ಇಂಧನ ಸಚಿವಾಲಯ
azadi ka amrit mahotsav

‘ವಿವಾದ ತಪ್ಪಿಸುವ ಉತ್ಕೃಷ್ಟ ಕಾರ್ಯತಂತ್ರ’ ರೂಪಿಸಲು ಇಂಧನ ಸಚಿವ ಶ್ರೀ ಆರ್. ಕೆ.ಸಿಂಗ್ ಅನುಮೋದನೆ


ಕಾರ್ಯತಂತ್ರದಲ್ಲಿ ‘ಸ್ವತಂತ್ರ ಎಂಜಿನಿಯರ್’ಗಳ ತಂಡ ಸೃಷ್ಟಿ

ಜಲವಿದ್ಯುತ್ ಘಟಕಗಳ ನಿರ್ಮಾಣ ಗುತ್ತಿಗೆಗಳ ವಿವಾದಗಳನ್ನು ಸಕಾಲದಲ್ಲಿ ಪರಿಹರಿಸುವುದು ಈ ನಿರ್ಧಾರದ ಹಿಂದಿನ ಗುರಿ

ಈ ಉಪಕ್ರಮದಿಂದ ಸಮಯ ಹಾಗೂ ವೃಥಾ ಅಲೆದಾಟದ ವೆಚ್ಚ ಉಳಿತಾಯ

Posted On: 29 SEP 2021 11:27AM by PIB Bengaluru

ಕೇಂದ್ರ ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಶ್ರೀ ಆರ್. ಕೆ. ಸಿಂಗ್ಸ್ವತಂತ್ರ ಇಂಜಿನಿಯರ್’(ಐಇಮೂಲಕವಿವಾದ ತಪ್ಪಿಸುವ ಕಾರ್ಯತಂತ್ರಕ್ಕೆ ಅನುಮೋದನೆ ನೀಡಿದ್ದಾರೆಜಲವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಸಿಪಿಎಸ್ಇಗಳ ನಿರ್ಮಾಣ ಗುತ್ತಿಗೆಗಳಲ್ಲಿ ಇದನ್ನು ಪಾಲಿಸಲಾಗುವುದು. ಇದರಡಿಸ್ವತಂತ್ರ ಇಂಜಿನಿಯರ್ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಅದರಡಿ ಸ್ವತಂತ್ರ, ಮೂರನೇ ವ್ಯಕ್ತಿ ಮತ್ತು ಪ್ರಮುಖ ಯೋಜನೆಗಳಲ್ಲಿ, ಮೂಲಸೌಕರ್ಯ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯತಂತ್ರವನ್ನು ಬಳಕೆ ಮಾಡಲಾಗುತ್ತಿದ್ದು, ವಿಶೇಷ ಜ್ಞಾನವನ್ನು ಹೊಂದಿರುವ ಜತೆಗೆ ವಾಣಿಜ್ಯ ಹಾಗೂ ಕಾನೂನುಗಳನ್ನು ತಿಳಿದಿರುವ ಸ್ವತಂತ್ರ ಇಂಜಿನಿಯರ್ ಗಳನ್ನು ನಿರ್ದಿಷ್ಟ ಯೋಜನೆಗಳಿಗಾಗಿ ನೇಮಿಸಿಕೊಳ್ಳಲಾಗುವುದು. ‘ ಸ್ವತಂತ್ರ ಇಂಜಿನಿಯರ್ಯೋಜನೆಯ ಬಗ್ಗೆ ನಿರಂತರ ನಿಗಾವಹಿಸುವರು ಮತ್ತು ಸಂಬಂಧಿಸಿದ ಎಲ್ಲಾ ಪಾಲುದಾರರೊಂದಿಗೆ ಮುಕ್ತ ಸಂವಹನ ನಡೆಸುವುದರಿಂದ ಪರಿಣಾಮಕಾರಿ ಪಾತ್ರವಹಿಸಿ, ವಿವಾದಗಳು ಉಂಟಾಗುವುದನ್ನು ತಪ್ಪಿಸಲಿದ್ದಾರೆ. ಕಾರ್ಯತಂತ್ರ ಆರಂಭಿಕ ಭಿನ್ನಾಭಿಪ್ರಾಯಗಳನ್ನು ತಗ್ಗಿಸಿ, ಅವು ಪೂರ್ಣ ಪ್ರಮಾಣದ ವ್ಯಾಜ್ಯಗಳಾಗುವುದನ್ನು ತಡೆಯುತ್ತದೆ ಹಾಗೂ ನ್ಯಾಯಯುತ ಮತ್ತು ಸರಳ ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ಶೀಘ್ರವೇ ಪರಿಹರಿಸಲು ಸಾಧ್ಯವಾಗಲಿದೆ. ಇದು ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದನ್ನು ಖಾತ್ರಿಪಡಿಸುವ ಜತೆಗೆ ಸಮಯ ಹಾಗೂ ವೆಚ್ಚವನ್ನು ಉಳಿತಾಯ ಮಾಡಲಿದೆ.

