ಇಂಧನ ಸಚಿವಾಲಯ
azadi ka amrit mahotsav

ಭಾರತದ ಮೊದಲ ಯೂರೋ ಗ್ರೀನ್ ಬಾಂಡ್ ಬಿಡುಗಡೆ ಮಾಡಿದ ಪಿ.ಎಫ್.ಸಿ.

Posted On: 16 SEP 2021 12:58PM by PIB Bengaluru

ಪವರ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ [ಪಿ.ಎಫ್.ಸಿ] ತನ್ನ ವಿದ್ಯುತ್ ಕ್ಷೇತ್ರದ ಪ್ರಮುಖ ವಲಯವಾದ ಎನ್.ಬಿ.ಎಫ್.ಸಿ 13.09.2021 ರಂದು 7 ವರ್ಷದ ತನ್ನ ಮೊದಲ 300 ದಶಲಕ್ಷ ಯುರೋ ಬಾಂಡ್ ಬಿಡುಗಡೆ ಮಾಡಿದೆ. ಇದರಿಂದಾಗಿ ಯುರೋ ಮಾರುಕಟ್ಟೆಯಲ್ಲಿ ಭಾರತಕ್ಕೆ 1.841% ರಷ್ಟು ಪ್ರತಿಫಲ ದೊರೆತಂತಾಗಿದೆ.   

ಭಾರತದಿಂದ ಮೊದಲ ಯುರೋ ಹೆಸರಿನ ಹಸಿರು ಬಾಂಡ್ ವಿತರಣೆ ಇದಾಗಿದೆ. ಇದಲ್ಲದೇ ಇದು ಭಾರತದ ಎನ್.ಬಿ.ಎಫ್.ಸಿಯಿಂದ ಮೊದಲ ಯುರೋ ಬಾಂಡ್ ಆಗಿದ್ದು, 2017 ನಂತರ ಭಾರತದ ಮೊದಲ ಯುರೋ ಬಾಂಡ್ ವಿತರಣೆಯಾಗಿದೆ

ಪ್ರಕ್ರಿಯೆಯಲ್ಲಿ ಏಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳಾದ್ಯಂತ 82 ಸಾಂಸ್ಥಿಕ ಹೂಡಿಕೆ ವಲಯದ ಖಾತೆದಾರರು ಭಾಗವಹಿಸಿದ್ದು, ಇದು ಪ್ರಬಲ ಪಾಲ್ಗೊಳ್ಳುವಿಕೆಯಾಗಿದೆ ಮತ್ತು 2.65 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಚಂದಾದಾರರನ್ನು ಹೊಂದಿದಂತಾಗಿದೆ.

***(Release ID: 1755448) Visitor Counter : 142