ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವರು 19 ರಾಜ್ಯಗಳೊಂದಿಗೆ ಕೋವಿಡ್-19 ಲಸಿಕೆ ನೀಡುವಿಕೆಯ ಪ್ರಗತಿಯನ್ನು ಪರಿಶೀಲಿಸಿದರು


100 ಕೋಟಿ ಡೋಸ್‌ಗಳ ಗುರಿಯನ್ನು ಸಾಧಿಸಲು ರಾಜ್ಯಗಳಿಗೆ ಹೇಳಿದರು

ಕೋವಿಡ್-19ರ ಕಟ್ಟುನಿಟ್ಟಾದ ಮುನ್ನೆಚ್ಚರಿಕೆಯೊಂದಿಗೆ ಸುರಕ್ಷಿತವಾಗಿ ಹಬ್ಬಗಳ ಆಚರಣೆಗೆ  ಗಮನ

Posted On: 09 OCT 2021 3:33PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ಸುಖ್ ಮಾಂಡವೀಯ, ಇಂದು ಎಲ್ಲಾ ಪ್ರಮುಖ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಮಿಷನ್ ನಿರ್ದೇಶಕರೊಂದಿಗೆ (ರಾಷ್ಟ್ರೀಯ ಆರೋಗ್ಯ ಮಿಷನ್) ಸಂವಾದ ನಡೆಸಿದರು ಮತ್ತು ಈ ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆಯ ಪ್ರಗತಿಯನ್ನು ಪರಿಶೀಲಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾರವರು ಭಾರತದ ಕೋವಿಡ್-19 ಲಸಿಕೆ ನೀಡುವಲ್ಲಿ ತಕ್ಷಣದ ಮೈಲಿಗಲ್ಲು 100 ಕೋಟಿ ಡೋಸ್‌ಗಳ ಪೂರ್ಣಗೊಳಿಸುವಿಕೆ ಎಂದು ಅವರು ಒತ್ತಿ ಹೇಳಿದರು. ಭಾರತವು ಇದುವರೆಗೆ 94 ಕೋಟಿ ಲಸಿಕೆ ಡೋಸ್ ಗಳನ್ನು ನೀಡಿದೆ.

ಡಾ. ಮಾಂಡವಿಯವರು ಹಬ್ಬಗಳು ಸಾಮಾನ್ಯವಾಗಿ ಮಂಗಳಕರ, ಸಂತೋಷ ಮತ್ತು ದೊಡ್ಡ ಕೂಟಗಳಿಗೆ ಸಮಾನಾರ್ಥಕವಾಗಿದೆ, ಕೋವಿಡ್ ಮಾರ್ಗಸೂಚಿಗಳ ಅನುಸಾರವಾಗಿ ಮಾಡದಿದ್ದರೆ ಕೋವಿಡ್19  ನಿಯಂತ್ರಣ ಹಳಿ ತಪ್ಪಬಹುದು. "ಇದಕ್ಕಿರುವ ಪರಿಹಾರವೆಂದರೆ ಕೋವಿಡ್ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಸರಿಸುವುದು ಮತ್ತು ಲಸಿಕೆ ನೀಡುವಿಕೆಯನ್ನು ಚುರುಕುಗೊಳಿಸುವುದು" ಎಂದು ಅವರು ಹೇಳಿದರು. ತೀವ್ರವಾದ ಕೋವಿಡ್-19 ಭಾದಿಸದವರಲ್ಲಿ 1 ನೇ ಡೋಸ್ ಪಡೆದವರ ಸಂಖ್ಯೆಯನ್ನು 96% ಎಂದು ಸೂಚಿಸಿದ ಪ್ರಯೋಗಗಳ ಫಲಿತಾಂಶಗಳನ್ನು ಅವರು ಉಲ್ಲೇಖಿಸಿದರು ಮತ್ತು ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡ ಜನರಿಗೆ ಈ ಸಂಖ್ಯೆ ಸುಮಾರು 98% ಕ್ಕೆ ಹೆಚ್ಚಾಗುತ್ತದೆ ಎಂದು ಅವರು ಗಮನಸೆಳೆದರು.