ಹಾಲಿ ಜಲವಿದ್ಯುತ್ ಘಟಕಗಳ ವಲಯದಲ್ಲಿ ಇರುವ ವಿವಾದ ಇತ್ಯರ್ಥ ಕಾರ್ಯತಂತ್ರ ಉದ್ಯೋಗಿಗಳು ಮತ್ತು ಗುತ್ತಿಗೆದಾರರ ನಡುವಿನ ಬಿಕ್ಕಟ್ಟುಗಳನ್ನು ಬಗೆಹರಿಸಲು ಸೂಕ್ತ ನೀತಿ ಚೌಕಟ್ಟನ್ನು ಹೊಂದಿಲ್ಲ ಮತ್ತು ಕೇವಲ ವಿವಾದ ಆರಂಭವಾದ ನಂತರ ಮತ್ತು ಅವುಗಳನ್ನು ಎರಡು ಪಾಲುದಾರರ ನಡುವೆ ಗುರುತಿಸಿದ ನಂತರವಷ್ಟೇ ಪರಿಹರಿಸಲು ಸಾಧ್ಯವಿದೆ ಎಂದು ಹೈಡ್ರೋ ಘಟಕಗಳ ನಿರ್ಮಾಣದಲ್ಲಿ ತೊಡಗಿರುವ ಸಿಪಿಎಸ್ಇಗಳು ತೀವ್ರ ಆತಂಕ ವ್ಯಕ್ತಪಡಿಸಿದವು. ಕ್ಷೇತ್ರ ಮಟ್ಟದಲ್ಲಿನ ಸಮಸ್ಯೆಗಳು ಮತ್ತು ಇಂತಹ ವಿಷಯಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಆಗುತ್ತಿದ್ದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಮಂಡಳಿ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಸಲ್ಲಿಸಿದ್ದ ವರದಿಯ ಕುರಿತು ಸಚಿವಾಲಯದಲ್ಲಿ ವ್ಯಾಪಕ ಚರ್ಚೆ ನಡೆಯಿತು. ವೇಳೆ ಜಲವಿದ್ಯುತ್ ಘಟಕಗಳನ್ನು ಅನುಷ್ಠಾನಗೊಳಿಸುತ್ತಿರುವ ಸಿಇಎ ಮತ್ತು ಮಂಡಳಿ ಅಧಿಕಾರಿಗಳೂ ಸಹ ಭಾಗವಹಿಸಿದ್ದರು.  

ಸಮಿತಿ ಗುತ್ತಿಗೆಗಳ ಜಾರಿ ವೇಳೆ ಹಕ್ಕುಗಳು ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಭಾರೀ ಪ್ರಮಾಣದ ಹಣಕಾಸು ನಷ್ಟವಾಗುವ ಜತೆಗೆ ಸಮಯ ಮತ್ತು ವೆಚ್ಚವೂ ಅಧಿಕವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಆರಂಭಿಕ ಹಂತದಲ್ಲೇ ಗುತ್ತಿಗೆಗಳಿಗೆ ನ್ಯಾಯಯುತ ಮತ್ತು ಸರಳ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಕಾರ್ಯತಂತ್ರ ಅತ್ಯಗತ್ಯವಾಗಿದ್ದು, ಇದು ಗುತ್ತಿಗೆಗಳ ಸಾಧನೆ ಯಶಸ್ಸಿಗೆ ಪ್ರಮುಖ ಮಾನದಂಡವಾಗಲಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಬಜೆಟ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ ಮತ್ತು ಸಮಯ ಹಾಗೂ ವೆಚ್ಚ ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ ಎಂದು ಹೇಳಿತು. ‘ಸ್ವತಂತ್ರ ಇಂಜಿನಿಯರ್’(ಐಇ) ಮೂಲಕ ವಿವಾದ ತಪ್ಪಿಸುವ ಕಾರ್ಯತಂತ್ರ ನಿಯಮಾವಳಿ ಮಾದರಿಯ ಪ್ರಮುಖಾಂಶಗಳು ಕೆಳಗಿನಂತಿವೆ.

