ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ. ಎಲ್. ಮುರುಗನ್

Posted On: 04 OCT 2021 4:48PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಹಾಯಕ ಸಚಿವ ಡಾ.ಎಲ್. ಮುರುಗನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಇದು ಸೌಜನ್ಯದ ಭೇಟಿಯಾಗಿತ್ತು. ಡಾ. ಮುರುಗನ್‌ ಅವರು ರಾಜ್ಯಸಭೆ ಸದಸ್ಯರಾದ ನಂತರ ಪ್ರಧಾನಿಯವರೊಂದಿಗೆ ಮೊದಲ ಭೇಟಿ ಇದಾಗಿತ್ತು.

ಈ ಸಂದರ್ಭ ಡಾ. ಮುರುಗನ್ ಅವರು "ತಿರುಕ್ಕುರಲ್- ಪೆರಲ್ಸ್‌ ಆಫ್‌ ಇನ್ಸ್‌ಪಿರೇಷನ್‌" ಕೃತಿಯ ಪ್ರತಿಯನ್ನು ಪ್ರಧಾನಿಯವರಿಗೆ ಉಡುಗೊರೆ ನೀಡಿದರು. ನವ ಭಾರತದ ಜನರ ಕಲ್ಯಾಣಕ್ಕಾಗಿ ಪ್ರಧಾನಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಲು ಅವರಿಂದ ಮಾರ್ಗದರ್ಶನ ಕೋರಿದರು.

***



(Release ID: 1760844) Visitor Counter : 232