ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಪ್ರಧಾನಮಂತ್ರಿ ಮಕ್ಕಳ ಸುರಕ್ಷಾ ಯೋಜನೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ


ಕೋವಿಡ್‌ನಿಂದಾಗಿ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಸಮಗ್ರ ಸುರಕ್ಷೆಗಾಗಿ ಈ ಯೋಜನೆ

ಪ್ರಧಾನಮಂತ್ರಿ ಮಕ್ಕಳ ಸುರಕ್ಷಾ ಯೋಜನೆಯಲ್ಲಿ ತಿಂಗಳ ಸಹಾಯಧನವನ್ನು ನೀಡಲಾಗುವುದು. ಹದಿನೆಂಟು ವರ್ಷಗಳಿಂದ 23ನೇ ವಯಸ್ಸಿನವರೆಗೂ ಹತ್ತು ಲಕ್ಷ ರೂಪಾಯಿಗಳ ಸ್ಟೈಫೆಂಡ್‌ ನೀಡಲಾಗುವುದು

Posted On: 07 OCT 2021 1:47PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಧಾನಮಂತ್ರಿ ಮಕ್ಕಳ ಸುರಕ್ಷಾ ಯೋಜನೆಯ ಸ್ಪಷ್ಟ ಮಾರ್ಗಸೂಚಿಯನ್ನು ಹೊರತಂದಿದೆ.

ಪ್ರಧಾನಮಂತ್ರಿ ನರೇಂದ್ರಮೋದಿ  ಮೇ 29ರಂದು 2021ರಂದು ಕೋವಿಡ್‌ ಕಾಲದಲ್ಲಿ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳ ಸಮಗ್ರ ಬೆಳವಣಿಗೆಗಾಗಿ ಯೋಜನೆಯನ್ನು ಪರಿಚಯಿಸಿದರು.  ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಪಾಲಕರನ್ನು ಕಳೆದುಕೊಂಡಿರುವ ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಸುರಕ್ಷೆಯೇ ಆಗಿದೆ. ನಿರಂತರವಾಗಿ ಹಾಗೂ ಸುಸ್ಥಿರವಾಗಿ ಅವರ ಸ್ವಾಸ್ಥ್ಯಮಯ ಬದುಕಿಗಾಗಿ ಆರೋಗ್ಯವಿಮೆ, ಶಿಕ್ಷಣ ಹಾಗೂ ಅಗತ್ಯದ ಪಾಠೋಪಕರಣಗಳನ್ನು ನೀಡುತ್ತ ಅವರ 23ನೇ ವಯಸ್ಸಿಗೆ ತಲುಪುವವರೆಗೂ ಸಂಪೂರ್ಣ ಬೆಂಬಲ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.    

ಪ್ರಧಾನಮಂತ್ರಿ ಮಕ್ಕಳ ಸುರಕ್ಷಾ ಯೋಜನೆಯು ಆಂತರಿಕ ಬೆಂಬಲವನ್ನು ಪಡೆಯುವತ್ತಲೂ ಗಮನಹರಿಸಿದೆ. ಮಕ್ಕಳಿಗೆ ಖಾತ್ರಿ ಶಿಕ್ಷಣ ದೊರೆಯುವುದು, ಆರೋಗ್ಯ, ತಿಂಗಳ ಸ್ಟೈಫೆಂಡ್‌ ಹದಿನೆಂಟನೇ ವರ್ಷದಿಂದ 23ನೇ ವರ್ಷ ವಯೋಮಿತಿಯವರೆಗೂ ನೀಡಲಾಗುವುದು. 23ನೇ ವಯಸ್ಸಿಗೆ ಒಟ್ಟಿಗೆ ಹತ್ತು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಅರ್ಹ ಮಕ್ಕಳು 29–05–2021ರಿಂದ ಅರ್ಜಿಸಲ್ಲಿಸಬಹುದಾಗಿದೆ. ಈ ದಿನಾಂಕದಿಂದ 31–12–2021ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯು, ಅರ್ಜಿ ಸಲ್ಲಿಸಿದ ಪ್ರತಿ ಫಲಾನುಭವಿಯೂ 23 ವರ್ಷ ತಲುಪುವವರೆಗೂ ಜಾರಿಯಲ್ಲಿರುತ್ತದೆ.

