ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಎನ್ ಎಫ್ ಎಐನ ಆನ್ ಲೈನ್ ಚಲನಚಿತ್ರ ಪೋಸ್ಟರ್ ಪ್ರದರ್ಶನ ‘ಚಿತ್ರಾಂಜಲಿ @75’’ ಆರಂಭ


75 ಸಿನಿಮಾ ಪೋಸ್ಟರ್ ಗಳ ಮೂಲಕ ದೇಶಭಕ್ತಿಯ ನಾನಾ ಭಾವನೆಗಳು ಪ್ರದರ್ಶನದ ಮೂಲಕ ಅಭಿವ್ಯಕ್ತ

Posted On: 27 AUG 2021 2:05PM by PIB Bengaluru

75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರ ‘ಆಜಾ಼ದಿ ಕಾ ಅಮೃತಮಹೋತ್ಸವ’ ವನ್ನು ಆಚರಿಸುತ್ತಿದ್ದು, ಪುಣೆಯಲ್ಲಿನ ಭಾರತೀಯ ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯ ಸಿನಿಮಾಗಳ ಕುರಿತಾದ ವಿಶೇಷ ವರ್ಚುವಲ್ ಪ್ರದರ್ಶನ “ಚಿತ್ರಾಂಜಲಿ@ 75: ಪ್ಲಾಟಿನಂ ಪನೋರಮಾ’’ ಆಯೋಜಿಸಿದೆ.

ದೃಶ್ಯಗಳ ದಾಖಲೀಕರಣದ ಈ ಪನೋರಮಾದಲ್ಲಿ ಸ್ವಾತಂತ್ರ್ಯಾನಂತರ ದೇಶ ನಡೆದು ಬಂದ ಹಾದಿಯನ್ನು ಆನ್ ಲೈನ್ ಪ್ರದರ್ಶನದ ಮೂಲಕ ಅಭಿವ್ಯಕ್ತಗೊಳಿಸಲಿದೆ. ಡಿಜಿಟಲ್ ಸಂಗ್ರಹವು ಭಾರತೀಯ ಚಿತ್ರರಂಗವು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸೈನಿಕ ಶೌರ್ಯ ಮತ್ತು ತ್ಯಾಗವನ್ನು ವೈಭವೀಕರಿಸುತ್ತದೆ. ಇದು ಸಮಾಜದೊಳಗಿನ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುವ ಮತ್ತು ವಿವಿಧ ಸಾಮಾಜಿಕ ಸುಧಾರಣೆಗಳ ಹಾದಿಯನ್ನು ಸುಗಮಗೊಳಿಸಿದ ಚಲನಚಿತ್ರಗಳನ್ನು ತೋರಿಸುತ್ತದೆ ಮತ್ತು ಸಶಸ್ತ್ರ ಪಡೆಗಳ ಸಮವಸ್ತ್ರದಲ್ಲಿ ವೀರರನ್ನು ಚಿರಸ್ಥಾಯಿಯನ್ನಾಗಿಸುತ್ತದೆ.

ಆಜಾ಼ದಿ ಕಾ ಅಮೃತ ಮಹೋತ್ಸವವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಐಕಾನಿಕ್ ಸಪ್ತಾಹವನ್ನು ಆಚರಿಸುತ್ತಿದ್ದು, ಅದರ ಭಾಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರಿ ಅನುರಾಗ್ ಸಿಂಗ್ ಠಾಕೂರ್ ಪ್ರದರ್ಶನವನ್ನು ಉದ್ಘಾಟಿಸಿ, ಭಾರತೀಯ ಸಿನಿಮಾ ದೇಶದ ಒಂದು ಮೃದು ಶಕ್ತಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಒಂದು ಹೆಗ್ಗರುತು ತಂದುಕೊಡುವಲ್ಲಿ  ಮಹತ್ವದ ಪಾತ್ರವನ್ನು ವಹಿಸಿದೆ ಎಂದರು.

ವರ್ಚುವಲ್ ಪ್ರದರ್ಶನದ ಕುರಿತು

‘ಚಿತ್ರಾಂಜಿ @ 75’, ನಲ್ಲಿನ ನಾನಾ ಭಾಷೆಗಳ 75 ಚಲನಚಿತ್ರ ಪೋಸ್ಟರ್ ಹಾಗೂ ಪೋಟೋ ಗಳಲ್ಲಿ ದೇಶ ಭಕ್ತಿಯ ಭಿನ್ನ ಮನಸ್ಥಿತಿಗಳನ್ನು ಕಾಣಬಹುದು. ಪ್ರದರ್ಶನವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ: “ಸಿನಿಮಾ ಕಣ್ಣಿನಲ್ಲಿ ಸ್ವಾತಂತ್ರ್ಯ ಹೋರಾಟ’’, “ಸಮಾಜದ ಸುಧಾರಣೆಯನ್ನು ಸಿನಿಮಾ’’ ಮತ್ತು “ಶೂರ ಯೋಧರಿಗೆ ಗೌರವ ನಮನ”.

“ಸಿನಿಮಾ ಕಣ್ಣಿನಲ್ಲಿ ಸ್ವಾತಂತ್ರ್ಯ ಹೋರಾಟ’’,ದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ವೀರ ಸಾಹಸಗಳ ಕತೆಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ ಮತ್ತು ತ್ಯಾಗವು ಭಾರತೀಯ ಸಿನಿಮಾದಲ್ಲಿ ಸೂಕ್ತ ಸ್ಥಾನವನ್ನು ಪಡೆದಿದೆ ಮತ್ತು ಈ ಎಲ್ಲ ಕತೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ನೀಡಲಿವೆ.

“ಸಮಾಜದ ಸುಧಾರಣೆಯನ್ನು ಸಿನಿಮಾ’’ 20ನೇ ಶತಮಾನದ ಆರಂಭದ ದಶಕದಲ್ಲಿ ಭಾರತೀಯ ಸಿನಿಮಾಗಳು ಮತ್ತು ರಾಷ್ಟ್ರೀಯ ಚಳವಳಿಗಳನ್ನು ವರ್ಗೀಕರಿಸಿ ತೋರಿಸುತ್ತವೆ. ಇದು ಶಕ್ತಿಯುವ ದೃಶ್ಯಗಳು ಮತ್ತು ಮಧುರ ಸಂಗೀತ ಮೂಲಕ ದೇಶಭಕ್ತಿ ಹುಟ್ಟುಹಾಕುವ ಮೂಲಕ ಜನರಿಗೆ ಸ್ಫೂರ್ತಿಯನ್ನು ತುಂಬಿ ಚಲನಚಿತ್ರದ ಶಕ್ತಿಯನ್ನು ತೋರಿಸುತ್ತದೆ. ಈ ಚಿತ್ರಗಳಲ್ಲಿ ಚಿತ್ರಿಸಲಾದ ಅನೇಕ ಸಾಮಾಜಿಕ ಸುಧಾರಣಾ ಚಳವಳಿಗಳು ಈ ಸಮಯದಲ್ಲಿ ಹುಟ್ಟಿದವು ಮತ್ತು ಒಂದು ರೀತಿಯಲ್ಲಿ ಸಮಾಜವನ್ನು ಸಜ್ಜುಗೊಳಿಸಲು ಸಹಾಯ ಮಾಡಿದವು.

“ಶೂರ ಯೋಧರಿಗೆ ಗೌರವ ನಮನ’’  ಇದು ಸಶಸ್ತ್ರ ಪಡೆಗಳ ಶೌರ್ಯಕ್ಕೆ ಸೂಕ್ತವಾದ ಗೌರವವಾಗಿದೆ ಮತ್ತು ಇದು ನಮ್ಮ ಚಿತ್ರರಂಗದಲ್ಲಿ ಪದೇ ಪದೇ ಕಾಣುವಂತಹ ವಿಷಯವಾಗಿದೆ. ಈ ವಿಭಾಗದಲ್ಲಿ ಪ್ರದರ್ಶಿಸಲಾಗುವ ಯುದ್ಧ ಚಲನಚಿತ್ರಗಳು ನಮ್ಮ ರಾಷ್ಟ್ರದ ಸೈನಿಕರಿಗೆ ನಿಸ್ವಾರ್ಥ ಹುತಾತ್ಮ ಮತ್ತು ಅಮರತ್ವ ಸೆಳವು ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಸಮವಸ್ತ್ರದಲ್ಲಿರುವ ಯೋಧರಿಗೆ ನಮಿಸುವುದನ್ನು ಈ ದೃಶ್ಯಗಳಲ್ಲಿ ಪ್ರದರ್ಶಿಸಲಾಗುವುದು.

ಪ್ರದರ್ಶನದಲ್ಲಿ ಕೆಲವೊಂದು ಪ್ರಮುಖ ಮತ್ತು ಗಮನಿಸಲೇಬೇಕಾದ ಚಿತ್ರಗಳು ಹೀಗಿವೆ.

1857 (ಹಿಂದಿ, 1946)- ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಸುರೇಂದ್ರ ಮತ್ತು ಸುರೈಯ್ಯಾರನ್ನು ಒಳಗೊಂಡ ಐತಿಹಾಸಿಕ ಕಾಲ್ಪನಿಕ ಚಿತ್ರ.

