ಕಲ್ಲಿದ್ದಲು ಸಚಿವಾಲಯ

ಆಜಾ಼ದಿ ಕ ಅಮೃತಮಹೋತ್ಸವ ಆಚರಣೆ ಭಾಗವಾಗಿ ಕಲ್ಲಿದ್ದಲು ಸಚಿವಾಲಯದ ಸಿಎಂಪಿಡಿಐಎಲ್ ನಿಂದ ಎರಡು ದಿನಗಳ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ

Posted On: 19 AUG 2021 1:59PM by PIB Bengaluru

ಆಜಾ಼ದಿ ಅಮೃತಮಹೋತ್ಸವ ಆಚರಣೆ ಭಾಗವಾಗಿ ಕಲ್ಲಿದ್ದಲು ಸಚಿವಾಲಯದಡಿ ಬರುವ ಸಿಎಂಪಿಡಿಐಎಲ್ ಆಯೋಜಿಸಿರುವ  ಎರಡು ದಿನಗಳ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ರಾಂಚಿಯ ರವೀಂದ್ರ ಭವನದಲ್ಲಿ ಆರಂಭವಾಯಿತು.

ಮೇಳದಲ್ಲಿ ಸೆಣಬಿನಿಂದ ಮಾಡಿದ ಆಕರ್ಷಣೀಯ ಉತ್ಪನ್ನಗಳು, ಚೌಕಟ್ಟುಗಳು, ಸ್ಮರಣಿಗಳು, ಮರದ ಕರಕುಶಲವಸ್ತುಗಳು, ಬಿದಿರಿನ ಕರಕುಶಲ ವಸ್ತುಗಳು, ಕೈಚೀಲಗಳು ಮತ್ತು ಟೆರಾ ಕೋಟಾದ ಕರಕುಶಲ ಉತ್ಪನ್ನಗಳು ಪ್ರದರ್ಶನದಲ್ಲಿ ಇರಿಸಲಾಗಿದ್ದು ಖರೀದಿಗೆ ಲಭ್ಯವಿದೆ. ರಾಂಚಿ ಜಿಲ್ಲೆಯ ಸುತ್ತಮುತ್ತಲಿನ ಮಹಿಳೆಯರು ತಯಾರಿಸಿದ ವಸ್ತುಗಳು ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ

ವಸ್ತು ಪ್ರದರ್ಶನದ ಉದ್ದೇಶ ಪ್ಲಾಸ್ಟಿಕ್ ನಿಂದ ತಯಾರಿಸಿದ ಉತ್ಪನ್ನಗಳನ್ನು ನಿರುತ್ತೇಜನ ಗೊಳಿಸುವುದಷ್ಟೇ ಅಲ್ಲ  ಜೇಡಿ ಮಣ್ಣು, ಸೆಣಬು ಹಾಗು ಬಿದಿರು ಮತ್ತಿತರ ಪರಿಸರ ಸ್ನೇಹಿ ನೈಸರ್ಗಿಕ ಸಂಪನ್ಮೂಲಗಳಿಂದ ತಯಾರಿಸಿದ ಉತ್ಪನ್ನಗಳನ್ನು ಉತ್ತೇಜಿಸುವುದಾಗಿದೆ. ಇದು ಪರಿಸರದ ಅವನತಿಯಾಗುವುದನ್ನು ತಡೆಯಲು ಸಹಕಾರಿಯಾಗುತ್ತದೆ ಮತ್ತು ಸ್ಥಳೀಯ ಕರಕುಶಲ ಕರ್ಮಿಗಳಿಗೆ ಆರ್ಥಿಕವಾಗಿ ನೆರವಾಗುತ್ತದೆ.

***(Release ID: 1747368) Visitor Counter : 217