ಅರ್ಹತೆಯ ಮಾನದಂಡವು ಹೀಗಿರುತ್ತದೆ. ಮಕ್ಕಳು ಕೋವಿಡ್‌ ದುರಿತ ಕಾಲದಲ್ಲಿ ಪಾಲಕರನ್ನು ಕಳೆದುಕೊಂಡಿರಬೇಕು, ಒಬ್ಬರೇ ಪಾಲಕರನ್ನು ಕಳೆದುಕೊಂಡಿದ್ದರೂ ಲಾಗು ಆಗುವುದು. ಕಾನೂನಾತ್ಮಕವಾಗಿ ಅವರ ಪೋಷಕರು ಯಾರಾಗಿರುತ್ತಾರೋ ಅವರನ್ನು ಪರಿಗಣಿಸಲಾಗುವುದು. 11.3.2020ರಿಂದ 31–12–21ರವರೆಗೆ ಯೋಜನೆಯ ಫಲಗಳನ್ನು ಪಡೆಯಬಹುದಾಗಿದೆ. ಪಾಲಕರ ಮರಣದ ಸಮಯದಲ್ಲಿ ಮಕ್ಕಳಿಗೆ ಹದಿನೆಂಟು ವರ್ಷ ತುಂಬಿರಬಾರದು.

ಯೋಜನೆಯ ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳು: 

i. ವಸತಿ ವ್ಯವಸ್ಥೆ:

a) ಜಿಲ್ಲಾಧಿಕಾರಿ ಹಾಗೂ ಮಕ್ಕಳ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಮಕ್ಕಳ ವಸತಿಗೆ ಅವರ ಸಂಬಂಧಿಕರಲ್ಲಿ ವ್ಯವಸ್ಥೆ ಮಾಡಲು ಯೋಜಿಸಲಾಗುವುದು. ಸಹೋದರ ಸಂಬಂಧಿ, ಮಾತೃ ಅಥವಾ ಪಿತೃ ಸಂಬಂಧಿ ಅವರದ್ದೇ ರಕ್ತ ಸಂಬಂಧಿಗಳ ಮನೆಯಲ್ಲಿ ವ್ಯವಸ್ಥೆ ಮಾಡಲು ಆದ್ಯತೆ ನೀಡಲಾಗುವುದು.

b) ಒಂದು ವೇಳೆ ಹೀಗೆ ಸಂಬಂಧಿಕರ ಮನೆಯಲ್ಲಿ ಉಳಿಯಲು ಮಗುವಿಗೆ (4–10 ವರ್ಷದ ಅಥವಾ ಅದಕ್ಕೂ ಮೇಲ್ಪಟ್ಟ ಮಗು) ಇಷ್ಟವಿರದಿದ್ದಲ್ಲಿ, ಆ ಮಗುವಿಗೆ ಸಮೀಪದ ಸಂಬಂಧಿಗಳಿರದಿದ್ದಲ್ಲಿ, ಸಂಬಂಧಿಗಳಿದ್ದೂ ಅವರು ನೋಡಿಕೊಳ್ಳಲು ಅಸಮರ್ಥರಾಗಿದ್ದಲ್ಲಿ, ಅಥವಾ ನೋಡುವ ಇಚ್ಛೆ ವ್ಯಕ್ತಪಡಿಸದಿದ್ದಲ್ಲಿ, ಮಗುವನ್ನು ಕಾಳಜಿ ಕೇಂದ್ರದಲ್ಲಿ ಪುನರ್ವಸತಿ ವ್ಯವಸ್ಥೆ ಮಾಡುವುದು ಜಿಲ್ಲಾಧಿಕಾರಿ ಹಾಗೂ ಮಕ್ಕಳ ಅಭಿವೃದ್ಧಿ ಕೇಂದ್ರದ ಅಧಿಕಾರಿಗಳದ್ದಾಗಿರುತ್ತದೆ. ಜುವೈನಲ್‌ ಆ್ಯಕ್ಟ್‌ ಪ್ರಕಾರ, ಸ್ಥಳೀಯ ನಿಯಮಾನುಸಾರ ವಸತಿ ಕೇಂದ್ರದಲ್ಲಿ  ಇರಿಸಲಾಗುವುದು.

c) ಒಂದು ವೇಳೆ ಊರಿನಲ್ಲಿ ವಸತಿ ಕೇಂದ್ರಗಳು ಲಭ್ಯ ಇರದಿದ್ದಲ್ಲಿ, ಇದ್ದರೂ ಅಲ್ಲಿ ಮಕ್ಕಳಿಗೆ ಅವಕಾಶವಾಗದಿದ್ದಲ್ಲಿ, ಮಕ್ಕಳಿಗೆ ಇಂಥ ಕೇಂದ್ರಗಳಲ್ಲಿ ಇರಲು ಇಷ್ಟವಾಗದಿದ್ದಲ್ಲಿ, ವಯೋಗುಣ ಹಾಗೂ ಲಿಂಗಕ್ಕೆ ಅನುಸಾರವಾದ ಮಕ್ಕಳ ಕಾಳಜಿ ಕೇಂದ್ರದಲ್ಲಿ ಇರಿಸಲು ವ್ಯವಸ್ಥೆ ಮಾಡಬೇಕು.

d) ಹತ್ತು ವರ್ಷ ಮೀರಿದ ಮಕ್ಕಳು ತಮ್ಮ ಸಂಬಂಧಿಕರ ಮನೆಯಲ್ಲಿ ಇರಲು ಇಷ್ಟ ಪಡದಿದ್ದಲ್ಲಿ, ಸಂಬಂಧಿಕರು ಮಕ್ಕಳನ್ನು ಇರಿಸಿಕೊಳ್ಳುವ ಸಾಮರ್ಥ್ಯವಿರದಿದ್ದಲ್ಲಿ, ಆಸಕ್ತಿ ತೋರದಿದ್ದಲ್ಲಿ, ಮಕ್ಕಳ ಕಾಳಜಿ ಕೇಂದ್ರ ಅಥವಾ ಇನ್ನಾವುದೇ ಪುನರ್ವಸತಿ ಕೇಂದ್ರಗಳಲ್ಲಿ ಇರಲು ನಿರಾಕರಿಸಿದರೆ ಅಂಥ ಮಕ್ಕಳನ್ನು ನೇತಾಜಿ ಸುಭಾಶ್ ಚಾಂದ್‌ ಬೋಸ್‌ ಅವಾಸೀಯ ವಿದ್ಯಾಲಯದಲ್ಲಿ, ಕಸ್ತುರ್‌ಬಾ ವಿದ್ಯಾರ್ಥಿನಿಗಳ ವಸತಿಶಾಲೆ, ಏಕಲವ್ಯ ಮಾದರಿ ಶಾಲೆ, ಸೈನಿಕ್‌ ಸ್ಕೂಲ್‌, ನವೋದಯ ವಿದ್ಯಾಲಯ ಜಿಲ್ಲಾಧಿಕಾರಿಗಳು ಸೂಚಿಸುವ, ತೀರ್ಮಾನ ಕೈಗೊಳ್ಳಲು ಹಾಗೂ ಮಾರ್ಗಸೂಚಿಯ ನಿಯಮಾನುಸಾರ ಯಾವುದೇ ಶಿಕ್ಷಣ ಕೇಂದ್ರದಲ್ಲಿಯೂ ಅವರ ಇರುವಿಕೆಗೆ ಕ್ರಮ ಕೈಗೊಳ್ಳಬಹುದಾಗಿದೆ.    

