ಪ್ರಧಾನ ಮಂತ್ರಿಯವರ ಕಛೇರಿ

ಸಿ.ಐ.ಪಿ.ಇ.ಟಿ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ: ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ

Posted On: 30 SEP 2021 2:37PM by PIB Bengaluru

ನಮಸ್ಕಾರ್!

ರಾಜಸ್ಥಾನದ ಮಣ್ಣಿನ ಮಗ ಮತ್ತು ಭಾರತದ ಅತ್ಯಂತ ದೊಡ್ಡ ಪಂಚಾಯತ್ ಆಗಿರುವ ಲೋಕಸಭಾದ ಉಸ್ತುವಾರಿ ಹೊಂದಿರುವ ಗೌರವಾನ್ವಿತ ಸ್ಪೀಕರ್ ಶ್ರೀ ಓಂ ಬಿರ್ಲಾ ಜೀ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಜೀ, ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಜೀ, ಕೇಂದ್ರ ಸಂಪುಟದಲ್ಲಿರುವ ನನ್ನ ಎಲ್ಲಾ ಸಹೋದ್ಯೋಗಿಗಳೇ, ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಜೀ, ಭುಪೇಂದ್ರ ಯಾದವ್ ಜೀ, ಅರ್ಜುನ್ ರಾಂ ಮೇಘವಾಲ್ ಜೀ, ಕೈಲಾಶ್ ಚೌಧುರಿ ಜೀ, ಡಾ. ಭಾರತಿ ಪವಾರ್ ಜಿ, ಭಗವಂತ್ ಖೂಬಾ ಜೀ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಜೀ, ವಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಜೀ, ರಾಜಸ್ಥಾನ ಸರಕಾರದ ಇತರ ಸಚಿವರೇ, ಸಂಸದರೇ, ಶಾಸಕರೇ, ಕಾರ್ಯಕ್ರಮದಲ್ಲಿ ಹಾಜರಿರುವ ಇತರ ಎಲ್ಲಾ ಗಣ್ಯರೇ ಮತ್ತು ರಾಜಸ್ಥಾನದ ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ,

ನೂರು ವರ್ಷಗಳಲ್ಲಿ ಅತ್ಯಂತ ದೊಡ್ಡದಾದ ಜಾಗತಿಕ ಸಾಂಕ್ರಾಮಿಕವು ಜಗತ್ತಿನ ಆರೋಗ್ಯ ವಲಯದಲ್ಲಿ ಹಲವು ಸವಾಲುಗಳನ್ನು ಉಂಟು ಮಾಡಿದೆ ಮತ್ತು ಇದು ನಮಗೆ ಬಹಳಷ್ಟನ್ನು ಕಲಿಸಿದೆ. ಪ್ರತಿಯೊಂದು ದೇಶವೂ ಬಿಕ್ಕಟ್ಟನ್ನು ತನ್ನದೇ ಆದ ರೀತಿಯಲ್ಲಿ ಎದುರಿಸುವಲ್ಲಿ ನಿರತವಾಗಿದೆ. ವಿಕೋಪದಲ್ಲಿ ಭಾರತವು ತನ್ನ ಸಾಮರ್ಥ್ಯ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ರಾಜಸ್ಥಾನದಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಆರಂಭ ಮತ್ತು ಜೈಪುರದಲ್ಲಿ ಪೆಟ್ರೋಕೆಮಿಕಲ್ ತಂತ್ರಜ್ಞಾನ ಸಂಸ್ಥೆಯ ಉದ್ಘಾಟನೆ ನಿಟ್ಟಿನಲ್ಲಿಯ ಮಹತ್ವದ ಕ್ರಮ. ನಾನು ರಾಜಸ್ಥಾನದ ಎಲ್ಲಾ ನಾಗರಿಕರನ್ನು ಅಭಿನಂದಿಸುತ್ತೇನೆ. ವಿಶೇಷ ವರ್ಚುವಲ್ ಕಾರ್ಯಕ್ರಮದಲ್ಲಿ ನಿಮ್ಮೆಲ್ಲರನ್ನೂ ಭೇಟಿಯಾಗಲು ನನಗೆ ಅವಕಾಶ ದೊರಕಿದೆ. ಸಂದರ್ಭದಲ್ಲಿ ಒಲಿಂಪಿಕ್ಸ್ ನಲ್ಲಿ ಭಾರತ ಹೆಮ್ಮೆಪಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ರಾಜಸ್ಥಾನದ ಪುತ್ರರು ಮತ್ತು ಹೆಣ್ಣು ಮಕ್ಕಳನ್ನು ನಾನು ಇಂದು ಮತ್ತೊಮ್ಮೆ ಅಭಿನಂದಿಸಲು ಇಚ್ಛಿಸುತ್ತೇನೆ. ಪ್ಲಾಸ್ಟಿಕ್ ಮತ್ತು ಸಂಬಂಧಿತ ತ್ಯಾಜ್ಯ ನಿರ್ವಹಣಾ ನಿಯಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಜೈಪುರ ಸೇರಿದಂತೆ ದೇಶದ 10 ಸಿ..ಪಿ..ಟಿ. ಕೇಂದ್ರಗಳಲ್ಲಿ ಚಾಲ್ತಿಯಲ್ಲಿದೆ. ಉಪಕ್ರಮಕ್ಕಾಗಿ ನಾನು ದೇಶದ ಎಲ್ಲಾ ಗಣ್ಯರಿಗೂ ಶುಭಾಶಯಗಳನ್ನು ಹೇಳಲಿಚ್ಛಿಸುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