  1. ಇಂಧನ ಸಚಿವಾಲಯ ವಸ್ತುನಿಷ್ಠ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಮತ್ತು ಗರಿಷ್ಠ ಪ್ರಾಮಾಣಿಕತೆ ಮತ್ತು ದಕ್ಷತೆಯೊಂದಿಗೆ ವಿಶೇಷ ಪರಿಣಿತಿ ಹೊಂದಿರುವ ಇಂಜಿನಿಯರ್ ಗಳ ಪಟ್ಟಿಯನ್ನು ಸಿದ್ಧಪಡಿಸುವುದು. ತಂಡದಲ್ಲಿ ಯಾವುದೇ ಬದಲಾವಣೆ ಅಗತ್ಯವಿದ್ದರೆ ಅದನ್ನು ಮಾಡುವುದು ಮತ್ತು ಸಚಿವಾಲಯ ಆಗಾಗ್ಗೆ ತಂಡವನ್ನು ಪರಿಷ್ಕರಿಸಬೇಕು.
  2. ಸಿಪಿಎಸ್ಇ ಮತ್ತು ಗುತ್ತಿಗೆದಾರರು ಜಂಟಿಯಾಗಿ ಮೇಲಿನ ತಜ್ಞರ ತಂಡದಲ್ಲಿ ಪ್ರತಿ ಕಾಮಗಾರಿಗಳ ಪ್ಯಾಕೇಜ್ ಗೆ ಓರ್ವ ತಜ್ಞರನ್ನು ಆಯ್ಕೆ ಮಾಡಿಕೊಳ್ಳಬೇಕು. ತಜ್ಞರನ್ನು ಪ್ರತಿಯೊಂದು ಗುತ್ತಿಗೆಗೆ ಇಂಡಿಪೆಂಡೆಂಟ್ ಇಂಜಿನಿಯರ್ ಎಂದು ನಿಯೋಜಿಸಬೇಕು.
  3. ಉಭಯ ಪಕ್ಷದವರು ಕಾಲಮಿತಿಯಲ್ಲಿ ವಿಚಾರಣೆ ವೇಳೆ ಇಂಡಿಪೆಂಡೆಂಟ್ ಇಂಜಿನಿಯರ್ ಅವರು ಕೇಳಿದ ಎಲ್ಲ ಅಗತ್ಯ ಮಾಹಿತಿಗಳನ್ನು ಒದಗಿಸಿಕೊಡಬೇಕು. ಒಂದು ವೇಳೆ ಅದನ್ನು ಪಾಲನೆ ಮಾಡದಿದ್ದರೆ ದಂಡಗಳನ್ನು ವಿಧಿಸಲು ಅವಕಾಶವಿರಬೇಕು. ಗುತ್ತಿಗೆಗಳ ಗಂಭೀರತೆ ಆಧರಿಸಿ ಆಯಾ ಗುತ್ತಿಗೆಗಳ ವಿವರಗಳನ್ನು ಸಿಪಿಎಸ್ಇಗಳು ಒದಗಿಸಬೇಕು.
  4. ಇಂಡಿಪೆಂಡೆಂಟ್ ಇಂಜಿನಿಯರ್ ಗಳು, ಉಭಯ ಪಕ್ಷಗಾರರು ಪ್ರಸ್ತಾಪಿಸಿರುವ ವಿವಾದಗಳು/ಸಮಸ್ಯೆಗಳನ್ನು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸುವ ಮೂಲಕ ಪರಾಮರ್ಶಿಸಬೇಕು. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ವಿಚಾರಣೆಗಳನ್ನು ನಡೆಸಬೇಕು ಮತ್ತು ಉಭಯ ಪಕ್ಷಗಾರರ ವಿಚಾರಣೆ/ಮಧ್ಯಸ್ಥಿಕೆ ನಡೆಸಬೇಕು
  5. ಉಭಯ ಪಕ್ಷಗಾರರ ಪ್ರಾಥಮಿಕ ವಿಚಾರಣೆ ಆಧರಿಸಿ ಇಂಡಿಪೆಂಡೆಂಟ್ ಇಂಜಿನಿಯರ್ ಯಾವ ಸ್ವರೂಪದ ಭಿನ್ನಾಭಿಪ್ರಾಯಗಳಿವೆ ಮತ್ತು ಎಷ್ಟು ಸಂಖ್ಯೆಯ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಆಧರಿಸಿ ಗರಿಷ್ಠ 30ದಿನಗಳೊಳಗೆ ಕಾಲಮಿತಿಯನ್ನು ನಿಗದಿಪಡಿಸಬೇಕು ಅಥವಾ ಸಾಮಾನ್ಯ ಪರಿಸ್ಥಿತಿಗಳನ್ನು ಆಧರಿಸಿ ಅವಧಿ ವಿಸ್ತರಣೆ ಮಾಡಬಹುದು, ಅದಕ್ಕೆ ಕಾರಣಗಳನ್ನು ಲಿಖಿತ ರೂಪದಲ್ಲಿ ದಾಖಲಿಸಬೇಕು.