e) ಅಣ್ಣ–ತಮ್ಮಂದಿರು, ಅಣ್ಣ ತಂಗಿ, ಅಕ್ಕ ತಂಗಿ, ಅಕ್ಕ ತಮ್ಮ ಒಡಹುಟ್ಟಿದವರೆಲ್ಲ ಒಟ್ಟಿಗೆ ಇರುವಂತೆ ಕಾಳಜಿ ತೆಗೆದುಕೊಳ್ಳಲಾಗುವುದು.

f) ವಸತಿರಹಿತ ಕಾಳಜಿ ತೆಗೆದುಕೊಳ್ಳುವುದಾದರೆ ಮಕ್ಕಳ ಸುರಕ್ಷಾ ಸೇವೆಯಡಿ ಆರ್ಥಿಕ ಬೆಂಬಲ ನೀಡಲಾಗುವುದು. ಫಲಾನುಭವಿ ಮಕ್ಕಳಿಗೆ ಅವರ ಪೋಷಕರೊಂದಿಗೆ ತೆರೆಯಲಾದ ಜಂಟಿ ಖಾತೆಗೆ ಹಣ ವರ್ಗಾಯಿಸಲಾಗುವುದು. ಒಂದು ವೇಳೆ ಕಾಳಜಿ ಕೇಂದ್ರಗಳಲ್ಲಿ, ವಸತಿ ಶಾಲೆಗಳಲ್ಲಿ ಮಕ್ಕಳು ಬೆಳೆಯುತ್ತಿದ್ದರೆಮಕ್ಕಳ ಸುರಕ್ಷಾ ಯೋಜನೆಯಡಿ ಲಭ್ಯ ಇರುವ ಅನುದಾನವನ್ನು ಆಯಾ ಕೇಂದ್ರಗಳ ಖಾತೆಗೆ ವರ್ಗಾಯಿಸಲಾಗುವುದು. ಇದಲ್ಲದೆ, ರಾಜ್ಯ ಸರ್ಕಾರದಿಂದಲೂ ಯಾವುದಾದರೂ ಯೋಜನೆಗಳು ಲಾಗೂ ಅಗುವಂತಿದ್ದರೆ, ಅವು ಸಹ ಮಗುವಿಗೆ ಲಭ್ಯ ಆಗುವವು.

ii) ಪೂರ್ವ ಪ್ರಾಥಮಿಕ ಹಾಗೂ ಶಾಲಾ ಶಿಕ್ಷಣ

a. ಆರು ವರ್ಷದೊಳಗಿನ ಮಕ್ಕಳಿದ್ದರೆ, ಈ ಫಲಾನುಭವಿಗಳನ್ನು ಗುರುತಿಸಿ, ಅಂಗನವಾಡಿ ಸೇವಾಕರ್ತರಿಂದ ಗುರುತಿಸಲಾಗುವುದು. ಪೋಷಕಾಂಶಗಳಿಗೆ, ಅಗತ್ಯದ ಬೆಳವಣಿಗೆಗೆ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ನಿರಂತರ ಶಿಕ್ಷಣ ಯೋಜನೆಯಲ್ಲಿ ನೀಡಲಾಗುವುದು. ಲಸಿಕಾಕರಣ, ಆರೋಗಯ್ ಸೇವೆ, ಆರೋಗ್ಯ ತಪಶೀಲು ಮುಂತಾದವುಗಳನ್ನು ನಿರಂತರವಾಗಿ ಮಾಡಲಾಗುವುದು. 

b. ಹತ್ತು ವರ್ಷದೊಳಗಿನ ಮಕ್ಕಳಿದ್ದರೆ

i) ಸಮೀಪದ ಯಾವುದೇ ಶಾಲೆಗಳಲ್ಲಿ ಮಗುವಿನ ದಾಖಲಾತಿ ಮಾಡಿಸಬೇಕು. ಅದು ಸರ್ಕಾರಿ, ಸರ್ಕಾರದಿಂದ ಅನುದಾನ ಪಡೆದ, ಕೇಂದ್ರೀಯ ವಿದ್ಯಾಲಯ ಅಥವಾ ಯಾವುದೇ ಖಾಸಗಿ ಶಾಲೆಯಾಗಿರಬಹುದು.