2014ರಿಂದೀಚೆಗೆ ಕೇಂದ್ರ ಸರಕಾರವು ರಾಜಸ್ಥಾನದಲ್ಲಿ 23 ಹೊಸ ವೈದ್ಯಕೀಯ ಕಾಲೇಜುಗಳಿಗೆ ತನ್ನ ಅನುಮೋದನೆ ನೀಡಿದೆ. ಇವುಗಳಲ್ಲಿ ಏಳು ವೈದ್ಯಕೀಯ ಕಾಲೇಜುಗಳು ಕಾರ್ಯಾರಂಭ ಮಾಡಿವೆ. ಇಂದು ಬನ್ಸ್ವಾರಾ, ಶಿರೋಹಿ, ಹನುಮಾನ್ ಘರ್ ಮತ್ತು ಡೌಸಾಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಆರಂಭಗೊಂಡಿದೆ. ಭಾಗದ ಜನರಿಗೆ ನಾನು ಬಹಳ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಲ್ಲಿಯ ಜನರ ಪ್ರತಿನಿಧಿಗಳು ಮತ್ತು ನಮ್ಮ ಗೌರವಾನ್ವಿತ ಸಂಸದರು ನನ್ನನ್ನು ಭೇಟಿಯಾದಾಗ ಅವರು ವೈದ್ಯಕೀಯ ಕಾಲೇಜಿನ ಪ್ರಯೋಜನಗಳನ್ನು ಪಟ್ಟಿ ಮಾಡುತ್ತಿದ್ದರು. ಸಂಸದರು, ಮತ್ತು ನನ್ನ ಸ್ನೇಹಿತ ಕನಕ್ ಮಾಯ್ ಕಟಾರಾ ಜೀ, ನಮ್ಮ ಹಿರಿಯ ಸಂಸದ ಜಸ್ಕೌರ್ ಮೀನಾ ಜೀ, ನನ್ನ ಬಹಳ ಹಳೆಯ ಸಹೋದ್ಯೋಗಿ ಸಹೋದರ ನಿಹಾಲ್ ಚಂದ್ ಚೌಹಾಣ ಜೀ, ನಮ್ಮ ಅರ್ಧ ಗುಜರಾತಿ ಮತ್ತು ಅರ್ಧ ರಾಜಸ್ಥಾನಿ ಭಾಯಿದೇವ್ ಜೀ ಪಟೇಲ್ ಸಹಿತ ನೀವೆಲ್ಲರೂ ರಾಜಸ್ಥಾನದ ವೈದ್ಯಕೀಯ ಮೂಲಸೌಕರ್ಯಗಳ ಬಗ್ಗೆ ಬಹಳ ಪ್ರಜ್ಞಾವಂತರಾಗಿರುವಿರಿ. ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣ ರಾಜ್ಯ ಸರಕಾರದ ಸಹಕಾರದೊಂದಿಗೆ ಸಕಾಲದಲ್ಲಿ ಪೂರ್ಣಗೊಳ್ಳಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಕೆಲ ದಶಕಗಳಿಂದ ದೇಶದ ವೈದ್ಯಕೀಯ ವ್ಯವಸ್ಥೆಗಳ ಪರಿಸ್ಥಿತಿಯ ಬಗ್ಗೆ ನಿಮಗೆಲ್ಲಾ ತಿಳಿದಿದೆ. 2001ರಲ್ಲಿ, 20 ವರ್ಷಗಳ ಹಿಂದೆ ಗುಜರಾತ್ ನನಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಒದಗಿಸಿದಾಗ ಅಲ್ಲಿಯ ಆರೋಗ್ಯ ವಲಯ ಬಹಳಷ್ಟು ಸವಾಲುಗಳನ್ನು ಒಳಗೊಂಡಿತ್ತು. ಅದು ವೈದ್ಯಕೀಯ ಮೂಲಸೌಕರ್ಯ ಇರಲಿ, ವೈದ್ಯಕೀಯ ಶಿಕ್ಷಣ ಅಥವಾ ವೈದ್ಯಕೀಯ ಸೌಕರ್ಯಗಳಿರಲಿ, ಅವೆಲ್ಲವುಗಳ ವೇಗವನ್ನು ಚುರುಕುಗೊಳಿಸುವ ಅವಶ್ಯಕತೆ ಇತ್ತು. ನಾವು ಸವಾಲುಗಳನ್ನು ಅಂಗೀಕರಿಸಿದೆವು. ಮತ್ತು ಸುತ್ತಲಿನ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನ ಮಾಡಿದೆವು. ಗುಜರಾತಿನಲ್ಲಿ ಮುಖ್ಯಮಂತ್ರಿ ಅಮೃತಂ ಯೋಜನಾ ಅಡಿಯಲ್ಲಿ ರೂಪಾಯಿ ಎರಡು ಲಕ್ಷದವರೆಗಿನ ಉಚಿತ ಚಿಕಿತ್ಸಾ ಸೌಲಭ್ಯವನ್ನು  ಬಡವರಿಗಾಗಿ ಆರಂಭ ಮಾಡಲಾಯಿತು. ಚಿರಂಜೀವಿ ಯೋಜನಾ ಅಡಿಯಲ್ಲಿ ಗರ್ಭಿಣಿ ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುವಂತೆ ಉತ್ತೇಜನ ನೀಡಲಾಯಿತು. ಇದು ತಾಯಂದಿರು ಮತ್ತು ಶಿಶುಗಳ ಜೀವವುಳಿಸುವಲ್ಲಿ ಬಹಳ ಯಶಸ್ಸನ್ನು ದಾಖಲಿಸಿತು. ವೈದ್ಯಕೀಯ ಶಿಕ್ಷಣದಲ್ಲಿಯೂ ಸಹ ಗುಜರಾತ್ ಕಳೆದ ಎರಡು ದಶಕಗಳ ಅವಿರತ ಶ್ರಮದಿಂದಾಗಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು  ಆರು ಪಟ್ಟು ಹೆಚ್ಚಿಸಿಕೊಂಡಿತು.

ಸ್ನೇಹಿತರೇ,

ನಾನು ಮುಖ್ಯಮಂತ್ರಿಯಾಗಿದ್ದಾಗ ಅನುಭವಿಸಿದ ಆರೋಗ್ಯ ಕ್ಷೇತ್ರದ ಕೆಲವು ಕುಂದುಕೊರತೆಗಳನ್ನು ನಿವಾರಿಸಲು ಕಳೆದ ಆರು-ಏಳು ವರ್ಷಗಳಲ್ಲಿ ಪ್ರಯತ್ನಗಳನ್ನು ಮಾಡಲಾಗಿದೆ. ಮತ್ತು ನಮಗೆಲ್ಲಾ ಗೊತ್ತಿದೆ ಸಂವಿಧಾನದಲ್ಲಿಯ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯ ಬಗ್ಗೆ. ಅದರನ್ವಯ ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯ ಮತ್ತು ಅದು ರಾಜ್ಯದ ಜವಾಬ್ದಾರಿ. ನಾನು ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಬಹಳ ಧೀರ್ಘ ಕಾಲ ಇದ್ದುದರಿಂದ ಸಂಕಷ್ಟಗಳ ಬಗ್ಗೆ ನನಗೆ ಅರಿವಿತ್ತು. ಆದುದರಿಂದ ನಾವು ದಿಕ್ಕಿನಲ್ಲಿ ಭಾರತ ಸರಕಾರದಿಂದ ಪ್ರಯತ್ನಗಳನ್ನು ಆರಂಭ ಮಾಡಿದೆವು, ಅದು ರಾಜ್ಯದ ವಿಷಯವಾಗಿದ್ದರೂ ಕೂಡಾ. ಬಹಳ ದೊಡ್ಡ ಸಮಸ್ಯೆ ಎಂದರೆ ದೇಶದ ಆರೋಗ್ಯ ವ್ಯವಸ್ಥೆ ವಿಘಟನೆಗೊಂಡಿತ್ತು. ರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ವ್ಯವಸ್ಥೆಯಲ್ಲಿ ಸಾಮೂಹಿಕ ದೋರಣೆ ಇರಲಿಲ್ಲ. ರಾಜ್ಯಗಳ ವೈಯಕ್ತಿಕ ಮಟ್ಟದಲ್ಲಿ ಅದು ವಿಘಟನೆಯಾಗಿತ್ತು. ಭಾರತದಂತಹ ದೇಶದಲ್ಲಿ ಉತ್ತಮ ಆರೋಗ್ಯ ಸವಲತ್ತುಗಳು ರಾಜ್ಯಗಳ ರಾಜಧಾನಿ ಅಥವಾ ಕೆಲವು ಮೆಟ್ರೋ ನಗರಗಳಿಗೆ ಸೀಮಿತವಾಗಿದ್ದವು. ಬಡವರು ಉದ್ಯೋಗಕ್ಕಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗುತ್ತಿರುವಾಗ ಆರೋಗ್ಯ ಯೋಜನೆಗಳು ರಾಜ್ಯದ ಗಡಿಗಳಿಗೆ ಸೀಮಿತಗೊಂಡರೆ ಅದರಿಂದ ಹೆಚ್ಚು ಪ್ರಯೋಜನ ಆಗದು. ಅದೇ ರೀತಿ ಅಲ್ಲಿ ಪ್ರಾಥಮಿಕ ಆರೋಗ್ಯ ಮತ್ತು ದೊಡ್ಡ ಆಸ್ಪತ್ರೆಗಳ ನಡುವೆ ಬಹಳ ದೊಡ್ಡ ಕಂದಕ ಇತ್ತು. ಮತ್ತು ನಮ್ಮ ಸಾಂಪ್ರದಾಯಿಕ ವೈದ್ಯ ಪದ್ಧತಿ  ಹಾಗು ಆಧುನಿಕ ವೈದ್ಯ ಪದ್ಧತಿ ನಡುವೆ ಸಂಯೋಜನೆ ಇರಲಿಲ್ಲ. ಆಡಳಿತದಲ್ಲಿ ಕೊರತೆಗಳನ್ನು ನಿವಾರಿಸಬೇಕಾಗಿತ್ತು. ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು, ಪರಿವರ್ತಿಸಲು ನಾವು ರಾಷ್ಟ್ರೀಯ ಧೋರಣೆಯೊಂದಿಗೆ ಕಾರ್ಯ ನಿರ್ವಹಿಸಿದೆವು ಮತ್ತು ಹೊಸ ರಾಷ್ಟ್ರೀಯ ಆರೋಗ್ಯ ನೀತಿಯನ್ನು ರೂಪಿಸಿದೆವು. ಸ್ವಚ್ಛ ಭಾರತ್ ಅಭಿಯಾನ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಗಳು ಇದರ ಅಂಗಗಳು. ಇದುವರೆಗೆ ರಾಜಸ್ಥಾನದ  ಸುಮಾರು 3.5 ಲಕ್ಷ ಜನರು ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಕರ್ಯಗಳನ್ನು ಬಲಪಡಿಸುವ ಸುಮಾರು 2,500 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ರಾಜಸ್ಥಾನದಲ್ಲಿಂದು ಕಾರ್ಯ ನಿರ್ವಹಿಸುತ್ತಿವೆ. ರೋಗ ಬಾರದಂತೆ ತಡೆಯುವುದಕ್ಕೆ ಸರಕಾರ ಆದ್ಯತೆ ಕೊಡುತ್ತಿದೆ. ನಾವು ಹೊಸ ಸಚಿವಾಲಯ ಆಯುಷ್  ರಚನೆ ಮಾಡಿರುವುದಲ್ಲದೆ ಆಯುರ್ವೇದ ಮತ್ತು ಯೋಗವನ್ನು ಏಕಕಾಲದಲ್ಲಿ ಉತ್ತೇಜಿಸುತ್ತಿದ್ದೇವೆ.

