ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿನ್ ಕುರಿತ ತಾಜಾ ಮಾಹಿತಿ


ಹೊಸ ಎಪಿಐಗೆ ಚಾಲನೆ ನೀಡಿದ ಕೋವಿಡ್ : ಕೆವೈಸಿ-ವಿಎಸ್; ನಿಮ್ಮ ಗ್ರಾಹಕರು/ಕಕ್ಷಿದಾರರ ಲಸಿಕೆ ಸ್ಥಿತಿಗತಿ ಬಗ್ಗೆ ತಿಳಿಯಿರಿ

ಕೋವಿನ್ ಮೂಲಕ ವೈಯಕ್ತಿಕ ಲಸಿಕೆ ಸ್ಥಿತಿಗತಿ ಪರಿಶೀಲನೆಗೆ ಅವಕಾಶ ಮಾಡಿಕೊಡುವ ಕೆವೈಸಿ-ವಿಎಸ್

ಕೆವೈಸಿ-ವಿಎಸ್ ಸಮ್ಮತಿ ಆಧಾರಿತ, ಗೋಪ್ಯತೆ ಸಂರಕ್ಷಿಸುವ ಮತ್ತು ಯಾವುದೇ ವ್ಯವಸ್ಥೆ ಜೊತೆ ಸಂಯೋಜಿಸಬಹುದು ವ್ಯವಸ್ಥೆ

Posted On: 10 SEP 2021 1:40PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ವರ್ಷದ ಜನವರಿ 16ರಂದು ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ದೇಶದಲ್ಲಿ ಈವರೆಗೆ 72 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಹಾಕಲಾಗಿದೆ. ಲಸಿಕೆ ಹಾಕಿಸಿಕೊಂಡಿರುವ ಈ ಎಲ್ಲ ಸಾರ್ವಜನಿಕರಿಗೆ ಸಾಕ್ಷ್ಯವನ್ನು ಒದಗಿಸಲು ಕೋವಿನ್ ಈಗಾಗಲೇ ಡಿಜಿಟಲ್ ಪ್ರಮಾಣೀಕೃತ ಪತ್ರಗಳನ್ನು ವಿತರಿಸುತ್ತಿದೆ. ಈ ಪ್ರಮಾಣಪತ್ರವನ್ನು ಡಿಜಿಟಲ್ ಸಾಧನ (ಸ್ಮಾರ್ಟ್ ಫೋನ್, ಟಾಬ್ಲೆಟ್, ಲ್ಯಾಪ್ ಟಾಪ್ ಇತ್ಯಾದಿ) ಗಳಲ್ಲಿ ರಕ್ಷಣೆ (ಸೇವ್ ) ಮಾಡಿಟ್ಟುಕೊಳ್ಳಬಹುದು ಅಥವಾ ಡಿಜಿ ಲಾಕರ್ ನಲ್ಲಿ ಸಂಗ್ರಹಿಸಿಟ್ಟುಕೊಳ್ಳ ಬಹುದು, ಆ ಮೂಲಕ ಲಸಿಕಾ ಕಾರ್ಯಕ್ರಮದ ಸಾಕ್ಷ್ಯ ಅಗತ್ಯ ಬಿದ್ದಾಗ ಅದನ್ನು ಡಿಜಿಟಲ್ ರೂಪದಲ್ಲಿ ಹಂಚಿಕೆ ಮಾಡಿಕೊಳ್ಳಬಹುದು.

ಅಂತೆಯೇ, ಎಲ್ಲೆಲ್ಲಿ ಪ್ರವೇಶ ದ್ವಾರಗಳಲ್ಲಿ ಅಂತಹ ಪ್ರಮಾಣಪತ್ರಗಳ ಅಗತ್ಯ ಬೀಳುತ್ತದೆಯೋ ( ಉದಾಹರಣೆಗೆ ಮಾಲ್, ಕಚೇರಿ ಸಂಕೀರ್ಣಗಳು, ಸಾರ್ವಜನಿಕ ಕಾರ್ಯಕ್ರಮಗಳು ಇತ್ಯಾದಿ) ಅಂತಹ ಕಡೆ ಅದನ್ನು ಡಿಜಿಟಲ್ ರೂಪದಲ್ಲಿ ಮತ್ತು ಭೌತಿಕ ವಿಧಾನದಲ್ಲಿ ಪ್ರದರ್ಶಿಸಬಹುದು.

