ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಅಕ್ಟೋಬರ್ 1 ರಿಂದ 31 ರವರೆಗೆ ರಾಷ್ಟ್ರವ್ಯಾಪಿ ಕ್ಲೀನ್ ಇಂಡಿಯಾ ಅಭಿಯಾನದ ಘೋಷಣೆ ಮಾಡಿದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್

Posted On: 26 SEP 2021 4:41PM by PIB Bengaluru

ಸರ್ಕಾರ ದೇಶದ ಕಸವನ್ನು ಸ್ವಚ್ಛ ಮಾಡಲು ಅದರಲ್ಲೂ ಏಕ ಬಳಕೆ ಪ್ಲಾಸ್ಟಿಕ್ ತೆರವು ಮಾಡಲು ರಾಷ್ಟ್ರವ್ಯಾಪಿ 2021ರ ಅಕ್ಟೋಬರ್ 1ರಿಂದ 31ರವರೆಗೆ ತಿಂಗಳು ಪೂರ್ತಿ ಕ್ಲೀನ್ ಇಂಡಿಯಾ ಅಭಿಯಾನವನ್ನು ಆಯೋಜಿಸಿದೆ. ಕೇಂದ್ರ ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಟ್ವೀಟ್ ನಲ್ಲಿ ಇದನ್ನು ಪ್ರಕಟಿಸಿದ್ದು, ನಾವು 75ನೇ ಸ್ವಾತಂತ್ರ್ಯದ ವರ್ಷವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತವನ್ನು ಕಸಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತಗೊಳಿಸಿ, ಗಾಂಧೀಜಿ ಅವರ ಕನಸಿನ ಭಾರತ ನಿರ್ಮಾಣ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಮೋಚ್ಛ ಆದ್ಯತೆಯಾದ ಸ್ವಚ್ಛ ಭಾರತದ ದೃಷ್ಟಿಕೋನದ ಸಾಕಾರಕ್ಕಾಗಿ  ಇದು ನಮ್ಮ ಸಂಕಲ್ಪ ಎಂದು ತಿಳಿಸಿದ್ದಾರೆ.  ಸಂಕಲ್ಪದಿಂದ ಸಿದ್ಧಿ ಗುರಿಯೊಂದಿಗೆ ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗುರಿಸಾಧಿಸಲು ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.

 

ಇದು ವಿಶ್ವದ ಅತಿ ದೊಡ್ಡ ಸ್ವಚ್ಛತಾ ಅಭಿಯಾನವಾಗಿದೆ ಎಂದು ತಿಳಿಸಿರುವ ಶ್ರೀ ಅನುರಾಗ್ ಠಾಕೂರ್, ಇದರಲ್ಲಿ ದೇಶದ ವಿವಿಧ ಭಾಗಳಿಂದ  75 ಲಕ್ಷ ಟನ್ ತ್ಯಾಜ್ಯ ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಮಾಡಿ, ತ್ಯಾಜ್ಯದಿಂದ ಸಂಪತ್ತು ಮಾದರಿಯಲ್ಲಿ ಸಂಸ್ಕರಿಸಲಾಗುವುದು ಎಂದೂ ತಿಳಿಸಿದ್ದಾರೆ. ಈ ಅಭಿಯಾನವು  “ಸ್ವಚ್ಛ ಭಾರತ: ಸುರಕ್ಷಿತ ಭಾರತ” ಮಂತ್ರದ ಪ್ರಚಾರ ಮಾಡಲಿದೆ ಎಂದರು.

 

ವ್ಯಕ್ತಿಗಳು, ಸಂಸ್ಥೆಗಳು, ಎಲ್ಲ ಬಾಧ್ಯಸ್ಥರು ಈ ಕೆಳಗಿನ ಲಿಂಕ್ ನಲ್ಲಿ ನೋಂದಾಯಿಸಿಕೊಂಡು ಈ ಅಭಿಯಾನದಲ್ಲಿ ಭಾಗಿಯಾಗಬಹುದು ಎಂದು ತಿಳಿಸಿದ್ದಾರೆ.

https://docs.google.com/forms/d/e/1FAIpQLSfnk5KMQ_bvtk1cFe56oCya0p3semGoKY5vEOJDdPtxzWAdaA/viewform

***



(Release ID: 1758342) Visitor Counter : 289