ಸಹೋದರರೇ ಮತ್ತು ಸಹೋದರಿಯರೇ,

ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ವೈದ್ಯಕೀಯ ಮೂಲಸೌಕರ್ಯ ರಚನೆಯಲ್ಲಿ ಆಗುವ ನಿಧಾನಗತಿ. ...ಎಂ.ಎಸ್. ನಂತಹ ಸ್ಪೆಷಾಲಿಟಿ ಆಸ್ಪತ್ರೆಗಳ ಮತ್ತು ವೈದ್ಯಕೀಯ ಕಾಲೇಜುಗಳ ಜಾಲವನ್ನು ದೇಶದ ಪ್ರತೀ ಭಾಗಕ್ಕೂ ವಿಸ್ತರಿಸುವುದು ಬಹಳ ಮುಖ್ಯ. ಇಂದು ನಾವು ಬಹಳ ತೃಪ್ತಿಯಿಂದ ಹೇಳಬಹುದಾಗಿದೆ-ಭಾರತವು ಆರು ...ಎಂ.ಎಸ್. ಗಳಿಗೆ ಬದಲಾಗಿ ಈಗ 22 ಕ್ಕೂ ಅಧಿಕ  ...ಎಂ.ಎಸ್.ಆಸ್ಪತ್ರೆಗಳ ಜಾಲವನ್ನು ಹೊಂದಿದೆ. ಆರು-ಏಳು ವರ್ಷಗಳಲ್ಲಿ 170 ಕ್ಕೂ ಅಧಿಕ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಮತ್ತು ನೂರಕ್ಕೂ ಅಧಿಕ ಹೊಸ ವೈದ್ಯಕೀಯ ಕಾಲೇಜುಗಳ ಕಾಮಗಾರಿ ಬಹಳ ಚುರುಕಿನಿಂದ ನಡೆಯುತ್ತಿದೆ. ಒಟ್ಟು ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ 2014ರಲ್ಲಿ 82,000 ಆಸುಪಾಸಿನಲ್ಲಿತ್ತು. ಇದು ಸಂಖ್ಯೆ 1.40 ಲಕ್ಷ ಸೀಟುಗಳತ್ತ ಸಾಗಿದೆ. ಅಂದರೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಯುವಜನರಿಗೆ ವೈದ್ಯರಾಗುವ ಅವಕಾಶ ದೊರೆಯುತ್ತಿದೆ. ರಾಜಸ್ಥಾನ ಕೂಡಾ ವೈದ್ಯಕೀಯ ಶಿಕ್ಷಣದಲ್ಲಾಗುತ್ತಿರುವ ಭಾರೀ ಪ್ರಯೋಜನಗಳನ್ನು ಪಡೆಯುತ್ತಿದೆ. ಅವಧಿಯಲ್ಲಿ ರಾಜಸ್ಥಾನದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ. ಪದವಿ ಸೀಟುಗಳ ಸಂಖ್ಯೆ 2,000 ದಿಂದ 4,000 ಕ್ಕೇರಿದೆ. ಸ್ನಾತಕೋತ್ತರ ಸೀಟುಗಳ ಸಂಖ್ಯೆ ರಾಜಸ್ಥಾನದಲ್ಲಿ ಮೊದಲು 1 ಸಾವಿರಕ್ಕಿಂತ ಕಡಿಮೆ ಇತ್ತು, ಅದೀಗ 2100 ಆಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು, ಪ್ರತೀ ಜಿಲ್ಲೆಯೂ ವೈದ್ಯಕೀಯ ಕಾಲೇಜು ಹೊಂದಿರಬೇಕು ಅಥವಾ ಅಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡುವ ಕನಿಷ್ಠ ಒಂದು ಸಂಸ್ಥೆಯನ್ನಾದರೂ ಹೊಂದಿರಬೇಕು ಎಂಬ  ಆಶಯವನ್ನು ನಾವು ಹೊಂದಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಸಂಬಂಧಿ ಆಡಳಿತದಿಂದ ಹಿಡಿದು ಇತರ ನೀತಿಗಳು, ಕಾನೂನುಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿ ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಹಿಂದೆ ಹಿಂದಿನ ಭಾರತೀಯ ವೈದ್ಯಕೀಯ ಮಂಡಳಿ-ಎಂ.ಸಿ.. ನಿರ್ಧಾರಗಳನ್ನು ಹೇಗೆ ಪ್ರಶ್ನಿಸಲಾಗುತ್ತಿತ್ತು ಎಂಬುದನ್ನು ನಾವು ನೋಡಿದ್ದೇವೆ. ಅದರ ವಿರುದ್ಧ ವಿವಿಧ ಆರೋಪಗಳನ್ನು ಹಾಕಲಾಗುತ್ತಿತ್ತು. ಮತ್ತು ಸಂಸತ್ತು ಅದನ್ನು ಗಂಟೆಗಳ ಕಾಲ ಚರ್ಚಿಸುತ್ತಿತ್ತು. ಅಲ್ಲಿ ಪಾರದರ್ಶಕತೆಯ ಬಗ್ಗೆಯೂ ಸಂಶಯಗಳಿದ್ದವು. ಇದು ವೈದ್ಯಕೀಯ ಶಿಕ್ಷಣದ ಗುಣಮಟ್ಟದ ಮೇಲೆ ಭಾರೀ ಪರಿಣಾಮ ಬೀರುತ್ತಿತ್ತು. ಮತ್ತು ದೇಶದ ವೈದ್ಯಕೀಯ ಸೇವೆ ಒದಗಣೆಯ ಮೇಲೂ ಅದರ ಪರಿಣಾಮ ಆಗುತ್ತಿತ್ತು. ವರ್ಷಗಳ ಕಾಲ ಸರಕಾರ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿತ್ತು. ಆದರೆ ಅದಾವುದೂ ಆಗುತ್ತಿರಲಿಲ್ಲ. ನಾನು ಕೂಡಾ ಬಹಳ ಸವಾಲುಗಳನ್ನು ಎದುರಿಸಿದೆ. ನನ್ನ ಮೊದಲ ಅವಧಿಯಲ್ಲೂ ಸಹ, ನಾನು ಇಚ್ಛಿಸಿದ್ದೆನಾದರೂ ಅದನ್ನು ಮಾಡಲಾಗಲಿಲ್ಲ. ಹಲವು ಗುಂಪುಗಳು ಹಲವಾರು ಅಡ್ಡಿಗಳನ್ನು ತಂದೊಡ್ಡುತ್ತಿದ್ದವು. ಅದನ್ನು  ದಾಟಿ ಜಾರಿಗೆ ತರಲು ಬಹಳ ಶ್ರಮ ಪಡಬೇಕಾಗಿತ್ತು. ಈಗ ವ್ಯವಸ್ಥೆಗಳ ಜವಾಬ್ದಾರಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೇಲಿದೆ. ಇದರ ಭಾರೀ ಪರಿಣಾಮ ಈಗ ಆರೋಗ್ಯ ರಕ್ಷಣೆಮಾನವ ಸಂಪನ್ಮೂಲಗಳು ಮತ್ತು ಆರೋಗ್ಯ ಸೇವೆಗಳ ಮೇಲೆ ಕಾಣುತ್ತಿದೆ.

