ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಡಿಡಿ ಚಂದನಕ್ಕೆ ದಶಲಕ್ಷ+ ಚಂದಾದಾರರು, ಡಿಜಿಟಲ್ ಪ್ರಸಾರ ಭಾರತಿಗೆ ದಕ್ಷಿಣದ ಉತ್ತೇಜನ
Posted On:
13 OCT 2021 11:53AM by PIB Bengaluru
ಗುಣಮಟ್ಟದ ಕಾರ್ಯಕ್ರಮಗಳು ಮತ್ತು ಡಿಜಿಟಲ್‌ಗೆ ಮೊದಲ ಆದ್ಯತೆಯನ್ನು ಅನುಸರಿಸುತ್ತಿರುವ ಪ್ರಸಾರ ಭಾರತಿಯ ಡಿಜಿಟಲ್ ವೇದಿಕೆಗಳು ದಕ್ಷಿಣ ಭಾರತದಲ್ಲಿ ಕೇವಲ ಒಂದೆರಡು ವರ್ಷಗಳಲ್ಲೇ ಬಹಳ ದೂರ ಸಾಗಿವೆ.
ಈ ಪ್ರದೇಶದಲ್ಲಿ ʻಡಿಡಿ ಚಂದನʼ (ಕರ್ನಾಟಕ) ಯೂಟ್ಯೂಬ್‌ನಲ್ಲಿ 1 ದಶಲಕ್ಷ ಚಂದಾದಾರರ ಮೈಲಿಗಲ್ಲನ್ನು ಸಾಧಿಸಿದ ಮೊದಲ ವಾಹಿನಿಯಾಗಿ ಹೊರಹೊಮ್ಮಿದೆ. ಇದೇ ವೇಳೆ ʻಡಿಡಿ ಸಪ್ತಗಿರಿʼ (ಆಂಧ್ರಪ್ರದೇಶ) ಮತ್ತು ʻಡಿಡಿ ಯಾದಗಿರಿʼ (ತೆಲಂಗಾಣ) ತ್ವರಿತ ಗತಿಯಲ್ಲಿ ಅರ್ಧ ದಶಲಕ್ಷ ಹೆಗ್ಗುರುತಿಗೆ ಹತ್ತಿರವಾಗುತ್ತಿವೆ.
ತಲಾ 1 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ ತಮಿಳು ಮತ್ತು ಮಲಯಾಳಂ ಸುದ್ದಿ ಘಟಕಗಳು ಮತ್ತು ದೂರದರ್ಶನದ ಕೇಂದ್ರಗಳು ಪರಸ್ಪರ ಮತ್ತು ಸ್ಥಳೀಯ ಭಾಷಾ ಮಾಧ್ಯಮ ಉದ್ಯಮದೊಂದಿಗೆ ಆರೋಗ್ಯಕರ ಸ್ಪರ್ಧೆಯಲ್ಲಿವೆ.
ಈ ಯೂಟ್ಯೂಬ್ ಚಾನೆಲ್‌ಗಳಲ್ಲಿ ಹೆಚ್ಚು ವೀಕ್ಷಣೆ ಕಂಡ ವೀಡಿಯೊಗಳಲ್ಲಿ ಹಾಸ್ಯ ಮತ್ತು ಟೆಲಿಫೀಲಂಗಳು, ಸೆಲೆಬ್ರಿಟಿ ಸಂದರ್ಶನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ಸೇರಿವೆ.
ದೂರದರ್ಶನದ ರಾಷ್ಟ್ರೀಯ ಚಾನೆಲ್ ಗಳಲ್ಲಿ, ಅಂತರರಾಷ್ಟ್ರೀಯ ಇಂಗ್ಲಿಷ್ ಸುದ್ದಿ ವಾಹಿನಿ 'ಡಿಡಿ ಇಂಡಿಯಾ' ಇತ್ತೀಚೆಗೆ ಯೂಟ್ಯೂಬ್‌ನಲ್ಲಿ 1 ಲಕ್ಷ ಚಂದಾದಾರರ ಹೆಗ್ಗುರುತನ್ನು ದಾಟಿದೆ. ಯುವಜನರು ಮತ್ತು ಜಾಗತಿಕ ಪ್ರೇಕ್ಷಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಭಾರತದ ವರ್ತಮಾನಗಳನ್ನು ವಿವರಿಸುವ ವಿಶಿಷ್ಟ ಕಾರ್ಯಕ್ರಮಗಳು/ವಿಷಯವಸ್ತುವಿನಿಂದ ಇದು ಸಾಧ್ಯವಾಗಿದೆ.
***
(Release ID: 1763566)
Visitor Counter : 257