ಗೃಹ ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದಡಿ 100 ಕೋಟಿ ಕೋವಿಡ್ – 19 ಲಸಿಕೆ ಹಾಕಿ ಸಾಧನೆ ಮಾಡಿರುವುದು ಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣ – ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ
“ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ನಿರಂತರ ಪ್ರೋತ್ಸಾಹದ ಮೂಲಕ ಭಾರತ 100 ಕೋಟಿಗೂ ಹೆಚ್ಚು ಕೋವಿಡ್ – 19 ಲಸಿಕೆಯ ಗುರಿ ಸಾಧಿಸುವ ಮೂಲಕ ದಾಖಲೆ ನಿರ್ಮಾಣ: ಅನನ್ಯ ಸಾಮರ್ಥ್ಯದೊಂದಿಗೆ ನವಭಾರತವನ್ನು ಜಗತ್ತಿಗೆ ಮರು ಪರಿಚಯ ಮಾಡಿಕೊಟ್ಟಂತಾಗಿದೆ “
ಐತಿಹಾಸಿಕ ಸಾಧನೆ ಮಾಡಿದ ದೇಶ ಮತ್ತು ಹಲವಾರು ಸವಾಲಿನಿಂದ ಹೊರಬರಲು ಕಾರಣರಾದ ವಿಜ್ಞಾನಿಗಳು, ಸಂಶೋಧಕರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ: ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಹಾಗೂ ರಕ್ಷಣೆ ಮಾಡುವ ನಿಟ್ಟಿನಲ್ಲಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಗೆ ಅಭಿನಂದನೆ
Posted On:
21 OCT 2021 12:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದಲ್ಲಿ 100 ಕೋಟಿಗೂ ಹೆಚ್ಚು ಕೋವಿಡ್ – 19 ಲಸಿಕೆ ಹಾಕಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಇದು ಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.
ಈ ಕುರಿತು ಶ್ರೀ ಅಮಿತ್ ಶಾ ಅವರು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. “ಇದು ಐತಿಹಾಸಿ ಮತ್ತು ಹೆಮ್ಮೆಯ ಕ್ಷಣ! ಶ್ರೀ ನರೇಂದ್ರ ಮೋದಿ ಅವರ ನಿರಂತರ ಪ್ರೋತ್ಸಾಹ ಮತ್ತು ದೂರದೃಷ್ಟಿಯ ನಾಯಕತ್ವದಡಿ 100 ಕೋಟಿ ಕೋವಿಡ್ – 19 ಲಸಿಕೆ ಹಾಕುವ ಗುರಿಯನ್ನು ಸಾಧಿಸಲಾಗಿದೆ. ಅನನ್ಯ ಸಾಮರ್ಥ್ಯದ ಮೂಲಕ ನವಭಾರತವನ್ನು ಜಗತ್ತಿಗೆ ಮರು ಪರಿಚಯ ಮಾಡಿಕೊಟ್ಟಂತಾಗಿದೆ “ ಎಂದು ಹೇಳಿದ್ದಾರೆ.
ಈ ಮೈಲಿಗಲ್ಲು ಸಾಧನೆ ಮಾಡಲು ಕಾರಣರಾದ ಎಲ್ಲಾ ವಿಜ್ಞಾನಿಗಳು, ಸಂಶೋಧಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
“ಈ ಐತಿಹಾಸಿಕ ಸಾಧನೆಯಲ್ಲಿ ಸವಾಲುಗಳನ್ನು ದಾಟಿ ಕೊಡುಗೆ ನೀಡಿದ ಎಲ್ಲಾ ವಿಜ್ಞಾನಿಗಳು, ಸಂಶೋಧಕರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಹಾಗೂ ದೇಶದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ತನ್ನ ಬದ್ಧತೆ ತೋರಿದ ಶ್ರೀ ನರೇಂದ್ರ ಮೋದಿ ಅವರಿಗೂ ಅಭಿನಂದನೆ” ಎಂದು ಹೇಳಿದ್ದಾರೆ.
***
(Release ID: 1765497)
Visitor Counter : 177