ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಗೆ 75 ಕೋಟಿ ರೂ. ದೇಣಿಗೆ ನೀಡಿದ ಕೋಲ್ ಇಂಡಿಯಾ ಲಿಮಿಟೆಡ್


ಬೆಂಗಳೂರು, ಭೋಪಾಲ್ ನ ಸಾಯ್ ಅಕಾಡಮಿ ಮತ್ತು ಎಲ್.ಎನ್.ಐ.ಪಿ.ಇ. ಗ್ವಾಲಿಯರ್ ನಲ್ಲಿ ಕ್ರೀಡಾಪಟುಗಳಿಗಾಗಿ ಹಾಸ್ಟೆಲ್ ನಿರ್ಮಾಣ: ಅನುರಾಗ್ ಸಿಂಗ್ ಠಾಕೂರ್

ಭಾರತವನ್ನು ಒಂದು ಕ್ರೀಡಾ ಶಕ್ತಿಕೇಂದ್ರವಾಗಿ ಮಾಡಲು ಪಿ.ಎಸ್.ಯು.ಗಳು, ಸಾಂಸ್ಥಿಕ ಮತ್ತು ವ್ಯಕ್ತಿಗಳಂತಹ ಬಾಧ್ಯಸ್ಥರು ಎನ್.ಎಸ್.ಡಿ.ಎಫ್.ಗೆ ಕೊಡುಗೆ ನೀಡಿ ಪಾಲುದಾರರಾಗಬೇಕು: ಅನುರಾಗ್ ಠಾಕೂರ್

Posted On: 07 SEP 2021 1:54PM by PIB Bengaluru

ಮುಖ್ಯಾಂಶಗಳು:

  • ಸಾಯ್ ಮತ್ತು ಕೋಲ್ ಇಂಡಿಯಾ ಜಂಟಿಯಾಗಿ ಕ್ರೀಡಾ ಅಕಾಡಮಿ ಸ್ಥಾಪಿಸಲಿವೆ: ಅನುರಾಗ್ ಸಿಂಗ್ ಠಾಕೂರ್
  • ಸಿಐಎಲ್ ಒದಗಿಸಿರುವ ನಿಧಿಯನ್ನು ನ್ಯಾಯೋಚಿತವಾಗಿ ಬಳಸಲಾಗುವುದು ಮತ್ತು ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು: ಶ್ರೀ ನಿಸಿತ್ ಪ್ರಾಮಾಣಿಕ್

ಎನ್.ಎಸ್.ಡಿ.ಎಫ್. ಗೆ ಸಿ.ಎಸ್.ಆರ್. ಭಾಗವಾಗಿ ಸಿ..ಎಲ್. 75 ಕೋಟಿ ರೂ. ನೀಡುತ್ತಿದ್ದು, ಸಂಬಂಧ ನವ ದೆಹಲಿಯಲ್ಲಿಂದು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ಸಮ್ಮುಖದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕ್ರೀಡಾ ಇಲಾಖೆಯ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (ಎನ್.ಎಸ್.ಡಿ.ಎಫ್.) ಕೋಲ್ ಇಂಡಿಯಾ ಲಿಮಿಟೆಡ್ ನೊಂದಿಗೆ ಎಂ..ಯು.ಗೆ ಅಂಕಿತ ಹಾಕಲಾಯಿತು. ವೈ..ಎಸ್. ರಾಜ್ಯ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್, ಕ್ರೀಡಾ ಇಲಾಖೆಯ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ಅಧಿಕಾರಿಗಳು ಸಂದರ್ಭದಲ್ಲಿ ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image001RDXD.jpg

ವೇಳೆ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್, ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ಕ್ರೀಡಾಪಟುಗಳು ಅಭೂತಪೂರ್ವ ಪ್ರದರ್ಶನ ನೀಡಿದ ಸಂದರ್ಭದಲ್ಲಿ ಎನ್.ಎಸ್.ಡಿ.ಎಫ್.ಗೆ ಕೋಲ್ ಇಂಡಿಯಾದ ಅಮೂಲ್ಯ ಕೊಡುಗೆ ಬಂದಿದೆ ಎಂದು ತಿಳಿಸಿದರು. ಪ್ಯಾರಾಲಿಂಪಿಕ್ಸ್ ನಲ್ಲಿ ಹಿಂದೆಂದಿಗಿಂತ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಕ್ರೀಡಾಪಟುಗಳು ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ 19 ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಕೋಲ್ ಇಂಡಿಯಾ ಲಿಮಿಟೆಡ್ ಉಪಕ್ರಮಕ್ಕೆ ಮೆಚ್ಚುಗೆ ಸೂಚಿಸಿದ ಸಚಿವರು, ಕಲ್ಲಿದ್ದಲು ಗಣಿಗಾರಿಕೆಯಿಂದ ಉತ್ಪತ್ತಿಯಾದ ಒಂದು ಭಾಗದ ನಿಧಿಯಿಂದ ನಾವು ಕ್ರೀಡಾಪಟುಗಳಲ್ಲಿವಜ್ರವನ್ನು ಹುಡುಕಿ ಪೋಡಿಯಂ ಹಂತಕ್ಕೆ ಕಳುಹಿಸುತ್ತೇವೆ ಎಂದು ಹೇಳಿದರು.

