ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ತಾಜಾ ಮಾಹಿತಿ
Posted On:
17 AUG 2021 9:38AM by PIB Bengaluru
ಕಳೆದ 24 ಗಂಟೆಗಳಲ್ಲಿ 88.13 ಲಕ್ಷಕ್ಕೂ ಅಧಿಕ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ; ಇದು ಒಂದೇ ದಿನದಲ್ಲಿ ಇದುವರೆಗೆ ಸಾಧಿಸದ ಅತಿ ಹೆಚ್ಚು ಲಸಿಕೆ ದಾಖಲೆ.
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೂ 55.47 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 25,166 ಹೊಸ ಪ್ರಕರಣಗಳು ವರದಿಯಾಗಿವೆ; ಇದು 154 ದಿನಗಳಲ್ಲೇ ಅತ್ಯಂತ ಕಡಿಮೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಒಟ್ಟು ಪ್ರಕರಣಗಳಲ್ಲಿ 1.15% ರಷ್ಟಿದೆ; ಈ ಪ್ರಮಾಣವು ಮಾರ್ಚ್ 2020ರ ಬಳಿಕ ಇದುವರೆಗಿನ ಅತ್ಯಂತ ಕಡಿಮೆ.
ಭಾರತದ ಸಕ್ರಿಯ ಪ್ರಕರಣಗಳ ಹೊರೆ ಪ್ರಸ್ತುತ 3,69,846 ಆಗಿದೆ; ಇದು 146 ದಿನಗಳಲ್ಲಿ ಅತ್ಯಂತ ಕಡಿಮೆ.
ಪ್ರಸ್ತುತ ಚೇತರಿಕೆ ದರ 97.51%; ಇದು ಮಾರ್ಚ್ 2020ರ ನಂತರ ಗರಿಷ್ಠವೆನಿಸಿದೆ.
ದೇಶಾದ್ಯಂತ ಇದುವರೆಗೂ 3,14,48,754 ಒಟ್ಟು ಚೇತರಿಕೆ ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ 36,830 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ 1.98% ರಷ್ಟಿದೆ; ಕಳೆದ 53 ದಿನಗಳಿಂದ 3%ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.
ದೈನಂದಿನ ಪಾಸಿಟಿವಿಟಿ ದರ 1.61%; ಕಳೆದ 22 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.
ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಏರಿಕೆಯಾಗಿದೆ - 49.66 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
***
(Release ID: 1746639)
Visitor Counter : 274
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam