ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಭಾರತದ ಒಟ್ಟು ಕೋವಿಡ್-19 ಲಸಿಕೆ ವ್ಯಾಪ್ತಿ 56.64 ಕೋಟಿ ದಾಟಿದೆ


ಚೇತರಿಕೆ ದರ (97.53%) 2020ರ ಮಾರ್ಚ್ ನಂತರ ಗರಿಷ್ಠ ಮಟ್ಟದಲ್ಲಿದೆ

ಕಳೆದ 24 ಗಂಟೆಗಳಲ್ಲಿ 36,401 ಹೊಸ ಪ್ರಕರಣಗಳು ವರದಿಯಾಗಿವೆ

ಭಾರತದ ಸಕ್ರಿಯ ಪ್ರಕರಣಗಳ ಹೊರೆಯು (3,64,129) ಕಳೆದ 149 ದಿನಗಳಲ್ಲಿ ಅತ್ಯಂತ ಕಡಿಮೆ ಎನಿಸಿದೆ

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.13% ರಷ್ಟಿದ್ದು, ಇದು ಮಾರ್ಚ್ 2020ರ ಬಳಿಕ ಅತ್ಯಂತ ಕಡಿಮೆ

ದೈನಂದಿನ ಪಾಸಿಟಿವಿಟಿ ದರ (1.94%) ಕಳೆದ 24 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿದೆ

Posted On: 19 AUG 2021 10:07AM by PIB Bengaluru

ಕಳೆದ 24 ಗಂಟೆಗಳಲ್ಲಿ 56,36,336  ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಇದರೊಂದಿಗೆ ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ ನಿನ್ನೆ 56.64 ಕೋಟಿ ದಾಟಿದೆ(56,64,88,433).  ಒಟ್ಟು 63,13,210 ಸೆಷನ್‌ಗಳ ಮೂಲಕ ಈ ಸಾಧನೆ ಮಾಡಲಾಗಿದೆ.

ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ ಒಟ್ಟಾರೆ ಲಸಿಕೆ ನೀಡಿಕೆ ಅಂಕಿ-ಅಂಶಗಳ ವಿವರ ಇಲ್ಲಿದೆ:

ಆರೋಗ್ಯ ಕಾರ್ಯಕರ್ತರು

1ನೇ ಡೋಸ್

1,03,52,028

2ನೇ ಡೋಸ್

81,56,910

ಮುಂಚೂಣಿ ಕಾರ್ಯಕರ್ತರು

1ನೇ ಡೋಸ್

1,82,95,288

2ನೇ ಡೋಸ್

1,23,75,946

18-44 ವರ್ಷ ವಯೋಮಾನದವರು

1ನೇ ಡೋಸ್

20,84,79,874

2ನೇ ಡೋಸ್

1,73,21,864

45-59 ವರ್ಷ ವಯೋಮಾನದವರು

1ನೇ ಡೋಸ್

12,05,14,789

2ನೇ ಡೋಸ್

4,73,45,647

60 ವರ್ಷ ಮೀರಿದವರು

1ನೇ ಡೋಸ್

8,24,60,190

2ನೇ ಡೋಸ್

4,11,85,897

ಒಟ್ಟು

56,64,88,433

ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ.

ಕಳೆದ 24 ಗಂಟೆಗಳಲ್ಲಿ 39,157 ರೋಗಿಗಳು ಚೇತರಿಸಿಕೊಂಡಿದ್ದು, ಇದರೊಂದಿಗೆ  ಇದುವರೆಗೂ ಚೇತರಿಸಿಕೊಂಡ ರೋಗಿಗಳ ಒಟ್ಟು ಸಂಖ್ಯೆ (ಸಾಂಕ್ರಾಮಿಕದ ಆರಂಭದಿಂದ)  3,15,25,080ಕ್ಕೆ ಹೆಚ್ಚಳಗೊಂಡಿದೆ.

ಪರಿಣಾಮವಾಗಿ, ಭಾರತದ ಚೇತರಿಕೆ ದರವು 97.53%ರಷ್ಟಿದ್ದು, ಇದು 2020ರ ಮಾರ್ಚ್ ನಂತರ ಅತ್ಯಧಿಕವಾಗಿದೆ.

ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಹಾಗೂ ಸಹಯೋಗದ ಪ್ರಯತ್ನಗಳಿಂದಾಗಿ ಸತತ ಐವತ್ತಮೂರು ದಿನಗಳಿಂದ ನಿತ್ಯ 50,000ಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಪ್ರವೃತ್ತಿ ಮುಂದುವರಿದಿದೆ.  

ಕಳೆದ 24 ಗಂಟೆಗಳಲ್ಲಿ ಕೇವಲ 36,401 ಹೊಸ ಪ್ರಕರಣಗಳು ವರದಿಯಾಗಿವೆ.

ಅಧಿಕ ಚೇತರಿಕೆಗಳು ಮತ್ತು ಕಡಿಮೆ ಸಂಖ್ಯೆಯ ಹೊಸ ಪ್ರಕರಣಗಳಿಂದಾಗಿ ಸಕ್ರಿಯ ಪ್ರಕರಣಗಳ ಹೊರೆ 3,64,129ಕ್ಕೆ ಇಳಿದಿದೆ. ಈ ಪ್ರಮಾಣ 149 ದಿನಗಳಲ್ಲೇ ಅತ್ಯಂತ ಕಡಿಮೆ ಎನಿಸಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳು ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ಕೇವಲ 1.13% ರಷ್ಟಿವೆ. ಇದು 2020ರ ಮಾರ್ಚ್ ನಂತರ ಅತ್ಯಂತ ಕಡಿಮೆ ಎನಿಸಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯದ ವಿಸ್ತರಣೆಯೂ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 18,73,757 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತವು ಇದುವರೆಗೂ ಒಟ್ಟು 50.03 ಕೋಟಿ (50,03,00,840) ಪರೀಕ್ಷೆಗಳನ್ನು ನಡೆಸಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದರೂ, ಸಾಪ್ತಾಹಿಕ ಪಾಸಿಟಿವಿಟಿ ದರವು ಕಳೆದ 55 ದಿನಗಳಿಂದ 1.95% ಕ್ಕಿಂತ ಕಡಿಮೆ ಇದೆ.  ದೈನಂದಿನ ಪಾಸಿಟಿವಿಟಿ ದರವೂ 1.94% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಕಳೆದ 24 ದಿನಗಳಿಂದ 3% ಕ್ಕಿಂತ ಕಡಿಮೆ ಇದೆ ಮತ್ತು ಸತತ 73 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.

***


(Release ID: 1747356) Visitor Counter : 293