ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ಇತ್ತೀಚಿನ ವರದಿ - ದಿನ 241


75 ಕೋಟಿ ಮೈಲಿಗಲ್ಲು ದಾಟಿ, ಭಾರತ ಹೊಸ ದಾಖಲೆ

ಕೋವಿಡ್ ಲಸಿಕೆಯ ಒಂದು ಡೋಸ್  ಪಡೆದ ಶೇ.99ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೆಲೆಯಾದ ಭಾರತ

Posted On: 13 SEP 2021 7:03PM by PIB Bengaluru

ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ ಇಂದು 75 ಕೋಟಿ ಮೈಲಿಗಲ್ಲು (75,10,41,391) ದಾಟಿದೆ. ಇಂದು ಸಂಜೆ 5:30ರವರೆಗೆ 67 ಲಕ್ಷಕ್ಕೂ ಹೆಚ್ಚು (67,04,768) ಲಸಿಕೆ ಡೋಸ್ ಗಳನ್ನು ನೀಡಲಾಗಿತ್ತು.  ಇಂದು ರಾತ್ರಿಯ ವೇಳೆಗೆ ದಿನದ ಅಂತಿಮ ವರದಿಗಳ ಸಂಕಲನದೊಂದಿಗೆ ದೈನಿಕ ಲಸಿಕೆ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಕೋವಿಡ್ ಲಸಿಕೆಯ ಒಂದು ಡೋಸ್ ಲಸಿಕೆ ಪಡೆದ ಶೇ.99ಕ್ಕೂ ಹೆಚ್ಚು ಎಚ್.ಸಿ.ಡಬ್ಲ್ಯೂ.ಗಳು ಮತ್ತು ಎಫ್.ಎಲ್.ಡಬ್ಲ್ಯೂ.ಗಳಿಗೆ ದೇಶ ನೆಲೆಯಾಗಿದೆ.

ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರು 75 ಕೋಟಿ ಲಸಿಕೆ ಮೈಲಿಗಲ್ಲು ಸಾಧನೆಗಾಗಿ ಇಡೀ ದೇಶವನ್ನು ಶ್ಲಾಘಿಸಿದ್ದಾರೆ.

ಕೋವಿಡ್-19 ಲಸಿಕೆಯನ್ನು ತ್ವರಿತಗೊಳಿಸಿದ ಮತ್ತು 75 ಕೋಟಿ ಲಸಿಕೆ ಗಡಿಯನ್ನು ಸಾಧಿಸಿದ್ದಕ್ಕಾಗಿ ಭಾರತವನ್ನು ಡಬ್ಲ್ಯೂ.ಎಚ್.ಒ ಸೆರೋ ಸಹ ಅಭಿನಂದಿಸಿದೆ.

ಜನಸಂಖ್ಯೆಯ ಆದ್ಯತೆಯ ಗುಂಪುಗಳ ಆಧಾರದ ಮೇಲೆ ಪ್ರತ್ಯೇಕಿಸಲಾದ ಲಸಿಕೆ ಡೋಸ್ ಗಳ ಸಂಚಿತ ವ್ಯಾಪ್ತಿ ಈ ಕೆಳಗಿನಂತಿದೆ:

ಸಂಚಿತ ಲಸಿಕೆ ಡೋಸ್ ವ್ಯಾಪ್ತಿ

ಎಚ್.ಸಿ.ಡ್ಲ್ಯು.ಗಳು

1ನೇ ಡೋಸ್

1,03,64,684

2ನೇ ಡೋಸ್

86,11,479

ಎಫ್.ಎಲ್.ಡಬ್ಲ್ಯು.ಗಳು

1ನೇ ಡೋಸ್

1,83,38,713

2ನೇ ಡೋಸ್

1,41,01,351

18-44ವರ್ಷ ವಯೋಮಾನದ ಗುಂಪಿನವರು

1ನೇ ಡೋಸ್

30,26,12,416

2ನೇ ಡೋಸ್

4,52,87,346

45-59 ವಯೋಮಾನದ ಗುಂಪಿನವರು

1ನೇ ಡೋಸ್

14,45,93,468

2ನೇ ಡೋಸ್

6,37,26,534

60 ವರ್ಷ ಮೇಲ್ಪಟ್ಟವರು.

1ನೇ ಡೋಸ್

9,36,68,415

2ನೇ ಡೋಸ್

4,97,36,985

ಸಂಚಿತ ಪ್ರಥಮ ಡೋಸ್ ನೀಡಿಕೆ

56,95,77,696

ಸಂಚಿತ ಎರಡನೇ ಡೋಸ್ ನೀಡಿಕೆ

18,14,63,695

ಒಟ್ಟು

75,10,41,391

ಕೋವಿಡ್-19 ರಿಂದ ದೇಶದ ಅತ್ಯಂತ ದುರ್ಬಲ ಜನಸಂಖ್ಯೆಯ ಗುಂಪುಗಳನ್ನು ರಕ್ಷಿಸುವ ಸಾಧನವಾಗಿ ಲಸಿಕೆಯ  ನೀಡಿಕೆಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ಅತ್ಯುನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

***



(Release ID: 1754663) Visitor Counter : 174