ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19 ತಾಜಾ ಮಾಹಿತಿ

Posted On: 15 AUG 2021 9:28AM by PIB Bengaluru

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ 54.38 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ

ದೇಶದ ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.20% ಮಟ್ಟದಲ್ಲಿ ಮುಂದುವರಿದಿದೆ

ಭಾರತದ ಸಕ್ರಿಯ ಪ್ರಕರಣಗಳ ಹೊರೆ ಪ್ರಸ್ತುತ 3,85,336 ಆಗಿದೆ

ಪ್ರಸ್ತುತ ಚೇತರಿಕೆ ದರ 97.46%

ದೇಶಾದ್ಯಂತ ಇಲ್ಲಿಯವರೆಗಿನ ಚೇತರಿಕೆ ಪ್ರಕರಣಗಳ ಸಂಖ್ಯೆ 3,13,76,015

ಕಳೆದ 24 ಗಂಟೆಗಳಲ್ಲಿ 37,927 ರೋಗಿಗಳು ಚೇತರಿಸಿಕೊಂಡಿದ್ದಾರೆ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,083 ಹೊಸ ಪ್ರಕರಣಗಳು ವರದಿಯಾಗಿವೆ

ಸಾಪ್ತಾಹಿಕ ಪಾಸಿಟಿವಿಟಿ ದರವು 5% ಕ್ಕಿಂತ ಕೆಳಗಿದ್ದು, ಪ್ರಸ್ತುತ 2.00% ರಷ್ಟಿದೆ

ದೈನಂದಿನ ಪಾಸಿಟಿವಿಟಿ ದರ 1.88% ಇದ್ದು, ಕಳೆದ 20 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿದೆ

ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದುವರೆಗೂ 49.36 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ

***


(Release ID: 1746651) Visitor Counter : 215