ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ಕ್ರೀಡಾ ಇತಿಹಾಸದಲ್ಲಿ, ಟೋಕಿಯೋ ಪ್ಯಾರಾಲಿಂಪಿಕ್ಸ್ ಗೆ ಸದಾ ವಿಶೇಷ ಸ್ಥಾನ ಇರುತ್ತದೆ: ಪ್ರಧಾನಮಂತ್ರಿ

ಭಾರತ ಗೆದ್ದ ಐತಿಹಾಸಿಕ ಸಂಖ್ಯೆಯ ಪದಕಗಳು ನಮ್ಮ ಹೃದಯವನ್ನು ಸಂತೋಷ ಭರಿತಗೊಳಿಸಿವೆ: ಪ್ರಧಾನಮಂತ್ರಿ

ಜಪಾನ್ ಸರ್ಕಾರ ಮತ್ತು ಜನರ ಅಸಾಧಾರಣ ಆತಿಥ್ಯಕ್ಕಾಗಿ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 05 SEP 2021 4:38PM by PIB Bengaluru

ಭಾರತದ ಕ್ರೀಡಾ ಇತಿಹಾಸದಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್ ಗೆ ಸದಾ ವಿಶೇಷ ಸ್ಥಾನ ಇರುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ನಮ್ಮ ತಂಡದಲ್ಲಿದ್ದ ಎಲ್ಲ ಸದಸ್ಯರೂ ಚಾಂಪಿಯನ್ನರಷ್ಟೇ ಅಲ್ಲ, ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಅವರು ಹೇಳಿದ್ದಾರೆ.

ನಮ್ಮ ಅಥ್ಲೀಟ್ ಗಳ ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಕುಟುಂಬದವರು ಕ್ರೀಡಾಪಟುಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿರುವುದಕ್ಕೆ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಪಾನ್‌ ನ ಅದರಲ್ಲೂ ವಿಶೇಷವಾಗಿ ಟೋಕಿಯೊ ಜನತೆಗೆ ಮತ್ತು ಜಪಾನಿನ ಸರ್ಕಾರಕ್ಕೆ ಅವರ ಅಸಾಧಾರಣ ಆತಿಥ್ಯ, ಈ ಒಲಿಂಪಿಕ್ ಮೂಲಕ ಅತ್ಯಂತ ಅಗತ್ಯವಾಗಿದ್ದ ಸಂಯಮ ಮತ್ತು ಒಮ್ಮತದ ಸಂದೇಶವನ್ನು ಸಾರಿದ್ದಕ್ಕಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.  

ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;

"ಭಾರತೀಯ ಕ್ರೀಡಾ ಇತಿಹಾಸದಲ್ಲಿ, ಟೋಕಿಯೋ #ಪ್ಯಾರಾಲಿಂಪಿಕ್ಸ್ ಗೆ ಸದಾ ವಿಶೇಷ ಸ್ಥಾನವಿರುತ್ತದೆ. ಈ ಆಟಗಳು ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುತ್ತದೆ ಮತ್ತು ಕ್ರೀಡೆಗಳನ್ನು ಮುಂದುವರಿಸಲು ತಲೆಮಾರುಗಳ ಕ್ರೀಡಾಪಟುಗಳನ್ನು ಪ್ರೇರೇಪಿಸುತ್ತದೆ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರೂ ಚಾಂಪಿಯನ್ನರು ಮತ್ತು ಸ್ಫೂರ್ತಿಯ ಸೆಲೆಯಾಗಿದ್ದರು.

ಭಾರತ ಗೆದ್ದ ಐತಿಹಾಸಿಕ ಸಂಖ್ಯೆಯ ಪದಕಗಳು ನಮ್ಮ ಹೃದಯವನ್ನು ಆನಂದಭರಿತಗೊಳಿಸಿದೆ. ನಾನು ನಮ್ಮ ಅಥ್ಲೀಟ್ ಗಳ ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಕುಟುಂಬದವರು ಕ್ರೀಡಾಪಟುಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ಯಶಸ್ಸಿನ ಮೇಲೆ ಕ್ರೀಡೆಯಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವ ವಿಶ್ವಾಸ ಹೊಂದಿದ್ದೇವೆ.

ಈ ಹಿಂದೆ ನಾನು ಹೇಳಿರುವಂತೆ, ಜಪಾನ್ ನ ಅದರಲ್ಲೂ ಟೋಕಿಯೋದ ಜನರು ಮತ್ತು ಜಪಾನ್ ಸರ್ಕಾರಕ್ಕೆ ಅವರ ಅಸಾಧಾರಣ ಆತಿಥ್ಯಕ್ಕಾಗಿ, ಈ ಒಲಿಂಪಿಕ್ಸ್ ಮೂಲಕ ಅತ್ಯಂತ ಅಗತ್ಯವಾಗಿದ್ದ ಸಂಯಮ ಮತ್ತು ಒಮ್ಮತದ ಸಂದೇಶವನ್ನು ಪಸರಿಸಿದ್ದಕ್ಕಾಗಿ ಪ್ರಶಂಸಿಸಲೇಬೇಕು.." ಎಂದು ತಿಳಿಸಿದ್ದಾರೆ.

***(Release ID: 1752347) Visitor Counter : 78