ಹಣಕಾಸು ಸಚಿವಾಲಯ
azadi ka amrit mahotsav

17 ರಾಜ್ಯಗಳಿಗೆ 9,871 ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ


ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟಾರೆ 59,226 ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ

Posted On: 09 SEP 2021 2:08PM by PIB Bengaluru

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಗುರುವಾರ ಕೋವಿಡ್ ನಂತರದ 9,871.00 ಕೋಟಿ ರೂ 6 ನೇ ಮಾಸಿಕ ಕಂತಿನ ಆದಾಯ ಕೊರತೆ ಅನುದಾನ[ಪಿ.ಡಿ.ಆರ್.ಡಿ]ವನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆ ಮೂಲಕ ರಾಜ್ಯಗಳಿಗೆ ಈತನಕ ಒಟ್ಟಾರೆ 59,226.00 ಕೋಟಿ ರೂಪಾಯಿ ಕೋವಿಡ್ ನಂತರ ಆದಾಯ ಕೊರತೆ ಅನುದಾನ [ಪಿ.ಡಿ.ಆರ್.ಡಿ]ವನ್ನು ಬಿಡುಗಡೆ ಮಾಡಿದಂತಾಗಿದೆ.

2021 – 22 ನೇ ಸಾಲಿನಲ್ಲಿ ರಾಜ್ಯವಾರು ಈ ತಿಂಗಳು ಮತ್ತು ಒಟ್ಟಾರೆ ಬಿಡುಗಡೆಯಾಗಿರುವ ಆದಾಯ ಕೊರತೆ ಅನುದಾನದ ಮಾಹಿತಿ ಅನುಬಂಧದಲ್ಲಿದೆ. ಸಂವಿಧಾನದ 275 ನೇ ವಿಧಿ ಅಡಿಯಲ್ಲಿ ಕೋವಿಡ್ ನಂತರದ ಆದಾಯ ಕೊರತೆ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಕೋವಿಡ್ ನಂತರದಲ್ಲಿ ರಾಜ್ಯಗಳಿಗೆ ಆದಾಯ ಲೆಕ್ಕದಲ್ಲಿ ಉಂಟಾಗಿರುವ ಕೊರತೆಯನ್ನು ನೀಗಿಸಲು ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ಮಾಸಿಕ ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. 2021 – 22 ರ ಸಾಲಿನಲ್ಲಿ ಆಯೋಗ 17 ರಾಜ್ಯಗಳಿಗೆ ಅನುದಾನ ಬಿಡುಗಡೆಗೆ ಶಿಫಾರಸ್ಸು ಮಾಡಿದೆ.

ಅನುದಾನ ಪಡೆಯಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗ ನಿರ್ಧರಿಸುತ್ತದೆ ಮತ್ತು 2021 – 22 ನೇ ಸಾಲಿನಲ್ಲಿ ಆದಾಯ ಮತ್ತು ವೆಚ್ಚದ ಮೌಲ್ಯಮಾಪನ ಮಾಡಿ ಇದರ ಅಂತರದ ಆಧಾರದ ಮೇಲೆ ನೆರವು ಬಿಡುಗಡೆ ಮಾಡಲಾಗಿದೆ.

ಹದಿನೈದನೇ ಹಣಕಾಸು ಆಯೋಗ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ಕೋವಿಡ್ ನಂತರದ ಆದಾಯ ಕೊರತೆ ಅನುದಾನವನ್ನು 2021-22 ಸಾಲಿಗೆ ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿದೆ. ಈ ಪೈಕಿ ಈವರೆಗೆ 59,226.00 ಕೋಟಿ ರೂ (50%) ಬಿಡುಗಡೆಯಾಗಿದೆ.

ಹದಿನೈದನೇ ಹಣಕಾಸು ಆಯೋಗ ಆದಾಯ ಕೊರತೆ ಅನುದಾನ [ಪಿ.ಡಿ.ಆರ್.ಡಿ] ಬಿಡುಗಡೆಗೆ ಶಿಫಾರಸ್ಸು ಮಾಡಿರುವ ರಾಜ್ಯಗಳೆಂದರೆ: ಆಂಧ್ರಪ್ರದೇಶ, ಅಸ್ಸಾಂ, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.

ಕೋವಿಡ್ ನಂತರದ ಆದಾಯ ಕೊರತೆ ಅನುದಾನದ ರಾಜ್ಯವಾರು ಮಾಹಿತಿ

ಕ್ರಮ ಸಂಖ್ಯೆ

ರಾಜ್ಯಗಳ ಹೆಸರು

2021 ಸೆಪ್ಟೆಂಬರ್ ತಿಂಗಳಲ್ಲಿ

ಬಿಡುಗಡೆಯಾದ ಮೊತ್ತ

(6ನೇ ಕಂತು)

(ಕೋಟಿಗಳಲ್ಲಿ)

2021-22 ರಲ್ಲಿ ಬಿಡುಗಡೆಯಾದ

ಒಟ್ಟು ಮೊತ್ತ

(ಕೋಟಿಗಳಲ್ಲಿ)

1

ಆಂಧ್ರಪ್ರದೇಶ

1438.08

8628.50

2

ಅಸ್ಸಾಂ

531.33

3188.00

3

ಹರ್ಯಾಣ

11.00

66.00

4

ಹಿಮಾಚಲ ಪ್ರದೇಶ

854.08

5124.50

5

ಕರ್ನಾಟಕ

135.92

815.50

6

ಕೇರಳ

1657.58

9945.50

7

ಮಣಿಪುರ

210.33

1262.00

8

ಮೇಘಾಲಯ

106.58

639.50

9

ಮಿಜೋರಾಂ

149.17

895.00

10

ನಾಗಾಲ್ಯಾಂಡ್

379.75

2278.50

11

ಪಂಜಾಬ್

840.08

5040.50

12

ರಾಜಸ್ಥಾನ

823.17

4939.00

13

ಸಿಕ್ಕಿಂ

56.50

339.00

14

ತಮಿಳು ನಾಡು

183.67

1102.00

15

ತ್ರಿಪುರ

378.83

2273.00

16

ಉತ್ತರಾಖಂಡ

647.67

3886.00

17

ಪಶ್ಚಿಮ ಬಂಗಾಳ

1467.25

8803.50

ಒಟ್ಟು

9,871.00

59,226.00

***


(Release ID: 1753515) Visitor Counter : 317