ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತ-ಅಮೆರಿಕ (ಯು.ಎಸ್.) ಆರೋಗ್ಯ ಮಾತುಕತೆ 2021


ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು 4ನೇ ಭಾರತ-ಅಮೆರಿಕ ಆರೋಗ್ಯ ಸಂವಾದವನ್ನು ಉದ್ದೇಶಿಸಿ ಭಾಷಣ ಮಾಡಿದರು

"ನಮ್ಮ ದೇಶಗಳ ನಡುವಿನ ಸಹಯೋಗವು ವೈಜ್ಞಾನಿಕ ಆವಿಷ್ಕಾರ ಮತ್ತು ಜಾಗತಿಕ ಆರೋಗ್ಯ ಬೆದರಿಕೆಗಳ ನಿರ್ವಹಣೆಯನ್ನು ಮುನ್ನಡೆಸುತ್ತದೆ.": ಡಾ. ಭಾರತಿ ಪ್ರವೀಣ್ ಪವಾರ್

Posted On: 27 SEP 2021 1:18PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಅವರು ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಭಾರತವು ಆಯೋಜಿಸಿರುವ 4 ನೇ ಭಾರತ-ಅಮೆರಿಕ (ಯು.ಎಸ್.) ಆರೋಗ್ಯ ಮಾತುಕತೆಯ(ಸಂವಾದ) ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.

https://static.pib.gov.in/WriteReadData/userfiles/image/image002P3RT.jpg

ಸಂವಾದಕ್ಕಾಗಿ ಅಮೆರಿಕ ನಿಯೋಗದ ನೇತೃತ್ವವನ್ನು ಅಮೆರಿಕ ಆರೋಗ್ಯ ಮತ್ತು ಮಾನವ ಸೇವೆಗಳ (ಎಚ್.ಎಚ್.ಎಸ್.) ಜಾಗತಿಕ ವ್ಯವಹಾರಗಳ ಕಚೇರಿಯ ನಿರ್ದೇಶಕಿ ಶ್ರೀಮತಿ ಲಾಯ್ಸ್ ಪೇಸ್ ಅವರು ವಹಿಸಿದ್ದರು. ಏಷ್ಯಾ ಮತ್ತು ಪೆಸಿಫಿಕ್, ಜಾಗತಿಕ ವ್ಯವಹಾರಗಳ ಕಚೇರಿ ಯು.ಎಸ್. ವಿಭಾಗ (ಎಚ್.ಎಚ್.ಎಸ್) ನಿರ್ದೇಶಕಿ ಶ್ರೀಮತಿ ಮಿಶೆಲ್ ಮೆಕ್ ಕಾನ್ನೆಲ್, ಡಾ. ಮಿಚೆಲ್ ವೋಲ್ಫ್ ಮತ್ತು ಶ್ರೀಮತಿ ಡಯಾನಾ ಎಂ. ಮುಂತಾದವರು ಕೂಡಾ ಕರ್ಯಕ್ರಮದಲ್ಲಿ ಭಾಗವಹಿಸಿದ್ದರು. 

