ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19 ಪರಿಷ್ಕೃತ ಮಾಹಿತಿ

Posted On: 22 AUG 2021 9:33AM by PIB Bengaluru

ರಾಷ್ಟ್ರೀಯ ಲಸಿಕಾ ಅಭಿಯಾನದಡಿ ದೇಶದಲ್ಲಿ 58.14 ಕೋಟಿ ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 30,948 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಸಂಖ್ಯೆಯಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.09% ರಷ್ಟಿದೆ: 2020 ರ ಮಾರ್ಚ್ ನಂತರ ಅತಿ ಕಡಿಮೆ ಪ್ರಮಾಣ ದಾಖಲು.

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,53,398 ರಷ್ಟಿದೆ; 152 ದಿನಗಳಲ್ಲಿ ಅತಿ ಕಡಿಮೆ. ಕಳೆದ 24 ಗಂಟೆಗಳಲ್ಲಿ 38,487 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 3,16,36,469 ಮಂದಿ ಗುಣಮುಖರಾಗಿದ್ದಾರೆ.

ವಾರದ ಪಾಸಿಟಿವಿಟಿ ದರ 2.00% ರಷ್ಟಿದೆ: 58 ದಿನಗಳಲ್ಲಿ 3%  ಕ್ಕೂ ಕಡಿಮೆ ದಾಖಲಾಗುತ್ತಿದೆ.

ದೈನಂದಿನ ಪಾಸಿಟಿವಿಟಿ ದರ (1.95%) 27 ದಿನಗಳಿಂದ 3% ಕ್ಕೂ ಕಡಿಮೆ ವರದಿಯಾಗುತ್ತಿದೆ. ದೇಶಾದ್ಯಂತ ಈವರೆಗೆ 50.62 ಕೋಟಿ ಸೋಂಕು ಪತ್ತೆ ಪರೀಕ್ಷೆಗಳನ್ನು ಮಾಡಲಾಗಿದೆ.

***


(Release ID: 1748031) Visitor Counter : 224