ಸಂಸದೀಯ ವ್ಯವಹಾರಗಳ ಸಚಿವಾಲಯ

ಸಂಸತ್ತಿನ ಅಧಿವೇಶನಗಳಲ್ಲಿ ಪ್ರತಿಪಕ್ಷಗಳ ಪ್ರಜಾಪ್ರಭುತ್ವ ವಿರೋಧಿ ಮತ್ತು ಹಿಂಸಾತ್ಮಕ ವರ್ತನೆಯು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿದೆ


ಸರ್ಕಾರ ಹಲವು ಸಂದರ್ಭಗಳಲ್ಲಿ ಚರ್ಚೆಗಳಿಗೆ ಆಹ್ವಾನ ನೀಡಿತ್ತು. ಆದರೆ, ಈ ಮನವಿಗಳಿಗೆ ಕಿವುಡಾದ ವಿರೋಧ ಪಕ್ಷಗಳು

ವಿಪಕ್ಷಗಳು ಅಡ್ಡಿಪಡಿಸುವಿಕೆಯ ಪೂರ್ವ ಯೋಜಿತ ಕಾರ್ಯಸೂಚಿಯನ್ನು ಹೊಂದಿದ್ದವು ಮತ್ತು ಚರ್ಚೆಯ ಬಗ್ಗೆ ಅವುಗಳಿಗೆ ಯಾವುದೇ ಆಸಕ್ತಿ ಇರಲಿಲ್ಲ

ವಿರೋಧ ಪಕ್ಷಗಳ ಸದಸ್ಯರ ಅನುಚಿತ ವರ್ತನೆ ಭಾರತದ ಸಂಸದೀಯ ಇತಿಹಾಸದಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ರಾಷ್ಟ್ರದ ಕ್ಷಮೆ ಕೇಳಬೇಕು.

ಪ್ರತಿಪಕ್ಷಗಳ ಅವಮಾನಕರ ಮತ್ತು ಪ್ರತಿರೋಧಕ ನಡವಳಿಕೆಗಾಗಿ ಕಠಿಣ ಕ್ರಮಕ್ಕೆ ಆಗ್ರಹ

ಅತ್ಯಧಿಕ ಅಡ್ಡಿಯ ಹೊರತಾಗಿಯೂ, ರಾಜ್ಯಸಭೆಯ ಈ ಅಧಿವೇಶನದಲ್ಲಿ ಪ್ರತಿ ದಿನ ಅಂಗೀಕರಿಸಲಾದ ಮಸೂದೆಗಳು 2014 ರಿಂದೀಚೆಗೆ 2 ನೇ ಅತಿ ಹೆಚ್ಚು (ದಿನಕ್ಕೆ 1.1 ಮಸೂದೆಗಳು)

Posted On: 12 AUG 2021 3:46PM by PIB Bengaluru

ಸಂಸತ್ತಿನಲ್ಲಿ ಪ್ರತಿಪಕ್ಷಗಳ ಸದಸ್ಯರ (ಸಂಸದರು) ನಾಚಿಕೆಗೇಡಿನ ನಡವಳಿಕೆಗಳು ಮಾಮೂಲಾಗಿ ಬಿಟ್ಟಿವೆ.  ಈ ಅಧಿವೇಶನದಲ್ಲೂ ಅವರ ನಡವಳಿಕೆಗಳು ಬದಲಾಗಲಿಲ್ಲ. ಸದನವು ಎಂದೂ ಕಂಡರಿಯದ ನಿಯಮ ಪುಸ್ತಕವನ್ನು ಹರಿದು ಹಾಕುವುದರಿಂದ ಹಿಡಿದು, ವಿರೋಧ ಪಕ್ಷಗಳ ಅತ್ಯಂತ ಅಸಂವಿಧಾನಿಕ ನಡವಳಿಕೆಗಳು ದಿನದಿಂದ ದಿನಕ್ಕೆ ನಾಚಿಕೆಗೇಡಿನ ಸಂಗತಿಯಾಗಿವೆ ಎಂದು ಇಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಗಿದೆ.  ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್, ಶ್ರೀ ಧರ್ಮೇಂದ್ರ ಪ್ರಧಾನ್, ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ, ಶ್ರೀ ಪ್ರಹ್ಲಾದ್ ಜೋಶಿ, ಶ್ರೀ ಭೂಪೇಂದ್ರ ಯಾದವ್, ಶ್ರೀ ಅನುರಾಗ್ ಸಿಂಗ್ ಠಾಕೂರ್, ಶ್ರೀ ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಶ್ರೀ ವಿ ಮುರಳೀಧರನ್ ಭಾಗವಹಿಸಿದ್ದರು.

ಅಧಿವೇಶನವು ಯಾವುದೇ ಚರ್ಚೆಯಿಲ್ಲದೇ ವ್ಯರ್ಥವಾಗಬೇಕು ಎಂದು ವಿರೋಧ ಪಕ್ಷಗಳು ಸಾರ್ವಜನಿಕವಾಗಿ ಹೇಳಿರುವ ಬಗ್ಗೆ ಸಚಿವರು ಗಮನಸೆಳೆದರು. ಸದನ ನಡೆಯಲು ಬಿಡಬಾರದು ಎಂಬುದು ಅವರ ಉದ್ದೇಶವಾಗಿತ್ತು. ವಾಸ್ತವವಾಗಿ, ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಚರ್ಚೆಗಳಿಗೆ ಸಿದ್ದವಿತ್ತು. ಆದಾಗ್ಯೂ, ಚರ್ಚೆಗಳ ಮನವಿಗಳಿಗೆ ಅವರು ಕಿವುಡಾದವು ಮತ್ತು ಅವರು ಮಾನ್ಯ ಸಚಿವರ ಕೈಯಿಂದ ಕಾಗದಗಳನ್ನು ಕಿತ್ತುಕೊಂಡು ಹರಿದು ಹಾಕಿದರು. ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೂ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರನ್ನು ಪರಿಚಯಿಸಲು ಅವಕಾಶ ನೀಡಲಿಲ್ಲ. 

ಕೆಲವು ವಿರೋಧ ಪಕ್ಷದ ಸದಸ್ಯರು ಗರ್ಭಗೃಹವನ್ನು ಏರುವ ಮೂಲಕ ಸದನದ ಪಾವಿತ್ರ್ಯವನ್ನು ಹಾಳುಮಾಡಿದರು, ಸದನದ ಬಾವಿಯಲ್ಲಿರುವ ಮೇಜು ಮತ್ತು ಕುರ್ಚಿ ಮೇಲೆ ನಿಯಮ ಪುಸ್ತಕವನ್ನು ಹರಿದು ಎಸೆದರು. ಸಂಸತ್ತಿನಲ್ಲಿ ಸದಸ್ಯರು ಮೇಜಿನ ಮೇಲೆ ನಿಂತಿದ್ದಲ್ಲದೆ ಸಂಸತ್ತಿನ ನೈತಿಕತೆಯನ್ನೇ ತುಳಿಯುತ್ತಿದ್ದರು. ಅವರು ಪುಸ್ತಕವನ್ನು ಕುರ್ಚಿಯ ಮೇಲೆ ಮಾತ್ರ ಎಸೆಯುತ್ತಿರಲಿಲ್ಲ, ಸಂಸದೀಯ  ನಡವಳಿಕೆಯನ್ನೇ ಸದನದ ಹೊರಗೆ ಎಸೆಯುತ್ತಿದ್ದರು. ಇಂತಹ ನಡವಳಿಕೆಯು ನಮ್ಮ ಸದನದಲ್ಲಿ ಎಂದೂ ಕಂಡಿರಲಿಲ್ಲ ಮತ್ತು ವಿರೋಧ ಪಕ್ಷಗಳು ಸದನದ ಪ್ರತಿಷ್ಠೆಗೆ ತೀವ್ರ ಹಾನಿಯನ್ನುಂಟು ಮಾಡಿವೆ. ಪ್ರತಿಪಕ್ಷಗಳ ನಡವಳಿಕೆಯು ಸಂಸತ್ತಿನ ಘನತೆಯ ಮೇಲಿನ ಆಕ್ರಮಣವಾಗಿದೆ. ವಿರೋಧ ಪಕ್ಷಗಳ ಸದಸ್ಯರ ಅನುಚಿತ ವರ್ತನೆ ಭಾರತದ ಸಂಸತ್ತಿನ ಇತಿಹಾಸದಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ. ವಿಪಕ್ಷದ ಸಂಸದರು ತಮ್ಮ ನಡವಳಿಕೆಯ ಬಗ್ಗೆ ಕ್ಷಮೆಯಾಚಿಸದಿರುವುದು ದುರದೃಷ್ಟಕರ. ಬದಲಾಗಿ ಅವರು ಈ ನಾಚಿಕೆಗೇಡಿನ ಕ್ರಮಗಳನ್ನು ಪರಾಕ್ರಮಗಳೆಂದು ಪರಿಗಣಿಸುತ್ತಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳನ್ನು ಚರ್ಚಿಸುವುದನ್ನು ಬಯಸದ ವಿರೋಧ ಪಕ್ಷಗಳು ಅಧಿವೇಶನದುದ್ದಕ್ಕೂ ಅನುಚಿತವಾಗಿ ವರ್ತಿಸಿದವು ಎಂದು ಶ್ರೀ ಪೀಯೂಷ್ ಗೋಯಲ್ ಹೇಳಿದರು. ಪ್ರತಿಪಕ್ಷಗಳ ನಾಚಿಕೆಗೇಡಿನ ಮತ್ತು ಅಡ್ಡಿಪಡಿಸುವ ನಡವಳಿಕೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಯ ಒಡಕನ್ನು ಉಂಟುಮಾಡಲು ವಿರೋಧ ಪಕ್ಷಗಳು ಏಕತೆಯನ್ನು ಸೃಷ್ಟಿಸಲು ಬಯಸಿದ್ದವು. ಅವರು ರಾಷ್ಟ್ರಕ್ಕೆ ಉತ್ತರ ನೀಡಬೇಕು ಎಂದರು.