  6. ಆರಂಭದಲ್ಲಿ ಇಂಡಿಪೆಂಡೆಂಟ್ ಇಂಜಿನಿಯರ್ ಅನ್ನು 5 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಬೇಕು ಅಥವಾ ಗುತ್ತಿಗೆ ಅವಧಿ ಅದಕ್ಕಿಂತ ಬೇಕಾದರು ಕಡಿಮೆ ಮಾಡಿಕೊಳ್ಳಬಹುದು ಮತ್ತು ಪರಸ್ಪರ ಸಿಪಿಎಸ್ಇ ಮತ್ತು ಗುತ್ತಿಗೆದಾರರ ಒಪ್ಪಿಗೆಯೊಂದಿಗೆ ಪ್ರತಿ ವರ್ಷವರ್ಷಕ್ಕೊಮ್ಮೆ ಗುತ್ತಿಗೆಯನ್ನು ನವೀಕರಿಸಿಕೊಳ್ಳಬಹುದು. ಇದಕ್ಕೆ ಇಂಡಿಪೆಂಡೆಂಟ್ ಇಂಜಿನಿಯರ್ ಒಪ್ಪಿಗೆ ಇರಬೇಕು ಮತ್ತು ಸಚಿವಾಲಯದ ಅಂತಿಮ ಅನುಮೋದನೆ ಪಡೆಯಬೇಕು.
  7. ಇಂಡಿಪೆಂಡೆಂಟ್ ಇಂಜಿನಿಯರ್ ಪ್ರತಿ ಎರಡು ತಿಂಗಳಿಗೊಮ್ಮೆ ಯೋಜನಾ ಸ್ಥಳಕ್ಕೆ ಭೇಟಿ ನೀಡುವುದು ಕಡ್ಡಾಯವಾಗಿದೆ ಮತ್ತು ನಿರಂತರವಾಗಿ ಯೋಜನೆಯ ಚಟುವಟಿಕೆಗಳ ಪ್ರಗತಿ ಮೇಲೆ ನಿಗಾವಹಿಸಬೇಕು ಮತ್ತ ಪಕ್ಷಗಾರರ ನಡುವೆ ಭಿನ್ನಾಭಿಪ್ರಾಯದಂತಹ ಯಾವುದೇ ಪರಿಸ್ಥಿತಿಗಳು ಉಂಟಾಗುತ್ತಿವೆಯೇ ಎಂಬ ಕುರಿತು ಒಂದು ಚಿಂತನೆ ಇರಬೇಕು. ಅಲ್ಲದೆ ಭಿನ್ನಾಭಿಪ್ರಾಯಗಳು ಎದುರಾದಾಗ ಆಗಾಗ್ಗೆ ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಬಾರಿ ಯೋಜನಾ ಪ್ರದೇಶಗಳಿಗೆ ಭೇಟಿಗಳನ್ನು ನೀಡಬಹುದು.
  8. ಸಿಪಿಎಸ್ಇ ಅಥವಾ ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಇಂಡಿಪೆಂಡೆಂಟ್ ಇಂಜಿನಿಯರ್ ಅನ್ನು ಬದಲಾಯಿಸಿಕೊಳ್ಳುವಂತಿಲ್ಲ. ಒಂದು ವೇಳೆ ಐಇ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಅಥವಾ ಆತನ ಪ್ರಾಮಾಣಿಕತೆ ಬಗ್ಗೆ ದೂರುಗಳು ಅಥವಾ ಆಕ್ಷೇಪಗಳಿದ್ದರೆ ಅಂತಹ ತಜ್ಞರನ್ನು ಸಚಿವಾಲಯ ತನ್ನ ಪಟ್ಟಿಯಿಂದಲೇ ಕೈಬಿಡಬಹುದು ಮತ್ತು ಸಿಪಿಎಸ್ಇ ಹಾಗೂ ಗುತ್ತಿಗೆದಾರರು ಜಂಟಿಯಾಗಿ ಹೊಸ ತಜ್ಞರನ್ನು ಆಯ್ಕೆ ಮಾಡಿಕೊಳ್ಳಬಹುದು.

