ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆಯುಷ್ಮಾನ್ ಭಾರತ್   ಪಿ ಎಮ್ - ಜೆ ಎ ವೈ ನ ಆರೋಗ್ಯ ಲಾಭಗಳ ಪ್ಯಾಕೇಜ್ ಪರಿಷ್ಕರಣೆ

ಸುಮಾರು 400 ಕಾರ್ಯವಿಧಾನಗಳ ದರಗಳನ್ನು ಪರಿಷ್ಕರಿಸಲಾಗಿದೆ

ಕಪ್ಪು ಶಿಲೀಂಧ್ರಕ್ಕೆ ಸಂಬಂಧಿಸಿದ ಹೊಸ ಪ್ಯಾಕೇಜ್ ಅನ್ನು ಪರಿಷ್ಕೃತ ಪ್ಯಾಕೇಜ್‌ಗೆ ಸೇರಿಸಲಾಗಿದೆ

ಆಂಕೊಲಾಜಿಯ ಪರಿಷ್ಕೃತ ಪ್ಯಾಕೇಜ್‌ಗಳು ದೇಶದ ಫಲಾನುಭವಿಗಳಿಗೆ ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸುತ್ತದೆ: ಶ್ರೀ ಮನ್ಸುಖ್ ಮಾಂಡವಿಯಾ

Posted On: 05 OCT 2021 6:16PM by PIB Bengaluru

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ ಎಚ್ ), ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿ ಎಮ್-ಜೆ ವೈಯನ್ನು ಅನುಷ್ಠಾನಗೊಳಿಸುವ ಅತ್ಯುನ್ನತ ಸಂಸ್ಥೆಯಾಗಿದ್ದು, ಯೋಜನೆಯಡಿಯಲ್ಲಿ ಆರೋಗ್ಯ ಲಾಭದ ಪ್ಯಾಕೇಜ್ (ಎಚ್ ಬಿ ಪಿ) ಮಾಸ್ಟರ್ ಅನ್ನು ಪರಿಷ್ಕರಿಸಿದೆ. ಆರೋಗ್ಯ ಲಾಭದ ಪ್ಯಾಕೇಜ್ (ಎಚ್ ಬಿ ಪಿ  2.2) ಪರಿಷ್ಕೃತ ಆವೃತ್ತಿಯಲ್ಲಿ, ಪಿ ಎಮ್-ಜೆ ವೈ ಅಡಿಯಲ್ಲಿ ಕೆಲವು ಆರೋಗ್ಯ ಪ್ಯಾಕೇಜ್‌ಗಳ ದರವನ್ನು ಶೇಕಡಾ 20 ರಿಂದ 400 ಕ್ಕೆ ಹೆಚ್ಚಿಸಲಾಗಿದೆ. ಸುಮಾರು 400 ಕಾರ್ಯವಿಧಾನಗಳ ದರಗಳನ್ನು ಪರಿಷ್ಕರಿಸಲಾಗಿದೆ ಮತ್ತು ಕಪ್ಪು ಶಿಲೀಂಧ್ರಕ್ಕೆ ಸಂಬಂಧಿಸಿದ ಒಂದು ಹೊಸ ಹೆಚ್ಚುವರಿ ವೈದ್ಯಕೀಯ ನಿರ್ವಹಣಾ ಪ್ಯಾಕೇಜ್ ಅನ್ನು ಕೂಡ ಸೇರಿಸಲಾಗಿದೆ. ಎಚ್ ಬಿ ಪಿ  2.2 ಅನ್ನು ನವೆಂಬರ್, 2021 ರಿಂದ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯವರು ಹರ್ಷವನ್ನು ವ್ಯಕ್ತಪಡಿಸುತ್ತಾ "ಆಯುಷ್ಮಾನ್ ಭಾರತ್ ಪಿ ಎಮ್-ಜೆ ವೈ ಅಡಿಯಲ್ಲಿ ಫಲಾನುಭವಿಗಳಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಆರೋಗ್ಯ ಲಾಭಗಳ ಪ್ಯಾಕೇಜ್ (ಎಚ್ ಬಿ ಪಿ  2.2) ಪರಿಷ್ಕೃತ ಆವೃತ್ತಿಯು ಪಟ್ಟಿಯಲ್ಲಿರುವ ಆಸ್ಪತ್ರೆಗಳನ್ನು ಸಬಲಗೊಳಿಸುತ್ತದೆ ಎಂದು ನನಗೆ ಸಂತೋಷವಾಗಿದೆ. ಆಂಕೊಲಾಜಿಯ ಪರಿಷ್ಕೃತ ಪ್ಯಾಕೇಜ್‌ಗಳು ದೇಶದ ಫಲಾನುಭವಿಗಳಿಗೆ ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸುತ್ತದೆ. ಕಪ್ಪು ಶಿಲೀಂಧ್ರಕ್ಕೆ ಸಂಬಂಧಿಸಿದ ಹೊಸ ಪ್ಯಾಕೇಜ್‌ಗಳನ್ನು ಸೇರಿಸುವುದರಿಂದ ಫಲಾನುಭವಿಗಳಿಗೆ ದೊಡ್ಡ ಅನುಕೂಲವಾಗುತ್ತದೆ. ತರ್ಕಬದ್ಧಗೊಳಿಸಿದ ಎಚ್‌ಬಿಪಿ ಖಾಸಗಿ ಆಸ್ಪತ್ರೆಗಳಲ್ಲಿನ ಯೋಜನೆಯನ್ನು ಮತ್ತಷ್ಟು ಸುಧಾರಿಸುತ್ತದೆ ಮತ್ತು ಫಲಾನುಭವಿಗಳ ನಗದು ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್ ಎಚ್ ) ಸಿಇಒ ಡಾ. ಆರ್. ಎಸ್. ಶರ್ಮಾ, ಆರೋಗ್ಯ ಲಾಭ ಪ್ಯಾಕೇಜ್ ಮಾಸ್ಟರ್ ಅನ್ನು ತರ್ಕಬದ್ಧಗೊಳಿಸುವುದಕ್ಕಾಗಿ ಮಧ್ಯಸ್ಥಗಾರರಿಂದ ಪಡೆದ ಪ್ರತಿಕ್ರಿಯೆಯ ಮೇಲೆ ಎನ್ ಎಚ್ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭರವಸೆ ನೀಡಿದರು. ಬಿ ಪಿ ಎಮ್-ಜೆ ವೈ ಯೋಜನೆ ಆರಂಭವಾದಾಗಿನಿಂದ, ಹೆಚ್ಚಿನ ರೋಗ ಪರಿಸ್ಥಿತಿಗಳನ್ನು ಒಳಗೊಳ್ಳಲು ಹೊಸ ಪ್ಯಾಕೇಜ್‌ಗಳನ್ನು ಸೇರಿಸಲಾಗಿದೆ ಮತ್ತು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ಯಾಕೇಜ್‌ಗಳ ನಿಯಮಿತ ದರಗಳನ್ನು ಪರಿಷ್ಕರಿಸಲಾಗುತ್ತಿದೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಬದಲಾವಣೆಗಳು ಅಗತ್ಯವಾಗಿವೆ ಮತ್ತು ಪೋರ್ಟಬಿಲಿಟಿಯಲ್ಲಿ ಯಾವುದೇ ಸವಾಲುಗಳಿರದಿರುವುದನ್ನು  ಖಚಿತಪಡಿಸಿಕೊಳ್ಳಲು ವಹಿವಾಟು ನಿರ್ವಹಣಾ ವ್ಯವಸ್ಥೆಯಲ್ಲಿ (ಟಿ ಎಮ್ ಎಸ್) ಮಾಡಲಾಗುವುದು. ರಾಜ್ಯ ಆರೋಗ್ಯ ಏಜೆನ್ಸಿಗಳು (ಎಸ್ ಎಚ್ ) ಪ್ರಸ್ತುತ ಎಚ್ ಬಿ ಪಿ ಹಿಂದಿನ ಯಾವುದೇ ಆವೃತ್ತಿಗಳನ್ನು ಅನುಷ್ಠಾನಗೊಳಿಸುತ್ತಿದ್ದರೆ ಈಗ ಎಚ್ ಬಿ ಪಿ 2.2 ಇತ್ತೀಚಿನ ಆವೃತ್ತಿಯನ್ನು ಸ್ವೀಕರಿಸಬಹುದು ಮತ್ತು ಕಾರ್ಯಗತಗೊಳಿಸಬಹುದು. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಮಧ್ಯಸ್ಥಗಾರರು ಮತ್ತು ಪ್ರಖ್ಯಾತ ವೈದ್ಯಕೀಯ ಸಂಸ್ಥೆಗಳ ಖ್ಯಾತ ಪ್ರಾಧ್ಯಾಪಕರೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಕೆಳಗಿನ ವರ್ಗಗಳಲ್ಲಿ ದರ ಪರಿಷ್ಕರಣೆಯನ್ನು ಕೈಗೊಂಡಿದೆ:

