ಇಂಧನ ಸಚಿವಾಲಯ

ಹಸಿರು ಜಲಜನಕ ಕುರಿತಾಗಿ ಭಾರತದೊಂದಿಗೆ ಸಹಕಾರಕ್ಕೆ ಇಂಗಿತ ವ್ಯಕ್ತಪಡಿಸಿದ ಬ್ರಿಟನ್‌

ಕೇಂದ್ರ ಇಂಧನ ಮತ್ತು ʻಎನ್‌ಆರ್‌ಇʼ ಸಚಿವ ಶ್ರೀ ಆರ್.ಕೆ. ಸಿಂಗ್ ಅವರು ʻಸಿಒಪಿ 26ʼ ಅಧ್ಯಕ್ಷ, ಗೌರವಾನ್ವಿತ ಶ್ರೀ ಅಲೋಕ್ ಶರ್ಮಾ ಅವರನ್ನು ಭೇಟಿ ಮಾಡಿದರು

ಮುಂಬರುವ ಜಲಜನಕ ಮತ್ತು ಲಿಥಿಯಂ-ಅಯಾನ್‌ ಬಿಡ್‌ಗಳಲ್ಲಿ ಭಾಗವಹಿಸಲು ಬ್ರಿಟನ್‌ಗೆ ಆಹ್ವಾನ ನೀಡಿದ ಭಾರತ

ಹಸಿರು ಇಂಧನಕ್ಕಾಗಿ ವಿಶ್ವ ಬ್ಯಾಂಕ್ ಸ್ಥಾಪಿಸುವ ಸಾಧ್ಯತೆಯನ್ನು ಅನ್ವೇಷಿಸಲು ಉಭಯ ದೇಶಗಳೂ ಒಲವು ವ್ಯಕ್ತಪಡಿಸಿದವು

Posted On: 17 AUG 2021 4:04PM by PIB Bengaluru

ಭಾರತವು ಈಗಾಗಲೇ ಮಾರ್ಚ್, 2021 ವೇಳೆಗೆ 16369 ಮೆ.ವ್ಯಾ. ಸಾಮರ್ಥ್ಯದ ಅದಕ್ಷ ಉಷ್ಣ ವಿದ್ಯುತ್‌ ಘಟಕಗಳನ್ನು ಸ್ಥಗಿತಗೊಳಿಸಿದೆಕೇಂದ್ರ ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ಸಿಒಪಿ 26 ಅಧ್ಯಕ್ಷ ಗೌರವಾನ್ವಿತ ಅಲೋಕ್ ಶರ್ಮಾ ಅವರೊಂದಿಗೆ ಇಂದು ಇಲ್ಲಿ ನಡೆದ ಸಭೆಯಲ್ಲಿ ವಿಷಯ ತಿಳಿಸಿದರು. ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರಗಳನ್ನು  ಕ್ರಮೇಣ ಸ್ಥಗಿತಗೊಳಿಸುವ ವಿಷಯವನ್ನು `ಸಿಒಪಿ 26’ ಅಧ್ಯಕ್ಷರು ಸಭೆಯಲ್ಲಿ ಪ್ರಸ್ತಾಪಿಸಿದರು. ಕಾರ್ಯದರ್ಶಿ (ಇಂಧನ), ಕಾರ್ಯದರ್ಶಿ (ನೂತನ ನವೀಕರಿಸಬಹುದಾದ ಇಂಧನ) ಮತ್ತು ಬ್ರಿಟನ್‌ನಲ್ಲಿನ ಭಾರತದ ಹೈಕಮೀಷನರ್ ಸಭೆಯಲ್ಲಿ ಉಪಸ್ಥಿತರಿದ್ದರು.

ಗೌರವಾನ್ವಿತ ಅಲೋಕ್ ಶರ್ಮಾ ಅವರು ಹಸಿರು ಜಲಜನಕಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಸಹಕಾರಕ್ಕೆ ಬ್ರಿಟನ್‌ ಕಡೆಯಿಂದ ಒಲವು ವ್ಯಕ್ತಪಡಿಸಿದರು. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಂಕಲ್ಪ ಮಾಡಿರುವ 100 ಬಿಲಿಯನ್ ಡಾಲರ್ ಹವಾಮಾನ ಹಣಕಾಸು ಪ್ರಸ್ತಾಪವನ್ನು ಕಾರ್ಯರೂಪಕ್ಕೆ ತರಲು ಹಸಿರು ಇಂಧನಕ್ಕಾಗಿ ವಿಶೇಷ ವಿಶ್ವ ಬ್ಯಾಂಕ್ ಸ್ಥಾಪಿಸುವ ಸಾಧ್ಯತೆಯ ಬಗ್ಗೆ ಅನ್ವೇಷಿಸಲು ಉಭಯ ನಾಯಕರೂ ಇಚ್ಛೆ ವ್ಯಕ್ತಪಡಿಸಿದರುಯಶಸ್ವಿ ʻಸಿಒಪಿ 26ʼ ಆಯೋಜಿಸಲು ಭಾರತದ ಬೆಂಬಲವನ್ನು ಬ್ರಿಟನ್‌ ಪ್ರತಿನಿಧಿಗಳು ಕೋರಿದರು.

ಶ್ರೀ ಆರ್‌.ಕೆ. ಸಿಂಗ್‌ ಅವರು ಕಡಲಂಚಿನಲ್ಲಿ ಪವನಶಕ್ತಿ ವಿದ್ಯುತ್‌ ತಯಾರಿಕೆಯಲ್ಲಿ ಬ್ರಿಟನ್‌ನೊಂದಿಗೆ ಭಾರತದ ಸಹಯೋಗದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು. ಸಂಗ್ರಹಣೆಯ ವೆಚ್ಚವನ್ನು ಕಡಿಮೆ ಮಾಡಲು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರುಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ನಿಗದಿಪಡಿಸಲಾದ ʻಎನ್‌ಡಿಸಿʼಗಳಿಗೆ ಅನುಗುಣವಾಗಿ ಕ್ರಮ ಕೈಗೊಂಡಿರುವ ಏಕೈಕ ʻಜಿ-20ʼ ದೇಶ ಭಾರತ ಎಂದು ಅವರು ನಿಯೋಗಕ್ಕೆ ಮಾಹಿತಿ ನೀಡಿದರು.

2030 ವೇಳೆಗೆ 450 ಮೆಗಾವ್ಯಾಟ್ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದುವ ಭಾರತದ ಮಹತ್ವಾಕಾಂಕ್ಷೆಯ ಗುರಿಯ ಹಿನ್ನೆಲೆಯಲ್ಲಿ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಮುಂಬರುವ ಹಸಿರು ಜಲಜನಕ ಮತ್ತು ಲಿಥಿಯಂ-ಅಯಾನ್ ಬಿಡ್‌ಗಳಲ್ಲಿ ಭಾಗವಹಿಸಲು ಬ್ರಿಟನ್‌ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಯಿತು.

***(Release ID: 1746732) Visitor Counter : 91