ಸಂಪುಟ

01.07.2021ರಿಂದ ಬಾಕಿ ಇದ್ದ ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರಕ್ಕೆ ಹೆಚ್ಚುವರಿ ಕಂತು ಬಿಡುಗಡೆಗೆ ಕೇಂದ್ರ ಸಂಪುಟ ಅನುಮೋದನೆ


ಹಾಲಿ ಇರುವ ಶೇ. 28 ರಷ್ಟು ಮೂಲ ಪಾವತಿ/ಪಿಂಚಣಿ ದರದಲ್ಲಿ ಶೇ.3ರಷ್ಟು ಹೆಚ್ಚಳ

ಇದರಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲ



ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರದಿಂದ ಬೊಕ್ಕಸಕ್ಕೆ ವಾರ್ಷಿಕ 9,488.70 ಕೋಟಿ ರೂ. ಹೊರೆ

Posted On: 21 OCT 2021 3:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 1.7.2021ರಿಂದ ಪೂರ್ವಾನ್ವಯವಾಗುವಂತೆ ಬಾಕಿ ಇದ್ದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್)ಕ್ಕಾಗಿ ಹೆಚ್ಚುವರಿ ಕಂತಿನ ಹಣ ಬಿಡುಗಡೆಗೆ ಅನುಮೋದನೆ ನೀಡಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಹಾಲಿ ಇರುವ ಶೇ.28ರಷ್ಟು ಮೂಲ ಪಾವತಿ/ ಪಿಂಚಣಿ ದರದಲ್ಲಿ ಶೇ.3ರಷ್ಟು ಹೆಚ್ಚಳವಾಗಲಿದೆ.

ಈ ಹೆಚ್ಚಳ ಒಪ್ಪಿತ ಸೂತ್ರದಂತೆ ಇರಲಿದೆ, ಅದು 7ನೇ ಕೇಂದ್ರ ವೇತನ ಆಯೋಗದ ಶಿಫಾರಸು ಆಧರಿಸಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡೂ ಸೇರಿ ವಾರ್ಷಿಕ ಬೊಕ್ಕಸದ ಮೇಲೆ 9,488.70 ಕೋಟಿ ರೂ. ಹೊರೆ ತಗುಲಲಿದೆ. ಇದರಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

***



(Release ID: 1765494) Visitor Counter : 342