https://static.pib.gov.in/WriteReadData/userfiles/image/image002NR9Y.jpg

ಹೆಚ್ಚಿನ ವಿವರ ನೀಡಿದ ಶ್ರೀ ಅನುರಾಗ್ ಠಾಕೂರ್, ನಿಧಿಯನ್ನು ಸಾಮಾನ್ಯವಾಗಿ ಕ್ರೀಡೆಯ ಉತ್ತೇಜನಕ್ಕೆ ಮತ್ತು ನಿರ್ದಿಷ್ಟ ಕ್ರೀಡೆಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಔನ್ನತ್ಯ ಸಾಧಿಸಲು ಬಳಸಲಾಗುವುದು ಎಂದರು. ನಿಧಿಯನ್ನು ಆಧುನೀಕರಣ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನ್ಯಾಯಸಮ್ಮತವಾಗಿ ಬಳಸಲಾಗುವುದು. ಹಿಂದಿನ ವರ್ಷಗಳಲ್ಲಿ, ಹಲವಾರು ಪಿ.ಎಸ್.ಯು.ಗಳು ಎನ್.ಎಸ್.ಡಿ.ಎಫ್.ಗೆ ಉದಾರವಾಗಿ ಕೊಡುಗೆ ನೀಡಿವೆ. "ಎಸ್... ಮತ್ತು ಎಲ್.ಎನ್..ಪಿ.. ಅಡಿಯಲ್ಲಿನ ಕ್ರೀಡಾ ಅಕಾಡೆಮಿಗಳಿಗೆ ಕ್ರೀಡಾಪಟುಗಳ ಅನುಕೂಲಕ್ಕಾಗಿ ಹೆಚ್ಚಿನ ಹಾಸ್ಟೆಲ್‌ ಗಳ ಅಗತ್ಯವಿದೆ. ಕೋಲ್ ಇಂಡಿಯಾ ಲಿಮಿಟೆಡ್ ಕ್ರೀಡಾಪಟುಗಳಿಗೆ ಮೂರು ಹಾಸ್ಟೆಲ್‌ ಗಳ ನಿರ್ಮಾಣಕ್ಕೆ 75 ಕೋಟಿ ರೂ. ನಿಧಿಯನ್ನು ಕೊಡುಗೆಯಾಗಿ ನೀಡಿದ್ದು, ಇದು ತರಬೇತಿಯನ್ನು ಸುಗಮಗೊಳಿಸುತ್ತದೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸುತ್ತದೆ ಎಂದು ಶ್ರೀ ಠಾಕೂರ್ ಹೇಳಿದರು.

ಬೆಂಗಳೂರು, ಭೋಫಾಲ್ ಎಸ್... ಅಕಾಡಮಿಯಲ್ಲಿ ಮತ್ತು ಗ್ವಾಲಿಯರ್ ಎಲ್.ಎನ್..ಪಿ..ಯಲ್ಲಿ ಮೂರು ಕ್ರೀಡಾ ಹಾಸ್ಟೆಲ್ ಗಳ ನಿರ್ಮಾಣಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವುದು, ಕ್ರೀಡಾ ಇಲಾಖೆ/ಎನ್.ಎಸ್.ಡಿ.ಎಫ್ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ನಡುವಿನ ಬಾಂಧವ್ಯವನ್ನು ಬಲಪಡಿಸಲಿದೆ ಎಂದು ಹೇಳಿದರು. ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ಜಂಟಿಯಾಗಿ ಕ್ರೀಡಾ ಅಕಾಡಮಿಯನ್ನು ಸ್ಥಾಪಿಸಬೇಕು ಎಂದೂ ಸಚಿವರು ಪ್ರಸ್ತಾಪಿಸಿದರು.

https://static.pib.gov.in/WriteReadData/userfiles/image/image00383ZY.jpg

ಸಾಂಸ್ಥಿಕ ಸಾಮಾಜಿಕ ಬದ್ಧತೆಯ ಭಾಗವಾಗಿ ಎಲ್ಲ ಪಿ.ಎಸ್.ಯು.ಗಳು, ಸಾಂಸ್ಥಿಕ ಮತ್ತು ವ್ಯಕ್ತಿಗಳಿಗೆ ಮುಂದೆ ಬಂದು ಉದಾರವಾಗಿ ಎನ್.ಎಸ್.ಡಿ.ಎಫ್.ಗೆ ಕೊಡುಗೆ ನೀಡುವಂತೆ ಮತ್ತು ಭಾರತವನ್ನು ಕ್ರೀಡಾ ಶಕ್ತಿ ಕೇಂದ್ರವಾಗಿ ಮಾಡುವ ಭಾರತದ ಪಯಣದಲ್ಲಿ ಬಾಧ್ಯಸ್ಥರಾಗುವಂತೆ ಶ್ರೀ ಠಾಕೂರ್ ಮನವಿ ಮಾಡಿದರು.

