ಹಣಕಾಸು ಸಚಿವಾಲಯ
azadi ka amrit mahotsav

3.30 ಕೋಟಿ ದಾಟಿದ ಅಟಲ್ ಪಿಂಚಣಿ ಯೋಜನಾದ ಒಟ್ಟು ದಾಖಲಾತಿ


ಪ್ರಸ್ತುತ ಹಣಕಾಸು ವರ್ಷ 2021-22 ರ ಮೊದಲ ಐದು ತಿಂಗಳಲ್ಲಿ 28 ಲಕ್ಷಕ್ಕೂ ಅಧಿಕ ಚಂದಾದಾರರು ದಾಖಲಾತಿಯಾಗಿದ್ದಾರೆ

Posted On: 01 SEP 2021 4:29PM by PIB Bengaluru

ಅಟಲ್ ಪಿಂಚಣಿ ಯೋಜನಾ (ಎ.ಪಿ.ವೈ.)ವು ಭಾರತ ಸರಕಾರದ ಪಿಂಚಣಿ ಖಾತ್ರಿ ಯೋಜನೆಯಾಗಿದ್ದು, ಪಿ.ಎಫ್.ಆರ್.ಡಿ.ಎ.ಯು ಅನುಷ್ಠಾನ ಗೊಳಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷ 2021-22 ರಲ್ಲಿ 28 ಲಕ್ಷಕ್ಕೂ ಅಧಿಕ  ಹೊಸ ಎ.ಪಿ.ವೈ. ಖಾತೆಗಳನ್ನು ತೆರೆಯಲಾಗಿದೆ. ಎ.ಪಿ.ವೈ. ಅಡಿಯಲ್ಲಿ ಒಟ್ಟು ದಾಖಲಾತಿ 2021ರ ಆಗಸ್ಟ್ 25 ರ ವೇಳೆಗೆ 3.30 ಕೋಟಿ ದಾಟಿದೆ.

ವಲಯವಾರು ಬ್ಯಾಂಕ್ ಗಳಲ್ಲಿ ವರ್ಷದಿಂದ ವರ್ಷಕ್ಕೆ ಆಗಿರುವ ಎ.ಪಿ.ವೈ. ದಾಖಲಾತಿ ವಿವರ ಕೆಳಗಿನಂತಿದೆ.

ವಲಯವಾರು ಬ್ಯಾಂಕ್ ಗಳು

(ಮಾರ್ಚ್ 31, 2016) ರಲ್ಲಿದ್ದಂತೆ

(ಮಾರ್ಚ್ 31, 2017)

ರಲ್ಲಿದ್ದಂತೆ

(ಮಾರ್ಚ್ 31, 2018)

ರಲ್ಲಿದ್ದಂತೆ

(ಮಾರ್ಚ್ 31, 2019)

ರಲ್ಲಿದ್ದಂತೆ

(ಮಾರ್ಚ್ 31, 2020)

ರಲ್ಲಿದ್ದಂತೆ

(ಮಾರ್ಚ್ 31, 2021)

ರಲ್ಲಿದ್ದಂತೆ

ಏಪ್ರಿಲ್ 1, 2021 ರಿಂದ ಆಗಸ್ಟ್ 25, 2021ರವರೆಗೆ ಸೇರ್ಪಡೆ.

(ಆಗಸ್ಟ್ 25, 2021)ರಲ್ಲಿದ್ದಂತೆ

ಸಾರ್ವಜನಿಕ ವಲಯದ ಬ್ಯಾಂಕುಗಳು

1,693,190

3,047,273

6,553,397

10,719,758

1,56,75,442

2,12,52,435

20,74,420

 

2,33,26,855

ಖಾಸಗಿ ಬ್ಯಾಂಕುಗಳು

218,086

497,323

873,901

1,145,289

15,62,997

19,86,467

77,875

20,64,342

ಹಣಕಾಸು ಬ್ಯಾಂಕ್ ಮತ್ತು ಪಾವತಿ ಬ್ಯಾಂಕ್

 

 

 

57372

359761

853914

224705

1078619

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು

476,373

1,115,257

1,987,176

3,171,152

43,30,190

57,10,770

4,21,104

61,31,874

ಸಹಕಾರಿ ಬ್ಯಾಂಕ್ ಗಳು

21,903

33,978

45,621

54,385

70,556

80,073

4,554

84,627

ಡಿ.ಒ.ಪಿ

75,343

189,998

245,366

270,329

3,02,712

3,32,141

7,774

3,39,915

ಒಟ್ಟು

24,84,895

48,83,829

97,05,461

1,54,18,285

2,23,01,658

3,02,15,800

28,10,432

3,30,26,232

ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ 1 ಲಕ್ಷಕ್ಕೂ ಅಧಿಕ ಎ.ಪಿ.ವೈ. ದಾಖಲಾತಿಗಳನ್ನು ಹೊಂದಿರುವ ಮುಂಚೂಣಿ ಬ್ಯಾಂಕ್ ಗಳ ಪಟ್ಟಿ ಕೆಳಗಿನಂತಿದೆ:

