ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ಫೆಡರಲ್‌ ಚಾನ್ಸಲರ್‌ ಡಾ. ಏಂಜೆಲಾ ಮರ್ಕೆಲ್‌ ಅವರೊಂದಿಗೆ ದೂರವಾಣಿ  ಕರೆಯ ಮೂಲಕ ಸಂಭಾಷಿಸಿದರು

Posted On: 23 AUG 2021 8:29PM by PIB Bengaluru

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಜರ್ಮನಿಯ ಪ್ರಧಾನಿ ಫೆಡರಲ್‌ ಚಾನ್ಸಲರ್‌ ಡಾ. ಎಂಜೆಲಾ ಮರ್ಕೆಲ್‌ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು.

ಉಭಯ ನಾಯಕರು ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ, ಭದ್ರತೆ ಹಾಗೂ ಸುರಕ್ಷೆಯ ಕುರಿತು ಚರ್ಚಿಸಿದರು. ಅಲ್ಲಿಯ ಪರಿಸ್ಥಿತಿಯಿಂದಾಗಿ ಉಭಯ ದೇಶಗಳು ಹಾಗೂ ಜಾಗತಿಕ ಪರಿಣಾಮದ ಕುರಿತು ಚರ್ಚಿಸಿದರು. ಅತಿ ಮುಖ್ಯವಾಗಿ ಶಾಂತಿ ಪರಿಪಾಲನೆ ಹಾಗೂ ಸುರಕ್ಷೆಯ ಕುರಿತು ಹಾಗೂ ಅಲ್ಲಿ ಸಿಲುಕಿರುವ ಜನರನ್ನು ವಾಪಸ್‌ ಕರೆಯಿಸಿಕೊಳ್ಳುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿದರು.

ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿ, ಹಲವಾರು ವಿಷಯಗಳನ್ನು ಉಭಯ ನಾಯಕರು ಚರ್ಚಿಸಿದರು. ಕೋವಿಡ್‌ 19 ಲಸಿಕೆಗಳ ವಿಷಯದಲ್ಲಿ ಸಹಕಾರ, ವಾತಾವರಣ ಹಾಗೂ ಶಕ್ತಿ ವಿಷಯದಲ್ಲಿ ಸಹಕಾರಿ ಅಭಿವೃದ್ಧಿ, ವ್ಯಾಪಾರ ಹಾಗೂ ಆರ್ಥಿಕ ಸಂಬಂಧಗಳ ಕುರಿತಂತೆ ಚರ್ಚಿಸಿದರು.  ವಿಶ್ವಸಂಸ್ಥೆಯಲ್ಲಿ ಜರುಗಲಿರುವ COP-26 ಸಭೆಯಲ್ಲಿ ಭಾರತೀಯ ಸಮುದ್ರ ಸುರಕ್ಷೆಯನ್ನು ಗಮನದಲ್ಲಿರಿಸಿಕೊಂಡು ಪರಸ್ಪರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಬಹುಪಕ್ಷೀಯ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು, ಇಂಡೊ ಪೆಸಿಫಿಕ್‌ ಪ್ರದೇಶದ ಸುರಕ್ಷೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ಸಾಮಾನ್ಯ ವಿಷಯಗಳನ್ನು ಈ ಸಂದರ್ಭದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.

***



(Release ID: 1748412) Visitor Counter : 234