ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಭರದಿಂದ ಸಾಗಿರುವ ಕೋವಿಡ್-19 ಲಸಿಕೆ ಅಭಿಯಾನ; 56 ಕೋಟಿ ಡೋಸ್ ಮಟ್ಟ ದಾಟಿದ ಲಸಿಕೆ ನೀಡಿಕೆ ಪ್ರಮಾಣ


ಚೇತರಿಕೆ ದರ 97.52%ಗೆ ಸುಧಾರಣೆ; 2020 ಮಾರ್ಚ್ ನಿಂದ ಆಗಿರುವ ಗರಿಷ್ಠ ಸುಧಾರಣೆ

ದೇಶದಲ್ಲಿ ಕಳೆದ 24 ತಾಸುಗಳಲ್ಲಿ 35,178 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,67,415ಕ್ಕೆ ಇಳಿಕೆ; ಸತತ 148 ದಿನಗಳಿಂದ ಕಂಡುಬಂದಿರುವ ಕನಿಷ್ಠ ಪ್ರಮಾಣ

ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.14%ಗೆ ಇಳಿಕೆ; 2020 ಮಾರ್ಚ್ ನಿಂದ ಆಗಿರುವ ಕನಿಷ್ಠ ಪ್ರಮಾಣ

ದೈನಂದಿನ ಪಾಸಿಟಿವಿಟಿ ದರ 1.96%ಗೆ ಇಳಿಕೆ; ಸತತ 23 ದಿನಗಳಿಂದ 3% ಕೆಳಗೆ ಕಾಯ್ದುಕೊಂಡ ದರ

Posted On: 18 AUG 2021 9:50AM by PIB Bengaluru

ಭಾರತದಲ್ಲಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದಲ್ಲಿ ನಿನ್ನೆ 56 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಪ್ರಕಟವಾಗಿರುವ ತಾತ್ಕಾಲಿಕ ವರದಿ ಪ್ರಕಾರ, ಒಟ್ಟು 62,67,149 ಆಂದೋಲನಗಳಲ್ಲಿ ಒಟ್ಟು 56,06,52,030 ಡೋಸ್ ಲಸಿಕೆ ನೀಡಲಾಗಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 55,05,075 ಡೋಸ್ ಲಸಿಕೆ ಹಾಕಲಾಗಿದೆ.

ಅದರಲ್ಲಿ ಈ ಕೆಳಗಿನ ಗುಂಪುಗಳು ಸೇರಿವೆ:

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

1st Dose

1,03,51,471

2nd Dose

81,39,176

ಮುಂಚೂಣಿ ಕಾರ್ಯಕರ್ತರು

1st Dose

1,82,91,828

2nd ಡೋಸ್

1,23,10,279

18-44 ವಯೋಮಾನದವರು

1st ಡೋಸ್

20,53,38,194

2nd ಡೋಸ್

1,66,89,475

45-59 ವಯೋಮಾನದವರು

1st ಡೋಸ್

11,96,50,340

2nd ಡೋಸ್

4,68,78,435

60 ವರ್ಷ ದಾಟಿದವರು

1st ಡೋಸ್

8,20,88,223

2nd ಡೋಸ್

4,09,14,609

ಒಟ್ಟು

56,06,52,030

ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶವ್ಯಾಪಿ ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ.

ಭಾರತದ ಚೇತರಿಕೆ ದರ ಇದೀಗ 97.52%ಗೆ ಸುಧಾರಣೆ ಕಂಡಿದ್ದು, 2020 ಮಾರ್ಚ್ ನಿಂದ ಆಗಿರುವ ಗರಿಷ್ಠ ಸುಧಾರಣೆ ಇದಾಗಿದೆ.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,14,85,923 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಮತ್ತು ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 37,169 ಮಂದಿ ಚೇತರಿಸಿಕೊಂಡಿದ್ದಾರೆ.

 

https://static.pib.gov.in/WriteReadData/userfiles/image/image00134G6.jpg

ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 35,178 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಸತತ 52 ದಿನಗಳಿಂದ ದೈನಂದಿನ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಪ್ರಮಾಣ 50,000 ಮಟ್ಟದಿಂದ ಕೆಳಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಜಂಟಿ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇದಿನೆ ಇಳಿಕೆ ಕಾಣುತ್ತಿದೆ.

https://static.pib.gov.in/WriteReadData/userfiles/image/image0029TD1.jpg

ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣ ಕಳೆದ 148 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ 3,67,415ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1,14%ಗೆ ತಗ್ಗಿದೆ. ಇದು ಸಹ 2020 ಮಾರ್ಚ್ ನಿಂದ ಕಂಡುಬಂದಿರುವ ಕನಿಷ್ಠ ಪ್ರಮಾಣವಾಗಿದೆ.

https://static.pib.gov.in/WriteReadData/userfiles/image/image003OB6A.jpg

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲೇ ದೇಶಾದ್ಯಂತ 17,97,559 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಇದುವರೆಗೆ 49.84 ಕೋಟಿಗಿಂತ ಹೆಚ್ಚಿನ ಅಂದರೆ 49,84,27,083 ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದೆಡೆ, ದೇಶದೆಲ್ಲೆಡೆ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿರುವ ಫಲವಾಗಿ, ವಾರದ ಪಾಸಿಟಿವಿಟಿ ದರ ಸತತ 54 ದಿನಗಳಿಂದ 3% ಮಟ್ಟದಿಂದ ಕೆಳಗಿದ್ದು, ಅದೀಗ 1.95%ಗೆ ಇಳಿದಿದೆ. ಅಂತೆಯೇ, ದೈನಂದಿನ ಪಾಸಿಟಿವಿಟಿ ದರ 1.96%ಗೆ ಇಳಿಕೆ ಕಂಡಿದೆ. ಸತತ 23 ದಿನಗಳಿಂದ ಅದು 3% ಮಟ್ಟದಿಂದ ಒಳಗಿದೆ ಹಾಗೂ ನಿರಂತರ 72 ದಿನಗಳಿಂದ 5% ಮಟ್ಟದಿಂದ ಕೆಳಗಿದೆ.

https://static.pib.gov.in/WriteReadData/userfiles/image/image004DISX.jpg

***



(Release ID: 1746916) Visitor Counter : 247