ಮಸೂದೆಗಳನ್ನು ಗದ್ದಲದ ನಡುವೆ ಅಂಗೀಕರಿಸಿದ ಬಗ್ಗೆ ಪ್ರತಿಪಕ್ಷಗಳು ಪ್ರಶ್ನಿಸುತ್ತವೆ. ಆದಾಗ್ಯೂ, ಸಂಸತ್ತಿನ ಚರ್ಚೆಗೆ ಅವಕಾಶ ನೀಡದಿರುವ ಅವರ ವರ್ತನೆಯಿಂದಾಗಿ ಬೇರೆ ಆಯ್ಕೆ ಇರಲಿಲ್ಲ. ಸಂಸತ್ತಿನ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ಕೇವಲ ಕೂಗಾಟದಿಂದ ಆರಂಭವಾದ ಅವರ ವರ್ತನೆಯು, ಹಿಂಸೆ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆಯವರೆಗೂ ಹೋಯಿತು. ಅಲ್ಲದೆ, ಯುಪಿಎ ಆಡಳಿತಾವಧಿಯಲ್ಲಿ ಹಲವಾರು ಮಸೂದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಿದಾಗ ಈ ಕಾಳಜಿ ಎಲ್ಲಿಗೆ ಹೋಗಿತ್ತು.  2006 ಮತ್ತು 2014 ರ ನಡುವೆ, ಯುಪಿಎ ಸರ್ಕಾರವು ಒಟ್ಟು 18 ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕರಿಸಿತು.

2014 ರಿಂದ ಅತ್ಯಧಿಕ ಅಡ್ಡಿಗಳ ಹೊರತಾಗಿಯೂ, ರಾಜ್ಯಸಭೆಯ ಈ ಅಧಿವೇಶನದಲ್ಲಿ ಪ್ರತಿ ದಿನ ಅಂಗೀಕರಿಸಿದ ಮಸೂದೆಗಳ ಸಂಖ್ಯೆ 2014 ರಿಂದ 2 ನೇ ಅತಿ ಹೆಚ್ಚು (ಅಂದರೆ ಪ್ರತಿ ದಿನ 1.1 ಮಸೂದೆಗಳನ್ನು ಅಂಗೀಕರಿಸಲಾಗಿದೆ). ಅಡಚಣೆಗಳು / ಮುಂದೂಡಿಕೆಗಳಿಂದಾಗಿ ಕಳೆದುಹೋದ ಸಮಯ (ಆಗಸ್ಟ್ 11 ರವರೆಗೆ) 76 ಗಂಟೆ 26 ನಿಮಿಷಗಳು ಮತ್ತು ರಾಜ್ಯಸಭೆಯ 231 ನೇ ಅಧಿವೇಶನವು ಅಡೆತಡೆಗಳು / ಮುಂದೂಡಿಕೆಗಳಿಂದಾಗಿ ಪ್ರತಿ ದಿನ ಕಳೆದುಕೊಂಡ ಸರಾಸರಿ ಸಮಯ 4 ಗಂಟೆಗಳು 30 ನಿಮಿಷಗಳು.