ಸ್ನೇಹಿತರೇ,

ದಶಕಗಳ ಹಿಂದಿನ ಆರೋಗ್ಯ ವ್ಯವಸ್ಥೆಯಲ್ಲಿ ಇಂದಿನ ಆವಶ್ಯಕತೆಗಳಿಗೆ ಅನುಗುಣವಾಗಿ ಬದಲಾವಣೆಗಳು ಅವಶ್ಯ ಇವೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಣೆ ನಡುವಣ ಅಂತರವನ್ನು ಸತತವಾಗಿ ಜೋಡಿಸಲಾಗುತ್ತಿದೆ. ದೊಡ್ಡ ಆಸ್ಪತ್ರೆಗಳಿಗೆ, ಅವುಗಳು ಖಾಸಗಿಯವು ಇರಬಹುದು ಅಥವಾ ಸರಕಾರಿ ಇರಬಹುದು, ಅವುಗಳಲ್ಲಿಯ ಸಂಪನ್ಮೂಲವನ್ನು ಹೊಸ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೃಷ್ಟಿಸಲು ಗರಿಷ್ಠ ಪ್ರಮಾಣದಲ್ಲಿ ಬಳಸುವುದಕ್ಕೆ ಆದ್ಯತೆ ಮತ್ತು ಒತ್ತನ್ನು ನೀಡಲಾಗುತ್ತಿದೆ. ಮೂರು ನಾಲ್ಕು ದಿನಗಳ ಹಿಂದೆ ಕಾರ್ಯಾರಂಭ ಮಾಡಲಾದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ದೇಶದ ಮೂಲೆ ಮೂಲೆಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಲಿದೆ. ಉತ್ತಮ ಅಸ್ಪತ್ರೆಗಳ ಜೊತೆ ಅಪಾಯಿಂಟ್ಮೆಂಟ್, ಪರೀಕ್ಷಾ ಪ್ರಯೋಗಾಲಯಗಳು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರುಗಳ ಆಯ್ಕೆಯನ್ನು ಬರೇ ಒಂದು ಕ್ಲಿಕ್ ನಲ್ಲಿ ಮಾಡಬಹುದಾಗಿದೆ. ಅಲ್ಲಿ ರೋಗಿಗಳಿಗೆ ತಮ್ಮ ಆರೋಗ್ಯ ದಾಖಲೆಗಳನ್ನು ನಿರ್ವಹಿಸಲು ಅವಕಾಶ ಇರುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ಸಮರ್ಪಕ ಆರೋಗ್ಯ ಸೇವೆಯಲ್ಲಿ ಕೌಶಲಯುಕ್ತ ಮಾನವ ಸಂಪನ್ಮೂಲ ಬಹಳ ನೇರ ಪರಿಣಾಮವನ್ನು ಬೀರುತ್ತದೆ. ನಾವಿದರ ಬಗ್ಗೆ ಕೊರೊನಾ ಕಾಲದಲ್ಲಿ ಬಹಳ ಹೆಚ್ಚಿನ ಅನುಭವ ಗಳಿಸಿದ್ದೇವೆ. ಕೇಂದ್ರ ಸರಕಾರದಉಚಿತ ಲಸಿಕೆ, ಎಲ್ಲರಿಗೂ ಲಸಿಕೆಆಂದೋಲನದ ಯಶಸ್ಸು ಇದರ ಪ್ರತಿಫಲನ. ಇಂದು 88 ಕೋಟಿಗೂ ಅಧಿಕ ಡೋಸುಗಳ ಕೊರೊನಾ ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ. ರಾಜಸ್ಥಾನದಲ್ಲಿ 5 ಕೋಟಿಗೂ ಅಧಿಕ ಲಸಿಕಾ ಡೋಸುಗಳನ್ನು ನೀಡಲಾಗಿದೆ. ನಮ್ಮ ವೈದ್ಯರು, ದಾದಿಯರು, ಮತ್ತು ವೈದ್ಯಕೀಯ ಸಿಬ್ಬಂದಿಗಳು ಸಾವಿರಾರು ಕೇಂದ್ರಗಳಲ್ಲಿ ನಿರಂತರವಾಗಿ ಲಸಿಕಾಕರಣದಲ್ಲಿ ತೊಡಗಿಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ಲಭ್ಯವಾಗುತ್ತಿರುವುದು ಗ್ರಾಮೀಣ ಮತ್ತು ಬಡ ಕುಟುಂಬಗಳಿಗೆ ಒಂದು ತೊಂದರೆ ಮತ್ತು ಅಡ್ಡಿಯಾಗಿದೆ. ಈಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಹಿಂದಿಯಲ್ಲಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶವಿದೆ. ಇದರಿಂದಾಗಿ ಈಗ ರಾಜಸ್ಥಾನದ ಗ್ರಾಮಗಳ ಬಡ ಕುಟುಂಬಗಳ ತಾಯಂದಿರ ತಮ್ಮ ಮಕ್ಕಳನ್ನು ಕುರಿತ ಕನಸುಗಳು ಈಡೇರಲಿವೆ. ಇಂಗ್ಲೀಷ್ ಮಾಧ್ಯಮದಲ್ಲಿ ಓದಲು ಅವಕಾಶ ದೊರೆಯದ ಬಡವರ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಈಗ ವೈದ್ಯರಾಗುವ ಮೂಲಕ ಮಾನವತೆಗೆ ಸೇವೆ ಸಲ್ಲಿಸಬಹುದು. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಅವಕಾಶಗಳು ಸಮಾಜದ ಪ್ರತೀ ವರ್ಗಕ್ಕೂ ಸಮಾನವಾಗಿ ಲಭ್ಯವಾಗಬೇಕು ಎನ್ನುವುದು ಬಹಳ ಅವಶ್ಯಕವಾದಂತಹ ಸಂಗತಿ. .ಬಿ.ಸಿ.ಗಳಿಗೆ ಮತ್ತು ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಜನತೆಗೆ ವೈದ್ಯಕೀಯ ಶಿಕ್ಷಣದಲ್ಲಿ  ಮೀಸಲಾತಿ ನೀಡುವುದರ ಹಿಂದಿನ ಇರಾದೆ ಇದೇ.

