ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ದೇಶಾದ್ಯಂತದ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ


ಮಹಿಳೆಯರು ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವಿರತ ಪ್ರಯತ್ನಿಸುತ್ತಿರುವ ಅಂಗನವಾಡಿ ಕಾರ್ಯಕರ್ತರಿಗೆ  ಧನ್ಯವಾದ ಅರ್ಪಿಸಿದ ಡಬ್ಲ್ಯುಸಿಡಿ ಸಚಿವರು, ಪೋಷಣ್ 2.0ಕ್ಕೆ ಸಲಹೆಗಳ ಕೋರಿಕೆ

'ಪೋಷಣ ಕುಟೀರಗಳನ್ನು' ಅದರಲ್ಲೂ ವಿಶೇಷವಾಗಿ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸ್ಥಾಪಿಸಲು ಎಲ್ಲಾ ಎಡಬ್ಲ್ಯೂಡಬ್ಲ್ಯೂಗಳಿಗೆ ಆಗ್ರಹಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

Posted On: 03 SEP 2021 6:00PM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರಿಂದು 'ಸ್ವಾತಂತ್ರ್ಯದ ಅಮೃತ ಮಹೋತ್ಸವ' ಅಡಿಯಲ್ಲಿ ಸೆಪ್ಟೆಂಬರ್ ಮಾಸಾದ್ಯಂತ' ಪೋಷಣ್  ಮಾಸ' ಆಚರಣೆಯ ಅಂಗವಾಗಿ ದೇಶದಾದ್ಯಂತದ ಅಂಗನವಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮಹಿಳೆಯರು ಮತ್ತು ಮಕ್ಕಳ ಒಟ್ಟಾರೆ ಶ್ರೇಯೋಭಿವೃದ್ಧಿ ಖಾತ್ರಿಪಡಿಸಿಕೊಳ್ಳಲು ದೃಢನಿಶ್ಚಯ ಮತ್ತು ಅವಿಶ್ರಾಂತ ಪ್ರಯತ್ನಕ್ಕೆ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರಿಗೆ ಶ್ರೀಮತಿ ಇರಾನಿ ಅವರು ಮೊದಲಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಪೋಷಣ್ 2.0ರಲ್ಲಿ ಅಳವಡಿಸಿಕೊಳ್ಳಲು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಕಳುಹಿಸುವಂತೆ ಆಗ್ರಹಿಸಿದರು.

ಪೋಷಣ ಮಾಸದ ಆಚರಣೆಯ ಸಮಯದಲ್ಲಿ, ವಿಶೇಷವಾಗಿ ಭಾರತದ ಎಲ್ಲಾ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ 'ಪೋಷಣ ಕುಟೀರಗಳನ್ನು' (ಪೋಷಣ್ ವಾಟಿಕಾಗಳು) ಸ್ಥಾಪಿಸುವಂತೆ ಕೇಂದ್ರ ಡಬ್ಲ್ಯುಸಿಡಿ ಸಚಿವರು ಎಲ್ಲಾ ಎಡಬ್ಲ್ಯುಡಬ್ಲ್ಯೂಗಳನ್ನು ಉತ್ತೇಜಿಸಿದರು. ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವಿನ ಭರವಸೆಯನ್ನು ಶ್ರೀಮತಿ ಇರಾನಿ ನೀಡಿದರು ಮತ್ತು ಪೋಷಣ್ ಕುಟೀರಗಳಿಗೆ ಹೊಸ ಚೈತನ್ಯ ನೀಡಲು ಅಧಿಕಾರಿಗಳೊಂದಿಗೆ ಒಗ್ಗೂಡಿ ಶ್ರಮಿಸುವಂತೆ ಎಡಬ್ಲ್ಯೂಡಬ್ಲ್ಯೂಗಳನ್ನು ಆಗ್ರಹಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನ ಮತ್ತು ಧ್ಯೇಯವು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯಕರ ಮತ್ತು ಸಮೃದ್ಧ ರಾಷ್ಟ್ರದ ಖಾತ್ರಿಪಡಿಸುತ್ತದೆ ಮತ್ತು ಅದಕ್ಕಾಗಿ ಪ್ರಧಾನಮಂತ್ರಿಯವರು ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಬೆಂಬಲವನ್ನು ಒದಗಿಸುವಂತೆ ನಿರ್ದೇಶಿಸಿದ್ದಾರೆ ಎಂದು ಕೇಂದ್ರ ಸಚಿವರು ತಿಳಿಸಿದರು. ಶ್ರೀಮತಿ ಇರಾನಿ ಅವರು ಪೋಷಣ್ 2.0 ಮೂಲಕ, ಅಂಗನವಾಡಿ ಕೇಂದ್ರಗಳನ್ನು ಉತ್ತಮ ಮೂಲಸೌಕರ್ಯಗಳ ಮೂಲಕ ಹೆಚ್ಚು ಸಮರ್ಥವಾಗಿ ಮಾಡಲಾಗುವುದು ಮತ್ತು ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.

ಎಲ್ಲ ಎಡಬ್ಲ್ಯುಡಬ್ಲ್ಯುಗಳಿಗೆ ವಿಶೇಷ ವಿಮಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ ಶ್ರೀಮತಿ ಇರಾನಿ, ವಿಮಾ ವ್ಯಾಪ್ತಿ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರಗಳಿಗೆ ವಿವರ ಒದಗಿಸುವಂತೆ ಕೇಳಲಾಗಿದೆ ಎಂದರು. ಕೊನೆಯಲ್ಲಿ ಕೇಂದ್ರ ಸಚಿವರು, ಪೋಷಣ ಮಾಸದಲ್ಲಿ ಕೈಗೊಳ್ಳುವ ಎಲ್ಲಾ ಚಟುವಟಿಕೆಗಳ ಮೂಲಕ ಎಲ್ಲಾ ಎಡಬ್ಲ್ಯೂಡಬ್ಲ್ಯೂಗಳಿಗೆ ಕೃತಜ್ಞತೆ ಸಲ್ಲಿಸಲು ಒಂದು ಅವಕಾಶ ಲಭಿಸುತ್ತದೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಅವಿಶ್ರಾಂತ ಪ್ರಯತ್ನಗಳಿಗೆ ಕೇವಲ ಒಂದು ತಿಂಗಳು ಮಾತ್ರವಲ್ಲ, ಇಡೀ ವರ್ಷವೂ ಒಂದು ಗೌರವಪೂರ್ವಕವಾಗಿರಬೇಕು ಎಂದು ಹೇಳಿದರು.

***



(Release ID: 1751805) Visitor Counter : 217