ಎಲ್ಲಾ ಅವ್ಯವಸ್ಥೆ ಮತ್ತು ಅಡ್ಡಿಗಳ ಹೊರತಾಗಿಯೂ, 19 ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರವಾದವು. (ಒಬಿಸಿ ಮೀಸಲಾತಿಯ ಸಂವಿಧಾನದ ತಿದ್ದುಪಡಿ ಸಹ ಅಂಗೀಕಾರವಾಗಿದೆ), ಇದು ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿದೆ ಮತ್ತು ಬಡವರು, ಒಬಿಸಿಗಳು, ಕಾರ್ಮಿಕರು, ಉದ್ಯಮಿಗಳು ಮತ್ತು ನಮ್ಮ ಸಮಾಜದ ಎಲ್ಲ ವರ್ಗಗಳಿಗೆ ಪ್ರಯೋಜನಕಾರಿಯಾಗಿದೆ.  ಸಂಸತ್ತಿನಲ್ಲಿ ಶಾಸಕಾಂಗ ಕಾರ್ಯಸೂಚಿಯನ್ನು ನಡೆಸುವ ಸರ್ಕಾರದ ಬದ್ಧತೆ, ಉತ್ಪಾದಕತೆ ಮತ್ತು ಸಾಮರ್ಥ್ಯವನ್ನು ಇದು ಪ್ರತಿಬಿಂಬಿಸುತ್ತದೆ, ಇದು ತನ್ನ ನಾಗರಿಕರ ಆಕಾಂಕ್ಷೆಗಳನ್ನು ಈಡೀರಿಸುವ ಗುರಿಯನ್ನು ಹೊಂದಿದೆ. ಇದು ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಅಧಿವೇಶನದಲ್ಲಿ ಸರ್ಕಾರವು ಸರ್ಕಾರಿ ವ್ಯವಹಾರವನ್ನು ಯಶಸ್ವಿಯಾಗಿ ನಡೆಸಿತು.

ಸಂಸತ್ತಿನ ಮುಂಗಾರು ಅಧಿವೇಶನದ ವಿವರಗಳು

1. ಸಂಸತ್ತಿನ 2021 ರ ಮುಂಗಾರು ಅಧಿವೇಶನ, ಜುಲೈ 19, 2021 ರ ಸೋಮವಾರದಿಂದ ಆರಂಭವಾಗಿ, ಆಗಸ್ಟ್ 11 ರ ಬುಧವಾರದಂದು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.

2. ಮೂಲತಃ 19 ಜುಲೈನಿಂದ  ಆಗಸ್ಟ್ 13, 2021 ರವರೆಗೆ 19 ಸಭೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದ ಅಧಿವೇಶನವು ಉಭಯ ಸದನಗಳಲ್ಲಿ ನಿರಂತರ ಅಡಚಣೆಗಳು ಮತ್ತು ಅಗತ್ಯ ಸರ್ಕಾರಿ ವ್ಯವಹಾರಗಳನ್ನು ಪೂರ್ಣಗೊಳಿಸಿದ ಕಾರಣ ಮೊಟಕುಗೊಳಿಸಲಾಯಿತು.

3. ಅಧಿವೇಶನದ ಸಮಯದಲ್ಲಿ, 22 ಮಸೂದೆಗಳನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು, ಇದರಲ್ಲಿ 2021-22ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳು ಮತ್ತು ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ 2017-2018ರ ಹೆಚ್ಚುವರಿ ಅನುದಾನಗಳ ಬೇಡಿಕೆಗಳಿಗೆ ಸಂಬಂಧಿಸಿದ ಎರಡು ಧನ ವಿನಿಯೋಗ ಮಸೂದೆಗಳನ್ನು  ರಾಜ್ಯಸಭೆಯಲ್ಲಿ ಕಲಂ 109 (5) ರ ಅಡಿಯಲ್ಲಿ ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗಿದೆ. ಈ 22 ಮಸೂದೆಗಳ ಸಂಪೂರ್ಣ ಪಟ್ಟಿಯನ್ನು ಲಗತ್ತಿಸಲಾಗಿದೆ.