ಆದರೂ ಸಹ ಸಂಸ್ಥೆಗಳು ಪೂರ್ಣವಾಗಿ ಪ್ರಮಾಣಪತ್ರವನ್ನು ನೋಡುವ ಅಗತ್ಯ ಇಲ್ಲದಿರಬಹುದು, ಆದರೆ ಅವು ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬೇಕಾಗಿರುತ್ತದೆ. ಅಂತಹ ಕೆಲವು ಸಂಭಾವ್ಯ ಬಳಕೆ ಈ ಕೆಳಗಿನಂತಿರಬಹುದು.

  iv. ಒಂದು ಸಂಸ್ಥೆ/ ಉದ್ಯೋಗದಾತ ತನ್ನ ಕಚೇರಿ , ಕಾರ್ಯಸ್ಥಳ ಇತ್ಯಾದಿಗಳನ್ನು ಪುನಾರಂಭಿಸಲು ತನ್ನ ಉದ್ಯೋಗಿಗಳ ಲಸಿಕೆ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಬಯಸಬಹುದು.

ii) ರೈಲುಗಳಲ್ಲಿ ಕಾಯ್ದಿರಿಸಿದ ತಮ್ಮ ಆಸನಗಳಿಗೆ ಬರುವ ಪ್ರಯಾಣಿಕರ ಲಸಿಕೆ ಸ್ಥಿತಿಗತಿಯನ್ನು ತಿಳಿಯಲು ರೈಲ್ವೆ ಬಯಸಬಹುದು.

iii) ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರ ಲಸಿಕೆ ಸ್ಥಿತಿಗತಿ ಅರಿಯಲು ಬಯಸಬಹುದು ಮತ್ತು ಅಥವಾ ವಿಮಾನ ನಿಲ್ದಾಣಗಳು ಕೇವಲ ಲಸಿಕೆ ಪಡೆದ ಪ್ರಯಾಣಿಕರಿಗೆ ಮಾತ್ರ ಹಾದು ಹೋಗುವ ಅವಕಾಶ ನೀಡಬಹುದು.

iv) ಹೋಟೆಲ್ ಗಳು ತಮ್ಮ ಹೋಟೆಲ್ ಒಳಗೆ ಬರುವ ಸಮಯದಲ್ಲಿ ಅಥವಾ ಆನ್ ಲೈನ್ ಮೂಲಕ ಕಾಯ್ದಿರಿಸುವ ಸಮಯದಲ್ಲಿ ಅವರ ಲಸಿಕೆ ಸ್ಥಿತಿಗತಿ ತಿಳಿಯಲು ಬಯಸಬಹುದು.

ಸಾಮಾಜಿಕ- ಆರ್ಥಿಕ ಚುಟವಟಿಕೆಗಳು ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿರುವಾಗ, ಪ್ರತಿಯೊಬ್ಬರ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ, ಉದ್ಯೋಗಿಗಳಾಗಿ, ಪ್ರಯಾಣಿಕರಾಗಿ, ನಿವಾಸಿಗಳಾಗಿ ಇತ್ಯಾದಿ ಎಲ್ಲರೂ ಯಾವುದೇ ಕಾರಣಕ್ಕೆ ಯಾವುದೇ ವಿಧದಲ್ಲಿ ತೊಡಗಿಕೊಂಡರೂ ಕೂಡ ಅವರು ತಾವು ವೈಯಕ್ತಿಕವಾಗಿ ಲಸಿಕೆ ಪಡೆದಿದ್ದೆವೆಯೇ ಇಲ್ಲವೇ ಎಂಬುದನ್ನು ಡಿಜಿಟಲ್ ಮೂಲಕ ತಿಳಿಸುವ ಅಗತ್ಯವಿದೆ.

ಆದ್ದರಿಂದ, ಆಧಾರ್ ರೀತಿ ಕೋವಿನ್ ಮೂಲಕ ಲಸಿಕಾ ಕಾರ್ಯಕ್ರಮದ ಸ್ಥಿತಿಗತಿ ಪ್ರಮಾಣಿಕರಿಸುವ ಸೇವೆ ಅಗತ್ಯವಿದೆ. ಈ ರೀತಿಯ ಪ್ರಕರಣಗಳ ಬಗ್ಗೆ ಗಮನಹರಿಸಲು ಮತ್ತು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅಗತ್ಯಗಳಿಗೆ ನೆರವಾಗಲು, ಕೋವಿನ್ “ ನಿಮ್ಮ ಗ್ರಾಹಕರು/ಕಕ್ಷಿದಾರರ ಲಸಿಕೆ ಸ್ಥಿತಿಗತಿ ತಿಳಿಯರಿ’’ ಅಥವಾ ಕೆವೈಸಿ-ವಿಎಸ್ ಎಂಬ ಹೊಸ ಎಪಿಐ ಅನ್ನು ಅಭಿವೃದ್ಧಿಪಡಿಸಿದೆ. ಈ ಎಪಿಐ ಬಳಕೆಗೆ ಸಾರ್ವಜನಿಕರು ಆತ/ಆಕೆಯ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಬೇಕಾಗುತ್ತದೆ. ಆದ್ದರಿಂದ ಅವರು ಒಂದು ಒಟಿಪಿ ಪಡೆಯುತ್ತಾರೆ ಅದನ್ನು ನಮೂದಿಸಬೇಕು. ಅದಕ್ಕೆ ಪ್ರತಿಯಾಗಿ ಕೋವಿನ್, ಪರಿಶೀಲಿಸುವ ಸಂಸ್ಥೆಗೆ ವ್ಯಕ್ತಿಯ ಲಸಿಕೆಯ ಸ್ಥಿತಿಗತಿಯ ವಿವರವನ್ನು ಒದಗಿಸುತ್ತದೆ, ಅದು ಈ ಕೆಳಗಿನಂತಿರಲಿದೆ.

0 – ವ್ಯಕ್ತಿ ಲಸಿಕೆ ಹಾಕಿಸಿಕೊಂಡಿಲ್ಲ

1 – ವ್ಯಕ್ತಿ ಭಾಗಶಃ ಲಸಿಕೆ ಪಡೆದಿದ್ದಾರೆ.

2 – ವ್ಯಕ್ತಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ.

ಈ ಪ್ರತಿಕ್ರಿಯೆ ಡಿಜಿಟಲ್ ಸಹಿ ಹೊಂದಿರುತ್ತದೆ ಮತ್ತು ಅದನ್ನು ತಕ್ಷಣವೇ ಪರಿಶೀಲಿಸುವ ಸಂಸ್ಥೆಯ ಜೊತೆ ಹಂಚಿಕೊಳ್ಳಬಹುದು. ನಿಜ ಜೀವನದ ಉದಾಹರಣೆ ತೆಗೆದುಕೊಳ್ಳುವುದಾದರೆ, ರೈಲ್ವೆ ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಟಿಕೆಟ್ ಖರೀದಿಗೆ ವ್ಯಕ್ತಿ ಅಗತ್ಯ ವಿವರಗಳನ್ನು ಕಡ್ಡಾಯವಾಗಿ ಒದಗಿಸಲೇಬೇಕಾಗಿರುತ್ತದೆ ಮತ್ತು ಅಗತ್ಯಬಿದ್ದರೆ ವ್ಯಕ್ತಿಯ ಸಮ್ಮತಿಯೊಂದಿಗೆ ಅದೇ ವಹಿವಾಟಿನಲ್ಲಿ ಸಂಸ್ಥೆ ಲಸಿಕೆ ನೀಡಿಕೆಯ ಸ್ಥಿತಿಗತಿಯನ್ನು ಪಡೆದುಕೊಳ್ಳಬಹುದು.

ಕೆವೈಸಿ-ವಿಎಸ್ ಅಂತಹ ಬಳಕೆಯ ಎಲ್ಲ ಸಂದರ್ಭಗಳು ಮತ್ತು ಹೆಚ್ಚಿನ ಕೆಲಸವನ್ನು ಸುಲಭಗೊಳಿಸುತ್ತದೆ. ಇದು ಸಮ್ಮತಿ ಆಧರಿತ ಮತ್ತು ಗೋಪ್ಯತೆ ಸಂರಕ್ಷಣೆ ಎರಡೂ ಅಂಶಗಳನ್ನು ಹೊಂದಿದೆ. ಕೋವಿನ್ ಟೀಂ ಎಪಿಐನ ವೆಬ್ ಪುಟವನ್ನು ಸಿದ್ಧಪಡಿಸಿದೆ, ಅದು ಯಾವುದೇ ವ್ಯವಸ್ಥೆಯೊಂದಿಗೆ ಸಂಯೋಜಿಸಬಹುದಾಗಿದೆ. ಇದರಿಂದಾಗಿ ಅತ್ಯಲ್ಪ ಸಮಯದಲ್ಲಿ ಯಾವುದೇ ವ್ಯವಸ್ಥೆ ಜೊತೆ ಸುಲಭವಾಗಿ ಸಂಯೋಜಿಸಲು ಅವಕಾಶವಿದೆ.

ಅಲ್ಲದೆ, ಇಲ್ಲಿ ಸೂಚಿಸಲಾದ ಬಳಕೆಯ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಸೇವಾ ಪೂರೈಕೆದಾರರು, ಖಾಸಗಿ ಅಥವಾ ಸಾರ್ವಜನಿಕರು, ಮನವಿ ಮಾಡಿದ ಸೇವೆಯನ್ನು ನೀಡಲು ವ್ಯಕ್ತಿಯ ಲಸಿಕೆ ಪಡೆದಿರುವಿಕೆಯ ಸ್ಥಿತಿಗತಿ ಪರಿಶೀಲಿಸುವುದು ಅಗತ್ಯವೆನಿಸಿದರೆ ಅವರು ಈ ವಿಧಾನವನ್ನು ಬಳಸಿಕೊಳ್ಳಬಹುದು.

***



(Release ID: 1753917) Visitor Counter : 300