ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

52ನೇ ಐಎಫ್‌ಎಫ್‌ಐಗಾಗಿ ನೋಂದಣಿ ಆರಂಭ


ಐಎಫ್‌ಎಫ್‌ಐ 52ನೇ ಆವೃತ್ತಿಯಲ್ಲಿ  ವಿಶ್ವದ 300 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು

Posted On: 20 OCT 2021 1:03PM by PIB Bengaluru

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ  52ನೇ ಆವೃತ್ತಿ, ಐಎಫ್‌ಎಫ್‌ಐ ನವೆಂಬರ್ 20ರಿಂದ 28, 2021 ರವರೆಗೆ  ಗೋವಾದಲ್ಲಿ ನಡೆಯಲಿದೆಪ್ರಸ್ತುತ ಕೋವಿಡ್‌19 ಪರಿಸ್ಥಿತಿಯಿಂದಾಗಿ  52ನೇ ಐಎಫ್‌ಎಫ್‌ಐ ಚಲನಚಿತ್ರೋತ್ಸವವು  ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ.

ಐಎಫ್‌ಎಫ್‌ಐ ಪ್ರಪಂಚದಾದ್ಯಂತದ ಅತ್ಯುತ್ತಮ ಸಮಕಾಲೀನ ಮತ್ತು ಶ್ರೇಷ್ಠ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ ಮತ್ತು ವಿಶ್ವಪ್ರಸಿದ್ಧ ಚಲನಚಿತ್ರ ನಿರ್ಮಾಪಕರು, ನಟರು, ತಂತ್ರಜ್ಞರು, ವಿಮರ್ಶಕರು, ಶಿಕ್ಷಣತಜ್ಞರು ಮತ್ತು ಚಲನಚಿತ್ರ ಪ್ರೇಮಿಗಳನ್ನು  ಸ್ವಾಗತಿಸುತ್ತದೆ, ಸಿನಿಮಾ ಮತ್ತು ಚಲನಚಿತ್ರ ನಿರ್ಮಾಣದ ಕಲೆಯನ್ನು ಅದರ ಪ್ರದರ್ಶನ, ಪ್ರಸ್ತುತಿತರಗತಿಗಳ  ಚರ್ಚೆಗಳು, ಸಹ-ಉತ್ಪಾದನೆ, ಸೆಮಿನಾರ್‌ಗಳು, ಇತ್ಯಾದಿಗಳನ್ನೊಳಗೊಂಡು ಆಚರಿಸುತ್ತದೆ.

ಐಎಫ್‌ಎಫ್‌ಐ 52 ನೇ ಆವೃತ್ತಿಗೆ ವೈಯಕ್ತಿಕವಾಗಿ ಹಾಜರಾಗಲು ಇಚ್ಛಿಸುವ ಮಾಧ್ಯಮ ಪ್ರತಿನಿಧಿಗಳು ಈಗ ಲಿಂಕ್‌ನಲ್ಲಿ ಆನ್ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು: https://my.iffigoa.org/extranet/media/ ಲಿಂಕ್‌ನಲ್ಲಿ ಉಲ್ಲೇಖಿಸಲಾದ ಅನ್ವಯವಾಗುವ  ಪಿ ಬಿ   ಮಾರ್ಗಸೂಚಿಗಳ ಪ್ರಕಾರ ಮಾಧ್ಯಮ ಮಾನ್ಯತೆಯನ್ನು ನೀಡಲಾಗುವುದು.

ಅರ್ಜಿದಾರರು 1 ನೇ ಜನವರಿ, 2021 ದಂತೆ 21 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಐಎಫ್‌ಎಫ್‌ಐ ನಂತಹ ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಸಂಬಂಧಿಸಿದ ಕಾರ್ಯ ಮಾಡಿದ ಕನಿಷ್ಠ ಮೂರು ವರ್ಷಗಳವರೆಗೆ ಒಳಗೊಂಡ ವೃತ್ತಿಪರ ಅನುಭವವನ್ನು ಹೊಂದಿರಬೇಕು.

ಸಾರ್ವಜನಿಕ ಹಿತಾಸಕ್ತಿಗಾಗಿ, ಅರ್ಜಿದಾರರಿಗೆ ಕೋವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಂಡಿರುವಂತೆ ಶಿಫಾರಸು ಮಾಡಲಾಗಿದೆ; ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದ ಅರ್ಜಿದಾರರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಪ್ರತಿನಿಧಿ ನೋಂದಣಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು.

ನವೆಂಬರ್ 14, 2021 ಮಧ್ಯರಾತ್ರಿಯೊಳಗೆ ನೋಂದಣಿ ಮುಕ್ತಾಯವಾಗುತ್ತದೆ.