ಸ್ನೇಹಿತರೇ,

ಸ್ವಾತಂತ್ರ್ಯದ ಪುಣ್ಯಕರ ಕಾಲದಲ್ಲಿ ಉನ್ನತ ಮಟ್ಟದ ಕೌಶಲ್ಯ ಮಾತ್ರ ಭಾರತವನ್ನು ಬಲಪಡಿಸುತ್ತದೆ ಮಾತ್ರವಲ್ಲ ಆತ್ಮನಿರ್ಭರ ಭಾರತದ ದೃಢ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾಗಿರುವ ಪೆಟ್ರೋಕೆಮಿಕಲ್ ಕೈಗಾರಿಕೆಗೆ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಸಂದರ್ಭದ ಅಗತ್ಯವಾಗಿದೆ. ರಾಜಸ್ಥಾನದ ಹೊಸ ಪೆಟ್ರೋಕೆಮಿಕಲ್ ತಂತ್ರಜ್ಞಾನ ಸಂಸ್ಥೆ ಕ್ಷೇತ್ರದಲ್ಲಿ ಪ್ರತೀ ವರ್ಷ ನೂರಾರು ಯವಜನತೆಗೆ ಹೊಸ ಅವಕಾಶಗಳನ್ನು ಸೃಷ್ಟಿ ಮಾಡಲಿದೆ. ಈಗೀಗ ಜೀವನದ ವಿವಿಧ ಹಂತಗಳಲ್ಲಿ ಪೆಟ್ರೋಕೆಮಿಕಲ್ಸ್ ಬಳಕೆ ಸತತ ಹೆಚ್ಚಾಗುತ್ತಿದೆ. ಕೃಷಿ, ಆರೋಗ್ಯ, ಮತ್ತು ವಾಹನೋದ್ಯಮಗಳಲ್ಲಿ ಇದರ ಬಳಕೆ ಇದೆ. ಆದುದರಿಂದ ಭವಿಷ್ಯದಲ್ಲಿ ಕೌಶಲ್ಯಯುಕ್ತ ಯುವಜನತೆಗೆ ಹಲವು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಸ್ನೇಹಿತರೇ,

ಇಂದು ನಾವು ಪೆಟ್ರೋ ಕೆಮಿಕಲ್ ಸಂಸ್ಥೆಯನ್ನು ಉದ್ಘಾಟಿಸುತ್ತಿರುವಾಗ ನನಗೆ 13-14 ವರ್ಷಗಳ ಹಿಂದಿನ, ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನ ಅವಧಿ ನೆನಪಾಗುತ್ತದೆ ಮತ್ತು ನಾವು ಪೆಟ್ರೋಲಿಯಂ ವಿಶ್ವವಿದ್ಯಾಲಯದ ಚಿಂತನೆಯ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದೆವು. ಅಗ ಕೆಲವು ಜನರು ಚಿಂತನೆಯ ಬಗ್ಗೆ ಲೇವಡಿ ಮಾಡಿದ್ದರು. ಮತ್ತು ವಿಶ್ವವಿದ್ಯಾಲಯದ  ಅಗತ್ಯದ ಬಗ್ಗೆ ಪ್ರಶ್ನಿಸಿದ್ದರು. ಅದೇನು ಮಾಡಬಲ್ಲದು ಮತ್ತು ಅದರಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಎಲ್ಲಿಂದ ಬರುತ್ತಾರೆ ಎಂಬ ಹಿಂಜರಿಕೆಯನ್ನು ವ್ಯಕ್ತ ಮಾಡಿದ್ದರು ಮತ್ತು ಅದು ಸಹಜವೂ ಆಗಿತ್ತು. ಆದರೆ ನಾವು ಚಿಂತನೆಯನ್ನು ಕೈಬಿಡಲಿಲ್ಲ. ರಾಜಧಾನಿ ಗಾಂಧಿನಗರದಲ್ಲಿ ಭೂಮಿಯನ್ನು ಗುರುತಿಸಲಾಯಿತು. ಮತ್ತು ಪಂಡಿತ್ ದೀನದಯಾಳ ಪೆಟ್ರೋಲಿಯಂ ವಿಶ್ವವಿದ್ಯಾಲಯ - ಪಿ.ಡಿ.ಪಿ.ಯು. ಆರಂಭ ಮಾಡಲಾಯಿತು. ಬಹಳ ಕಡಿಮೆ ಸಮಯದಲ್ಲಿ ಪಿ.ಡಿ.ಪಿ.ಯು. ತನ್ನ ಮೌಲ್ಯವನ್ನು ತೋರಿಸಿದೆ. ದೇಶದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡಲು ಸ್ಪರ್ಧೆ ಮಾಡತೊಡಗಿದರು. ಈಗ ವಿಶ್ವವಿದ್ಯಾಲಯದ ಚಿಂತನೆ ಮತ್ತು ದೂರದೃಷ್ಟಿ ಇನ್ನಷ್ಟು ವಿಸ್ತರಿಸಲ್ಪಟ್ಟಿದೆ. ಈಗ ಅದು ಪಂಡಿತ್ ದೀನದಯಾಳ್ ಇಂಧನ ವಿಶ್ವವಿದ್ಯಾಲಯ-ಪಿ.ಡಿ..ಪಿ.ಯಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇಂತಹ ಸಂಸ್ಥೆಗಳು ಸ್ವಚ್ಛ ಇಂಧನಕ್ಕೆ ಹೊಸ ಅನ್ವೇಷಣೆಗಳನ್ನು ಮಾಡಲು ಯುವಜನತೆಗೆ ತಳಹದಿಯನ್ನು ನಿರ್ಮಾಣ ಮಾಡುತ್ತಿವೆ ಮತ್ತು ಅವರ ಪರಿಣತಿಯನ್ನು ಅಭಿವೃದ್ಧಿ ಮಾಡುವುದಕ್ಕೂ ನೆರವಾಗುತ್ತಿವೆ.

