ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಒಟ್ಟು ಕೋವಿಡ್-19 ಲಸಿಕಾ ಅಭಿಯಾನ 58 ಕೋಟಿ ದಾಟಿ ಭಾರತದಲ್ಲಿ ಹೆಗ್ಗುರುತು ದಾಖಲಿಸಲಾಗಿದೆ
ಕಳೆದ 24 ಗಂಟೆಗಳ ಅವಧಿಯಲ್ಲಿ 52 ಲಕ್ಷಕ್ಕೂ ಹೆಚ್ಚು ಡೋಸ್ ಗಳ ನೀಡಿಕೆ
ಚೇತರಿಕೆ ದರ (97.57%) 2020 ರ ಮಾರ್ಚ್ ನಂತರ ಅತಿ ಹೆಚ್ಚು ದಾಖಲು
ಕಳೆದ 24 ಗಂಟೆಗಳಲ್ಲಿ 30,948 ಹೊಸ ಪ್ರಕರಣಗಳ ವರದಿ
ಭಾರತದ ಸಕ್ರಿಯ ಪ್ರಕರಣಗಳು (3,53,398) 152 ದಿನಗಳಲ್ಲಿ ಕಡಿಮೆ
ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಮಾಣ 1.09%: 2020 ರ ಮಾರ್ಚ್ ನಂತರ ಅತಿ ಕಡಿಮೆ
ದೈನಂದಿನ ಪಾಸಿಟಿವಿಟಿ ದರ (1.95%) 27 ದಿನಗಳಲ್ಲಿ 3% ಕ್ಕಿಂತ ಕಡಿಮೆ
Posted On:
22 AUG 2021 10:34AM by PIB Bengaluru
ಭಾರತದ ಒಟ್ಟು ಕೋವಿಡ್ ಲಸಿಕೆ ನೀಡಿಕೆ ಪ್ರಮಾಣ ನಿನ್ನೆ 58 ಕೋಟಿ ದಾಟಿ ಹೆಗ್ಗುರುತು ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ 52,23,612 ಡೋಸ್ ಲಸಿಕೆ ಹಾಕಲಾಗಿದ್ದು, ಭಾರತದ ಕೋವಿಡ್-19 ಲಸಿಕೆ ನೀಡಿಕೆ ಸಂಖ್ಯೆ ಇಂದು ಬೆಳಿಗ್ಗೆ 7 ಗಂಟೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ 58.14 ಕೋಟಿ (58,14,89,377) ದಾಟಿದೆ. ಇದನ್ನು ಒಟ್ಟು 64,39,411 ಅವಧಿಗಳಲ್ಲಿ ಸಾಧಿಸಲಾಗಿದೆ.
ಇಂದು ಬೆಳಿಗ್ಗೆ 7 ಗಂಟೆವರೆಗೆ ದೊರೆತ ತಾತ್ಕಾಲಿಕ ವರದಿಯ ಪ್ರಕಾರ ವಿವಿಧ ವರ್ಗಗಳ ಲಸಿಕೆ ನೀಡಿಕೆ ಮಾಹಿತಿ, ಇವುಗಳನ್ನು ಒಳಗೊಂಡಂತೆ
ಎಚ್.ಸಿ.ಡಬ್ಲ್ಯೂ ಗಳು
|
ಮೊದಲ ಡೋಸ್
|
1,03,53,366
|
ಎರಡನೇ ಡೋಸ್
|
82,10,206
|
ಎಫ್.ಎಲ್.ಡಬ್ಲ್ಯೂ ಗಳು
|
ಮೊದಲ ಡೋಸ್
|
1,83,03,885
|
ಎರಡನೇ ಡೋಸ್
|
1,25,60,909
|
18-44 ವಯೋಮಿತಿಯೊಳಗಿನವರು
|
ಮೊದಲ ಡೋಸ್
|
21,63,66,206
|
ಎರಡನೇ ಡೋಸ್
|
1,93,27,127
|
45-59 ವಯೋಮಿತಿಯೊಳಗಿನವರು
|
ಮೊದಲ ಡೋಸ್
|
12,24,63,403
|
ಎರಡನೇ ಡೋಸ್
|
4,87,01,565
|
60 ವರ್ಷ ಮೀರಿದವರು
|
ಮೊದಲ ಡೋಸ್
|
8,32,68,790
|
ಎರಡನೇ ಡೋಸ್
|
4,19,33,920
|
ಒಟ್ಟು
|
58,14,89,377
|
ದೇಶಾದ್ಯಂತ ಕೋವಿಡ್-19 ಲಸಿಕೆಯ ವೇಗ ವರ್ಧಿಸಲು ಮತ್ತು ತನ್ನ ವ್ಯಾಪ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕಳೆದ 24 ಗಂಟೆಗಳಲ್ಲಿ 38,487 ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ [ಸಾಂಕ್ರಾಮಿಕ ಕಂಡು ಬಂದ ನಂತರದಿಂದ] ಚೇತರಿಸಿಕೊಂಡವರ ಸಂಖ್ಯೆ 3,16,36,469 ರಷ್ಟಿದೆ.
ಇದರ ಪರಿಣಾಮದಿಂದ 2020 ರ ಮಾರ್ಚ್ ನಂತರ ಭಾರತದ ಚೇತರಿಕೆ ದರ ಅತಿ ಹೆಚ್ಚು 97.57% ರಷ್ಟು ದಾಖಲಾಗಿದೆ.

ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಾಮೂಹಿಕ ಪ್ರಯತ್ನದ ಫಲವಾಗಿ 56 ದಿನಗಳಿಂದ ಹೊಸ ಪ್ರಕರಣಗಳ 50,000 ಕ್ಕಿಂತ ಕಡಿಮೆ ಇದ್ದು, ಇಳಿಕೆ ಪ್ರವೃತ್ತಿಯಲ್ಲಿದೆ. ಕಳೆದ 24 ಗಂಟೆಗಳಲ್ಲಿ 30,948 ಹೊಸ ಪ್ರಕರಣಗಳು ದಾಖಲಾಗಿವೆ.

ಹೆಚ್ಚಿನ ಚೇತರಿಕೆ ಮತ್ತು ಕಡಿಮೆ ಪ್ರಮಾಣದ ಹೊಸ ಪ್ರಕರಣಗಳಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,53,398 ರಷ್ಟಿದ್ದು, ಇದು 152 ದಿನಗಳಿಂದ ಅತಿ ಕಡಿಮೆ ದಾಖಲಾಗಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1.09% ರಷ್ಟಿದ್ದು, 2002 ರ ಮಾರ್ಚ್ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ ಅತಿ ಕಡಿಮೆ ದಾಖಲಾಗಿದೆ.

ದೇಶದಲ್ಲಿ ಸೋಂಕು ಪತ್ತೆ ಪರೀಕ್ಷಾ ಸಾಮರ್ಥ್ಯ ವಿಸ್ತರಣೆಗೊಂಡಿದೆ. ಕಳೆದ 24 ಗಂಟೆಗಳಲ್ಲಿ 15,85,681 ಪರೀಕ್ಷೆಗಳನ್ನು ಮಾಡಲಾಗಿದೆ. ದೇಶಾದ್ಯಂತ ಈವರೆಗೆ 50.62 ಕೋಟಿಗೂ ಹೆಚ್ಚು (50,62,56,239) ಸೋಂಕು ಪತ್ತೆ ಪರೀಕ್ಷೆಗಳನ್ನು ಮಾಡಲಾಗಿದೆ.
ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸಲಾಗಿದೆ. ವಾರದ ಪಾಸಿಟಿವಿಟಿ ದರ 2.00% ಕ್ಕೂ ಕಡಿಮೆ ದಾಖಲಾಗಿದ್ದು, 58 ದಿನಗಳಲ್ಲಿ 3% ಕ್ಕೂ ಕಡಿಮೆ ವರದಿಯಾಗಿದೆ. ದೈನಂದಿನ ಪಾಸಿಟಿವಿಟಿ ದರ 1.95% ರಷ್ಟಿದೆ. 27 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ 3% ಕ್ಕೂ ಕಡಿಮೆ ಮತ್ತು 76 ದಿನಗಳಿಂದ 5% ಕ್ಕೂ ಕಡಿಮೆ ದಾಖಲಾಗಿದೆ.

***
(Release ID: 1748033)
Visitor Counter : 333
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam