ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಶ್ರೀ ಅನುರಾಗ್ ಠಾಕೂರ್ ಅವರು ಒಂದು ತಿಂಗಳ ಅವಧಿಯ ರಾಷ್ಟ್ರವ್ಯಾಪಿ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಇಂದು ಹುಮಾಯೂನ್ ಸಮಾಧಿಯ ಆವರಣದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸಿದರು


30 ಲಕ್ಷ ಕಿಲೋಗ್ರಾಂ ತ್ಯಾಜ್ಯವನ್ನು ಅಭಿಯಾನದ ಮೊದಲ 10 ದಿನಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶಾದ್ಯಂತ ಸಂಗ್ರಹಿಸಲಾಗಿದೆ: ಶ್ರೀ ಅನುರಾಗ್ ಠಾಕೂರ್

Posted On: 12 OCT 2021 12:44PM by PIB Bengaluru

ಮುಖ್ಯಾಂಶಗಳು

  • ಸಚಿವಾಲಯವುಪ್ಯಾನ್ ಇಂಡಿಯಾ ಕ್ಲೀನ್ ಇಂಡಿಯಾಕಾರ್ಯಕ್ರಮವನ್ನು ಮುಖ್ಯವಾಗಿ ಪ್ಲಾಸ್ಟಿಕ್ ಸಂಗ್ರಹಿಸಲು ಮತ್ತು ನಿರ್ಮೂಲನೆ ಮಾಡಲು 1 ನೇ ಅಕ್ಟೋಬರ್ 2021 ರಿಂದ 31 ಅಕ್ಟೋಬರ್ 2021 ರವರೆಗೆ ಆಯೋಜಿಸಿದೆ
  • ಆಜಾ಼ದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸ್ವಚ್ಛತೆಯ ಆಂದೋಲನವನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಮುಖ್ಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವಲ್ಲಿ ಜನರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಲಾಗಿದೆ.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು ಇಂದು ಸ್ವಚ್ಛ ಭಾರತ ಅಭಿಯಾನದಲ್ಲಿ ಬೆಳಗ್ಗೆ ದೆಹಲಿಯ ಹುಮಾಯೂನ್ ಸಮಾಧಿಯ ಆವರಣದಲ್ಲಿ ಸ್ವಯಂ ಸೇವಕರೊಂದಿಗೆ ಭಾಗವಹಿಸಿದರು. ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ಶ್ರೀಮತಿ ಉಷಾ ಶರ್ಮಾ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಎನ್‌ ವೈ ಕೆ ಎಸ್‌ ಮತ್ತು ವಿವಿಧ ಸಂಘಗಳ ಸ್ವಯಂಸೇವಕರು ಸಹ ಅಭಿಯಾನದಲ್ಲಿ ಭಾಗವಹಿಸಿ ಇದನ್ನು ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಮತ್ತು ನಿರ್ಮೂಲನೆ ಮಾಡುವ  ಯುವ ಕಾರ್ಯಕ್ರಮದ ಭಾಗವಾಗಿ ಮತ್ತು ಕ್ರೀಡಾ ಸಚಿವಾಲಯದ ಒಂದು ತಿಂಗಳ ಸ್ವಚ್ಛತಾ ಅಭಿಯಾನದ ಭಾಗವಾಗಿ ಆಯೋಜಿಸಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಅಭಿಯಾನವನ್ನು ದೇಶಾದ್ಯಂತ ನಡೆಸಲಾಗುತ್ತಿದೆ.