ಸ್ನೇಹಿತರೇ,

ಬರ್ಮರ್ ನಲ್ಲಿ ರಾಜಸ್ಥಾನ ತೈಲ ಶುದ್ದೀಕರಣಾಗಾರ ಯೋಜನೆ ಬಹಳ ತ್ವರಿತವಾಗಿ ಸಾಗುತ್ತಿದೆ. 70,000 ಕೋಟಿ ರೂ.ಗಳನ್ನು ಯೋಜನೆಯಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಯೋಜನೆಯು ಪೆಟ್ರೋಕೆಮಿಕಲ್ ತಂತ್ರಜ್ಞಾನ ಸಂಸ್ಥೆಯಿಂದ ಪದವಿ ಪಡೆದು ಬರುವ ವೃತ್ತಿಪರರಿಗೆ ಹಲವು ಹೊಸ ಅವಕಾಶಗಳನ್ನು ಒದಗಿಸಲಿದೆ. ರಾಜಸ್ಥಾನದಲ್ಲಿ ನಡೆಯುತ್ತಿರುವ ನಗರ ಅನಿಲ ವಿತರಣಾ ಕಾಮಗಾರಿ ಕೂಡಾ ಯುವಕರಿಗೆ ಬಹಳ ಅವಕಾಶಗಳನ್ನು ತೆರೆಯಲಿದೆ. 2014ರವರೆಗೆ ರಾಜಸ್ಥಾನದಲ್ಲಿಯ ಒಂದು ನಗರ ಮಾತ್ರ ಅನಿಲ ವಿತರಣೆಯ ಅನುಮತಿಯನ್ನು ಪಡೆದಿತ್ತು. ಇಂದು ರಾಜಸ್ಥಾನದ 17 ಜಿಲ್ಲೆಗಳು ನಗರ ಅನಿಲ ವಿತರಣಾ ಜಾಲಕ್ಕಾಗಿ ಅನುಮತಿಯನ್ನು ಪಡೆದಿವೆ. ಸದ್ಯೋಭವಿಷ್ಯದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯೂ ಕೊಳವೆ ಮೂಲಕ ಅನಿಲ ಪೂರೈಕೆಯ ಜಾಲವನ್ನು ಹೊಂದಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ರಾಜಸ್ಥಾನದ ಬಹಳ ದೊಡ್ಡ ಭಾಗ ಮರುಭೂಮಿ ಮತ್ತು ಅದು ಗಡಿ ಪ್ರದೇಶ. ಕಠಿಣ ಭೌಗೋಳಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ನಮ್ಮ ಮಾತೆಯರು ಮತ್ತು ಸಹೋದರಿಯರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಾನು ರಾಜಸ್ಥಾನದ ದುರ್ಗಮ ಪ್ರದೇಶಗಳನ್ನು ಹಲವಾರು ವರ್ಷಗಳ ಕಾಲ ಸುತ್ತಾಡಿದ್ದೇನೆ. ಶೌಚಾಲಯಗಳು, ವಿದ್ಯುತ್, ಮತ್ತು ಅನಿಲ ಸಂಪರ್ಕ ಇಲ್ಲದೆ ತಾಯಂದಿರು ಮತ್ತು ಸಹೋದರಿಯರು ಎದುರಿಸುತ್ತಿದ್ದ ಕಠಿಣ ಪರಿಸ್ಥಿತಿಗಳನ್ನು ನಾನು ನೋಡಿದ್ದೇನೆ. ಇಂದು ಕಡುಬಡವರಿಗೆ ಶೌಚಾಲಯಗಳ ಲಭ್ಯತೆ, ವಿದ್ಯುತ್ ಮತ್ತು ಅನಿಲ ಸಂಪರ್ಕಗಳ ಲಭ್ಯತೆಯಿಂದಾಗಿ ಜೀವನ ಸುಲಭವಾಗಿದೆ. ರಾಜಸ್ಥಾನದಲ್ಲಿ ಕುಡಿಯುವ ನೀರು, ಮಾತೆಯರು ಮತ್ತು ಸಹೋದರಿಯರ ತಾಳ್ಮೆಗೆ ಪ್ರತೀದಿನವೂ ಒಂದು ಪರೀಕ್ಷೆಯಂತಿತ್ತು. ಈಗ ರಾಜಸ್ಥಾನದ 21 ಲಕ್ಷಕ್ಕೂ ಅಧಿಕ  ಕುಟುಂಬಗಳಿಗೆ ಜಲ ಜೀವನ ಯೋಜನೆ ಅಡಿಯಲ್ಲಿ  ಕೊಳವೆ ಮೂಲಕ ನೀರು ಪೂರೈಕೆ ಆಗುತ್ತಿದೆಹರ್ ಘರ್ ಜಲ್ ಅಭಿಯಾನ್ ನಮ್ಮ ತಾಯಂದಿರ, ಸಹೋದರಿಯರ ಮತ್ತು ರಾಜಸ್ಥಾನದ ಪುತ್ರಿಯರ ಕಾಲಿನ ಮೇಲಿನ ಗುಳ್ಳೆಗಳನ್ನ್ನು ಕಡಿಮೆ ಮಾಡುವ ಸಣ್ಣ ಆದರೆ ಪ್ರಾಮಾಣಿಕ ಪ್ರಯತ್ನ.