i. ರೇಡಿಯೇಷನ್ ಆಂಕೊಲಾಜಿ ಕಾರ್ಯವಿಧಾನಗಳು,

ii. ವೈದ್ಯಕೀಯ ನಿರ್ವಹಣಾ ವಿಧಾನಗಳಾದ ಡೆಂಗ್ಯೂ, ತೀವ್ರ ಜ್ವರ ರೋಗ ಇತ್ಯಾದಿ.

iii. ಕಪ್ಪು ಶಿಲೀಂಧ್ರಕ್ಕೆ ಶಸ್ತ್ರಚಿಕಿತ್ಸೆಯ ಪ್ಯಾಕೇಜ್ ಚಿಕಿತ್ಸೆ,

iv. ಬಲ/ಎಡ ಹೃದಯದ ಕ್ಯತಟೆರೈಸೇಶನ್, ಪಿಡಿಎ ಮುಚ್ಚುವಿಕೆ, ಆರ್ತ್ರೋಡೆಸಿಸ್, ಕೊಲೆಸಿಸ್ಟೆಕ್ಟಮಿ, ಅಪೆಂಡಿಸೆಕ್ಟಮಿ ಇತ್ಯಾದಿ ಇತರ ವಿಧಾನಗಳು.

ವೈದ್ಯಕೀಯ ನಿರ್ವಹಣಾ ಪ್ರಕ್ರಿಯೆಗಳ ಅಡಿಯಲ್ಲಿ, ವೆಂಟಿಲೇಟರ್‌ನೊಂದಿಗೆ ಐಸಿಯು ದರಗಳನ್ನು ಶೇಕಡಾ 100, ವೆಂಟಿಲೇಟರ್ ಇಲ್ಲದ ಐಸಿಯು ದರಗಳನ್ನು ಶೇಕಡಾ 136, ಎಚ್‌ಡಿಯು ದರಗಳನ್ನು ಶೇಕಡಾ 22ರಷ್ಟು ಪರಿಷ್ಕರಿಸಲಾಗಿದೆ ಮತ್ತು  ಸಾಮಾನ್ಯ ವಾರ್ಡ್‌ನ ಬೆಲೆಯನ್ನು ಶೇಕಡಾ 17 ರಷ್ಟು ಪರಿಷ್ಕರಿಸಲಾಗಿದೆ.

