ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಲಡಾಖ್‌ನ ಲೇಹ್‌ನಲ್ಲಿ 'ಅಲ್ಟಿಮೇಟ್ ಲಡಾಖ್ ಸೈಕ್ಲಿಂಗ್ ಚಾಲೆಂಜ್'ನ ಎರಡನೇ ಆವೃತ್ತಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್


ಸೈಕಲ್ ಹೊಡೆಯೋಣ, ಫಿಟ್ ಆಗಿರೋಣ, ಭಾರತವನ್ನು ಸದೃಢವಾಗಿರಿಸೋಣ: ಅನುರಾಗ್ ಠಾಕೂರ್

Posted On: 25 SEP 2021 11:13AM by PIB Bengaluru

'ಆಜಾ಼ದಿ ಕಾ ಅಮೃತ ಮಹೋತ್ಸವ' ಮತ್ತು 'ಫಿಟ್ ಇಂಡಿಯಾ ಆಂದೋಲನ’ ದ ಭಾಗವಾಗಿ ಭಾರತ ಸೈಕ್ಲಿಂಗ್ ಫೆಡರೇಶನ್ ನ ಸಹಯೋಗದೊಂದಿಗೆ ಲಡಾಖ್ ಪೋಲಿಸ್ ಆಯೋಜಿಸಿದ ಅಲ್ಟಿಮೇಟ್ ಲಡಾಖ್ ಸೈಕ್ಲಿಂಗ್ ಚಾಲೆಂಜ್ ನ ಎರಡನೇ ಆವೃತ್ತಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ಚಾಲನೆ ನೀಡಿದರು. 
ಸೈಕ್ಲಿಂಗ್ ಚಾಲೆಂಜ್ ಗೆ ಹಸಿರು ನಿಶಾನೆ ತೋರಿ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಲ್ಪನೆಯ ಫಿಟ್ ಇಂಡಿಯಾ ಆಂದೋಲನದ ಉದ್ದೇಶ ಭಾರತದ ಜನರಲ್ಲಿ ಫಿಟ್ನೆಸ್ ಪ್ರಜ್ಞೆಯನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದರು. ಸಮುದ್ರ ಮಟ್ಟದಿಂದ 11000 ಅಡಿ ಎತ್ತರದಲ್ಲಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಲಡಾಖ್ ಯುವಕರಲ್ಲಿ ಹುಮ್ಮಸ್ಸು ಕಾಣುತ್ತಿದೆ ಎಂದು ಸಚಿವರು ಹೇಳಿದರು. ಸೈಕ್ಲಿಂಗ್ ಸ್ಪರ್ಧೆಯನ್ನು ಉತ್ತೇಜಿಸುವ ಮೂಲಕ ಫಿಟ್ ಇಂಡಿಯಾ ಅಭಿಯಾನಕ್ಕೆ ಕೊಡುಗೆ ನೀಡಿದ ಲಡಾಖ್‌ನ ಯುವಕರನ್ನು ಸಚಿವರು ಶ್ಲಾಘಿಸಿದರು.
ಫಿಟ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಈ ಸೈಕ್ಲಿಂಗ್ ಸ್ಪರ್ಧೆಯನ್ನು ಆಯೋಜಿಸಿದ ಲಡಾಖ್ ಪೊಲೀಸ್ ಮತ್ತು ಎಲ್ ಎ ಹೆಚ್ ಡಿ ಸಿ ಯನ್ನು ಸಚಿವರು ಅಭಿನಂದಿಸಿದರು.
ಫಿಟ್ ಇಂಡಿಯಾ ಅಭಿಯಾನವನ್ನು ಉತ್ತೇಜಿಸುವಲ್ಲಿ ಯುವಕರ ಪಾತ್ರವನ್ನು ಒತ್ತಿ ಹೇಳಿದ ಅವರು, ‘ಸೈಕಲ್ ಹೊಡೆಯೋಣ, ಫಿಟ್ ಆಗಿರೋಣ ಭಾರತವನ್ನು ಸದೃಢವಾಗಿರಿಸೋಣ. ಯುವಕರು ಸದೃಢರಾಗಿದ್ದರೆ, ಭಾರತ ಸದೃಢವಾಗಿರುತ್ತದೆ ’ ಎಂದರು.
ಸಂಸತ್ ಸದಸ್ಯ ಶ್ರೀ ಜಮ್ಯಾಂಗ್ ತ್ಸೆರಿಂಗ್ ನಮಗ್ಯಾಲ್ ಮತ್ತು ಸಿಇಸಿ, ತಾಶಿ ಗಯಾಲ್ಸನ್ ಅವರೊಂದಿಗೆ ಸಚಿವರು ಸೈಕ್ಲಿಂಗ್ ಸ್ಪರ್ಧೆಯಲ್ಲೂ ಭಾಗವಹಿಸಿದರು.

 

***


(Release ID: 1758069) Visitor Counter : 250