ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ʻಆಜಾ಼ದಿ ಕಾ ಅಮೃತ್ ಮಹೋತ್ಸವ'ದ ಅಡಿಯಲ್ಲಿ ಎಚ್‌ಐವಿ/ ಏಡ್ಸ್ ಮತ್ತು ಕ್ಷಯ ರೋಗದ ಬಗ್ಗೆ ಎರಡನೇ ಹಂತದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಡಾ. ಭಾರತಿ ಪ್ರವೀಣ್‌ ಪವಾರ್


ವಿದ್ಯಾರ್ಥಿಗಳು, ಹದಿಹರೆಯದವರು, ಯುವಕರು ಮತ್ತು ಇತರ ಮಧ್ಯಸ್ಥಗಾರನ್ನು ರಾಷ್ಟ್ರೀಯ ಹಿತಾಸಕ್ತಿಗಾಗಿ ಒಟ್ಟಾಗಿ ಶ್ರಮಿಸಲು ಮುಂದಾಗುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯಗಳಿಗೆ ʻನವ ಭಾರತ@75ʼ ವೇದಿಕೆ ಒದಗಿಸಿದೆ: ಡಾ. ಭಾರತಿ ಪ್ರವೀಣ್‌ ಪವಾರ್

"ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮಗಳು ಭಾರತದ ಆರೋಗ್ಯ ಸೂಚ್ಯಂಕಗಳನ್ನು ಸುಧಾರಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿವೆ"

ಮೊದಲ ಹಂತದಲ್ಲಿ ನಡೆಸಲಾದ ವಿವಿಧ ಜಾಗೃತಿ ಚಟುವಟಿಕೆಗಳನ್ನು ಪ್ರದರ್ಶಿಸುವ ಇ-ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು

Posted On: 12 OCT 2021 2:37PM by PIB Bengaluru

`ಆಜಾ಼ದಿ ಕಾ ಅಮೃತ್ ಮಹೋತ್ಸವ ಅಡಿಯಲ್ಲಿ ಎಚ್‌ಐವಿ/ಏಡ್ಸ್ ಮತ್ತು ಟಿಬಿ ಕುರಿತ ಎರಡನೇ ಹಂತದ ಜಾಗೃತಿ ಅಭಿಯಾನಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ್‌ ಪವಾರ್ ಅವರು ಇಂದು ಇಲ್ಲಿ ಚಾಲನೆ ನೀಡಿದರು. ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌  ಮೂಲಕ ಸಂವಾದವನ್ನೂ ನಡೆಸಿದ ಅವರು, ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಪ್ರೇರೇಪಿಸಿದರು.

ಅಭಿಯಾನದ ಆರಂಭದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, "ವಿದ್ಯಾರ್ಥಿಗಳು, ಹದಿಹರೆಯದವರು, ಯುವಕರು ಮತ್ತು ಇತರ ಮಧ್ಯಸ್ಥಗಾರರನ್ನು ರಾಷ್ಟ್ರೀಯ ಹಿತಾಸಕ್ತಿಗಾಗಿ ಒಟ್ಟಾಗಿ ಶ್ರಮಿಸುವಂತೆ ಮಾಡಲು ʻನವಭಾರತ@75ʼ ರಾಜ್ಯಗಳಿಗೆ ವೇದಿಕೆಯನ್ನು ಒದಗಿಸಿದೆ. ಒಂದನೇ ಹಂತದ ಅಭಿಯಾನದ ಆರಂಭದ ನಂತರ, ಪ್ರತಿ ರಾಜ್ಯದ 25 ಶಾಲೆಗಳು ಮತ್ತು 25 ಕಾಲೇಜುಗಳಲ್ಲಿ ಎಚ್‌ಐವಿ/ಏಡ್ಸ್, ಟಿಬಿ ಮತ್ತು ರಕ್ತದಾನದ ಜಾಗೃತಿ ಮೂಡಿಸಲು ಒಂದು ವಾರ ಕಾಲ ಚಿತ್ರಕಲೆ, ಸಮಕಾಲೀನ ಚರ್ಚೆ ಮತ್ತು ಮುಖವಾಡ ತಯಾರಿಕೆಯಂತಹ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ." ಎಂದರು.

ʻಅಂತಾರಾಷ್ಟ್ರೀಯ ಯುವ ದಿನʼ ಅಂಗವಾಗಿ .12ರಂದು 'ಎಚ್ ಐವಿ, ಟಿಬಿ ಮತ್ತು ರಕ್ತದಾನ ಉತ್ತೇಜನ ಕುರಿತ ಜಾಗೃತಿ ಅಭಿಯಾನದ 1ನೇ ಹಂತ'ವನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದಕ್ಕಾಗಿ ಡಾ. ಭಾರತಿ ಪ್ರವೀಣ್‌ ಪವಾರ್ ಅವರು ʻರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆʼಯನ್ನು (ಎನ್‌ಎಸಿಒ) ಅಭಿನಂದಿಸಿದರು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಯುವಕರನ್ನು ತಲುಪುವಲ್ಲಿ ಎನ್ಎಸಿಒ ನಿರ್ವಹಿಸಿದ ಕಾರ್ಯವನ್ನು ಅವರು ಶ್ಲಾಘಿಸಿದರು. ಮೊದಲನೇ ಹಂತದ ಅಡಿಯಲ್ಲಿ ನಡೆಸಲಾದ ವಿವಿಧ ಜಾಗೃತಿ ಚಟುವಟಿಕೆಗಳನ್ನು ಪ್ರದರ್ಶಿಸಲು ʻಎನ್‌ಎಸಿಒʼ ಅಭಿವೃದ್ಧಿಪಡಿಸಿದ -ಕಿರುಹೊತ್ತಿಗೆಯನ್ನೂ ಸಚಿವರು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಕಿರು ಪುಸ್ತಕವು ಮುಂದಿನ ಚಟುವಟಿಕೆಗಳಲ್ಲಿ ಭಾಗವಹಿಸಲು ದೇಶಾದ್ಯಂತದ ಹೆಚ್ಚಿನ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.

ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಅವರು, "ನಮ್ಮ ದೇಶವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಮತ್ತು ʻಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ಅಭಿಯಾನಗಳು ಅತ್ಯಂತ ಮುಖ್ಯ ಎಂದು ನಾನು ಬಲವಾಗಿ ನಂಬುತ್ತೇನೆ. ನಮ್ಮ ಕ್ರಿಯಾಶೀಲ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯ, ಸ್ವಾವಲಂಬಿ ಭಾರತ ದೃಷ್ಟಿಕೋನದ 'ಆತ್ಮನಿರ್ಭರ ಭಾರತʼಕ್ಕೆ ನಿಮ್ಮ ಕೊಡುಗೆ ಅತ್ಯಂತ ಮುಖ್ಯವಾಗಿದೆ,ʼʼ ಎಂದರು ವೇಳೆ ಪ್ರಧಾನಿ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದ ಸಚಿವರುದೇಶಾದ್ಯಂತದ ಭಾರತೀಯ ಯುವಕರು ಕ್ರೀಡೆ, ರೋಬೋಟಿಕ್ಸ್, ಮಷಿನ್‌ ಲರ್ನಿಂಗ್‌ ಮುಂತಾದ ಅನೇಕ ಕ್ಷೇತ್ರಗಳಲ್ಲಿ ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಜೊತೆಗೆ ಜಾಗತಿಕವಾಗಿ ಮಾರುಕಟ್ಟೆ ಹೊಂದಬಲ್ಲ ಸಾಮರ್ಥ್ಯವನ್ನು ಹೊಂದಿರುವ ಅನೇಕ ಉತ್ಪನ್ನಗಳ ಮೇಲೆ ಕೆಲಸ ಮಾಡುತ್ತಿದ್ದಾರೆಎಂದು ನಮ್ಮ ಗೌರವಾನ್ವಿತ ಪ್ರಧಾನಿ ಹೇಳಿರುವುದು ಸರಿಯಷ್ಟೇ ಎಂದರು.

ಸಾಮಾಜಿಕ ಅಭಿವೃದ್ಧಿ ವಿಷಯಗಳಲ್ಲಿ ಯುವಕರನ್ನು ಪಾಲುದಾರರು ಮತ್ತು ನಾಯಕರಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ಗುರಿಗಳನ್ನು ಸಾಧಿಸುವಲ್ಲಿ ತಮ್ಮ ದೃಢ ನಂಬಿಕೆಯನ್ನು ಸಚಿವರು ವ್ಯಕ್ತಪಡಿಸಿದರು. "ಎಚ್‌ಐವಿ/ಏಡ್ಸ್, ಕ್ಷಯ, ರಕ್ತದಾನ, ಕಳಂಕ ಮತ್ತು ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸಲು ಯುವಕರನ್ನು ಸಮುದಾಯದ ಸ್ವಯಂಸೇವಕರಾಗಿ ತೊಡಗಿಸಿಕೊಳ್ಳುವುದು ಯಶಸ್ವಿ ನಡೆಯಾಗಲಿದೆ," ಎಂದು ಹೇಳಿದರು. ಜೀವಿತಾವಧಿ, ಶಿಶು ಮರಣ ಪ್ರಮಾಣ (ಐಎಂಆರ್), ತಾಯಂದಿರ ಮರಣ ಪ್ರಮಾಣ (ಎಂಎಂಆರ್) ಮುಂತಾದ ಎಲ್ಲಾ ಆರೋಗ್ಯ ಸೂಚ್ಯಂಕಗಳಲ್ಲಿ ಭಾರತದ ಗಮನಾರ್ಹ ಸುಧಾರಣೆಗಳನ್ನು ಒತ್ತಿ ಹೇಳಿದ ಸಚಿವರು, ʻರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮʼ ಮತ್ತು ʻರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮʼದಂತಹ ರಾಷ್ಟ್ರೀಯ ಕಾರ್ಯಕ್ರಮಗಳು ಭಾರತದ ಆರೋಗ್ಯ ಸೂಚ್ಯಂಕಗಳನ್ನು ಸುಧಾರಿಸುವಲ್ಲಿ ಬಹಳ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಹೇಳಿದರು.

ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್‌; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾದ ಶ್ರೀಮತಿ ಆರತಿ ಅಹುಜಾ ಮತ್ತು ಶ್ರೀ ಅಲೋಕ್ ಸಕ್ಸೇನಾ, ʻನಾಲ್ಕೊʼ ಮಹಾ ನಿರ್ದೇಶಕರಾದ ಶ್ರೀಮತಿ ನಿಧಿ ಕೇಸರಿವಾನಿ, ʻನಾಲ್ಕೋʼ ನಿರ್ದೇಶಕ ಡಾ. ಅನೂಪ್‌ ಕುಮಾರ್‌ ಪುರಿ, ʻನಾಲ್ಕೊʼ ಉಪ ಮಹಾನಿರ್ದೇಶಕರು ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಿರು ಚಿತ್ರದ ಲಿಂಕ್:

"ಯುವಕರು ಬದಲಾವಣೆಯ ಚಾಂಪಿಯನ್‌ಗಳು": https://www.youtube.com/watch?v=MUWe7wj7ufE

***

 (Release ID: 1763247) Visitor Counter : 344