ಇಂಧನ ಸಚಿವಾಲಯ
ಇಂಧನ ಸಚಿವರ 15ನೇ ಪೂರ್ವ ಏಶ್ಯಾ ಶೃಂಗ ಸಭೆ
Posted On:
16 SEP 2021 3:42PM by PIB Bengaluru
ಇಂಧನ ಸಚಿವರ 15ನೇ ಪೂರ್ವ ಏಶ್ಯಾ ಶೃಂಗ ಸಭೆ ಇಂದು ವರ್ಚುವಲ್ ಮೂಲಕ ನಡೆಯಿತು. ಕೇಂದ್ರ ಇಂಧನ ಖಾತೆ ಸಹಾಯಕ ಸಚಿವರಾದ ಶ್ರೀ ಕೃಷನ್ ಪಾಲ್ ಗುರ್ಜರ್ ಅವರು ಇತರ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಭಾರತದ ಪರವಾಗಿ ಪಾಲ್ಗೊಂಡಿದ್ದರು.
“ನಾವು ಕಾಳಜಿ ವಹಿಸುತ್ತೇವೆ, ನಾವು ಸಿದ್ಧತೆಗಳನ್ನು ಮಾಡುತ್ತೇವೆ, ನಾವು ಸಮೃದ್ಧಿ ಸಾಧಿಸುತ್ತೇವೆ” ಎಂಬ ಶೀರ್ಷಿಕೆಯಡಿ ನಮ್ಮ ವಲಯದ ಜನತೆಯ ಪ್ರಯೋಜನಕ್ಕಾಗಿ ಇಂಧನ ಭದ್ರತೆಯನ್ನು ಮತ್ತು ಇಂಧನ ಪರಿವರ್ತನೆಯನ್ನು ಸಾಧಿಸುವ ನಿಟ್ಟಿನಲ್ಲಿ ಅಸಿಯಾನ್ ದೇಶಗಳ ಪ್ರಯತ್ನಗಳನ್ನು ಸಮನ್ವಯಗೊಳಿಸಲು ಇದನ್ನು ಆಯೋಜಿಸಲಾಗಿತ್ತು.
ಭಾರತವು ಅಸಿಯಾನ್ ತನಗೆ ಬಹಳ ಮಹತ್ವದ ವಲಯವಾಗಿರುವುದನ್ನು ದೃಢ ಪಡಿಸಿತು. ಭಾರತದ “ಪೂರ್ವದಲ್ಲಿ ಕಾರ್ಯಾಚರಿಸುವ” ನೀತಿ ಮತ್ತು ವ್ಯೂಹದಡಿಯಲ್ಲಿ ನಿರ್ಣಾಯಕ ಅಂಶವಾಗಿ ಅಸಿಯಾನ್ ಜೊತೆ ಈಗಿರುವ ಸಹಭಾಗಿತ್ವ ಮುಂದೂ ಇರಲಿದೆ, ಪೂರ್ವದಲ್ಲಿ ಕಾರ್ಯಾಚರಿಸುವುದು ಈಗ ಭಾರತದ ಇಂಡೋ-ಫೆಸಿಫಿಕ್ ಮುನ್ನೋಟದ ಕೇಂದ್ರೀಯ ಅಂಶವಾಗಿದೆ.
ಸಚಿವರು ಭಾರತದ ಇಂಧನ ಪರಿವರ್ತನೆಯ ಯೋಜನೆಗಳು, ನೀತಿಗಳು, ಸವಾಲುಗಳು ಮತ್ತು ಇಂಗಾಲವನ್ನು ತೆಗೆದು ಹಾಕುವ (ಡಿಕಾರ್ಬೋನೈಶೇಷನ್ ) ಪ್ರಯತ್ನಗಳ ಕುರಿತು ಕಿರುನೋಟವನ್ನು ಒದಗಿಸಿದರು.
***
(Release ID: 1755456)
Visitor Counter : 285