https://static.pib.gov.in/WriteReadData/userfiles/image/image003BCKU.jpg

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಡಾ.ರೇಣು ಸ್ವರೂಪ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್.) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಕೂಡಾ ಆರೋಗ್ಯ ಸಂಶೋಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎರಡು ದಿನಗಳ ಈ ಉನ್ನತ ಮಟ್ಟದ ಮಾತುಕತೆಗಳನ್ನು ಎರಡು ದೇಶಗಳ ನಡುವೆ ಆರೋಗ್ಯ ವಲಯದಲ್ಲಿ ನಡೆಯುತ್ತಿರುವ ಅನೇಕ ಸಹಯೋಗಗಳ ಕುರಿತು ಚರ್ಚಿಸಲು ವೇದಿಕೆಯಾಗಿ ಬಳಸಿಕೊಳ್ಳಲಾಗುವುದು. ಈ ಸುತ್ತಿನಲ್ಲಿ ದೀರ್ಘವಾಗಿ ಚರ್ಚಿಸಲು ಯೋಜಿಸಲಾಗಿರುವ ಸಮಸ್ಯೆಗಳು ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ಕಣ್ಗಾವಲು, ಲಸಿಕೆ ಅಭಿವೃದ್ಧಿ, ಒಂದು ಆರೋಗ್ಯ, ಝೋನೋಟಿಕ್ ಮತ್ತು ವೆಕ್ಟರ್-ಹರಡುವ ರೋಗಗಳು, ಆರೋಗ್ಯ ವ್ಯವಸ್ಥೆಗಳು ಮತ್ತು ಆರೋಗ್ಯ ನೀತಿಗಳು ಇತ್ಯಾದಿಗಳನ್ನು ಬಲಪಡಿಸುವುದು, ಮುಂತಾದವುಗಳೇ ಆಗಿವೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಎರಡೂ ಕಡೆಯವರ ಪರಸ್ಪರ ಒಗ್ಗಟ್ಟನ್ನು ಈ ಸಂದರ್ಭದಲ್ಲಿ ಮಾನ್ಯ ಸಚಿವರು ಸಭೆಯ್ಲ್ಲಿ ಪ್ರಸ್ತಾವಿಸಿ ಮುನ್ನೆಲೆಗೆ ತಂದರು, ಅಲ್ಲಿ ಎರಡೂ ಕಡೆಯವರು ತಮ್ಮ ನಿರಂತರ ಬೆಂಬಲವನ್ನು ನೀಡಿದರು. ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ಲಸಿಕೆ ಕಂಪನಿಗಳು ಅಮೆರಿಕ (ಯು.ಎಸ್) ಮೂಲದ ಏಜೆನ್ಸಿಗಳೊಂದಿಗೆ ಸಹಕರಿಸುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಮಾನಸಿಕ ಆರೋಗ್ಯದ ಕುರಿತು 2020 ರಲ್ಲಿ ಸಹಿ ಮಾಡಲಾದ ಒಪ್ಪಂದವನ್ನು ಗುರುತಿಸಿ, ಉಲ್ಲೇಖಿಸಿದ ಮಾನ್ಯ ಸಚಿವರು, ಉಭಯ ದೇಶಗಳ ನಡುವಿನ ಆರೋಗ್ಯ ಕ್ಷೇತ್ರದಲ್ಲಿ ವರ್ಧಿತ ಸಹಕಾರವನ್ನು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿದೆ ಎಂದರು. ಭಾರತ ಗಣರಾಜ್ಯದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ನಡುವಿನ ಮತ್ತೊಂದು ಒಪ್ಪಂದವನ್ನು ಆರೋಗ್ಯ ವಲಯದಲ್ಲಿ ಅಂತಿಮಗೊಳಿಸಲಾಗಿದೆ. ಅವುಗಳ ವಿಷಯಗಳೆಂದರೆ, ಸಹಕಾರದ ಪ್ರಮುಖ ಕ್ಷೇತ್ರಗಳು ಆರೋಗ್ಯ ಸುರಕ್ಷತೆಯಂತಹ ಸಮಸ್ಯೆಗಳನ್ನು ಒಳಗೊಂಡಿದೆ ಮತ್ತು ಭದ್ರತೆ; ಸಾಂಕ್ರಾಮಿಕ ರೋಗಗಳು ಮತ್ತು ಸಾಂಕ್ರಾಮಿಕವಲ್ಲದ ರೋಗಗಳು; ಆರೋಗ್ಯ ವ್ಯವಸ್ಥೆಗಳು; ಮತ್ತು ಆರೋಗ್ಯ ನೀತಿ.  

ಜಾಗತಿಕ ಆರೋಗ್ಯ ಬೆದರಿಕೆಗಳ ಮುಂಚಿತವಾಗಿ ವೈಜ್ಞಾನಿಕ ಆವಿಷ್ಕಾರ ಮತ್ತು ನಿರ್ವಹಣೆಗೆ ನೆರವಾಗಲು ಉತ್ತಮವಾಗಿ ವಿನ್ಯಾಸಗೊಳಿಸಿದ ಮತ್ತು ಮೌಲ್ಯೀಕರಿಸಿದ ವೈಜ್ಞಾನಿಕ ವಿಧಾನಗಳು ಮತ್ತು ಸಹಯೋಗದ ಮೇಲೆ ಅವಲಂಬಿತವಾಗಿರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಈ ಉದಯೋನ್ಮುಖ ಪ್ರದೇಶಗಳ ಮೇಲೆ ಗಮನ ಹರಿಸುವ ಅಗತ್ಯವನ್ನು ಡಾ. ಪವಾರ್ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಆವಿಷ್ಕಾರಗಳ ಮೂಲಕ ಆರೋಗ್ಯ ವ್ಯವಸ್ಥೆಗಳ ಅಸಮಾನತೆಗಳ ವಿರುದ್ಧ ಹೋರಾಡುವಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಅದರ ಸಾಮರ್ಥ್ಯಗಳನ್ನು ಸಂಯೋಜಿಸಬೇಕು ಎಂದು ಸಚಿವರು ತಿಳಿಸಿದರು. 

ವೇದಿಕೆ ಎಲ್ಲಾ ಭಾಗವಹಿಸುವವರಿಗೆ ವಿವರವಾದ ಚರ್ಚೆಗಳಿಗಾಗಿ ಅವಕಾಶವನ್ನು ಒದಗಿಸಿಕೊಡುತ್ತದೆ, ಇದು ಭಾರತ ಮತ್ತು ಅಮೆರಿಕದ ಅನೇಕ ಏಜೆನ್ಸಿಗಳೊಂದಿಗೆ ಆರೋಗ್ಯ ಕ್ಷೇತ್ರದ ಕಾರ್ಯಸೂಚಿಯಲ್ಲಿ ಪಾಲುದಾರಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಬಳಸಬಹುದು ಎಂದು ಎರಡು ದಿನಗಳ ಉನ್ನತಮಟ್ಟದ ಮಾತುಕತೆ-ಸಂವಾದದ ಪ್ರಾರಂಭಿಕ ಭಾಷಣದಲ್ಲಿ ಮಾನ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರು ತಿಳಿಸಿದರು.

https://static.pib.gov.in/WriteReadData/userfiles/image/image004TG6H.jpg

***



(Release ID: 1758580) Visitor Counter : 269