ಸ್ನೇಹಿತರೇ,

ರಾಜಸ್ಥಾನದ ಅಭಿವೃದ್ಧಿ ಭಾರತದ ಅಭಿವೃದ್ಧಿಗೆ ವೇಗ ನೀಡುತ್ತದೆ. ರಾಜಸ್ಥಾನದ ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಜೀವನ ಮಾಡುವುದು ಸುಲಭವಾದಂತೆ ಮತ್ತು ಅವರಿಗೆ ಆರಾಮದಾಯಕ ಸೌಲಭ್ಯಗಳು ಹೆಚ್ಚಿದಂತೆ ಅದು ನನಗೆ ತೃಪ್ತಿಯನ್ನು ನೀಡುತ್ತದೆ. ಕಳೆದ 6-7 ವರ್ಷಗಳಲ್ಲಿ 13 ಲಕ್ಷಕ್ಕೂ ಅಧಿಕ ಪಕ್ಕಾ ಮನೆಗಳನ್ನು ಕೇಂದ್ರದ ವಸತಿ ಯೋಜನೆಗಳಡಿಯಲ್ಲಿ ರಾಜಸ್ಥಾನದ ಬಡವರಿಗಾಗಿ ನಿರ್ಮಾಣ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಅಡಿಯಲ್ಲಿ ಸುಮಾರು 11,000 ಕೋ.ರೂ.ಗಳನ್ನು ರಾಜಸ್ಥಾನದ 74 ಲಕ್ಷಕ್ಕೂ ಅಧಿಕ ಕೃಷಿಕರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾ ಅಡಿಯಲ್ಲಿ ರಾಜ್ಯದ ರೈತರ 15,000 ಕೋಟಿ ರೂ.ಗಳ ಮೊತ್ತದ ಕ್ಲೇಮುಗಳನ್ನು ಇತ್ಯರ್ಥ ಮಾಡಲಾಗಿದೆ.

ಸ್ನೇಹಿತರೇ,

ಗಡಿ ರಾಜ್ಯವಾಗಿ ರಾಜಸ್ಥಾನಕ್ಕೆ ಸಂಪರ್ಕ ಮತ್ತು ಗಡಿ ಪ್ರದೇಶಾಭಿವೃದ್ಧಿಯಡಿ ಆದ್ಯತೆ ನೀಡಲಾಗುತ್ತಿದೆ. ಹೊಸ ರಾಷ್ಟ್ರೀಯ ಹೆದ್ದಾರಿ, ಹೊಸ ರೈಲ್ವೇ ಮಾರ್ಗಗಳು, ನಗರ ಅನಿಲ ವಿತರಣಾ ವ್ಯವಸ್ಥೆ ಸಹಿತ ಡಜನ್ನುಗಳಷ್ಟು ಯೋಜನೆಗಳು ಬಹಳ ತ್ವರಿತವಾಗಿ ಸಾಗುತ್ತಿವೆ. ಸರಕು ಸಾಗಾಣಿಕೆಗಾಗಿಯೇ ಇರುವ ಪ್ರತ್ಯೇಕ ಕಾರಿಡಾರ್ ದೇಶದ ರೈಲ್ವೆಯನ್ನು ರಾಜಸ್ಥಾನದಿಂದ ಗುಜರಾತಿನವರೆಗೆ ಬದಲಾಯಿಸಲಿದೆ. ಇದು ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ರಾಜಸ್ಥಾನದ ಸಾಮರ್ಥ್ಯ ಇಡೀ ದೇಶಕ್ಕೆ ಉತ್ಸಾಹ ತುಂಬುವಂತಹದು. ನಾವು ರಾಜಸ್ಥಾನದ ಸಾಮರ್ಥ್ಯವನ್ನು ಉತ್ತೇಜಿಸಬೇಕು ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಇದು ನಮ್ಮೆಲ್ಲರ ಪ್ರಯತ್ನದಿಂದ ಮಾತ್ರ ಸಾಧ್ಯ. ಸಬ್ಕಾ ಪ್ರಯಾಸ್ ( ಪ್ರತಿಯೊಬ್ಬರ ಪ್ರಯತ್ನ) ಎಂಬ ಮಂತ್ರದೊಂದಿಗೆ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ನಾವು ಹೊಸ ಹುರುಪಿನೊಂದಿಗೆ ಮುಂದುವರೆಯಬೇಕು. ಸ್ವಾತಂತ್ರ್ಯದ ಶಕೆ ರಾಜಸ್ಥಾನದ ಅಭಿವೃದ್ಧಿಯಲ್ಲಿ ಸುವರ್ಣ ಕಾಲವಾಗಬೇಕು ಎಂದು ನಾವು ಆಶಿಸುತ್ತೇವೆ. ನಾನು ರಾಜಸ್ಥಾನದ ಮುಖ್ಯಮಂತ್ರಿ ಅವರ ಮಾತುಗಳನ್ನು ಆಲಿಸುತ್ತಿದ್ದಾಗ ಅವರು ಕೆಲಸಗಳ ಬಹಳ ದೊಡ್ಡ ಪಟ್ಟಿಯನ್ನು ಓದಿದರು. ನನ್ನ ಮೇಲೆ ಇಷ್ಟೊಂದು ನಂಬಿಕೆ ಇಟ್ಟುದಕ್ಕಾಗಿ ನಾನು ರಾಜಸ್ಥಾನ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. ಮತ್ತು ಇದು ಪ್ರಜಾಪ್ರಭುತ್ವದ ಬಹಳ ದೊಡ್ಡ ಶಕ್ತಿ. ಅವರ ರಾಜಕೀಯ ಸಿದ್ಧಾಂತ ನನ್ನ ಸಿದ್ಧಾಂತಕ್ಕಿಂತ ಭಿನ್ನವಾದಂತಹದು. ಆದರೆ ಅಶೋಕ್ ಜೀ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ಅದರಿಂದಾಗಿ ಅವರು ಬಹಳಷ್ಟು ಸಂಗತಿಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡಿದ್ದಾರೆ. ಸ್ನೇಹ ಮತ್ತು ನಂಬಿಕೆ ಪ್ರಜಾಪ್ರಭುತ್ವದ ಬಹಳ ದೊಡ್ಡ ಶಕ್ತಿಗಳು. ನಾನು ಮತ್ತೊಮ್ಮೆ ರಾಜಸ್ಥಾನದ ಜನತೆಗೆ ಹೃದಯಪೂರ್ವಕ ಶುಭಾಶಯಗಳನ್ನು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1761448) Visitor Counter : 160