ನೀತಿ ಆಯೋಗ
azadi ka amrit mahotsav

ʻದಾ.ಸ್ಸೋ ಸಿಸ್ಟಮ್ಸ್‌ʼ ಸಹಭಾಗಿತ್ವದೊಂದಿಗೆ ಆವಿಷ್ಕಾರಕ್ಕೆ ಮತ್ತಷ್ಟು ಉತ್ತೇಜನ ನೀಡಲು ʻಅಟಲ್ ಇನ್ನೋವೇಶನ್ ಮಿಷನ್ʼ ಸಜ್ಜಾಗಿದೆ

Posted On: 16 SEP 2021 2:26PM by PIB Bengaluru

ದೇಶಾದ್ಯಂತ ಆವಿಷ್ಕಾರ ಮತ್ತು ಉದ್ಯಮಶೀಲತೆ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ʻದಾ.ಸ್ಸೋ ಸಿಸ್ಟಮ್ಸ್‌ʼ ಜೊತೆ ಸಹಭಾಗಿತ್ವದಲ್ಲಿ ನೀತಿ ಆಯೋಗದ ʻಅಟಲ್ ಇನ್ನೋವೇಶನ್ ಮಿಷನ್ʼ(ಎಐಎಂಸಜ್ಜಾಗಿದೆ.

ಭಾರತದಲ್ಲಿ ʻಅಟಲ್‌ ಇನ್ನೋವೇಷನ್‌ ಮಿಷನ್‌ʼ ಹಾಲಿ ಮತ್ತು ಭವಿಷ್ಯದ ಉಪಕ್ರಮಗಳನ್ನು ಬೆಂಬಲಿಸಲು ಹಾಗೂ ಅದರ ಫಲಾನುಭವಿಗಳಿಗೆ ನೆರವು ನೀಡಲು ಇಂದು ನಡೆದ ವರ್ಚ್ಯುಯಲ್‌ ಸಭೆಯಲ್ಲಿ ʻಎಐಎಂʼ ಮತ್ತು ʻದಾ.ಸ್ಸೋ ಸಿಸ್ಟಮ್ಸ್‌ʼ ನಡುವೆ ಒಡಂಬಡಿಕೆಗೆ (ಎಸ್‌ಒಐ) ಸಹಿ ಹಾಕಲಾಯಿತು.

ಒಡಂಬಡಿಕೆ ಅಡಿಯಲ್ಲಿ, ʻಅಟಲ್ ಟಿಂಕರಿಂಗ್ ಲ್ಯಾಬ್‌ಗಳುʼ (ಎಟಿಎಲ್‌ಗಳು), ʻಎಐಎಂ ಪೋಷಣಾ ಕೇಂದ್ರಗಳುʼ (ಎಐಸಿಗಳು ಮತ್ತು ಇಐಸಿಗಳು), ʻಅಟಲ್ ಸಮುದಾಯ ಆವಿಷ್ಕಾರ ಕೇಂದ್ರಗಳುʼ (ಎಸಿಐಸಿ), ʻಅಟಲ್ ನ್ಯೂ ಇಂಡಿಯಾ ಚಾಲೆಂಜ್ʼ (ಎಎನ್‌ಐಸಿ), ಮತ್ತು ಸಣ್ಣ ಉದ್ಯಮಕ್ಕಾಗಿ ಅಟಲ್ ಸಂಶೋಧನೆ & ಆವಿಷ್ಕಾರ (ಎಆರ್‌ಐಎಸ್‌ಇ) ಸೇರಿದಂತೆ ಎಲ್ಲಾ ಅಟಲ್‌ ಇನ್ನೋವೇಷನ್‌ ಮಿಷನ್‌ (ಎಐಎ) ಫಲಾನುಭವಿಗಳನ್ನು ʻಡಸಾಲ್ಟ್ ಸಿಸ್ಟಮ್ಸ್‌ʼ ಬೆಂಬಲಿಸುತ್ತದೆ ಮತ್ತು ಉತ್ತೇಜಿಸುತ್ತದೆ.

ಮಹತ್ವಾಕಾಂಕ್ಷಿ ಉದ್ಯಮಿಗಳಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ, ಕಾರ್ಯಕ್ರಮವು ಸಮುದಾಯದಲ್ಲಿ ಕ್ರಾಂತಿಕಾರಿ ಆವಿಷ್ಕಾರಗಳಿಗೆ ವೇಗ ನೀಡಲು ಮುಕ್ತ ಆವಿಷ್ಕಾರ ಸಹಯೋಗಕ್ಕೆ ಅನುವು ಮಾಡಿಕೊಡುತ್ತದೆ.