ಆನ್‌ಲೈನ್ ಭಾಗವಹಿಸುವಿಕೆಗೆ ಅವಕಾಶಗಳು

ವರ್ಷ ಜನವರಿಯಲ್ಲಿ ನಡೆದ ಐಎಫ್‌ಎಫ್‌ಐನ 51 ನೇ ಆವೃತ್ತಿಯಂತೆ, 52 ನೇ ಆವೃತ್ತಿಯು ಚಿತ್ರೋತ್ಸವ ಸಂಬಂಧಿತ ಚಟುವಟಿಕೆಗಳಿಗೆ  ವರ್ಚುವಲ್‌ ಆಗಿ ಹಾಜರಾಗಲು ಅವಕಾಶಗಳನ್ನು ಒದಗಿಸುತ್ತದೆ. ಹಲವಾರು ಚಲನಚಿತ್ರ ಪ್ರದರ್ಶನಗಳು ಆನ್‌ಲೈನ್‌ನಲ್ಲಿರುತ್ತವೆ. ಪಿ ಬಿ ನಡೆಸಿದ ಎಲ್ಲಾ ಐಎಫ್‌ಎಫ್‌ಐನ ಪತ್ರಿಕಾಗೋಷ್ಠಿಗಳು  ಪಿಐಬಿಯ ಯೂಟ್ಯೂಬ್ ಚಾನೆಲ್ youtube.com/pibindia ನಲ್ಲಿ ನೇರ ಪ್ರಸಾರವಾಗುತ್ತವೆ ಮತ್ತು ಪತ್ರಕರ್ತರು ಆನ್‌ಲೈನ್‌ನಲ್ಲಿ ಪ್ರಶ್ನೆಗಳನ್ನು ಕೇಳಲು ಅವಕಾಶವಿರುತ್ತದೆ.

ವರ್ಚುವಲ್ ಪ್ಲಾಟ್‌ಫಾರ್ಮ್‌ಗಾಗಿ ನೋಂದಣಿಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು.

ಐಎಫ್‌ಎಫ್‌ಐ ಬಗ್ಗೆ

ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI), 1952 ರಲ್ಲಿ ಸ್ಥಾಪನೆಯಾಯಿತು, ಇದು ಏಷ್ಯಾದ ಅತ್ಯಂತ ಮಹತ್ವದ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಪ್ರತಿ ವರ್ಷವು ನಡೆಯುತ್ತದೆ, ಪ್ರಸ್ತುತ ಗೋವಾ ರಾಜ್ಯದಲ್ಲಿ, ಚಲನಚಿತ್ರೋತ್ಸವದ ಉತ್ಕೃಷ್ಟತೆಯನ್ನು ಪ್ರದರ್ಶಿಸಲು ವಿಶ್ವದ ಚಿತ್ರಮಂದಿರಗಳಿಗೆ ಒಂದು ಸಾಮಾನ್ಯ ವೇದಿಕೆಯನ್ನು ಒದಗಿಸುವ ಉದ್ದೇಶವನ್ನು ಉತ್ಸವ ಹೊಂದಿದೆ; ವಿವಿಧ ರಾಷ್ಟ್ರಗಳ ಚಲನಚಿತ್ರ ಸಂಸ್ಕೃತಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಲಕ್ಷಣಗಳ ಹಿನ್ನೆಲೆಯಲ್ಲಿ ಅವರ ತಿಳುವಳಿಕೆ ಮತ್ತು ಮೆಚ್ಚುಗೆಗೆ ಕೊಡುಗೆ ನೀಡುವುದು; ಮತ್ತು ವಿಶ್ವದ ಜನರ ನಡುವೆ ಸ್ನೇಹ ಮತ್ತು ಸಹಕಾರವನ್ನು ಉತ್ತೇಜಿಸುವುದು. ಉತ್ಸವವನ್ನು ಚಲನಚಿತ್ರೋತ್ಸವಗಳ ನಿರ್ದೇಶನಾಲಯ (ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ) ಮತ್ತು ಗೋವಾ ರಾಜ್ಯ ಸರ್ಕಾರ ಜಂಟಿಯಾಗಿ ನಡೆಸುತ್ತವೆ.

52ನೇ ಐಎಫ್‌ಎಫ್‌ಐನ ಎಲ್ಲಾ ಸಂಬಂಧಿತ ವಿಷಯಗಳನ್ನು ಚಲನಚಿತ್ರೋತ್ಸವದ ಜಾಲತಾಣ www.iffigoa.orgನಲ್ಲಿ ಪಿಐಬಿ ಜಾಲತಾಣ (pib.gov.in), ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಐಎಫ್‌ಎಫ್‌ಐನ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳು ಮತ್ತು ಪಿಐಬಿ ಗೋವಾದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ  ಕಾಣಬಹುದು.

***


(Release ID: 1765168) Visitor Counter : 297