ii) ಸರ್ಕಾರಿ ಶಾಲೆಗಳಲ್ಲಿ, ಎರಡು ಜೊತೆ ಶಾಲಾ ಸಮವಸ್ತ್ರ, ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಬೇಕು. ಸಮಗ್ರ ಶಿಕ್ಷಣ ಅಭಿಯಾನದ ಯೋಜನೆ ಅಡಿಯಲ್ಲಿ ಲಭ್ಯ ಇರುವ ಎಲ್ಲ ಸೌಲಭ್ಯಗಳನ್ನೂ ನೀಡಬೇಕು.

iii) ಖಾಸಗಿ ಶಾಲೆಯಲ್ಲಿ 12 (1)(C) RTE ಆ್ಯಕ್ಟ್‌ ಪ್ರಕಾರ ಶುಲ್ಕವನ್ನು ಮನ್ನಾ ಮಾಡಲಾಗುವುದು.

iv) ಒಂದುವೇಳೆ ಮಗುವಿಗೆ ಮೇಲಿನ ಸೌಲಭ್ಯಗಳು ಲಭ್ಯವಾಗದ ಪರಿಸ್ಥಿತಿ ಇದ್ದಲ್ಲಿ, ಶುಲ್ಕವನ್ನು ಆರ್‌ಟಿಇ ಆ್ಯಕ್ಟ್‌ ನಿಯಮಾನುಸಾರ ಸೌಲಭ್ಯ ಲಭ್ಯವಾಗದಿದ್ದಲ್ಲಿ, ಪಿಎಂ ಕೇರ್ಸ್‌ ಯೋಜನೆಯು ಶುಲ್ಕವನ್ನು ಭರಿಸುತ್ತದೆ. ಸಮವಸ್ತ್ರ, ಪಠ್ಯಪುಸ್ತಕದ ವೆಚ್ಚವನ್ನೂ ಭರಿಸುತ್ತದೆ. ಅನೆಕ್ಸರ್‌ 1ರಲ್ಲಿ ಇದು ಯಾವ ಸಂದರ್ಭದಲ್ಲಿ ಅನ್ವಯವಾಗುವುದು ಎಂಬುದರ ಬಗ್ಗೆ ವಿವರಗಳಿವೆ. 

c. 11–18 ಒಳಗಿನ ಮಕ್ಕಳಿಗೆ

i) ಒಂದು ವೇಳೆ ಮಗುವು ಸಂಬಂಧಿಕರ ಮನೆಯಲ್ಲಿ ಬೆಳೆಯುತ್ತಿದ್ದರೆ, ಆ ಮಗುವಿಗೆ ಸರ್ಕಾರಿ, ಸರ್ಕಾರಿ ಅನುದಾನ ಪಡೆದ, ಕೇಂದ್ರೀಐ ವಿದ್ಯಾಲಯ, ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿಯನ್ನು ದೊರಕಿಸಿಕೊಡುವ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಮಾಡಬೇಕು.

ii) ನೇತಾಜಿ ಸುಭಾಶ್‌ ಚಾಂದ್‌ ಬೋಸ್‌ ಅವಾಸಿಯಾ ವಿದ್ಯಾಲಯ, ಕಸ್ತುರ್‌ಬಾ ಗಾಂಧಿ ಬಾಲಿಕಾ ವಿದ್ಯಾಲಯ, ಏಕಲವ್ಯ ಮಾದರಿ ಶಾಲೆ, ಸೈನಿಕ್‌ ಶಾಲೆ, ನವೋದಯ ವಿದ್ಯಾಲಯ ಅಥವಾ ಇನ್ನಾವುದೇ ವಸತಿ ಶಾಲೆಗಳಿಗೆ ಮಾರ್ಗಸೂಚಿ ನಿಮಾನುಸಾರ ಜಿಲ್ಲಾಧಿಕಾರಿ ಸೂಚನೆಯಂತೆ ಪ್ರವೇಶ ಪಡೆಯಬಹುದಾಗಿದೆ.

