ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಒಂದು ಬಿಲಿಯನ್ ಲಸಿಕೆ ನೀಡಿಕೆಯ ಮಹತ್ವದ ಮೈಲಿಗಲ್ಲು ಸಾಧಿಸಿದ ಭಾರತ


ಸದ್ಯ ಚೇತರಿಕೆ ಪ್ರಮಾಣ ಶೇ.98.15: 2020ರ ಮಾರ್ಚ್ ನಿಂದೀಚೆಗೆ ಅತ್ಯಧಿಕ

ಕಳೆದ 24 ಗಂಟೆಗಳಲ್ಲಿ 18,454 ಹೊಸ ಕೋವಿಡ್ ಪ್ರಕರಣ ದಾಖಲು

ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,78,831

ಕಳೆದ 118 ದಿನಗಳಿಂದ ವಾರದ ಪಾಸಿಟಿವಿಟಿ ದರ (ಶೇ.1.34) ಶೇ.3ಕ್ಕಿಂತ ಕಡಿಮೆ ದಾಖಲು

Posted On: 21 OCT 2021 11:44AM by PIB Bengaluru

ದೇಶಾದ್ಯಂತ ನಡೆಯುತ್ತಿರುವ ಬೃಹತ್ ಲಸಿಕಾ ಅಭಿಯಾನದಲ್ಲಿ ಒಟ್ಟು 100 ಕೋಟಿ ಕೋವಿಡ್-19 ಡೋಸ್ ಲಸಿಕೆ ನೀಡುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ, ದೇಶವಾಸಿಗಳನ್ನು ಅಭಿನಂದಿಸಿದ್ದಾರೆ ಮತ್ತು ಅದ್ಭುತ ಸಾಧನೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ ವೈಜ್ಞಾನಿಕ ಸಮುದಾಯ ಮತ್ತು ಆರೋಗ್ಯ ವೃತ್ತಿಪರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ

 

ಮಹತ್ವದ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರೂ ಸಹ ದೇಶವನ್ನು ಅಭಿನಂದಿಸಿದ್ದಾರೆ.

 

ಕಳೆದ 24 ಗಂಟೆಗಳಲ್ಲಿ  17,561 ಕೋವಿಡ್ ರೋಗಿಗಳು ಗುಣಮುಖರಾಗುವುದರೊಂದಿಗೆ ಈವರೆಗೆ ಒಟ್ಟು (ಸಾಂಕ್ರಾಮಿಕ ಆರಂಭವಾದಾಗಿನಿಂದ ಇಲ್ಲಿಯವರೆಗೆ) 3,34,95,808 ಸೋಂಕಿತರು ಗುಣಮುಖರಾಗಿದ್ದಾರೆ.

ಅಂತೆಯೇ ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.98.15 ತಲುಪಿದೆ. 2020 ಮಾರ್ಚ್ ನಿಂದೀಚೆಗೆ ಇದೇ ಮೊದಲ ಬಾರಿ ಅತ್ಯಧಿಕ ಚೇತರಿಕೆ ಪ್ರಮಾಣ ದಾಖಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಾಮೂಹಿಕ ಪ್ರಯತ್ನಗಳ ಪರಿಣಾಮ, ಸತತ 116ನೇ ದಿನವೂ ಸಹ ಸೋಂಕಿತರ ಸಂಖ್ಯೆ 50ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ.

ಕಳೆದ 24 ಗಂಟೆಗಳಲ್ಲಿ 18,454 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತ ಕಡಿಮೆ ಇದೆ ಮತ್ತು ಹಾಲಿ 1,78,831 ಪ್ರಕರಣಗಳಿವೆ. ದೇಶದಲ್ಲಿನ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸದ್ಯದ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.52ರಷ್ಟು ಮಾತ್ರ, ಇದು 2020 ಮಾರ್ಚ್ ನಿಂದೀಚೆಗೆ ಅತಿ ಕಡಿಮೆಯಾಗಿದೆ.

ದೇಶದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ವಿಸ್ತರಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 12,47,506  ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತ ಈವರೆಗೆ ಒಟ್ಟಾರೆ 59.57 ಕೋಟಿ (59,57,42,218) ಪರೀಕ್ಷೆಗಳನ್ನು ನಡೆಸಿದೆ.

ದೇಶಾದ್ಯಂತ ಸೋಂಕು ಪರೀಕ್ಷಾ ಸಾಮರ್ಥ್ಯವನ್ನು ವೃದ್ಧಿಸಲಾಗಿದೆ. ವಾರದ ಪಾಸಿಟಿವಿಟಿ ದರ ಶೇ.1.34ರಷ್ಟು ಮಾತ್ರ ಇದೆ, ಸತತ 118 ನೇ ದಿನವೂ ಶೇ.3ಕ್ಕಿಂತ ಕಡಿಮೆ ದಾಖಲಾಗಿದೆ. ದಿನದ ಪಾಸಿಟಿವಿಟಿ ದರ ಶೇ. 1.48ರಷ್ಟು ದಾಖಲಾಗಿದೆ. ದಿನದ ಪಾಸಿಟಿವಿಟಿ ದರ ಕಳೆದ 52 ದಿನಗಳಿಂದ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಸತತ 135 ದಿನಗಳಿಂದ ಶೇ.5ಕ್ಕಿಂತ ಕಡಿಮೆ ದಾಖಲಾಗಿದೆ.

***



(Release ID: 1765444) Visitor Counter : 273