ಇಂಧನ ಸಚಿವಾಲಯ
ಎನ್.ಟಿ.ಪಿ.ಸಿ. ಆರ್.ಇ.ಎಲ್. ನಿಂದ ಮೊದಲ ಹಸಿರು ಅವಧಿ ಸಾಲಕ್ಕೆ ಸಹಿ
Posted On:
30 SEP 2021 11:27AM by PIB Bengaluru
ಎನ್.ಟಿ.ಪಿ.ಸಿ. ಲಿಮಿಟೆಡ್ ನ 100 ಪ್ರತಿಶತ ಅಂಗಸಂಸ್ಥೆಯಾದ ಎನ್.ಟಿ.ಪಿ.ಸಿ. ನವೀಕರಿಸಬಹುದಾದ ಎನರ್ಜಿ ಲಿಮಿಟೆಡ್ (ಆರ್.ಇ.ಎಲ್.) ಸಂಸ್ಥೆಯು ರಾಜಸ್ಥಾನದ 470 ಮೆಗಾವ್ಯಾಟ್ ಸೌರ ಯೋಜನೆಗಳು ಮತ್ತು ಗುಜರಾತಿನ 200 ಮೆಗಾವ್ಯಾಟ್ ಸೌರ ಯೋಜನೆಗಳಿಗಾಗಿ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ 15 ವರ್ಷಗಳ ಅವಧಿಯೊಂದಿಗೆ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ರೂ. 500 ಕೋಟಿಗಳ ತನ್ನ ಮೊದಲ ಹಸಿರು ಅವಧಿ ಸಾಲ ( ಗ್ರೀನ್ ಟರ್ಮ್ ಲೋನ್) ಒಪ್ಪಂದಕ್ಕೆ 29 ನೇ ಸೆಪ್ಟೆಂಬರ್ 2021 ರಂದು ಸಹಿ ಹಾಕಿದೆ.
ಎನ್.ಟಿ.ಪಿ.ಸಿ. ನವೀಕರಿಸಬಹುದಾದ ಎನರ್ಜಿ ಲಿಮಿಟೆಡ್ (ಆರ್.ಇ.ಎಲ್.) ಸಂಸ್ಥೆಯು ಪ್ರಸ್ತುತ 3,450 ಮೆಗಾವ್ಯಾಟ್ ನ ನವೀಕರಿಸಬಹುದಾದ ಯೋಜನೆಯ ಬಂಡವಾಳವನ್ನು ಹೊಂದಿದೆ, ಅದರಲ್ಲಿ 820 ಮೆಗಾವ್ಯಾಟ್ ಯೋಜನೆಗಳು ನಿರ್ಮಾಣ ಹಂತದಲ್ಲಿದೆ ಮತ್ತು 2,630 ಮೆಗಾವ್ಯಾಟ್ ಪ್ರಾಜೆಕ್ಟ್‌ಗಳನ್ನು ಪಡೆದಿದ್ದು, ಇವುಗಳಿಗಾಗಿ ಪಿ.ಪಿ.ಎ. ಗಳನ್ನು ಕಾರ್ಯಗತಗೊಳಿಸಲು ಪ್ರಕ್ರಿಯೆಗಳು ಬಾಕಿ ಇವೆ.
****
(Release ID: 1759598)
Visitor Counter : 266