ರಾಜ್ಯಗಳಲ್ಲಿ 8 ಕೋಟಿಗಿಂತಲೂ ಹೆಚ್ಚಿನ ಬಾಕಿ ಡೋಸ್ ಗಳು ಲಭ್ಯವಿರುವುದನ್ನು ಗಮನಿಸಿದ ಅವರು, ರಾಜ್ಯಗಳು ತಮ್ಮ ಲಸಿಕೆ ನೀಡುವಿಕೆಯ ವೇಗವನ್ನು ಹೆಚ್ಚಿಸಲು ಮತ್ತು ಅದರ ಪರಿಣಾಮವಾಗಿ ಉದ್ದೇಶಿತ ಸಂಖ್ಯೆಯಲ್ಲಿ ಲಸಿಕೆ ವ್ಯಾಪ್ತಿಯನ್ನು ಹೆಚ್ಚಿಸಲು. ನಿರ್ದಿಷ್ಟವಾದ ಅಡೆತಡೆಗಳು  ಯಾವುದಾದರೂ ಇದೆಯೇ ಎಂದು ವಿಚಾರಿಸಿದರು. ಅನೇಕ ರಾಜ್ಯಗಳು ನಗರ ಪ್ರದೇಶಗಳಲ್ಲಿ ಲಸಿಕೆ ನೀಡುವ ಮುಕ್ತಾಯದ ಹಂತಕ್ಕೆ ಬರುತ್ತಿವೆ ಮತ್ತು ನಗರದಲ್ಲಿ ವಲಸೆಗಾರರಿಗೆ ಪೂರೈಸುತ್ತಿವೆ. ಅಂತೆಯೇ,  ಶ್ರಮ ಮತ್ತು ಸಮಯವನ್ನ  ಹೆಚ್ಚು ತೆಗೆದುಕೊಳ್ಳುವ ಕೆಲವು  ದೂರವಿರುವ ಕಡೆಗಳಲ್ಲಿ ಮನೆ ಬಾಗಿಲಿಗೇ ತಲುಪಿ ಲಸಿಕೆ ನೀಡುವಿಕೆಯನ್ನು ಕೈಗೊಳ್ಳಲಾಗುತ್ತದೆ, ಅಂತಹ ಕಡೆ ಮೊದಲ ಡೋಸ್ ನೀಡುವಿಕೆಯು ಪೂರ್ಣವಾಗುವ  ಹಂತಕ್ಕೆ ಬರುತ್ತಿದೆ. ಉತ್ತರಪ್ರದೇಶದಂತಹ ರಾಜ್ಯಗಳು ಸಾಮೂಹಿಕ ಲಸಿಕೆ ನೀಡುವಿಕೆಯ ಅಭಿಯಾನವನ್ನು  ಕೈಗೆತ್ತಿಕೊಳ್ಳುತ್ತಿದ್ದು, ಕೋವಾಕ್ಸಿನ್‌ನ ತುಲನಾತ್ಮಕವಾಗಿ ಸೀಮಿತ ಪೂರೈಕೆ ಮತ್ತು ಡೋಸ್ ಗಳ ನಡುವಿನ ಕಡಿಮೆ ಅವಧಿಯನ್ನು ದರ ಪ್ರತಿಬಂಧಕ ಅಂಶವಾಗಿ ತೋರಿಸಿದೆ.

ಮುಂದಿನ ಕೆಲವೇ ದಿನಗಳಲ್ಲಿ 100 ಕೋಟಿ ಗಡಿ ತಲುಪಲು ಕೊನೆಯ 6 ಕೋಟಿ ಡೋಸ್‌ಗಳನ್ನು ನೀಡಲು ರಾಜ್ಯಗಳೊಂದಿಗೆ ಸಮಾಲೋಚಿಸಿ, ಪ್ರತಿ ರಾಜ್ಯವೂ ತಮ್ಮ ಗುರಿಯನ್ನು ಹೆಚ್ಚಿಸುವಂತೆ ಸಚಿವರು ಹೇಳಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯ ಆರೋಗ್ಯ ನಿರ್ವಾಹಕರು ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ಹಬ್ಬದ ಸಮಯದಲ್ಲಿ ಕೋವಿಡ್ ಸೂಕ್ತ ನಡವಳಿಕೆ (ಸಿಎಬಿ)ಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿದರು. 2121ರ ಸೆಪ್ಟೆಂಬರ್ 21 ರಂದು ಸಚಿವಾಲಯದ ಪತ್ರವನ್ನು ನೀಡಲಾದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ವಿವರವಾದ ಎಸ್‌ಒಪಿಗೆ ಬದ್ಧವಾಗಿರಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಈ ಕೆಳಗಿನ ಮಾರ್ಗಸೂಚಿಗಳನ್ನು ಇಲ್ಲಿಯವರೆಗೆ ರಾಜ್ಯಗಳಿಗೆ ನೀಡಲಾಗಿದೆ ಮತ್ತು ಸಭೆಯಲ್ಲಿ ಪುನರುಚ್ಚರಿಸಲಾಗಿದೆ :

