ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್.) ಮತ್ತು ಸ್ವಿಟ್ಜರ್ಲೆಂಡ್ ನ ನಾವಿನ್ಯತೆ ಹೊಸ ರೋಗಪತ್ತೆ ಪ್ರತಿಷ್ಠಾನ (ಎಫ್.ಐ.ಎನ್.ಡಿ.)ದೊಂದಿಗಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 18 AUG 2021 4:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಅಂತಾರಾಷ್ಟ್ರೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಹಯೋಗದ ಚೌಕಟ್ಟಿನೊಳಗೆ ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಸ್ವಿಟ್ಜರ್ಲೆಂಡ್‌ ನಾವಿನ್ಯತೆ ಹೊಸ ರೋಗಪತ್ತೆ ಪ್ರತಿಷ್ಠಾನ (ಎಫ್..ಎನ್.ಡಿ.) ನಡುವೆ ಅಂಕಿತ ಹಾಕಲಾಗಿರುವ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಒಪ್ಪಂದಕ್ಕೆ ಫೆಬ್ರವರಿ 2021ರಂದು ಭಾರತ ಸಹಿ ಮಾಡಿತ್ತು.

ಪ್ರಯೋಜನಗಳು:

ತಿಳಿವಳಿಕೆ ಒಪ್ಪಂದವು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಬಾಂಧವ್ಯವನ್ನು ವೈಜ್ಞಾನಿಕ ಮತ್ತು ತ್ರಾಂತಿಕ ಸಹಕಾರದೊಂದಿಗೆ ಅಂತರ ರಾಷ್ಟ್ರೀಯ ಚೌಕಟ್ಟಿನೊಳಗೆ ಬಲಪಡಿಸಲಿದೆ.

ಹಣಕಾಸು ಪರಿಣಾಮ:

ಗುರುತಿಸಲಾದ ಸ್ಥಳೀಯ ಪಾಲುದಾರರಿಗೆ ಮತ್ತು ಸಂಶೋಧಕರಿಗೆ ಪ್ರಸ್ತಾವನೆಯ ಮನವಿ (ಆರ್.ಎಫ್.ಪಿ.) ಮೂಲಕ .ಸಿ.ಎಂ.ಆರ್. 100,000 ಅಮೆರಿಕನ್ ಡಾಲರ್ ಲಭ್ಯವಾಗುವಂತೆ ಮಾಡಲು ಬದ್ಧವಾಗಿದ್ದರೆ, ಎಫ್..ಎನ್.ಡಿ. 400,000 ಅಮೆರಿಕನ್ ಡಾಲರ್ ಮೊತ್ತದ ಲಭ್ಯವಾಗುವಂತೆ ಮಾಡಲಿದೆ.

ಹಿನ್ನೆಲೆ:

.ಸಿ.ಎಂ.ಆರ್. ದೇಶದಲ್ಲಿ ಅಂತರ್ಗತ ಮತ್ತು ಬಾಹ್ಯ ಸಂಶೋಧನೆಯ ಮೂಲಕ ಬಯೋಮೆಡಿಕಲ್ ಸಂಶೋಧನೆಯನ್ನು ಉತ್ತೇಜಿಸುತ್ತದೆ. ಎಫ್..ಎನ್.ಡಿ ಕಂಪನಿಗಳ ಕಾಯಿದೆ, (ಭಾರತೀಯ) 2013 ಸೆಕ್ಷನ್ 8 ಅಡಿಯಲ್ಲಿ ರಚಿಸಲಾದ ಸ್ವತಂತ್ರ ಲಾಭರಹಿತ ಸಂಸ್ಥೆಯಾಗಿದೆ.

***(Release ID: 1746981) Visitor Counter : 196