ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ನಿರ್ಭಯಾ ನಿಧಿಯ ಚೌಕಟ್ಟಿನ ಅಡಿಯಲ್ಲಿ ರಚಿಸಲಾದ ಸಬಲೀಕರಣ ಸಮಿತಿಯಿಂದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಸಭೆ


ರೂ 9797.02 ಕೋಟಿ ನಿರ್ಭಯಾ ನಿಧಿಯ ಅಡಿಯಲ್ಲಿ ಎಲ್ಲಾ ಚಾಲ್ತಿಯಲ್ಲಿರುವ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಬಲೀಕರಣ ಸಮಿತಿಯಿಂದ ಮೌಲ್ಯಮಾಪನ

ಬಿಹಾರ, ಛತ್ತೀಸ್ ಗಡ, ಗುಜರಾತ್ ಮತ್ತು ನಾಗಾಲ್ಯಾಂಡ್ ನ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ ಡಿ.ಎನ್.ಎ. ವಿಶ್ಲೇಷಣೆ, ಸೈಬರ್ ಫೋರೆನ್ಸಿಕ್ ಮತ್ತು ಸಂಬಂಧಿತ ಸೌಲಭ್ಯಗಳನ್ನು ಬಲಪಡಿಸುವ ಪ್ರಸ್ತಾಪಗಳಿಗೆ ಅಧಿಕಾರ ಸಬಲೀಕರಣ ಸಮಿತಿಯಿಂದ ಶಿಫಾರಸು

24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ನಿರ್ಭಯಾ ಕಾರ್ಪಸ್ ನಿಧಿಯಿಂದ ಡಿ.ಎನ್.ಎ. ವಿಶ್ಲೇಷಣೆಯ ಸೌಲಭ್ಯತೆ ಪೂರೈಕೆ

Posted On: 01 OCT 2021 4:54PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ (ಎಂ.ಡಬ್ಲೂ.ಸಿ.ಡಿ) ಕಾರ್ಯದರ್ಶಿಯವರು ಸೆಪ್ಟೆಂಬರ್ 30, 2021ರಂದು ನಿರ್ಭಯಾ ನಿಧಿಯ ಚೌಕಟ್ಟಿನ ಅಡಿಯಲ್ಲಿ ರಚಿಸಲಾದ ಅಧಿಕಾರ ಸಬಲೀಕರಣ ಸಮಿತಿಯ (ಇ.ಸಿ) ಸಭೆಯ ಅಧ್ಯಕ್ಷತೆ ವಹಿಸಿದರು. ಕೇಂದ್ರ ಗೃಹ ಸಚಿಮಾಲಯ ಮಾಡಿರುವ ಅಂದಾಜು ವೆಚ್ಚ ರೂ. 17.31 ಕೋಟಿ. ಇದನ್ನು ಒಳಗೊಂಡಂತೆ, 'ಬಿಹಾರ, ಛತ್ತೀಸ್ ಗಢ, ಗುಜರಾತ್ ಮತ್ತು ನಾಗಾಲ್ಯಾಂಡ್ ನ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್.ಎಸ್.ಎಲ್.) ಡಿ.ಎನ್.ಎ. ವಿಶ್ಲೇಷಣೆ, ಸೈಬರ್ ವಿಧಿವಿಜ್ಞಾನ ಮತ್ತು ಸಂಬಂಧಿತ ಸೌಲಭ್ಯಗಳನ್ನು ಪೂರೈಸುವ ಶಿಫಾರಸುಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ದೇಶದ 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಫ್.ಎಸ್.ಎಲ್.ಗಳಿಗೆ ನಿರ್ಭಯಾ ಕಾರ್ಪಸ್ ನಿಧಿಯಿಂದ ಡಿ.ಎನ್.ಎ. ವಿಶ್ಲೇಷಣೆಯನ್ನು ವ್ಯವಸ್ಥೆ ಪೂರೈಸಲಾಗುವುದು.

ನಿರ್ಭಯಾ ನಿಧಿಯ ಅಡಿಯಲ್ಲಿ ರೂ. 9797.02 ಕೋಟಿ ಮೌಲ್ಯದ ಎಲ್ಲಾ ಪ್ರಸ್ತುತ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು   ಸಬಲೀಕರಣ ಸಮಿತಿಯು ಪರಿಶೀಲಿಸಿದೆ. ಅನುಮೋದಿತ ಯೋಜನೆಗಳಲ್ಲಿ ಮಹಿಳೆಯರಿಗಾಗಿ ಒಂದಡೆ ಪರಿಹಾರ ಲಭ್ಯ ಕೇಂದ್ರಗಳು, ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳು, ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ, ಸುರಕ್ಷಿತ ನಗರ ಯೋಜನೆಗಳು, ಮಹಿಳಾ ಸಹಾಯವಾಣಿ ಇತ್ಯಾದಿಗಳು ಸೇರಿವೆ. ಸಬಲೀಕರಣ ಸಮಿತಿಯಿಂದ ಪ್ರಾರಂಭಿಕ ಅನುಮೋದನೆಯಾದ ನಂತರ ಸಚಿವಾಲಯಗಳು/ ಇಲಾಖೆಗಳು ಯೋಜನೆಗಳು ತಮ್ಮ ಈ ಯೋಜನೆಗಳನ್ನು ನೇರವಾಗಿ ಅಥವಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು / ಅನುಷ್ಠಾನ ಸಂಸ್ಥೆಗಳ ಮೂಲಕ ಕಾರ್ಯಗತಗೊಳಿಸುತ್ತವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ (ಎಂ.ಡಬ್ಲೂ.ಸಿ.ಡಿ) ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ  ಸಬಲೀಕರಣ ಸಮಿತಿಯ ಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಕೇಂದ್ರ ನ್ಯಾಯಾಂಗ ಇಲಾಖೆ, ಕೇಂದ್ರ ವಿದೇಶಾಂಗ ಸಚಿವಾಲಯ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಭಾರತದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಉಪಕ್ರಮಗಳ ಅನುಷ್ಠಾನಕ್ಕಾಗಿ ಭಾರತ ಸರ್ಕಾರವು ‘ನಿರ್ಭಯಾ ನಿಧಿ’ ಎಂಬ ಮೀಸಲಾದ ಅವಧಿ ಮುಗಿಯದ ಶಾಶ್ವತ ನಿಧಿಯನ್ನು ಹೊಂದಿದೆ.  ನಿರ್ಭಯಾ ನಿಧಿಯ ಅಡಿಯಲ್ಲಿ ಧನಸಹಾಯಕ್ಕಾಗಿ ಪ್ರಸ್ತಾಪಗಳನ್ನು ಸಬಲೀಕರಣ ಸಮಿತಿಯು ಮೌಲ್ಯಮಾಪನ ಮತ್ತು ಶಿಫಾರಸು ಮಾಡುತ್ತದೆ ಮತ್ತು ಅನುಮೋದಿತ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. 

***



(Release ID: 1760184) Visitor Counter : 188