ನೀತಿ ಆಯೋಗದ ʻಎಐಎಂʼ ಮತ್ತು ದಾ.ಸ್ಸೋ ತೊಡಗಿಸಿಕೊಳ್ಳಲಿರುವ ಆರು ಅಂಶಗಳನ್ನು ಒಡಂಬಡಿಕೆಯು ಒಳಗೊಂಡಿದೆ. ಇವುಗಳಲ್ಲಿ ಆಯ್ದ ʻಎಐಎಂʼ ನವೋದ್ಯಮಗಳಿಗೆ ʻದಾ.ಸ್ಸೋ ಸಿಸ್ಟಮ್ಸ್‌ʼ ʻ3ಡಿ ಎಕ್ಸ್‌ಪೀರಿಯನ್ಸ್ ಲ್ಯಾಬ್ ಸ್ಟಾರ್ಟ್‌ಅಪ್ ವೇಗವರ್ಧನೆ ಕಾರ್ಯಕ್ರಮʼಕ್ಕೆ ಪ್ರವೇಶ; ತಮ್ಮ ಉತ್ಪನ್ನಗಳ ಸಾಮರ್ಥ್ಯ ವರ್ಧನೆಗಾಗಿ ಆಯ್ದ ಎಐಎಂ ನವೋದ್ಯಮಗಳಿಗೆ ಮಾರ್ಗದರ್ಶನ; ಆಯ್ದ ಎಐಎಂ ನವೋದ್ಯಮಗಳಿಗೆ ʻ3ಡಿ ಎಕ್ಸ್‌ಪೀರಿಯನ್ಸ್ ಲ್ಯಾಬ್ʼ ಜಾಗತಿಕ ಸಮುದಾಯ ಪ್ರವೇಶಿಸಲು ಅವಕಾಶ; ಆಯ್ದ ಎಐಎಂ ನವೋದ್ಯಮಗಳಿಗೆ ʻದಾ.ಸ್ಸೋ ಸಿಸ್ಟಮ್ಸ್‌ʼ ಜಾಗತಿಕ ಗ್ರಾಹಕರು, ಪಾಲುದಾರರು ಮತ್ತು ತಂತ್ರಜ್ಞಾನ ಸಹಯೋಗ ಸಂಸ್ಥೆಗಳೊಂದಿಗೆ ಉದ್ಯಮ ಸಂಪರ್ಕ; ʻದಾ.ಸ್ಸೋ ಸೈಸ್ತೆಮ್ಸ್ʼ ರಾಷ್ಟ್ರೀಯ ಮತ್ತು ಜಾಗತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಯ್ದ ಎಐಎಂ ನವೋದ್ಯಮಗಳಿಗೆ ಅವಕಾಶ; ಹಾಗೂ ಎಐಎಂ ಮತ್ತು ನೀತಿ ಆಯೋಗದೊಂದಿಗೆ ಜಂಟಿ ಕಾರ್ಯಕ್ರಮಗಳು, ಹ್ಯಾಕಥಾನ್‌ಗಳು, ಸವಾಲುಗಳ  ಆಯೋಜನೆ ಮತ್ತು ಪಾಲ್ಗೊಳ್ಳುವಿಕೆ - ಇವುಗಳು  ಸೇರಿವೆ.

ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ʻಎಐಎಂʼ ಯೋಜನಾ ನಿರ್ದೇಶಕ  ಡಾ. ಚಿಂತನ್ ವೈಷ್ಣವ್ ಅವರು, ಡಸಾಲ್ಟ್ ಜೊತೆಗಿನ ಪಾಲುದಾರಿಕೆಯು ಗೆಲುವಿನ ಪಾಲುದಾರಿಕೆಯಾಗಿದೆದೇಶದಲ್ಲಿ ಎಲ್ಲಾ ಫಲಾನುಭವಿಗಳ ವಿಚಾರದಲ್ಲೂ ವಿಸ್ತರಿಸುತ್ತಿರುವ ʻಎಐಎಂʼ ಪರಿಸರ ವ್ಯವಸ್ಥೆಯನ್ನು ಸೂಚಿಸುತ್ತದೆ ಎಂದು ಹೇಳಿದರು.

" ಉಪಕ್ರಮವು ಆಯ್ದ ಭಾರತೀಯ ನವೋದ್ಯಮಗಳಿಗೆ ಹೊಸ ಬಾಗಿಲು ತೆರೆಯುತ್ತದೆ. ಏಕೆಂದರೆ ಅವುಗಳು ʻದಾ.ಸ್ಸೋ ಸಿಸ್ಟಮ್ಸ್‌ʼ ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆಗೆ ಪ್ರವೇಶ ಪಡೆಯುತ್ತಾರೆ. ʻದಾ.ಸ್ಸೋ ಸಿಸ್ಟಮ್ಸ್‌ʼ ಅವರ ವೇಗವರ್ಧಕ ಕಾರ್ಯಕ್ರಮಗಳು ಮತ್ತು ಸಮಾನ ಮನಸ್ಕರು, ಉದ್ಯಮ ತಜ್ಞರು, ಎಂಜಿನಿಯರ್‌ಗಳು, ವಿನ್ಯಾಸಕರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ಪಡೆಯುತ್ತಾರೆ. ಜೊತೆಗೆ ʻ3ಡಿ ಎಕ್ಸ್‌ಪೀರಿಯನ್ಸ್ ಲ್ಯಾಬ್ʼ ಭಾಗವಾಗಲು ಅವಕಾಶ ಹೊಂದುತ್ತಾರೆ. ಇದರ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಏಕೆಂದರೆ, ಇದರಿಂದ ಸಮುದಾಯ ಮಟ್ಟದಲ್ಲಿ ಮತ್ತು ಜಾಗತಿಕವಾಗಿ ನವೋದ್ಯಮಗಳನ್ನು ವೇಗವರ್ಧನೆಗೊಳಿಸುವ ಸಾಮರ್ಥ್ಯ ಹೊಂದಬಹುದು," ಎಂದು ಅವರು ಹೇಳಿದರು.

ʻದಾ.ಸ್ಸೋ ಸಿಸ್ಟಮ್ಸ್‌ʼ ಭಾರತದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಎನ್ ಜಿ ಅವರು ಮಾತನಾಡಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ʻಎಐಎಂʼ ಜೊತೆಗಿನ ಒಡಂಬಡಿಕೆಯೊಂದಿಗೆ ದೀರ್ಘಕಾಲೀನ ಸಂಬಂಧವೊಂದು ಆರಂಭವಾಗಿದೆ. ಇದು ದೇಶದಲ್ಲಿ ತಯಾರಕರು, ನವೋದ್ಯಮಿಗಳ ಪರಿಸರ ವ್ಯವಸ್ಥೆಯನ್ನು ಪೋಷಿಸುವ ʻದಾ.ಸ್ಸೋʼ ಬದ್ಧತೆಯನ್ನು ಬಲಪಡಿಸುತ್ತದೆ, ಎಂದು ಹೇಳಿದರು.

"ಎಐಎಂ ಜೊತೆಗಿನ ನಮ್ಮ ಒಡಂಬಡಿಕೆಯು ತಂತ್ರಜ್ಞಾನ, ಉದ್ಯಮದ ಅತ್ಯುತ್ತಮ ಕಾರ್ಯವಿಧಾನಗಳು ಮತ್ತು ಸರಕಾರದ ನೀತಿಗಳನ್ನು ನವೋದ್ಯಮಗಳು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ನಮ್ಮ ಸಾಮಾನ್ಯ ಉದ್ದೇಶಗಳನ್ನು ಮತ್ತಷ್ಟು ಬಲಗೊಳಿಸುತ್ತದೆಎಂದರು

"ವಿದ್ಯುತ್‌ ಚಾಲಿತ ವಾಹನಗಳು, ಬ್ಯಾಟರಿಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯ, ವೈದ್ಯಕೀಯ ಸಾಧನಗಳು, ಇಂಧನ ಮತ್ತು ಸಾಮಗ್ರಿಗಳ ವಲಯಗಳ ಹೊಸ ನವೋದ್ಯಮಗಳಿಗೆ ನೂತನ ತಂತ್ರಜ್ಞಾನ ಮತ್ತು ಸಮುದಾಯವನ್ನು ಪ್ರವೇಶಿಸಲು ನಮ್ಮ ʻ3ಡಿ ಎಕ್ಸ್‌ಪೀರಿಯನ್ಸ್ ಲ್ಯಾಬ್ʼ ಅವಕಾಶ ನೀಡುತ್ತದೆ. ಜೊತೆಗೆ ಭವಿಷ್ಯದ ಉದ್ಯಮಕ್ಕೆ ಸುಸ್ಥಿರ ಹಾಗೂ ಮಿತವ್ಯಯದ ಪರಿಹಾರಗಳನ್ನು ಒದಗಿಸುವ ನವೋದ್ಯಮಿಗಳಿಗೂ ಇಂತಹ ಅವಕಾಶವನ್ನು ವಿಸ್ತರಿಸುತ್ತದೆ,ʼʼ ಎಂದು ಅವರು ಪ್ರತಿಪಾದಿಸಿದರು.

***(Release ID: 1755437) Visitor Counter : 131