ ಸುಮಾರು 278 ಕಂಪೆನಿಗಳು ಅರ್ಜಿ ಸಲ್ಲಿಸಿದ್ದು, ಈ ಮೂಲಕ ಗಣನೀಯ ಆಸಕ್ತಿ ತೋರಿದಂತಾಗಿದೆ. ಈ ಶೃಂಗ ಸಭೆಯು ಈ ಉತ್ಪನ್ನ ವಿಭಾಗದಲ್ಲಿ ಭಾರತದಲ್ಲಿ ಜಾಗತಿಕ ಚಾಂಪಿಯನ್ ಗಳನ್ನು ನಿರ್ಮಿಸಲು ಬಯಸುವ ಹೂಡಿಕೆದಾರರನ್ನು ಉತ್ತೇಜಿಸುತ್ತದೆ. ವೈದ್ಯಕೀಯ ಸಾಧನಗಳ ವಲಯಕ್ಕೆ ಸಂಬಂಧಿಸಿದಂತೆ ಅಧಿವೇಶನಗಳು ಭಾರತ ವೈದ್ಯಕೀಯ ಸಾಧನಗಳಿಗೆ ಅವಕಾಶಗಳ ಭೂಮಿಯಾಗಿ ಹೇಗೆ ಅಭಿವೃದ್ಧಿ ಹೊಂದಬಹುದು, ಪ್ರಮುಖ ಆವಿಷ್ಕಾರ ಮಾಡುವವರಿಂದ ಪ್ರಾಮುಖ್ಯವಾದ ಕಲಿಕೆ ಕುರಿತ ಚರ್ಚೆಯನ್ನು ಸಹ ಇದು ಒಳಗೊಂಡಿರಲಿದೆ. ವೈದ್ಯಕೀಯ ಸಾಧನಗಳ ಕ್ಷೇತ್ರ ಸೂರ್ಯೋದಯದಂತೆ ಬೆಳವಣಿಗೆ ಕಾಣುತ್ತಿರುವ ವಲಯವಾಗಿದೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಈ ಕ್ಷೇತ್ರ ಪ್ರಸ್ತುತ 11 ಶತಕೋಟಿ ಡಾಲರ್ ನಿಂದ 50 ಶತಕೋಟಿ ಡಾಲರ್ ವರೆಗೆ ಅಭ್ಯುದಯ ಹೊಂದುವ ಸಂಭವವಿದೆ. ಪಿ.ಎಲ್.ಐ ಯೋಜನೆಯಡಿ ಈಗಾಗಲೇ 13 ಕಂಪೆನಿಗಳನ್ನು ಆಯ್ಕೆಮಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇದು ಉದ್ದೇಶಿತ ಸಾಧನಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಜತೆಗೆ ಹೂಡಿಕೆಯನ್ನು ಸಹ ಬೆಂಬಲಿಸಲಿದೆ.
ಬೆಳೆಯುತ್ತಿರುವ ನವೋದ್ಯಮಗಳ ಪರಿಸರ ವ್ಯವಸ್ಥೆಗೆ ಹಣಕಾಸು ಸೌಲಭ್ಯವೂ ಸಹ ಒಳಗೊಂಡಿರಬೇಕಾಗುತ್ತದೆ ಮತ್ತು ಪಿ.ಎಲ್.ಐ ಯೋಜನೆಯಡಿ ಆಯ್ಕೆಯಾದ ಅರ್ಜಿದಾರರಿಗೆ ಹೂಡಿಕೆಗಳನ್ನು ಸುಗಮಗೊಳಿಸುವ ಹಾಗೂ ಸಮಗ್ರ ಸೌಲಭ್ಯ ದೊರಕಿಸಿಕೊಡುವ ಕುರಿತ ಚರ್ಚೆಯೊಂದಿಗೆ ಅಧಿವೇಶನ ಕೊನೆಗೊಳ್ಳುತ್ತದೆ.
***
(Release ID: 1766335)
Visitor Counter : 217