ಪ್ರಸ್ತುತ, ಆಯುಷ್ಮಾನ್ ಭಾರತ್   1669 ಚಿಕಿತ್ಸಾ ವಿಧಾನಗಳನ್ನು ಹೊಂದಿದ್ದು ಅದರಲ್ಲಿ 1080 ಶಸ್ತ್ರಚಿಕಿತ್ಸೆ, 588 ವೈದ್ಯಕೀಯ ಮತ್ತು ಒಂದು ನಿರ್ದಿಷ್ಟಪಡಿಸದ ಪ್ಯಾಕೇಜ್ ಒಳಗೊಂಡಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಯೋಜನೆಯಂತೆ ಆಯುಷ್ಮಾನ್ ಭಾರತ್ ಯುನಿವರ್ಸಲ್ ಹೆಲ್ತ್ ಕವರೇಜ್ ಗುರಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಉಚಿತ ಮತ್ತು ಒಳ್ಳೆ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

2018 ರಲ್ಲಿ, ಆಯುಷ್ಮಾನ್ ಭಾರತ್   ಅನ್ನು ಎಚ್ ಬಿ ಪಿ1.0 ನೊಂದಿಗೆ ಒಟ್ಟು 1,393 ಪ್ಯಾಕೇಜ್‌ಗಳೊಂದಿಗೆ ಪ್ರಾರಂಭಿಸಲಾಯಿತು. ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ) -2011 ದತ್ತಾಂಶದ ಪ್ರಕಾರ 10.74 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ (53 ಕೋಟಿಗೂ ಹೆಚ್ಚು ಫಲಾನುಭವಿಗಳು) ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷದವರೆಗೆ ಉಚಿತ ಮತ್ತು ನಗದುರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ.

ಯೋಜನೆಯ ಆರಂಭದಿಂದಲೂ, 2.2 ಕೋಟಿಗೂ ಹೆಚ್ಚು ಅರ್ಹ  ಆಯುಷ್ಮಾನ್ ಭಾರತ್   ಫಲಾನುಭವಿಗಳಿಗೆ 24,000 ಪಟ್ಟಿಯಲ್ಲಿರುವ ಆರೋಗ್ಯ ಸಂಸ್ಥೆಗಳ ( ಎಚ್ ಸಿ ಪಿ) ವಿಶಾಲ ಜಾಲದ ಮೂಲಕ ರೋಗಗಳು ಮತ್ತು ವೈದ್ಯಕೀಯ ಪರಿಸ್ಥಿತಿಗಳ ಚಿಕಿತ್ಸೆಗಾಗಿ ದ್ವಿತೀಯ, ತೃತೀಯ ಮತ್ತು ದಿನದ ಆರೈಕೆ ಪ್ರಕ್ರಿಯೆಗಳಿಗಾಗಿ ಆರೋಗ್ಯ ರಕ್ಷಣೆಯನ್ನು ಒದಗಿಸಲಾಗಿದೆ. ಆರೋಗ್ಯ ಲಾಭದ ಪ್ಯಾಕೇಜ್  ಆಯುಷ್ಮಾನ್ ಭಾರತ್   ಪಿ ಎಮ್ಜೆ ವೈ  ಯೋಜನೆಯ ಮುಖ್ಯ ಆಧಾರವಾಗಿದೆ. ಇದು ಒದಗಿಸಲಾಗುತ್ತಿರುವ ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ವ್ಯಾಖ್ಯಾನಿಸುವುದಲ್ಲದೆ ಫಲಾನುಭವಿಗಳಿಗೆ ಆರ್ಥಿಕ ಅಪಾಯದ ರಕ್ಷಣೆಯ ವ್ಯಾಪ್ತಿಯನ್ನು ನಿರ್ಧರಿಸುತ್ತದೆ. ಹೀಗಾಗಿ, ಆರೋಗ್ಯ ಲಾಭದ ಪ್ಯಾಕೇಜ್ ಗಳನ್ನು ಹೆಚ್ಚಿನ ಸಂಭವನೀಯತೆ / ಹರಡುವಿಕೆಯ ಪ್ರಮಾಣ  ಮತ್ತು ಗರಿಷ್ಠ  ನಗದು (ಒಒಪಿ) ವೆಚ್ಚಕ್ಕೆ ಕಾರಣವಾಗುವ ರೋಗಗಳನ್ನು ಒಳಗೊಳ್ಳಲು ರಚಿಸಲಾಗಿದೆ .

***(Release ID: 1761356) Visitor Counter : 90