ಶ್ರೀ ನಿಶಿತ್ ಪ್ರಾಮಾಣಿಕ್ ಮಾತನಾಡಿ, ಕೋಲ್ ಇಂಡಿಯಾ ಲಿಮಿಟೆಡ್ ಯಾವಾಗಲೂ ಭಾರತದಲ್ಲಿ ಸ್ಪರ್ಧಾತ್ಮಕ ಕ್ರೀಡೆಗೆ ಬೆಂಬಲ ನೀಡುತ್ತಾ ಬಂದಿದೆ ಎಂದರು. ಸಿಐಎಲ್ ಒದಗಿಸಿರುವ ನಿಧಿಯನ್ನು ನ್ಯಾಯಸಮ್ಮತವಾಗಿ  ಬಳಸುವ ಭರವಸೆ ನೀಡಿದ ಅವರು, ಕಾಲಮಿತಿಯ ಆಧಾರದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು

https://static.pib.gov.in/WriteReadData/userfiles/image/image004GT8U.jpg

ಕ್ರೀಡಾ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್, ಮೂರು ಅಕಾಡಮಿಗಳಲ್ಲಿ ಹಾಸ್ಟೆಲ್ ಗಳ ನಿರ್ಮಾಣದಿಂದಾಗಿ ರಾಷ್ಟ್ರೀಯ ತರಬೇತಿ ಶಿಬಿರಗಳನ್ನು ಮೂರು ಕಡೆಗಳಲ್ಲಿ ಆಯೋಜಿಸಲು ಸಾಧ್ಯವಾಗುತ್ತದೆ ಎಂದರು. ಎನ್.ಎಸ್.ಡಿ.ಎಫ್.ಗೆ ಭವಿಷ್ಯದಲ್ಲೂ ತನ್ನ ಅಮೂಲ್ಯ ಬೆಂಬಲ ಮುಂದುವರಿಸುವಂತೆ ಮನವಿ ಮಾಡಿದರು.

ಕಲ್ಲಿದ್ದಲು ಕಾರ್ಯದರ್ಶಿ ಶ್ರೀ ಅನಿಲ್ ಜೈನ್ ಮಾತನಾಡಿ, ದೇಶದ ಕ್ರೀಡಾ ಅಭಿವೃದ್ದಿಗೆ ಕೊಡುಗೆ ನೀಡುತ್ತಿರುವುದು ಕೋಲ್ ಇಂಡಿಯಾ ಗೆ ಹೆಮ್ಮೆಯ ವಿಚಾರವಾಗಿದೆ ಎಂದರು. ಪ್ರತಿಭಾವಂತ ಕ್ರೀಡಾಪಟುಗಳಿಗೆ ಬೆಂಬಲ ನೀಡುವುದು ತಮ್ಮ ಕರ್ತವ್ಯವಾಗಿದೆ, ಇದು ಕೋಲ್ ಇಂಡಿಯಾದ ಬ್ರಾಂಡ್ ಇಮೇಜ್ ಗೂ ಕೊಡುಗೆ ನೀಡುತ್ತದೆ ಎಂದೂ ಅವರು ಹೇಳಿದರು

ಎನ್.ಎಸ್.ಡಿ.ಎಫ್.ಗೆ ಮುಖ್ಯವಾಗಿ ಪಿ.ಎಸ್.ಯು.ಗಳು ಮತ್ತು ಪಿ.ಎಸ್.ಬಿ.ಗಳಿಂದ ದೇಣಿಗೆ ಬರುತ್ತದೆ. 31.03.2021ರವರೆಗೆ, ಸ್ವೀಕರಿಸಲಾದ ಒಟ್ಟು ಸಿಎಸ್.ಆರ್. ಕೊಡುಗೆ 170 ಕೋಟಿ ರೂ. ಆಗಿದ್ದು, ಭಾರತ ಸರ್ಕಾರದ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 164 ಕೋಟಿ ರೂ. ಅದರ ಹೊಂದಾಣಿಕೆಯ ಪಾಲು ನೀಡಿದೆ ಎಂದರು.

ನಿಧಿಯಿಂದ ಸಚಿವಾಲಯವು ಸಂಸ್ಥೆಗಳಿಗೆ ಮೂಲಸೌಕರ್ಯಕ್ಕಾಗಿ ಮತ್ತು ಅಕಾಡೆಮಿಗಳ ಸ್ಥಾಪನೆಗೆ ನೆರವು ನೀಡುತ್ತಿದೆ, ಕ್ರೀಡಾಪಟುಗಳ ಸೂಕ್ತ ತರಬೇತಿಗಾಗಿ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌..) ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (ಟಿಒಪಿಎಸ್) ವ್ಯಾಪ್ತಿಯ ಕ್ರೀಡಾಪಟುಗಳಿಗೆ  ನೆರವು ನೀಡುತ್ತದೆ.

***



(Release ID: 1752890) Visitor Counter : 208