 

ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, ಸ್ವಚ್ಛ ಭಾರತ ಅಭಿಯಾನವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸನ್ನು ಈಡೇರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಅಭಿಯಾನದ ಮೂಲಕ ನಾವು ಸ್ವಚ್ಛ ಭಾರತ ಅಭಿಯಾನವನ್ನು ಆಯೋಜಿಸುವುದಲ್ಲದೆ ಸ್ವಚ್ಛ ಮತ್ತು ಆರೋಗ್ಯಕರ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 7521 ಕೆಜಿ ತ್ಯಾಜ್ಯವನ್ನು ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಿದೆ. ನಾಗರಿಕರ ಸ್ವಯಂಪ್ರೇರಿತ ಭಾಗವಹಿಸುವಿಕೆ "ಅಭಿಯಾನದ ಮೊದಲ 10 ದಿನಗಳಲ್ಲಿ 30 ಲಕ್ಷ ಕಿಲೋಗ್ರಾಂ ತ್ಯಾಜ್ಯವನ್ನು ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶಾದ್ಯಂತ ಸಂಗ್ರಹಿಸಲಾಗಿದೆ. 31 ನೇ ಅಕ್ಟೋಬರ್ 2021 ಮೊದಲು ನಾವು ದೇಶದಾದ್ಯಂತ 75 ಲಕ್ಷ ಕಿಲೋಗ್ರಾಂಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸುತ್ತೇವೆ ಎಂಬುದು ನನ್ನ ದೃ ಢವಾದ ನಂಬಿಕೆ " ಎಂದು ಶ್ರೀ ಠಾಕೂರ್ ಹೇಳಿದರು.

ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಚಿಪ್ಸ್ ಪೊಟ್ಟಣ ಮತ್ತು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರ ತ್ಯಾಜ್ಯಗಳಿಂದ ರಸ್ತೆಗಳು ಮತ್ತು ಉದ್ಯಾನವನಗಳನ್ನು ಕಸದ ಬುಟ್ಟಿ ಮಾಡಬೇಡಿ ಎಂದು ಸಚಿವ ಶ್ರೀ ಠಾಕೂರ್ ಅವರು ಮನವಿ ಮಾಡಿದರು. ನಮ್ಮ ಮನೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಜಾಗೃತರಾಗಿದ್ದರೆ ಮತ್ತು ಕಸದ ಬುಟ್ಟಿಗಳನ್ನು ಬಳಸಿದರೆ, ಬಹುಶಃ ಭವಿಷ್ಯದಲ್ಲಿ ಇಂತಹ ಸ್ವಚ್ಛತಾ ಅಭಿಯಾನಗಳನ್ನು ಹೊಂದುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಸ್ವಚ್ಛ ಭಾರತವು ಯುವಕರ ನೇತೃತ್ವದ ಕಾರ್ಯಕ್ರಮವಾಗಿದ್ದು, ನೆಹರು ಯುವ ಕೇಂದ್ರ ಸಂಘಟನೆಯ (ಎನ್‌ ವೈ ಕೆ ಎಸ್) ಸಂಯೋಜಿತ ಯೂತ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಅಂಗಸಂಸ್ಥೆಗಳ ಜಾಲಗಳ ಮೂಲಕ ದೇಶಾದ್ಯಂತ 744 ಜಿಲ್ಲೆಗಳ 6 ಲಕ್ಷ ಗ್ರಾಮಗಳಲ್ಲಿ ಸಂಘಟಿತವಾಗಿದೆ ಮತ್ತು ವಿವಿಧ  ಧಾರ್ಮಿಕ ಸಂಸ್ಥೆಗಳು, ಶಿಕ್ಷಕರು, ಕಾರ್ಪೊರೇಟ್ ಸಂಸ್ಥೆಗಳು, ಟಿವಿ ಮತ್ತು ಚಲನಚಿತ್ರ ನಟರು, ಮಹಿಳಾ ಸಂಘ  ಮತ್ತು ಇತರ  ನಿರ್ದಿಷ್ಟ ವಿಭಾಗಗಳು ಉದ್ದೇಶಕ್ಕಾಗಿ ತಮ್ಮ ಒಗ್ಗಟ್ಟನ್ನು ತೋರಿಸಲು ಮತ್ತು ಅದನ್ನು ಸಾರ್ವಜನಿಕ ಚಳವಳಿಯನ್ನಾಗಿಸಲು ನಿರ್ದಿಷ್ಟವಾದ ನಿಗದಿತ ದಿನದಂದು ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರವಾಸಿ ಸ್ಥಳಗಳು, ಬಸ್ ನಿಲ್ದಾಣ/ರೈಲ್ವೇ ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿ ಮತ್ತು ಶಿಕ್ಷಣ ಸಂಸ್ಥೆಗಳು, ಐತಿಹಾಸಿಕ / ಪ್ರಮುಖ  ಸ್ಥಳಗಳಂತಹ ಜನನಿಬಿಡ ಪ್ರದೇಶಗಳಲ್ಲಿ  ಸ್ವಚ್ಛತಾ ಆಂದೋಲನಗಳನ್ನು ಕೈಗೊಳ್ಳಲಾಗುತ್ತಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆ (ಭಾರತ ಸರ್ಕಾರ) 1 ನೇ ಅಕ್ಟೋಬರ್  ರಿಂದ ಅಕ್ಟೋಬರ್ 31, 2021ರವರೆಗೆ ಎನ್‌ ವೈ ಕೆ ಎಸ್, ಎನ್‌ ಎಸ್‌ ಎಸ್, ಯುವ ಸಂಘಗಳು  ಇತ್ಯಾದಿಗಳ ಸಹಾಯದಿಂದ ರಾಷ್ಟ್ರವ್ಯಾಪಿ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಆಯೋಜಿಸಿದೆ. ಕ್ಲೀನ್ ಇಂಡಿಯಾ ಕೇವಲ ಒಂದು ಕಾರ್ಯಕ್ರಮವಲ್ಲ ಆದರೆ ಇದು ಸಾಮಾನ್ಯ ಮನುಷ್ಯನ ನಿಜವಾದ ಕಾಳಜಿಯನ್ನು ಮತ್ತು ಸಮಸ್ಯೆಯನ್ನು ನೇರವಾಗಿ ಪರಿಹರಿಸುವ ಅವರ ಸಂಕಲ್ಪವನ್ನು ಬಿಂಬಿಸುತ್ತದೆ.

ಸ್ವಚ್ಛ ಅಭಿಯಾನವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ 2014 ಅವಧಿಯಲ್ಲಿ ಚಾಲನೆ ಮಾಡಲಾಯಿತು ಮತ್ತು ಅಂದಿನಿಂದ, ನಿಟ್ಟಿನಲ್ಲಿ ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿದೆ. ಸ್ವಚ್ಛ ಭಾರತ ಕಾರ್ಯಕ್ರಮವು ಪ್ರಧಾನ ಮಂತ್ರಿಯವರು ಹೊಸ ಗಮನ ಮತ್ತು ಬದ್ಧತೆಯೊಂದಿಗೆ ಮುನ್ನಡೆಸಿದ ಉಪಕ್ರಮದ ಮುಂದುವರಿಕೆಯಾಗಿದೆ. ಇದು ಸ್ವಚ್ಛ ಭಾರತ ಉಪಕ್ರಮದ ಭಾಗವಾಗಲು ನಮಗೆಲ್ಲರಿಗೂ ಉತ್ತಮ ಅವಕಾಶವಾಗಿದೆ. ಯುವಕರು ಮತ್ತು ಸಹವರ್ತಿಗಳ ಸಾಮೂಹಿಕ ಪ್ರಯತ್ನಗಳು ಮತ್ತು ಎಲ್ಲರ  ಬೆಂಬಲದೊಂದಿಗೆ, ಭಾರತವು ನಿಸ್ಸಂದೇಹವಾಗಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುತ್ತದೆ ಮತ್ತು ತನ್ನ ನಾಗರಿಕರಿಗೆ ಉತ್ತಮ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.

***



(Release ID: 1763232) Visitor Counter : 335