ಜಲ ವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಎಲ್ಲ ಸಿಪಿಎಸ್ ಇಗಳು ಇಂಡಿಪೆಂಡೆಂಟ್ ಇಂಜಿನಿಯರ್ ಗಳ ಮೂಲಕ ವ್ಯಾಜ್ಯ ತಪ್ಪಿಸುವ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು. ಗುತ್ತಿಗೆದಾರರು ಸಿಪಿಎಸ್ ಅಥವಾ ಖಾಸಗಿಯವರಾಗಿದ್ದರೂ ಸಹ ಎಲ್ಲ ಪ್ರಕರಣಗಳನ್ನೂ ಇಂಡಿಪೆಂಡೆಂಟ್ ಇಂಜಿನಿಯರ್ ಗಳ ನೇಮಕ ದ್ಧತಿ ಜಾರಿಗೊಳಿಸಬೇಕು. ಪರಸ್ಪರ ಒಪ್ಪಿಗೆ ನಂತರ ಇಂಡಿಪೆಂಡೆಂಟ್ ಇಂಜಿನಿಯರ್ ಮೂಲಕ ವ್ಯಾಜ್ಯ ತಪ್ಪಿಸುವ ಕಾರ್ಯತಂತ್ರ ಅಳವಡಿಕೆ ಬಳಿಕ ಹಾಲಿ ಚಾಲ್ತಿಯಲ್ಲಿರುವ ಡಿಆರ್ ಬಿ ಅಥವಾ ಡಿಎಬಿ ಮೂಲಕ  ವಿವಾದ ಇತ್ಯರ್ಥ ವಿಧಾನದಲ್ಲಿ ವಿಲೀನವಾಗಲಿದೆ. ಭವಿಷ್ಯದ ಗುತ್ತಿಗೆಗಳಿಗೆ, ವಿವಾದ ಇತ್ಯರ್ಥ ಮಂಡಳಿ ಅಥವಾ ವ್ಯಾಜ್ಯ ವಿಲೇವಾರಿ ಮಂಡಳಿ ಜಾಗದಲ್ಲಿ ಇಂಡಿಪೆಂಡೆಂಟ್ ಇಂಜಿನಿಯರ್ ಗಳ ಮೂಲಕ ವ್ಯಾಜ್ಯ ತಪ್ಪಿಸುವ ಕಾರ್ಯಂತ್ರ ಅಳವಡಿಕೆಗೆ ಅವಕಾಶ ಮಾಡಿಕೊಳ್ಳಬೇಕು. ವೇತನ ನಿಬಂಧನೆಗಳನ್ನು ಮುಂದೆ ತಿಳಿಸಲಾಗುವುದು.

***


(Release ID: 1759252) Visitor Counter : 311