ಕ್ರಮ ಸಂಖ್ಯೆ

ಬ್ಯಾಂಕಿನ ಹೆಸರು

2021ರ ಏಪ್ರಿಲ್ 1 ರಿಂದ 2021 ಆಗಸ್ಟ್ 24 ನಡುವೆ ದಾಖಲಾತಿಗೊಂಡ .ಪಿ.ವೈ. ಖಾತೆಗಳ ಸಂಖ್ಯೆ

1

ಭಾರತೀಯ ಸ್ಟೇಟ್ ಬ್ಯಾಂಕ್

7,99,428

2

ಕೆನರಾ ಬ್ಯಾಂಕ್

2,65,826

3

ಏರ್ ಟೆಲ್ ಪಾವತಿ ಬ್ಯಾಂಕ್ ಲಿಮಿಟೆಡ್

2,06,643

4

ಬ್ಯಾಂಕ್ ಆಫ್ ಬರೋಡಾ

2,01,009

5

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

1,74,291

6

ಬ್ಯಾಂಕ್ ಆಫ್ ಇಂಡಿಯಾ

1,30,362

7

ಇಂಡಿಯನ್ ಬ್ಯಾಂಕ್

1,13,739

8

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

1,04,905

9

ಪಂಜಾಬ್ ನ್ಯಾಶನಲ್ ಬ್ಯಾಂಕ್

1,01,459

2021ರ ಆಗಸ್ಟ್ 25 ರವರೆಗೆ .ಪಿ.ವೈ. ಅಡಿಯಲ್ಲಿ 10 ಲಕ್ಷಕ್ಕೂ ಅಧಿಕ ದಾಖಲಾತಿಗಳನ್ನು ಹೊಂದಿದ ಮುಂಚೂಣಿ ರಾಜ್ಯಗಳ ಪಟ್ಟಿ ಕೆಳಗಿನಂತಿವೆ:

ಕ್ರಮ ಸಂಖ್ಯೆ

ರಾಜ್ಯದ ಹೆಸರು

ಎ.ಪಿ.ವೈ. ದಾಖಲಾತಿ ಸಂಖ್ಯೆ

1

ಉತ್ತರ ಪ್ರದೇಶ

49,65,922

2

ಬಿಹಾರ

31,31,675

3

ಪಶ್ಚಿಮ ಬಂಗಾಳ

26,18,656

4

ಮಹಾರಾಷ್ಟ್ರ

25,51,028

5

ತಮಿಳುನಾಡು

24,55,438

6

ಆಂಧ್ರ ಪ್ರದೇಶ

19,80,374

7

ಕರ್ನಾಟಕ

19,74,610

8

ಮಧ್ಯ ಪ್ರದೇಶ

19,19,795

9

ರಾಜಸ್ಥಾನ

16,16,050

10

ಗುಜರಾತ್

13,50,864

11

ಒರಿಸ್ಸಾ

12,45,837

ಎ.ಪಿ.ವೈ ಅಡಿಯಲ್ಲಿ 2021ರ ಆಗಸ್ಟ್ 25 ರಂದು ಇರುವ ಒಟ್ಟು ದಾಖಲಾತಿಗಳಲ್ಲಿ ಸುಮಾರು 78% ಚಂದಾದಾರರು ರೂ.1,000ದ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಸುಮಾರು 14% ಚಂದಾದಾರರು ರೂ.5,000 ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಸುಮಾರು 44%  ಮಂದಿ ಮಹಿಳಾ ಚಂದಾದಾರರಿದ್ದಾರೆ  ಹಾಗು 44 % ಚಂದಾದಾರರು ಬಹಳ ಕಿರಿಯ ವಯಸ್ಸಿನಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿದ್ದು ಅವರು 18-25 ವರ್ಷ ವಯೋಮಿತಿಗೆ ಸೇರಿದವರಾಗಿದ್ದಾರೆ.

ಇತ್ತೀಚೆಗೆ ಪಿ.ಎಫ್.ಆರ್.ಡಿ.ಎ.ಯು ಹೊಸ ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಎ.ಪಿ.ವೈ ಮೊಬೈಲ್ ಆಪ್ ನಲ್ಲಿ ಹೊಸ ಅಂಶಗಳ ಸೇರ್ಪಡೆ ಮತ್ತು ಉಮಾಂಗ್ ವೇದಿಕೆಯಲ್ಲಿ ಅದರ ಲಭ್ಯತೆ, ಎ.ಪಿ.ವೈ. ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳನ್ನು ಸಕಾಲಿಕಗೊಳಿಸುವುದು,  ಮತ್ತು ಎ.ಪಿ.ವೈ  ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗು ಈಗಿರುವ ಚಂದಾದಾರರ ಪ್ರಯೋಜನಕ್ಕಾಗಿ ಮತ್ತು ನಿರೀಕ್ಷಿತ  ಎ.ಪಿ.ಐ. ಚಂದಾದಾರರ ಮತ್ತು ಎ.ಪಿ.ವೈ. ಸೇವಾ ಒದಗಣೆದಾರರ ಅನುಕೂಲಕ್ಕಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ನಾಗರಿಕ ಸನ್ನದುಗಳಂತಹ ಹೊಸ ಉಪಕ್ರಮಗಳನ್ನು  ಅದು ಕೈಗೆತ್ತಿಕೊಂಡಿದೆ.