4. ಸುಗ್ರೀವಾಜ್ಞೆಗಳನ್ನು ಬದಲಿಸುವ ನಾಲ್ಕು ಮಸೂದೆಗಳು, ಅವುಗಳೆಂದರೆ, ನ್ಯಾಯಮಂಡಳಿ ಸುಧಾರಣೆಗಳು (ತರ್ಕಬದ್ಧಗೊಳಿಸುವಿಕೆ ಮತ್ತು ಸೇವಾ ನಿಯಮಗಳು) ಸುಗ್ರೀವಾಜ್ಞೆ, 2021, ಋಣಭಾರ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆ, 2021, ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಪಕ್ಕದ ಪ್ರದೇಶಗಳ ವಾಯು ಗುಣಮಟ್ಟ ನಿರ್ವಹಣೆ , 2021 ಮತ್ತು ಅಗತ್ಯ ರಕ್ಷಣಾ ಸೇವೆಗಳ ಸುಗ್ರೀವಾಜ್ಞೆ, 2021. ಇವುಗಳನ್ನು ಮುಂಗಾರು ಅಧಿವೇಶನಕ್ಕೆ ಮುನ್ನ ರಾಷ್ಟ್ರಪತಿಯವರು ಘೋಷಿಸಿದ್ದವು. ಇವುಗಳನ್ನು ಸದನಗಳು ಅಂಗೀಕರಿಸಿದವು.

5. ಸಂಸತ್ತಿನ ಸದನಗಳಲ್ಲಿ ಅಂಗೀಕರಿಸಲಾದ ಕೆಲವು ಪ್ರಮುಖ ಮಸೂದೆಗಳು ಕೆಳಕಂಡಂತಿವೆ:-

 

ಎ. ಆರ್ಥಿಕ ವಲಯ/ಸುಲಭ ವ್ಯಾಪಾರಕ್ಕೆ ಕ್ರಮಗಳು 

ತೆರಿಗೆ ಕಾನೂನುಗಳ (ತಿದ್ದುಪಡಿ) ವಿಧೇಯಕ, 2021 ರ ಪ್ರಕಾರ, 28 ನೇ ಮೇ, 2012 ಕ್ಕಿಂತ ಮೊದಲು ವಹಿವಾಟು ಕೈಗೊಂಡಿದ್ದಲ್ಲಿ, ಭಾರತೀಯ ಆಸ್ತಿಗಳ ಯಾವುದೇ ಪರೋಕ್ಷ ವರ್ಗಾವಣೆಗೆ ಭವಿಷ್ಯದಲ್ಲಿ ಯಾವುದೇ ತೆರಿಗೆಯನ್ನು ವಿಧಿಸುವುದಿಲ್ಲ.

ಜನರಲ್ ಇನ್ಶೂರೆನ್ಸ್ ಬಿಸಿನೆಸ್ (ರಾಷ್ಟ್ರೀಕರಣ) ತಿದ್ದುಪಡಿ ವಿಧೇಯಕ, 2021 ಸಾರ್ವಜನಿಕ ವಲಯದ ವಿಮಾ ಕಂಪನಿಗಳಲ್ಲಿ ಹೆಚ್ಚಿನ ಖಾಸಗಿ ಪಾಲ್ಗೊಳ್ಳುವಿಕೆಯನ್ನು ಒದಗಿಸುತ್ತದೆ ಮತ್ತು ವಿಮೆಯ ವ್ಯಾಪ್ತಿ ಮತ್ತು ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುತ್ತದೆ. ಪಾಲಿಸಿ ಹೊಂದಿರುವವರ ಹಿತಾಸಕ್ತಿಗಳನ್ನು ಉತ್ತಮಗೊಳಿಸುತ್ತದೆ ಮತ್ತು ಆರ್ಥಿಕತೆಯ ವೇಗದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.

 ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮ (ತಿದ್ದುಪಡಿ) ವಿಧೇಯಕ, 2021 ಬ್ಯಾಂಕುಗಳ ಮೇಲೆ ನಿರ್ಬಂಧಗಳಿದ್ದಾಗಲೂ, ಠೇವಣಿದಾರರಿಗೆ ಅವರ ಸ್ವಂತ ಹಣಕ್ಕೆ ಸುಲಭ ಮತ್ತು ನಿಗದಿತ ಸಮಯದ ಪ್ರವೇಶವನ್ನು ಒದಗಿಸುತ್ತದೆ. ಬ್ಯಾಂಕು ತನ್ನ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಂದ ತಾತ್ಕಾಲಿಕವಾಗಿ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗದಿದ್ದರೂ, ಠೇವಣಿದಾರರು ತಮ್ಮ ಠೇವಣಿಗಳನ್ನು ನಿಗಮದ ಮಧ್ಯಂತರ ಪಾವತಿಗಳ ಮೂಲಕ ಠೇವಣಿ ವಿಮಾ ರಕ್ಷಣೆಯ ಮೂಲಕ ಪ್ರವೇಶಿಸಬಹುದು ಎಂದು ಪ್ರಸ್ತಾಪಿಸಲಾಗಿದೆ.

ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆ, 2021 ಕೆಲವು ಅಪರಾಧಗಳನ್ನು ನಾಗರಿಕ ಡಿಫಾಲ್ಟ್ ಗಳಾಗಿ ಪರಿವರ್ತಿಸುತ್ತದೆ ಮತ್ತು ಈ ಅಪರಾಧಗಳಿಗೆ ಶಿಕ್ಷೆಯ ಸ್ವರೂಪವನ್ನು ಬದಲಾಯಿಸುತ್ತದೆ. ಇದು ಸಣ್ಣ ಎಲ್ಎಲ್ಪಿಯನ್ನು ವ್ಯಾಖ್ಯಾನಿಸುತ್ತದೆ, ಕೆಲವು ನ್ಯಾಯ ನಿರ್ಣಯ ಅಧಿಕಾರಿಗಳ ನೇಮಕಾತಿ ಮತ್ತು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಅವಕಾಶ ಒದಗಿಸುತ್ತದೆ.

ಫ್ಯಾಕ್ಟರಿಂಗ್ ರೆಗ್ಯುಲೇಷನ್ (ತಿದ್ದುಪಡಿ) ಮಸೂದೆ, 2021 ಸಾಲ ಸೌಲಭ್ಯವನ್ನು ಪಡೆಯಲು ಹೆಚ್ಚುವರಿ ಮಾರ್ಗಗಳನ್ನು ಒದಗಿಸುವ ಮೂಲಕ, ವಿಶೇಷವಾಗಿ ಟ್ರೇಡ್ ರಿಸೀವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ ಮೂಲಕ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಕಾರ್ಯನಿರತ ಬಂಡವಾಳದ ಲಭ್ಯತೆಯ ಹೆಚ್ಚಳವು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯದ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದು.

B. ಸಾರಿಗೆ ವಲಯ ಸುಧಾರಣೆಗಳು

ನ್ಯಾವಿಗೇಷನ್ ಗೆ ಕಡಲ ನೆರವು ಮಸೂದೆ, 2021 ಭಾರತದಲ್ಲಿ ನ್ಯಾವಿಗೇಷನ್ ಗೆ ಅಭಿವೃದ್ಧಿ, ನಿರ್ವಹಣೆ ಮತ್ತು ನಿರ್ವಹಣೆಗಾಗಿ ನೆರವು ಒದಗಿಸುತ್ತದೆ; ನ್ಯಾವಿಗೇಷನ್, ಅದರ ಐತಿಹಾಸಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೌಲ್ಯದ ಅಭಿವೃದ್ಧಿಗೆ ಸಹಾಯಕ ಆಯೋಜಕರ ತರಬೇತಿ ಮತ್ತು ಪ್ರಮಾಣೀಕರಣಕ್ಕಾಗಿ; ಭಾರತವು ಒಂದು ಪಕ್ಷವಾಗಿರುವ ಕಡಲ ಒಪ್ಪಂದಗಳು ಮತ್ತು ಅಂತರಾಷ್ಟ್ರೀಯ ