ಸಂಸ್ಕೃತಿ ಸಚಿವಾಲಯ
ಪ್ರಧಾನಮಂತ್ರಿಯವರು ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಸೆಪ್ಟೆಂಬರ್ 17 ರಿಂದ ಇ-ಹರಾಜು ಮಾಡಲಿರುವ ಸಂಸ್ಕೃತಿ ಸಚಿವಾಲಯ
ನಮಾಮಿ ಗಂಗೆ ಅಭಿಯಾನಕ್ಕೆ ಹೋಗಲಿರುವ ಇ - ಹರಾಜಿನಿಂದ ಬರುವ ಹಣ
Posted On:
16 SEP 2021 1:16PM by PIB Bengaluru
ಮುಖ್ಯಾಂಶಗಳು:
- ಈ ಸ್ಮರಣಿಕೆಗಳಲ್ಲಿ ಪದಕ ವಿಜೇತ ಒಲಿಂಪಿಕ್ ಕ್ರೀಡಾಪಟುಗಳು ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳ ಕ್ರೀಡಾ ಸಾಧನಗಳು ಮತ್ತು ಉಪಕರಣಗಳು, ಅಯೋಧ್ಯೆ ರಾಮ ಮಂದಿರದ ಪ್ರತಿರೂಪ ಮೊದಲಾದವುಗಳು ಸೇರಿವೆ.
- ವ್ಯಕ್ತಿಗಳು/ಸಂಸ್ಥೆಗಳು 17ನೇ ಸೆಪ್ಟೆಂಬರ್ ಮತ್ತು 7ನೇ ಅಕ್ಟೋಬರ್, 2021ರ ನಡುವೆ https://pmmementos.gov.in ವೆಬ್ ಸೈಟ್ ಮೂಲಕ ಇ -ಹರಾಜಿನಲ್ಲಿ ಭಾಗವಹಿಸಬಹುದು
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಆಯೋಜಿಸಿದೆ. ಈ ಸ್ಮರಣಿಕೆಗಳಲ್ಲಿ ಪದಕ ವಿಜೇತ ಒಲಿಂಪಿಕ್ ಕ್ರೀಡಾಪಟುಗಳು ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳ ಕ್ರೀಡಾ ಸಾಧನಗಳು ಮತ್ತು ಉಪಕರಣಗಳು, ಅಯೋಧ್ಯೆ ರಾಮ ಮಂದಿರ, ಚಾರ್ ಧಾಮ್, ರುದ್ರಾಕ್ಷ್ ಸಮಾವೇಶ ಕೇಂದ್ರದ ಪ್ರತಿರೂಪಗಳು, ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರ ಮೊದಲಾದವುಗಳು ಸೇರಿವೆ.
ವ್ಯಕ್ತಿಗಳು/ಸಂಸ್ಥೆಗಳು 17ನೇ ಸೆಪ್ಟೆಂಬರ್ ಮತ್ತು 7ನೇ ಅಕ್ಟೋಬರ್, 2021ರ ನಡುವೆ ನಡೆಯುವ ಇ -ಹರಾಜಿನಲ್ಲಿ https://pmmementos.gov.in ವೆಬ್ ಸೈಟ್ ಮೂಲಕ ಭಾಗವಹಿಸಬಹುದು.
ಈ ಇ-ಹರಾಜಿನಿಂದ ಬರುವ ಹಣ ಗಂಗಾ ನಂದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶ ಹೊಂದಿರುವ ನಮಾಮಿ ಗಂಗೆ ಅಭಿಯಾನಕ್ಕೆ ಹೋಗಲಿದೆ.
***
(Release ID: 1755408)
Visitor Counter : 261