ರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ ರಾಷ್ಟ್ರಪತಿಗಳಿಂದ  2019-20 ರ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಪ್ರಶಸ್ತಿ ಪ್ರದಾನ

Posted On: 24 SEP 2021 10:45AM by PIB Bengaluru

ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್‌ ಅವರು ಇಂದು ಬೆಳಗ್ಗೆ ವರ್ಚುವಲ್‌ ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 2019–20 ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಸಮಾರಂಭದಲ್ಲಿ ಮಾತನಾಡುತ್ತ, ಮಾನವ ಜೀವನದ ಸೌಧದ ನಿರ್ಮಾಣ ಆಗುವುದು ವಿದ್ಯಾರ್ಥಿ ಜೀವನದ ಬುನಾದಿಯ ಮೇಲೆಯೇ. ಕಲಿಕೆಯೆಂಬುದು ಜೀವನಪೂರ್ಣದ ಪ್ರಕ್ರಿಯೆ. ಆದರೆ ಮೂಲತಃ ವ್ಯಕ್ತಿತ್ವ ಅಭಿವೃದ್ಧಿ, ವ್ಯಕ್ತಿತ್ವ ನಿರ್ಮಾಣವು ವಿದ್ಯಾರ್ಥಿ ಜೀವನದಲ್ಲಿಯೇ ಆರಂಭವಾಗುತ್ತದೆ. ಕಾರಣದಿಂದ ರಾಷ್ಟ್ರೀಯ ಸೇವಾ ಯೋಜನೆಯು ಒಂದು ದೂರದೃಷ್ಟಿತ್ವ ಇರುವ ಯೋಜನೆಯಾಗಿದೆ. ಯೋಜನೆಯ ಮೂಲಕ ವಿದ್ಯಾರ್ಥಿಗಳು ಸಮಾಜಕ್ಕೆ, ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಒದಗಿಸಿ ಕೊಡುತ್ತದೆ.

1969ರಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಆರಂಭವಾಯಿತು. ಮಹಾತ್ಮಾ ಗಾಂಧೀಜಿ ಅವರ ಜನ್ಮ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಯೋಜನೆಯನ್ನು ಆರಂಭಿಸಲಾಯಿತು. ಮಹಾತ್ಮಾ ಗಾಂಧೀಜಿಯವರು ತಮ್ಮ ಇಡಿಯ ಜೀವನವನ್ನೇ ಸಮಾಜ ಸೇವೆಗೆ ಮುಡಿಪಾಗಿಟ್ಟರು. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮತನವನ್ನು ಗುರುತಿಸಿಕೊಳ್ಳಬೇಕು. ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಆಶಿಸಿದರು. ಗಾಂಧೀಜಿಯವರು ಪ್ರಕಾರ ನಮ್ಮನ್ನು ನಾವು ಅರಿತುಕೊಳ್ಳುವ ವಿಶೇಷ ವಿಧಾನವೆಂದರೆ ನಮ್ಮ ಬದುಕನ್ನು ನಾವು ಇತರರ, ಬಡವರ ಸೇವೆಯಲ್ಲಿ ಸಮರ್ಪಿಸಿಕೊಳ್ಳಬೇಕುಎಂದು ಹೇಳುತ್ತಿದ್ದರು. ಅವರ ಸಿದ್ಧಾಂತ, ತತ್ವಗಳು, ಸೇವೆಗೆ ಸಂಬಂಧಿಸಿದಂತೆ ಅವರ ದೃಷ್ಟಿಕೋನ, ಸಾರ್ವಕಾಲಿಕವಾಗಿವೆ. ಹಾಗೂ ಇಂದಿಗೂ ಚೇತನಾಪೂರ್ಣವಾಗಿವೆ. ಪ್ರೋತ್ಸಾಹದಾಯಕವಾಗಿವೆ ಎಂದರು.

ಕೋವಿಡ್‌ ದುರಿತ ಕಾಲ ಆರಂಭವಾಗುವಾಗ ಮಾಸ್ಕುಗಳ ಉತ್ಪಾದನೆಯು ಹೆಚ್ಚಿನ ಪ್ರಮಾಣದಲ್ಲಿ ಆಗುವ ಮುನ್ನ, ರಾಷ್ಟ್ರೀಯ ಸೇವಾ ಯೋಜನೆಯ ಕಡೆಯಿಂದ 2 ಕೋಟಿ, 30 ಲಕ್ಷ ಮಾಸ್ಕುಗಳನ್ನು ರಾಷ್ಟ್ರೀಯ ಸೇವಾ ಯೋಜನೆಯು ಸಿದ್ಧಪಡಿಸಿ, ದೇಶದ ವಿವಿಧ ಭಾಗಗಳಲ್ಲಿ ಹಂಚಿಕೆ ಮಾಡಿತುಅಷ್ಟೆ ಅಲ್ಲ, ಸಹಾಯವಾಣಿಗಳ ಮೂಲಕ ಕೋವಿಡ್‌ ಜಾಗೃತಿ ಮೂಡಿಸುವಲ್ಲಿಯೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು ಸ್ವಯಂಸ್ಫೂರ್ತಿಯಿಂದ ಪಾಲ್ಗೊಂಡಿದ್ದನ್ನು ಸ್ಮರಿಸಿದರು. ನಿಟ್ಟಿನಲ್ಲಿ ಜಿಲ್ಲಾ ಆಡಳಿತಕ್ಕೆ ಬೆಂಬಲವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು ಪಾಲ್ಗೊಂಡು, ಪರಿಹಾರ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು ಎಂದು ಸ್ಮರಿಸಿ, ಶ್ಲಾಘಿಸಿದರು.

ರಾಷ್ಟ್ರದ ಸ್ವಾಂತಂತ್ರ್ಯದ 75ನೇ ವರ್ಷದ ಆಚರಣೆಯನ್ನು ಸ್ವಾಂತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ರಾಷ್ಟ್ರದಾದ್ಯಂತ ಆಚರಿಸಲಾಗಿದೆ. ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು ಸಂಭ್ರಮೋತ್ಸವದಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ದೇಶದಾದ್ಯಂತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂಘರ್ಷಕ್ಕೆ ಸಂಬಂಧಿಸಿದಂತೆ ಹಲವಾರು ವೆಬಿನಾರುಗಳನ್ನು, ಸೆಮಿನಾರುಗಳನ್ನು ಆಯೋಜಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಪಾತ್ರದ ಕುರಿತು ಯುವಜನಾಂಗದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕಾರ್ಯವೂ ಸಹ, ದೇಶಸೇವೆಯೇ ಆಗಿದೆ ಎಂದು ಅಭಿಪ್ರಾಯ ಪಟ್ಟರು.

ರಾಷ್ಟ್ರೀಯ ಸೇವಾ ಯೋಜನೆ ಪ್ರಶಸ್ತಿಗಳನ್ನು ಕ್ರೀಡಾ ಮತ್ತು ಯುವಜನಾಂಗ ವ್ಯವಹಾರಗಳ ಸಚಿವಾಲಯವು 1993–94ರಿಂದ ನೀಡಲಾಗುತ್ತಿದೆ. ಇದನ್ನು ರಾಷ್ಟ್ರೀಯ ಸೇವಾ ಯೋಜನೆಯನ್ನು ಆರಂಭಿಸಿದ 25 ವರ್ಷಗಳ ಬೆಳ್ಳಿ ಸಂಭ್ರಮದ ಸಂದರ್ಭದಿಂದ ನೀಡಲು ಆರಂಭಿಸಲಾಯಿತು. ಕಾರ್ಯಕ್ರಮದ ಉದ್ದೇಶವೆಂದರೆ ಸಮುದಾಯಗಳಿಗೆ, ಸಮಾಜ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು, ಕಾರ್ಯವನ್ನು ಗುರುತಿಸಿ, ವಿಶ್ವವಿದ್ಯಾಲಯಗಳಿಗೆ ಹಾಗೂ ಕಾಲೇಜುಗಳಿಗೆ, ಎನ್‌ಎಸ್‌ಎಸ್‌ ಘಟಕಗಳಿಗೆ, ಯೋಜನಾ ಅಧಿಕಾರಿಗಳಿಗೆ, ಯೋಜನಾ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.

ರಾಷ್ಟ್ರಪತಿಯವರ ಭಾಷಣವನ್ನು ಹಿಂದಿಯಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ

***



(Release ID: 1757644) Visitor Counter : 208