42’ ಎ.ಕೆ.ಎ.ಬಿಯಾಲಿಷ್ (ಬಂಗಾಳಿ, 1949)- 1942ರ ಅವಧಿಯಲ್ಲಿ ಭಾರತದಲ್ಲಿ ಪ್ರಕ್ಷುಬ್ಧ ಸ್ಥಿತಿಗತಿಯ ವಿವರವನ್ನು ನೀಡುವ ಚಿತ್ರ.

ಪಿಯೋಲಿ ಫುಕನ್ (ಅಸ್ಸಾಂ, 1955) – ಅಸ್ಸಾಂನ ಐತಿಹಾಸಿಕ ಪಾತ್ರದ ಜೀವನ ಮತ್ತು ಹೋರಾಟವನ್ನು ಆಧರಿಸಿದ, ಬ್ರಿಟಿಷ್ ಆಕ್ರಮಣದ ವಿರುದ್ಧ ಬಂಡಾಯವೆದಿದ್ದ ಬದಾನ್ ಬೋರ್ಪುಕಾನ್ ಅವರ ಮಗ ಪಿಯೋಲಿ ಫುನಕ್ ಅವರ ಕುರಿತ ಚಿತ್ರ. ಅವರನ್ನು 1830ರಲ್ಲಿ ಜೋರಾಹಟ್ ನಲ್ಲಿ ಗಲ್ಲಿಗೇರಿಸಲಾಗಿತ್ತು.

ಕಾಡು ಮಾರ್ಕನಿ (ಗುಜರಾತಿ, 1960) – ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಿದ್ದ ಪೂರ್ವದ ರಾಬಿನ್ ಹುಡ್ ನ ಕಾಥಿಯಾವಾಡದ ಕಾಡು ಮರ್ಕಾನಿಗೆ ಗೌರವ ಸಲ್ಲಿಸುವ ಚಿತ್ರ.

ಕಿತ್ತೂರು ರಾಣಿ ಚೆನ್ನಮ್ಮ (ಕನ್ನಡ, 1961) – ಕನ್ನಡ ಭಾಷೆಯ ಐತಿಹಾಸಿಕ ಚಲನಚಿತ್ರ. 1824ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಬಂಡಾಯವೆದ್ದಿದ್ದ ಕಿತ್ತೂರು ಚೆನ್ನಮ್ಮನ ಪಾತ್ರದಲ್ಲಿ ಬಿ.ಸರೋಜಾದೇವಿ ನಟಿಸಿದ್ದ ಈ ಚಿತ್ರವನ್ನು ಬಿ.ಆರ್. ಪಂಥುಲು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು.

ಪದಂಡಿ ಮುಂದಕು (ತೆಲುಗು, 1962) – ಮಹಾತ್ಮಗಾಂಧೀಜಿ ಅವರ ದಂಡಿ ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಸ್ವಾತಂತ್ರ್ಯ ಚಳವಳಿಯನ್ನು ಮುಖ್ಯ ಕತೆಯನ್ನಾಗಿಟ್ಟುಕೊಂಡು ವಿ.ಮಧುಸೂಧನ್ ರಾವ್ ನಿರ್ದೇಶಿಸಿದ ರಾಜಕೀಯ ಚಿತ್ರ.

ಹಕೀಖತ್ (ಹಿಂದಿ, 1964) – ಚೇತನ್ ಆನಂದ್ ನಿರ್ಮಿಸಿದ ಮತ್ತು ನಿರ್ದೇಶಿಸಿ ಯುದ್ಧದ ಚಿತ್ರ. ಇದರಲ್ಲಿ ಧರ್ಮೇಂದ್ರ, ಬಾಲರಾಜ್ ಸಾಹ್ನಿ, ಪ್ರಿಯಾ ರಾಜ್ ವಂಶ್, ಸುಧೀರ್, ಸಂಜಯ್ ಖಾನ್ ಮತ್ತು ವಿಜಯ್ ಆನಂದ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.

ಸುಭಾಷ್ ಚಂದ್ರ (ಬಂಗಾಳಿ, 1966) – ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಆಧರಿಸಿದ ಪೌರಾಣಿಕ ಚಿತ್ರವನ್ನು ಪಿಜೂಷ್ ಬೋಸ್ ನಿರ್ದೇಶಿಸಿದ್ದರು.

ಶಾಹೀದ್ ಇ-ಅಜಂ ಭಗತ್ ಸಿಂಗ್ (ಪಂಜಾಬಿ, 1974) – ಓಂ ಬೇಡಿ ನಿರ್ದೇಶಿಸಿದ್ದ ಶಾಹೀದ್ ಭಗತ್ ಸಿಂಗ್ ಅವರ ಚಿತ್ರ ಜೀವನ ಆಧರಿಸಿದ ಚಿತ್ರ,

22 ಜೂನ್  1897   (ಮರಾಠಿ, 1979) – 1987ರಲ್ಲಿ ಪುಣೆಯಲ್ಲಿ ಚಾಪೇಕರ್ ಸಹೋದರರಿಂದ ಬ್ರಿಟಿಷ್ ಅಧಿಕಾರಿಗಳಾದ ವೋಲ್ಟಾರ್ ಚಾರ್ಲ್ ರಾಂಡ್ ಮತ್ತು ಚಾರ್ಲ್ಸ್ ಎಗೆರ್ಟನ್ ಆಯರ್ಸ್ಟ್ ಅವರನ್ನು ಹತ್ಯೆ ಗೈಯ್ದ ನೈಜ ಕತೆಯನ್ನು ಆಧರಿಸಿದ ಪ್ರಶಸ್ತಿ ವಿಜೇತ ಚಿತ್ರ.

ಗಾಂಧಿ (ಇಂಗ್ಲೀಷ್/ಹಿಂದಿ, 1982) –ವಿಶ್ವದಾದ್ಯಂತ ಮೆಚ್ಚುಗೆ ಪಡೆದ ಬೆನ್ ಕಿಂಗ್ಸಲೇ ಮಹಾತ್ಮಾ ಗಾಂಧಿ ಪಾತ್ರದಲ್ಲಿ ನಟಿಸಿದ ರಿಚರ್ಡ್ ಅಟೆನ್ ಬರೋ ನಿರ್ದೇಶಿಸಿದ ಜೀವನ ಚಿತ್ರ. ಈ ಚಿತ್ರ 11 ನಾಮನಿರ್ದೇಶನಗಳ ಪೈಕಿ 9 ಅಕಾಡೆಮಿ ಪ್ರಶಸ್ತಿ (ಆಸ್ಕರ್) ಗಳನ್ನು ಗೆದ್ದಿತ್ತು.

ಡಾ. ಅಂಬೇಡ್ಕರ್ (ತೆಲುಗು, 1992) – ಭಾರತ್ ಪಾರೆಪಲ್ಲಿ ನಿರ್ದೇಶಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಚಿತ್ರ.

ಕಾಲಾಪಾನಿ (ಮಲೆಯಾಳಂ, 1996) – ಐತಿಹಾಸಿಕ ಸಿನಿಮಾವನ್ನು ರಚನೆ ಮಾಡಿ ನಿರ್ದೇಶಿಸಿದ್ದು ಪ್ರಿಯದರ್ಶನ್. ಬ್ರಿಟಿಷ್ ಆಳ್ವಿಕೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕಾರಾಗೃಹದಲ್ಲಿ (ಅಥವಾ ಕಾಲಾಪಾನಿಯಲ್ಲಿ) ಬಂಧಿತರಾಗಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಕೇಂದ್ರೀಕರಿಸಿ ಮಾಡಲಾದ ಚಿತ್ರ.

ಲೋಕಮಾನ್ಯ: ಏಕ್ ಯುಗಪುರುಷ್ (ಮರಾಠಿ, 2015). ಸಮಾಜ ಸುಧಾರಕ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಸ್ವಾತಂತ್ರ್ಯ ಯೋಧ ಬಾಲ ಗಂಗಾಧರ ತಿಲಕರ ಜೀವನ ಕತೆಯನ್ನು ಬಿಂಬಿಸುತ್ತದೆ. ಇದರಲ್ಲಿ ಸುಬೋಧ್ ಭಾವೆ ತಿಲಕರ ಪಾತ್ರದಲ್ಲಿ ನಟಿಸಿದ್ದರು.

75 ಚಲನಚಿತ್ರಗಳ ಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ  here.

ಪ್ರದರ್ಶನವನ್ನು ಬಳಕೆದಾರರ ಸ್ನೇಹಿಯನ್ನಾಗಿ ವಿನ್ಯಾಸಗೊಳಿಸಲಾಗಿದ್ದು, ಅವುಗಳನ್ನು  ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಹುದು.

Click here to view and share the exhibition: https://www.nfai.gov.in/virtual-poster-exhibition.php

I&B Minister launches e-Photo Exhibition “Making of the Constitution” and Virtual Film Poster Exhibition “Chitranjali@75”

***



(Release ID: 1749610) Visitor Counter : 329