ಹಣಕಾಸು ಸಚಿವಾಲಯ
ಕರ್ನಾಟಕ ಸೇರಿ 17 ರಾಜ್ಯಗಳಿಗೆ 9,871 ಕೋಟಿ ರೂ.ಆದಾಯ ಕೊರತೆ ಅನುದಾನ ಬಿಡುಗಡೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 69,097.00 ಕೋಟಿ ರೂ. ಆದಾಯ ಕೊರತೆ ಅನುದಾನವನ್ನುರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ
Posted On:
11 OCT 2021 2:01PM by PIB Bengaluru
ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಇಂದು, ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ 9,871.00 ಕೋಟಿ ರೂ. 7 ನೇ ಮಾಸಿಕ ಕಂತಿನ ವಿಕೇಂದ್ರೀಕರಣ ನಂತರದ ಆದಾಯ ಕೊರತೆಯ (ಪಿಡಿಆರ್‌ಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಈ ಕಂತಿನ ಬಿಡುಗಡೆಯೊಂದಿಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಪಿಡಿಆರ್‌ಡಿ ಅನುದಾನವಾಗಿ 69,097.00 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದಂತಾಗಿದೆ.
ಈ ತಿಂಗಳು ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2021-22 ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಒಟ್ಟು ಪಿಡಿಆರ್‌ಡಿ ಆದಾಯ ಕೊರತೆ ಅನುದಾನದ ಮೊತ್ತವನ್ನು ಅನುಬಂಧದಲ್ಲಿ ನೀಡಲಾಗಿದೆ.
ಸಂವಿಧಾನದ ಪರಿಚ್ಛೇದ 275 ರ ಅಡಿಯಲ್ಲಿ ರಾಜ್ಯಗಳಿಗೆ ಪಿಡಿಆರ್‌ಡಿ ಅನುದಾನವನ್ನು ಒದಗಿಸಲಾಗಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಮಾಸಿಕ ಕಂತುಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ ಆಯೋಗವು ಪಿಡಿಆರ್‌ಡಿ ಅನುದಾನವನ್ನು ಶಿಫಾರಸು ಮಾಡಿದೆ.
ಈ ಅನುದಾನವನ್ನು ಪಡೆಯಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ನಿರ್ಧರಿಸುತ್ತದೆ. 2021-22ರ ಆರ್ಥಿಕ ವರ್ಷದ ಮೌಲ್ಯಮಾಪನವನ್ನು ಪರಿಗಣಿಸಿದ ನಂತರ ರಾಜ್ಯದ ಆದಾಯ ಮತ್ತು ವೆಚ್ಚದ ಮೌಲ್ಯಮಾಪನದ ನಡುವಿನ ಅಂತರವನ್ನು ಆಧರಿಸಿ ಅನುದಾನ ಮೊತ್ತವನ್ನು ನಿರ್ಧರಿಸಲಾಗಿದೆ.
ಹದಿನೈದನೆಯ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ. ಪಿಡಿಆರ್‌ಡಿ ಅನುದಾನವನ್ನು ಶಿಫಾರಸು ಮಾಡಿದೆ. ಈ ಪೈಕಿ 69,097.00 ಕೋಟಿ ರೂ.ಗಳನ್ನು (ಶೇ.58.33) ಇದುವರೆಗೆ ಬಿಡುಗಡೆ ಮಾಡಲಾಗಿದೆ.
ಹದಿನೈದನೇ ಹಣಕಾಸು ಆಯೋಗವು ಪಿಡಿಆರ್‌ಡಿ ಅನುದಾನಕ್ಕೆ ಶಿಫಾರಸು ಮಾಡಿದ ರಾಜ್ಯಗಳು: ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.
ಬಿಡುಗಡೆಯಾಗಿರುವ ಪಿಡಿಆರ್‌ಡಿ ಅನುದಾನದ ರಾಜ್ಯವಾರು ವಿವರ
ಕ್ರ.ಸಂ.
|
ರಾಜ್ಯ
|
ಅಕ್ಟೋಬರ್ 2021 ರಲ್ಲಿ ಬಿಡುಗಡೆಯಾದ ಮೊತ್ತ
(7 ನೇ ಕಂತು)
(ಕೋಟಿ ರೂ.ಗಳಲ್ಲಿ)
|
2021-22ರ ಅವಧಿಯಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ
(ಕೋಟಿ ರೂ.ಗಳಲ್ಲಿ)
|
1
|
ಆಂಧ್ರಪ್ರದೇಶ
|
1438.08
|
10066.58
|
2
|
ಅಸ್ಸಾಂ
|
531.33
|
3719.33
|
3
|
ಹರಿಯಾಣ
|
11.00
|
77.00
|
4
|
ಹಿಮಾಚಲ ಪ್ರದೇಶ
|
854.08
|
5978.58
|
5
|
ಕರ್ನಾಟಕ
|
135.92
|
951.42
|
6
|
ಕೇರಳ
|
1657.58
|
11603.08
|
7
|
ಮಣಿಪುರ
|
210.33
|
1472.33
|
8
|
ಮೇಘಾಲಯ
|
106.58
|
746.08
|
9
|
ಮಿಜೋರಾಂ
|
149.17
|
1044.17
|
10
|
ನಾಗಾಲ್ಯಾಂಡ್
|
379.75
|
2658.25
|
11
|
ಪಂಜಾಬ್
|
840.08
|
5880.58
|
12
|
ರಾಜಸ್ಥಾನ
|
823.17
|
5762.17
|
13
|
ಸಿಕ್ಕಿಂ
|
56.50
|
395.50
|
14
|
ತಮಿಳುನಾಡು
|
183.67
|
1285.67
|
15
|
ತ್ರಿಪುರ
|
378.83
|
2651.83
|
16
|
ಉತ್ತರಾಖಂಡ
|
647.67
|
4533.67
|
17
|
ಪಶ್ಚಿಮ ಬಂಗಾಳ
|
1467.25
|
10270.75
|
ಒಟ್ಟು
|
9,871.00
|
69097.00
|
****
(Release ID: 1762980)
Visitor Counter : 282