ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಮೊದಲ ಬಾರಿಗೆ ದೇಶಾದ್ಯಂತ ಕ್ರೀಡೆ ಮತ್ತು ಫಿಟ್ನೆಸ್ ಕುರಿತ ರಸಪ್ರಶ್ನೆ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು


ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮವು  ವಿದ್ಯಾರ್ಥಿಗಳನ್ನು ಅದರ ವಿಜೇತರನ್ನಾಗಿ ಮಾಡುವುದಲ್ಲದೆ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸಲು ಉತ್ತೇಜನವನ್ನು ನೀಡುತ್ತದೆ: ಶ್ರೀ ಅನುರಾಗ್ ಠಾಕೂರ್

ವಿದ್ಯಾರ್ಥಿಗಳು ಫಿಟ್ನೆಸ್ ಅನ್ನು ಜೀವನದ ಭಾಗವಾಗಿ ಅಳವಡಿಸಿಕೊಳ್ಳಲು ಹೊಸ ಶಿಕ್ಷಣ ನೀತಿ (ಎನ್ಇಪಿ) - 2020  ಕ್ರೀಡೆ ಸಂಯೋಜಿತ ಕಲಿಕೆಗೆ ವಿಶೇಷ ಗಮನವನ್ನು ನೀಡುತ್ತದೆ: ಶ್ರೀ ಧರ್ಮೇಂದ್ರ ಪ್ರಧಾನ್

Posted On: 01 SEP 2021 7:18PM by PIB Bengaluru

ಮುಖ್ಯಾಂಶಗಳು:

  • ರಾಷ್ಟ್ರವ್ಯಾಪಿ ರಸಪ್ರಶ್ನೆ  ಕಾರ್ಯಕ್ರಮವು ರಾಷ್ಟ್ರೀಯ ವೇದಿಕೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತದೆ ಮತ್ತು ಶಾಲೆಗಳಿಗೆ ಒಟ್ಟು 3 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ನಗದು ಬಹುಮಾನವನ್ನು ಗೆಲ್ಲುವ ಅವಕಾಶವನ್ನು ನೀಡುತ್ತದೆ
  • ಈ ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮವು ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಾಚರಣೆಯ ಕೇಂದ್ರ ಸರ್ಕಾರದ 'ಆಜಾದಿ ಕಾ ಅಮೃತ್ ಮಹೋತ್ಸವ' ಉಪಕ್ರಮದ ಭಾಗವಾಗಿದೆ.
  • ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ ಮತ್ತು ಪಿ ವಿ ಸಿಂಧು ಈ ಸ್ಪರ್ಧೆಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದರು

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ನವದೆಹಲಿಯಲ್ಲಿ ಫಿಟ್ನೆಸ್ ಮತ್ತು ಕ್ರೀಡೆಗಳ ಮೊದಲ ರಸ ಪ್ರಶ್ನೆ ಕಾರ್ಯಕ್ರಮವಾಗಿರುವ  ಫಿಟ್ ಇಂಡಿಯಾ ರಸಪ್ರಶ್ನೆಯನ್ನು ಪ್ರಾರಂಭಿಸಿದರು. ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀ ನಿಸಿತ್ ಪ್ರಾಮಾಣಿಕ್ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ ಮತ್ತು ಪಿ ವಿ ಸಿಂಧು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಉಪಕ್ರಮವನ್ನು ಆರಂಭಿಸಲು ಕೆಲವು ಶಾಲಾ ವಿದ್ಯಾರ್ಥಿಗಳು ಕೂಡ ಸ್ಥಳದಲ್ಲೇ ನಡೆಸಿದ ರಸಪ್ರಶ್ನೆಯಲ್ಲಿ ಭಾಗವಹಿಸಿದರು.

ರಾಷ್ಟ್ರವ್ಯಾಪಿ ರಸಪ್ರಶ್ನೆ ಕಾರ್ಯಕ್ರಮವು ಶಾಲೆಗೆ ಹೋಗುವ ಮಕ್ಕಳಲ್ಲಿ ಫಿಟ್ನೆಸ್ ಮತ್ತು ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ, ಅದೇ ಸಮಯದಲ್ಲಿ ಅವರಿಗೆ ರಾಷ್ಟ್ರೀಯ ವೇದಿಕೆಯಲ್ಲಿ ಸ್ಪರ್ಧಿಸಲು ಅವಕಾಶ ಮತ್ತು ಅವರ ಶಾಲೆಗಳಿಗೆ ಒಟ್ಟು 3 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ನಗದು ಬಹುಮಾನವನ್ನು ಗೆಲ್ಲುವ ಅವಕಾಶವನ್ನು ನೀಡುತ್ತದೆ. ಈ ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮವು ಕೇಂದ್ರ ಸರ್ಕಾರದ 'ಆಜಾ಼ದಿ ಕಾ ಅಮೃತ್ ಮಹೋತ್ಸವ' ಉಪಕ್ರಮದ ಭಾಗವಾಗಿದ್ದು, ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಮತ್ತು ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆತರಲು ಮಾತ್ರವಲ್ಲದೆ ಅವರನ್ನು ಮಾನಸಿಕ ಕೌಶಲ್ಯ ಮತ್ತು ದೈಹಿಕ ಸಾಮರ್ಥ್ಯದ ಸ್ಪರ್ಧೆಯಲ್ಲಿ ತೊಡಗಿಸಲು ವಿನ್ಯಾಸಗೊಳಿಸಲಾಗಿದೆ.

ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮದ ಕುರಿತು ಮಾತನಾಡಿದ ಶ್ರೀ ಠಾಕೂರ್, "ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ಸಾಮರ್ಥ್ಯ ಕೂಡ ಅಷ್ಟೇ ಮುಖ್ಯ. ಫಿಟ್ ಇಂಡಿಯಾ ಕ್ವಿಜ್ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಜಾಗರೂಕತೆಯನ್ನು ಮೂಡಿಸುತ್ತದೆ ಮತ್ತು ಕ್ರೀಡಾ ಜ್ಞಾನವನ್ನು ಏಕಕಾಲದಲ್ಲಿ ಹೆಚ್ಚಿಸಲು ರಸಪ್ರಶ್ನೆ ಕಾರ್ಯಕ್ರಮ ಒಂದು ಪರಿಪೂರ್ಣ ಮಾರ್ಗವಾಗಿದೆ. ಒಲಿಂಪಿಕ್ಸ್‌ನಲ್ಲಿ ನಮ್ಮ ಯಶಸ್ಸಿನೊಂದಿಗೆ ಭಾರತವು ವಿಶಾಲವಾದ ಕ್ರೀಡಾ ಇತಿಹಾಸ ಹೊಂದಿದೆ; ಶಾಲಾ ವಿದ್ಯಾರ್ಥಿಗಳನ್ನು ಚಾಂಪಿಯನ್ಗಳನ್ನಾಗಿ ಮಾಡಿ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸುವ ಗುರಿಯನ್ನು ನಾವು ತೀವ್ರಗೊಳಿಸುತ್ತೇವೆ. ನಮ್ಮ ಜೀವನದಲ್ಲಿ ಸಮಗ್ರ ಶಿಕ್ಷಣ ಮತ್ತು ಕ್ರೀಡೆಗಳ ಮಹತ್ವವನ್ನು ನರೇಂದ್ರ ಮೋದಿಯವರು ಒತ್ತಿ ಹೇಳಿದ್ದಾರೆ. ಮಕ್ಕಳೊಂದಿಗೆ ಅವರ ಮಾತುಕತೆಯು ವಿದ್ಯಾರ್ಥಿಗಳಿಗೆ ಕಲಿಯಲು ಮತ್ತು ಬೆಳೆಯಲು ಒತ್ತಡ ಮುಕ್ತ ವಾತಾವರಣವನ್ನು ನಿರ್ಮಿಸಿದೆ; ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ.”