  • ಕಂಟೈನ್‌ಮೆಂಟ್ ವಲಯಗಳೆಂದು ಗುರುತಿಸಲಾದ ಪ್ರದೇಶಗಳಲ್ಲಿ ಮತ್ತು 5%ಕ್ಕಿಂತ ಹೆಚ್ಚಿನ ದೃಢಪಟ್ಟ ಪ್ರಕರಣಗಳನ್ನು  ವರದಿ ಮಾಡುವ ಜಿಲ್ಲೆಗಳಲ್ಲಿ ಯಾವುದೇ ಬೃಹತ್ ಕೂಟಗಳು ಇರುವುದಿಲ್ಲ.
  • 5% ಮತ್ತು ಅದಕ್ಕಿಂತ ಕಡಿಮೆ ದೃಢಪಟ್ಟ ಪ್ರಕರಣಗಳನ್ನು  ಹೊಂದಿರುವ ಜಿಲ್ಲೆಗಳಲ್ಲಿ ಮುಂಗಡವಾಗಿ  ಅನುಮತಿ  ಪಡೆದು ಮತ್ತು ಸೀಮಿತ ಜನರು (ಸ್ಥಳೀಯ ಪರಿಸ್ಥಿತಿಯ ಪ್ರಕಾರ) ಸೇರಲು ಅನುಮತಿಸಲಾಗಿದೆ.
  • ಸಾಪ್ತಾಹಿಕ  ದೃಢಪಟ್ಟ ಪ್ರಕರಣಗಳ ವರದಿಗಳನ್ನು ಆಧರಿಸಿ ಸಡಿಲಿಕೆಗಳು ಮತ್ತು ನಿರ್ಬಂಧಗಳನ್ನು ವಿಧಿಸಲಾಗುವುದು.
  • ಯಾವುದೇ ಮುಂಚಿನ ಎಚ್ಚರಿಕೆ ಸಂಕೇತಗಳನ್ನು ಗುರುತಿಸಲು ರಾಜ್ಯಗಳು ಪ್ರತಿದಿನ ಎಲ್ಲಾ ಜಿಲ್ಲೆಗಳ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ನಿರ್ಬಂಧಗಳನ್ನು ಹೇರುವುದನ್ನು ಮತ್ತು ಅದಕ್ಕೆ ಅನುಗುಣವಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
  • ಜನರ ವೈಯುಕ್ತಿಕ ಭೇಟಿಗಳು ಮತ್ತು ಬೆರೆಯುವಿಕೆಯನ್ನು  ತಪ್ಪಿಸಬೇಕು.
  • "ಆನ್‌ಲೈನ್ ದರ್ಶನಗಳು" ಮತ್ತು ವಾಸ್ತವೋಪಮ ಆಚರಣೆಗಳಿಗೆ ಪ್ರೋತ್ಸಾಹ ನೀಡುವುದು.
  • ಪ್ರತಿಮೆಗಳನ್ನು ಸುಡುವುದು, ದುರ್ಗಾಪೂಜೆ ಪೆಂಡಾಲ್, "ದಾಂಡಿಯಾ", "ಗರ್ಬಾಗಳು " ಮತ್ತು "ಛಟ್ ಪೂಜೆ" ಮುಂತಾದ ಎಲ್ಲಾ ಆಚರಣೆಗಳು ಸಾಂಕೇತಿಕವಾಗಿರಬೇಕು.
  • ಕೂಟಗಳು/ ಮೆರವಣಿಗೆಗಳಲ್ಲಿ ಭಾಗವಹಿಸಲು ಅನುಮತಿಸಲಾದ ಜನರ ಸಂಖ್ಯೆಯ ನಿಯಂತ್ರಣ.
  • ಪೂಜೆಯ ಸ್ಥಳಗಳಲ್ಲಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳು ಮತ್ತು ಸಾಮಾನ್ಯ ಪ್ರಾರ್ಥನಾ ಚಾಪೆಗಳ ಬಳಕೆ, "ಪ್ರಸಾದ" ವಿನಿಯೋಗ, ಪವಿತ್ರ ನೀರನ್ನು ಸಿಂಪಡಿಸುವುದು ಇತ್ಯಾದಿಗಳನ್ನು ತಪ್ಪಿಸಬೇಕು.

ಸಭೆಯಲ್ಲಿ ರಾಜ್ಯಗಳಿಗೆ ಒದಗಿಸಲಾದ ತುರ್ತು ಕೋವಿಡ್ ರೆಸ್ಪಾನ್ಸ್ ಪ್ಯಾಕೇಜ್ (ಇಸಿಆರ್ ಪಿ) II ಆರ್ಥಿಕ ಸಂಪನ್ಮೂಲಗಳ ತ್ವರಿತ ಬಳಕೆ ಕುರಿತು ಚರ್ಚಿಸಲಾಯಿತು.

ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸಭೆಯಲ್ಲಿ ಭಾಗವಹಿಸಿದ್ದವು.

***(Release ID: 1762569) Visitor Counter : 293