ಯೋಜನೆಯ ಆರಂಭವಾದಂದಿನಿಂದ  ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ  ಉತ್ತೇಜಿತಗೊಂಡಿರುವ ಪಿ.ಎಫ್.ಆರ್.ಡಿ.ಎ. ಯು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಎ.ಪಿ.ಐ. ಪ್ರಚಾರಾಂದೋಲನಗಳನ್ನು ಹಮ್ಮಿಕೊಳ್ಳುವ ಮೂಲಕ, ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್.ಎಲ್.ಬಿ.ಸಿ.ಗಳು) ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ.) ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಮುದ್ರಣ, ಸಾಮಾಜಿಕ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಇತರ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಮಾಡುವ ಮೂಲಕ ಹಣಕಾಸು ವರ್ಷ 2021-22 ರಲ್ಲಿ ಎ.ಪಿ.ವೈ. ಅಡಿಯಲ್ಲಿ ಒಟ್ಟು ದಾಖಲಾತಿಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಭಾರತವನ್ನು ಪಿಂಚಣಿಯುಕ್ತ ಸಮಾಜವನ್ನಾಗಿ ರೂಪಿಸುವ ನಿಟ್ಟಿನಲ್ಲಿ ತನ್ನ ಕೊಡುಗೆಯನ್ನು ನೀಡಲಿದೆ.

ಎ.ಪಿ.ವೈ. ಕುರಿತಂತೆ

ಎ.ಪಿ.ಐ.ಯು 18-40 ವರ್ಷಗಳ ವಯೋಮಿತಿಯ ಯಾವುದೇ ನಾಗರಿಕರು ಭಾರತೀಯ ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಗಳಲ್ಲಿ ಹೊಂದಿರುವ ಉಳಿತಾಯ ಖಾತೆಯ  ಮೂಲಕ  ಸೇರ್ಪಡೆಗೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ಯೋಜನೆ ಅಡಿಯಲ್ಲಿ ಚಂದಾದಾರರು ತಿಂಗಳೊಂದಕ್ಕೆ ಕನಿಷ್ಠ ಪಿಂಚಣಿಯನ್ನು ಖಾತ್ರಿಯಾಗಿ ಪಡೆಯುತ್ತಾರೆ. ಅವರಿಗೆ  60 ವರ್ಷವಾದಂದಿನಿಂದ  ಅವರು ಕಟ್ಟಿದ ಚಂದಾ ಹಣವನ್ನು ಅವಲಂಬಿಸಿ ಮಾಸಿಕ 1,000 ರೂ ಗಳಿಂದ 5,000 ರೂಗಳವರೆಗೆ ಪಿಂಚಣಿಯನ್ನು ಪಡೆಯುತ್ತಾರೆ. ಅದೇ ಪಿಂಚಣಿಯನ್ನು ಚಂದಾದಾರರ  ಸಂಗಾತಿಗೂ ನೀಡಲಾಗುತ್ತದೆ ಮತ್ತು ಇವರಿಬ್ಬರೂ ಮೃತರಾದರೆ ಚಂದಾದಾರರ 60 ನೇ ವಯಸ್ಸಿನವರೆಗೆ ಒಟ್ಟುಗೂಡಿದ ಪಿಂಚಣಿ ಸಂಪತ್ತನ್ನು  ನಾಮಿನಿಗೆ (ಉತ್ತರಾಧಿಕಾರಿಗೆ) ಮರಳಿಸಲಾಗುವುದು.

ಯೋಜನೆಯನ್ನು ವಿವಿಧ ವರ್ಗಗಳ ಬ್ಯಾಂಕುಗಳು ಮತ್ತು ಅಂಚೆ ಇಲಾಖೆಯ 266 ನೊಂದಾಯಿತ ಎ.ಪಿ.ವೈ. ಸೇವಾ ಪೂರೈಕೆದಾರರ ಮೂಲಕ ವಿತರಿಸಲಾಗುತ್ತದೆ. ಈ ಯೋಜನೆ ಉಳಿತಾಯ ಖಾತೆ ಹೊಂದಿರುವ ಅರ್ಜಿದಾರರಿಗೆ ಮಾತ್ರವೇ ಲಭ್ಯವಿರುವುದರಿಂದ, ಪಿ.ಎಫ್.ಆರ್.ಡಿ.ಎ. ಯು ಈ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಎಲ್ಲಾ ಬ್ಯಾಂಕುಗಳಿಗೆ ಅವರ ಈಗಿರುವ ಮತ್ತು ನಿರೀಕ್ಷಿತ ಗ್ರಾಹಕರಿಗೆ ಯೋಜನೆಯ ಬಗ್ಗೆ ಮಾಹಿತಿ ಒದಗಿಸುವಂತೆ  ಸಲಹೆ ಮಾಡುತ್ತಿರುತ್ತದೆ.

*** 


(Release ID: 1751263) Visitor Counter : 344