ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪ್ರಸಾರ ಭಾರತಿಯಿಂದ ಬಾನುಲಿ ಪ್ರಸರಣ(ಪ್ರಸಾರ) ಸುಧಾರಣೆ ಕ್ರಮಗಳು; ಹೊಸ ತಂತ್ರಜ್ಞಾನ, ಹೊಸ ಮಾಹಿತಿ(ವಿಷಯಸೂಚಿ)ಗಳಿಗೆ ದಾರಿ

Posted On: 09 OCT 2021 10:33AM by PIB Bengaluru

ಕಳೆದೆರಡು ವರ್ಷಗಳಿಂದ ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳಿಗೆ ಪ್ರಸಾರ ಭಾರತಿ ತಂದಿರುವ ಸುಧಾರಣಾ ಕ್ರಮಗಳಿಂದ ಕಾಲಾನುಕ್ರಮದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳಡಿಸಿಕೊಳ್ಳಲು ಮತ್ತು ಬದಲಾಗಲು ಸಾಧ್ಯವಾಗುತ್ತಿದೆ. ಅನಲಾಗ್ ಟೆರಿಸ್ಟ್ರಿಯಲ್ ಟಿವಿ ಟ್ರಾನ್ಸ್ ಮೀಟರ್ ನಂತಹ ಹಳೆಯ ಮತ್ತು ಬಳಕೆಯಲ್ಲಿಲ್ಲದ ತಂತ್ರಜ್ಞಾನಗಳನ್ನು ತೆಗೆದುಹಾಕಿರುವುದರಿಂದ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಹೊಸ ಮಾಹಿತಿ(ವಿಷಯಸೂಚಿ)ಗಳ ಅವಕಾಶಗಳಿಗೆ ಬದಲಾಗಲು ಸುಗಮ ದಾರಿ ಮಾಡಿಕೊಟ್ಟಿದೆ.

ಕೆಲವು ನಿರ್ದಿಷ್ಟ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಕಟವಾಗುತ್ತಿರುವುದನ್ನು ಗಮನಿಸಿ ಪ್ರಸಾರ ಭಾರತಿ ಸ್ಪಷ್ಟನೆ ನೀಡಿದ್ದು, ತೀರಾ ಹಳೆಯದಾದಾ ಅನಲಾಗ್ ಟೆರಿಸ್ಟ್ರಿಯಲ್ ಟಿವಿ ಟ್ರಾನ್ಸ್ ಮೀಟರ್ ತಂತ್ರಜ್ಞಾನಗಳನ್ನು ಕೈಬಿಟ್ಟು, ಬಾನುಲಿ ಪ್ರಸಾರಕ್ಕೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆದರೆ ಈ ವಿಚಾರವನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆ ಡಿಡಿ ಸಿಲ್ಚಾರ್, ಡಿಡಿ ಕಲಬುರಗಿ ಇತ್ಯಾದಿ ವಾಹಿನಿಗಳ ಬಗ್ಗೆ ತಪ್ಪು ವರದಿಗಳು ಪ್ರಕಟವಾಗಿರುವುದನ್ನು ಗಮನಿಸಲಾಗಿದೆ. ಹಾಗಾಗಿ, ಈ ದೂರದರ್ಶನ ಕೇಂದ್ರಗಳು ಆಯಾ ರಾಜ್ಯಗಳಲ್ಲಿ ಉಪಗ್ರಹ ವಾಹಿನಿಗಳ ಮೂಲಕ ಮುಂದೆಯೂ ಕಾರ್ಯಕ್ರಮಗಳನ್ನು ತಯಾರಿಸಿ, ಪ್ರಸಾರ ಮಾಡಲಿವೆ. ಜತೆಗೆ, ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳ ಡಿಜಿಟಲ್ ಮಾಧ್ಯಮಗಳಲ್ಲೂ ಅವು ಕಾರ್ಯಕ್ರಮ ಬಿತ್ತರಿಸಲಿವೆ. ಉದಾಹರಣೆಗೆ ಡಿಡಿ ಸಿಲ್ಚಾರ್ ನಲ್ಲಿ ತಯಾರಾಗುವ ಕಾರ್ಯಕ್ರಮಗಳು ಡಿಡಿ ಅಸ್ಸಾಂನಲ್ಲಿ ಹಾಗೂ ಡಿಡಿ ಕಲಬುರಗಿಯಲ್ಲಿ ನಿರ್ಮಾಣವಾಗುವ ಕಾರ್ಯಕ್ರಮಗಳು ಡಿಡಿ ಚಂದನದಲ್ಲಿ ಪ್ರಸಾರವಾಗಲಿವೆ ಎಂದು ಪ್ರಸಾರ ಭಾರತಿ ಸ್ಪಷ್ಟಪಡಿಸಿದೆ.

ಅನಲಾಗ್ ಟೆರಿಸ್ಟ್ರಿಯಲ್ ಟಿವಿ ಟ್ರಾನ್ಸ್ ಮೀಟರ್ ಹಳೆಯ ತಂತ್ರಜ್ಞಾನವಾಗಿದ್ದು, ಸಾರ್ವಜನಿಕರು ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಈ ತಂತ್ರಜ್ಞಾನವನ್ನು ಕೈಬಿಟ್ಟು, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಉದಯೋನ್ಮುಖ ತಂತ್ರಜ್ಞಾನಕ್ಕೆ ಲಭ್ಯವಿರುವ ಮೌಲ್ಯಯುತ 5ಜಿ ಸ್ಪೆಕ್ಟ್ರಂ ಬಳಸಿಕೊಳ್ಳಾಗುತ್ತಿದೆ. ಇದುವರೆಗೆ, 70% ಅನಲಾಗ್ ಟ್ರಾನ್ಸ್ ಮೀಟರ್ ಗಳನ್ನು ಬದಲಿಸಲಾಗಿದೆ. ಇನ್ನುಳಿದ ಟ್ರಾನ್ಸ್ ಮೀಟರ್ ಗಳನ್ನು ಸಹ ಹಂತ ಹಂತವಾಗಿ ತೆಗೆದುಹಾಕಿ, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು. ಇದರಿಂದ ಪೋಲಾಗುತ್ತಿದ್ದ ವಿದ್ಯುತ್ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಾಗುತ್ತಿದೆ. ಜತೆಗೆ, ಮಾನವ ಸಂಪನ್ಮೂಲದ ಮರುನಿಯೋಜನೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾರ್ಯತಂತ್ರ ಸ್ಥಳಗಳಲ್ಲಿರುವ ಸುಮಾರು 50 ಅನಲಾಗ್ ಟೆರಿಸ್ಟ್ರಿಯಲ್ ಟ್ರಾನ್ಸ್ ಮೀಟರ್ ಗಳನ್ನು ಹೊರತುಪಡಿಸಿ, ಇನ್ನುಳಿದ ಟ್ರಾನ್ಸ್ ಮೀಟರ್ ಗಳನ್ನು 2022 ಮಾರ್ಚ್ ಒಳಗೆ ಹೊಸ ತಂತ್ರಜ್ಞಾನಕ್ಕೆ ಬದಲಿಸಲಾಗುವುದು ಎಂದು ಪ್ರಸಾರ ಭಾರತಿ ತಿಳಿಸಿದೆ.

ಅನಲಾಗ್ ಟ್ರಾನ್ಸ್ ಮೀಟರ್ ಬದಲಿಸಲು ಮತ್ತು ಸಂಪನ್ಮೂಲ ತರ್ಕಬದ್ಧಗೊಳಿಸಲು ಹಾಕಿಕೊಂಡಿರುವ ಕಾಲಮಿತಿ.

ವರ್ಷ

ಬದಲಿಸಿರುವ ಅನಲಾಗ್ ಟ್ರಾನ್ಸ್ ಮೀಟರ್ ಗಳ ಸಂಖ್ಯೆ

ಸ್ಪೆಕ್ಟ್ರಂ ಬ್ಯಾಂಡ್ ವಿಡ್ತ್

ಐಇಬಿಆರ್

ವಾರ್ಷಿಕ ವೆಚ್ಚ ನಿಯಂತ್ರಣ

2017 - 18

306

 

ವಿಎಚ್ಎಫ್ ನಲ್ಲಿ 7 ಮೆಗಾ ಹರ್ಟ್ಸ್

ಯುಎಚ್ಎಫ್ ನಲ್ಲಿ 8 ಮೆಗಾ ಹರ್ಟ್ಸ್

 

ವಾರ್ಷಿಕ ಕಾರ್ಯಾಚರಣೆ ವೆಚ್ಚ ಸುಮಾರು 100 ಕೋಟಿ ರೂ. ಉಳಿತಾಯ

2018 - 19

468

2019 - 20

6

2020 - 21

46

2021 - 22

412

ಅಕ್ಟೋಬರ್ ಹೊತ್ತಿಗೆ 21 – 152

ಡಿಸೆಂಬರ್ ಹೊತ್ತಿಗೆ  21 – 109

ಮಾರ್ಚ್ ಹೊತ್ತಿಗೆ  22 – 151

ಹೊಸ ಪೀಳಿಗೆಯ ಬಾನುಲಿ ಪ್ರಸಾರ ಪರಿಹಾರಗಳು ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು ಪ್ರಸಾರ ಭಾರತಿಯು ಐಐಟಿ ಕಾನ್ಪುರ ಜತೆ ಒಡಂಬಡಿಕೆ ಮಾಡಿಕೊಂಡಿದೆ. 5ಜಿ ತಂತ್ರಜ್ಞಾನ ಅಳವಡಿಕೆ, ಮೊಬೈಲ್ ಪ್ರಸಾರ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಡಿಡಿ ಅಸ್ಸಾ ಮತ್ತು ಹಲವು ಖಾಸಗಿ ವಾಹಿನಿಗಳು ಸೇರಿದಂತೆ ದೂರದರ್ಶನದ ಎಲ್ಲಾ ವಾಹಿನಿಗಳಿಗೆ ಡಿಡಿ ಉಚಿತ ಡಿಶ್ ಡಿಟಿಎಚ್ ಸೌಲಭ್ಯ ಸಿಗುವಂತೆ ಅವಕಾಶ ಕಲ್ಪಿಸಲಾಗಿದೆ. ಇಡೀ ದೇಶಾದ್ಯಂತ ಇದು ಉಚಿತವಾಗಿ ಸಿಗುತ್ತಿದೆ. ಇದಕ್ಕೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಸೆಟ್ ಟಾಪ್ ಬಾಕ್ಸ್ ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಒಮ್ಮೆ ಖರೀದಿಸಿದರೆ ಕೆಲವು ಶೈಕ್ಷಣಿಕ ವಾಹಿನಿಗಳು ಸೇರಿದಂತೆ 120ಕ್ಕಿಂತ ಹೆಚ್ಚಿನ ಟಿವಿ ವಾಹಿನಿಗಳನ್ನು ವೀಕ್ಷಿಸಬಹುದು. ಜತೆಗೆ, ಆಕಾಶವಾಣಿಯ 40ಕ್ಕಿಂತ ಹೆಚ್ಚಿನ ಉಪಗ್ರಹ ರೇಡಿಯೊ ವಾಹಿನಿಗಳು ಸಹ ಸಿಗುತ್ತವೆ.

***



(Release ID: 1762474) Visitor Counter : 321