ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

‘ದೆಹಲಿ ಹಾಕಿ ವೀಕೆಂಡ್ ಲೀಗ್‘ ಉದ್ಘಾಟಿಸಿದ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್: ಸ್ಪರ್ಧೆಗಳು ಅಥ್ಲೀಟ್ಗಳ ನೈತಿಕ ಸ್ಥೈರ್ಯ ಉತ್ತೇಜಿಸಲಿವೆ ಎಂದು ಹೇಳಿಕೆ

Posted On: 10 OCT 2021 1:10PM by PIB Bengaluru

ಪ್ರಮುಖ ಮುಖ್ಯಾಂಶಗಳು:

  • ಹೆಚ್ಚಿನ ರಾಜ್ಯಗಳು ಇಂತಹ ಸ್ಪರ್ಧೆಗಳನ್ನು ಆಯೋಜಿಸಬೇಕು, ಅದರಿಂದ ಹಾಕಿಯನ್ನು ಉತ್ತೇಜಿಸಬಹುದಾಗಿದೆ ಮತ್ತು ಯುವ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ತೀಕ್ಷ್ಣಗೊಳಿಸಲು ಅವಕಾಶ ಲಭಿಸಲಿದೆ: ಕ್ರೀಡಾ ಸಚಿವರು
  • ಟ್ರೋಫಿಗಾಗಿ 36 ತಂಡಗಳು ಸೆಣೆಸಲಿವೆ ಮತ್ತು ಮುಂದಿನ ಹಂತಗಳಲ್ಲಿ ಇನ್ನೂ ಹೆಚ್ಚಿನ ತಂಡಗಳು ಭಾಗವಹಿಸಲಿವೆ.

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಹೆಸರಾಂತ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ‘ದೆಹಲಿ ಹಾಕಿ ವೀಕೆಂಡ್ ಲೀಗ್ 2021-22’ಗೆ ಚಾಲನೆ ನೀಡಿದರು.

https://static.pib.gov.in/WriteReadData/userfiles/image/image00131V7.jpg

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಮತ್ತು ಮಹಿಳೆಯರ ತಂಡದ ಯಶಸ್ಸು ಭಾರತದಲ್ಲಿ ಹಾಕಿಗೆ ಒಂದು ಕ್ರೀಡೆಯಾಗಿ ಹೊಸ ಜೀವ ಬಂದಿದೆ ಎಂದು ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಠಾಕೂರ್ ಅವರು, ಭಾರತದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲ ಎಂದರು ಮತ್ತು ಈ ಕ್ರೀಡಾ ಕೂಟ ಆಯೋಜಿಸಿರುವುದಕ್ಕೆ ದೆಹಲಿ ಹಾಕಿ ತಂಡವನ್ನು ಅಭಿನಂದಿಸಿ, ಇದರಿಂದ ತಳಮಟ್ಟದಲ್ಲಿ ಇನ್ನು ಹೆಚ್ಚಿನ ಪ್ರತಿಭೆಗಳನ್ನು ಸೇರಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು. ನಾವು ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆ ಗಳಿಸುವ ನಿಟ್ಟಿನಲ್ಲಿ ತಳಮಟ್ಟದ ಪ್ರತಿಭೆಗಳನ್ನು ಪೋಷಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ತರಬೇತಿ ಮತ್ತು ಸ್ಪರ್ಧೆಗಳು ಅತ್ಯಂತ ಪ್ರಮುಖವಾದವು. ಅವುಗಳ ಅಥ್ಲೀಟ್ ಗಳ ನೈತಿಕ ಸ್ಥೈರ್ಯವನ್ನು ಉತ್ತೇಜಿಸಲಿವೆ. “ಇನ್ನೂ ಹೆಚ್ಚು ಹೆಚ್ಚು ರಾಜ್ಯಗಳು ಇಂತಹ ಕ್ರೀಡಾ ಕೂಟಗಳನ್ನು ಆಯೋಜಿಸಬೇಕು. ಆ ಮೂಲಕ ಹಾಕಿಯನ್ನು ಉತ್ತೇಜಿಸಬಹುದು ಮತ್ತು ಯುವ ಪ್ರತಿಭೆಗಳು ತಮ್ಮ ಕೌಶಲ್ಯವನ್ನು ತೀಕ್ಷ್ಣಗೊಳಿಸಲು ಅವಕಾಶ ದೊರಕುತ್ತದೆ” ಎಂದು ಸಚಿವರು ಹೇಳಿದರು.

https://static.pib.gov.in/WriteReadData/userfiles/image/image002874B.jpg

ಈ ಹಾಕಿ ಲೀಗ್ ಅನ್ನು ಭಾರತೀಯ ಕ್ರೀಡಾ ಪ್ರಾಧಿಕಾರ, ದೆಹಲಿ ಹಾಕಿ ಫೆಡರೇಷನ್ ಸಹಯೋಗದೊಂದಿಗೆ ಆಯೋಜಿಸಿದೆ. ಇದರಲ್ಲಿ ಒಟ್ಟು 36 ತಂಡಗಳು ಟ್ರೋಫಿಗಾಗಿ ಸೆಣಸಲಿವೆ ಮತ್ತು ನಂತರದ ಹಂತಗಳಲ್ಲಿ ಹಲವು ಇನ್ನೂ ಹೆಚ್ಚಿನ ತಂಡಗಳು ಭಾಗವಹಿಸಲಿವೆ. ಇಂದು ಆರಂಭವಾಗಿರುವ ಈ ಸ್ಪರ್ಧೆಯಲ್ಲಿ ಪ್ರತಿ ವಾರಾಂತ್ಯದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಾಗುವುದು. ಮೊದಲ ಲೀಗ್ ಪಂದ್ಯ ದೆಹಲಿ ವಿಶ್ವವಿದ್ಯಾಲಯದ ಶಾಮ್ ಲಾಲ್ ಕಾಲೇಜು ಮತ್ತು ದಿ ಫೇಯ್ತ್  ಕ್ಲಬ್(ಸ್ವತಂತ್ರ ಹಾಕಿ ಕ್ಲಬ್) ನಡುವೆ ನಡೆಯಲಿದೆ. 

https://static.pib.gov.in/WriteReadData/userfiles/image/image003ZGNC.jpg

ಉದ್ಘಾಟನಾ ಸಮಾರಂಭದಲ್ಲಿ ಭಾರತ ಹಾಕಿ ತಂಡದ ಮಾಜಿ ಆಟಗಾರ ಪದ್ಮಶ್ರೀ ಪುರಸ್ಕೃತ ಜಾಫರ್ ಇಕ್ಬಾಲ್, ಹಾಕಿ ವಿಶ್ವಕಪ್(1975) ಚಿನ್ನದ ಪದಕ ವಿಜೇತ ಬ್ರಿಗೇಡಿಯರ್ ಎಚ್ ಜೆಎಸ್ ಚಿಮ್ನಿ ಮತ್ತು ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತೆ ಹೆಲನ್ ಮೇರಿ ಇನೋಸೆಂಟ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. 

***


(Release ID: 1762730) Visitor Counter : 233