iii) ಜಿಲ್ಲಾಧಿಕಾರಿಗಳು ಶಾಲಾ ರಜಾದಿನಗಳಲ್ಲಿ ಮಕ್ಕಳ ವಸತಿ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ಯಾವುದಾದರೂ ಸೂಕ್ತ ವಸತಿವ್ಯವಸ್ಥೆ ಮಾಡಬೇಕಿದೆ.

iv) ಒಂದುವೇಳೆ ಯಾವುದೇ ಸಂದರ್ಭದಲ್ಲಿಯಾದರೂ ಮಗುವಿಗೆ ಸೌಲಭ್ಯಗಳನ್ನು ಪಡೆಯುವುದು ಅಸಾಧ್ಯವಾದರೆ ಆರ್‌.ಟಿ. ಇ ನಿಯಮಾನುಸಾರ ಪಿಎಂ ಕೇರ್ಸ್‌ ಮಕ್ಕಳ ಯೋಜನೆಗಾಗಿ ಹಣ ನೀಡಲಾಗುವುದು. ಸಮವಸ್ತ್ರ, ಪಠ್ಯಪುಸ್ತಕ ಹಾಗೂ ನೋಟ್‌ಬುಕ್‌ಗಳಿಗಾಗಿ ಹಣ ವ್ಯಯ ಮಾಡುವುದು. ವಿವರಗಳನ್ನು ಮಾರ್ಗಸೂಚಿಯ ನಿಯಮಾವಳಿಗಳಲ್ಲಿ ವಿವರಿಸಲಾಗಿದೆ.

d. ಉನ್ನತ ಶಿಕ್ಷಣಕ್ಕಾಗಿ ಸಹಾಯ

i) ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು, ವೃತ್ತಿಪರ ಶಿಕ್ಷಣ ಪಡೆಯಲು ಶೈಕ್ಷಣಿಕ ಸಾಲಗಳನ್ನು ನೀಡಲಾಗುವುದು

ii)  ಕೇಂದ್ರ ಮತ್ತು ರಾಜ್ಯದ ಸೌಲಭ್ಯಗಳನ್ನು ಪಡೆಯುವಲ್ಲಿ, ವಿಫಲವಾದರೆ, ಅಂತಹ ಸಂದರ್ಭಗಳಲ್ಲಿ ಪಿಎಂ ಕೇರ್ಸ್‌ ಯೋಜನೆಯಿಂದಲೇ ಶುಲ್ಕ ಭರಿಸಲಾಗುವುದು.

iii) ಪರ್ಯಾಯ ವ್ಯವಸ್ಥೆಯಾಗಿ ವಿದ್ಯಾರ್ಥಿವೇತನವನ್ನು ಮಾರ್ಗಸೂಚಿಯ ನಿಯಮಾನುಸಾರ ಫಲಾನುಭವಿ ಮಕ್ಕಳಿಗೆ ಪ್ರಧಾನ ಮಂತ್ರಿ ಕೇರ್ಸ್‌ ಯೋಜನೆಯ ಮೂಲಕ ವ್ಯಯಿಸಲಾಗುವುದು. ಸಾಮಾಜಿಕ ನ್ಯಾಯಾಲಯ ಮತ್ತು ಸಬಲೀಕರಣ ಸಚಿವಾಲಯವು, ಬುಡಕಟ್ಟು ಸಚಿವಾಲಯ, ಹಿಂದುಳಿದವರ ಅಭಿವೃದ್ಧಿ ಸಚಿವಾಲಯ, ಉನ್ನತ ಶಿಕ್ಷಣ ಸಚಿವಾಲಯ, ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ ಮೂಲಕ ಅನ್ವಯವಾಗುವ ಎಲ್ಲ ವಿದ್ಯಾರ್ಥಿವೇತನಗಳಿಗೂ ಅವರು ಅರ್ಹರಾಗಿರುತ್ತಾರೆ. ಈ ವಿದ್ಯಾರ್ಥಿಗಳು ಪಡೆಯುವ ಪ್ರತಿ ವಿದ್ಯಾರ್ಥಿ ವೇತನದ ವಿವರವನ್ನು ಪಿಎಂ ಕೇರ್ಸ್‌ ಪೋರ್ಟಲ್‌ನಲ್ಲಿ ನೋಂದಣಿಯಾಗುತ್ತಲೇ ಇರುತ್ತದೆ. 