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಫಿಟ್ನೆಸ್ ಮತ್ತು ಶಿಕ್ಷಣದ ನಡುವೆ ಬಲವಾದ ಸಂಬಂಧವಿದೆ. ಹೊಸ ಶಿಕ್ಷಣ ನೀತಿ (ಎನ್ ಇ ಪಿ) -2020 ಫಿಟ್ ಇಂಡಿಯಾ ಆಂದೋಲನದಲ್ಲಿ ಊಹಿಸಿದಂತೆ ವಿದ್ಯಾರ್ಥಿಗಳು ಫಿಟ್ನೆಸ್ ಅನ್ನು  ಜೀವನದಲ್ಲಿ ಅಳವಡಿಸಿಕೊಳ್ಳಲು ಕ್ರೀಡಾ ಸಂಯೋಜಿತ ಕಲಿಕೆಗೆ ವಿಶೇಷ ಗಮನವನ್ನು ನೀಡುತ್ತದೆ. ಶ್ರೀ ಪ್ರಧಾನ್ ಅವರು ಕೋವಿಡ್ -19 ಸಾಂಕ್ರಾಮಿಕವು ಸಾಮಾನ್ಯ ದಿನಚರಿಗಳನ್ನು ಭಾದಿಸಿದೆ ಮತ್ತು ಇದರಿಂದಾಗಿ ಫಿಟ್ ಇಂಡಿಯಾ ಚಳುವಳಿಯ ಪ್ರಾಮುಖ್ಯವು ಹಲವು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.  ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಫಿಟ್ನೆಸ್ ಮತ್ತು ಕ್ರೀಡೆಗಳ ಬಗ್ಗೆ ತಮ್ಮ ಜ್ಞಾನವನ್ನು ಪ್ರದರ್ಶಿಸಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ, ಸ್ಥಳೀಯ ಕ್ರೀಡೆಗಳು, ನಮ್ಮ ಕ್ರೀಡಾ ನಾಯಕರು ಸೇರಿದಂತೆ ಭಾರತದ ಶ್ರೀಮಂತ ಕ್ರೀಡಾ ಇತಿಹಾಸದ ಬಗ್ಗೆ ಅರಿವು ಮೂಡಿಸುತ್ತದೆ ಮತ್ತು ಎಲ್ಲರಿಗೂ ಸಾಂಪ್ರದಾಯಿಕ ಭಾರತೀಯ ಜೀವನಶೈಲಿಯ ಚಟುವಟಿಕೆಗಳು ಹೇಗೆ 'ಫಿಟ್ ಲೈಫ್' ಗೆ ಪ್ರಮುಖವಾಗಿದೆ ಎಂಬುದನ್ನು ಅವರಿಗೆ ತಿಳಿಸುತ್ತದೆ ಎಂದು ಹೇಳಿದರು.

ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಅವರ ಭಾಷಣದಲ್ಲಿ ಪ್ರತಿ ವಯಸ್ಸಿನವರೂ ಫಿಟ್ ಇಂಡಿಯಾ ಮಿಷನ್ನಲ್ಲಿ ಭಾಗವಹಿಸಿದ್ದಾರೆ ಮತ್ತು ಎಲ್ಲಾ ಶಾಲೆಗಳು ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರದಲ್ಲಿ ಭಾಗವಹಿಸಲು ಮತ್ತು ಹೊಸ ಇಂಡಿಯಾವನ್ನು ಫಿಟ್ ಇಂಡಿಯಾವನ್ನಾಗಿ ಮಾಡುವಂತೆ ಮನವಿ ಮಾಡಿದರು.

ಈಗ ನಾವು ಕ್ರೀಡಾಕೂಟದ ಬಗ್ಗೆ ಸಾಕಷ್ಟು ಯೋಚಿಸುತ್ತಿರುವುದು ಮತ್ತು ಬಹಳಷ್ಟು ಮಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ ಮತ್ತು ಇದು ಖಂಡಿತವಾಗಿಯೂ ಎಲ್ಲ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ. ಎಂದು ನೀರಜ್ ಚೋಪ್ರಾ ಹೇಳಿದರು. ಪಿವಿ ಸಿಂಧು ಅವರು ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವೇದಿಕೆಯನ್ನು ನೀಡಲಿದ್ದು, ಪ್ರತಿ ವಿದ್ಯಾರ್ಥಿಯು ಈ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲು, ಶಾಲೆಗಳು ಫಿಟ್ ಇಂಡಿಯಾ ಜಾಲತಾಣದಲ್ಲಿ   ನೀಡಲಾಗಿರುವ ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು 1 ಸೆಪ್ಟೆಂಬರ್ 2021 ರಿಂದ 30 ಸೆಪ್ಟೆಂಬರ್  2021ರೊಳಗೆ ಮತ್ತು ಅಕ್ಟೋಬರ್ ಕೊನೆಯಲ್ಲಿ ರಸಪ್ರಶ್ನೆಯ ಪ್ರಾಥಮಿಕ ಸುತ್ತಿನಲ್ಲಿ ಭಾಗವಹಿಸುವ ತಮ್ಮ ವಿದ್ಯಾರ್ಥಿಗಳ ಹೆಸರನ್ನು ಸೂಚಿಸಬೇಕು.

ಪ್ರಾಥಮಿಕ ಸುತ್ತಿನ ವಿಜೇತರು ನಂತರ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಸುತ್ತಿನಲ್ಲಿ ಭಾಗವಹಿಸುತ್ತಾರೆ ಮತ್ತು ರಾಜ್ಯ ಸುತ್ತಿನ ವಿಜೇತರು ನಂತರ ಜನವರಿ - ಫೆಬ್ರವರಿ 2022 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುತ್ತಾರೆ. ರಸಪ್ರಶ್ನೆ ಕಾರ್ಯಕ್ರಮದ    ಅಂತಿಮ ಸುತ್ತು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ

***



(Release ID: 1751264) Visitor Counter : 275