iii. ಆರೋಗ್ಯ ವಿಮೆ

a. ಪ್ರಧಾನಮಂತ್ರಿ ಮಕ್ಕಳ ಸುರಕ್ಷಾ ಯೋಜನೆಯ ಫಲಾನುಭವಿಯಾದ ಪ್ರತಿ ಮಗುವಿಗೂ ಐದು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ನೀಡಲಾಗುವುದು.

b. ಈ ಯೋಜನೆಯ ಅಡಿ ಬರುವ ಪ್ರತಿ ಮಕ್ಕಳೂ ಪಿಎಂ ಯೋಜನೆಯ ಫಲಾನುಭವಿಗಳಿಗೆ ವಿಮೆ ಅನ್ವಯವಾಗುವಂತಾಗುವುದನ್ನ ಖಾತ್ರಿ ಪಡಿಸಬೇಕು.

c. ಪ್ರತಿಮಗುವಿಗೆ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಮಾರ್ಗಸೂಚಿಯಲ್ಲಿ ವಿಸ್ತ್ರತವಾಗಿ ವಿವರಿಸಲಾಗಿದೆ.

iv. ಹಣಕಾಸಿನ ಬೆಂಬಲ

a. ಫಲಾನುಭವಿಗಳ ನೋಂದಣಿಯಾದ ನಂತರ ಪೋಸ್ಟ್‌ ಆಫೀಸಿನಲ್ಲಿ ಅವರ ಹೆಸರಿನಲ್ಲಿ ಖಾತೆ ತೆರೆಯಲಾಗುವುದು.  ಪ್ರತಿ ಮಗುವೂ ಹದಿನೆಂಟು ವರ್ಷದ ನಂತರ 23 ವರ್ಷದವರಾಗುವ ವಯಸ್ಸಿನಲ್ಲಿ ಹತ್ತು ಲಕ್ಷ ರೂಪಾಯಿಗಳಷ್ಟು ಒಟ್ಟುಗೂಡುವುದು.

b. ಮಕ್ಕಳು ಹದಿನೆಂಟು ವರ್ಷದವರಾದಾಗ ಅವರಿಗೆ ಮಾಸಿಕ ಸ್ಟೈಪೆಂಡ್‌ ನೀಡಲಾಗುವುದು. 23 ವರ್ಷದವರಾಗುವವರೆಗೂ ಅವರಿಗೆ ಹತ್ತು ಲಕ್ಷ ರೂಪಾಯಿಗಳ ಆಧಾರದ ಮೇಲೆ ಸ್ಟೈಪೆಂಡ್‌ ನೀಡಲಾಗುವುದು.

c. ಪ್ರತಿ ಮಗುವೂ ತನ್ನ 23ನೇ ವಯಸ್ಸಿಗೆ ಹತ್ತು ಲಕ್ಷ ರೂಪಾಯಿಗಳ ಒಟ್ಟು ಮೊತ್ತದ ಅನುದಾನವನ್ನು ಪಡೆಯುತ್ತದೆ.

ಯೋಜನೆಯ ವಿವರವಾದ ಮಾರ್ಗದರ್ಶಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

***(Release ID: 1761780) Visitor Counter : 336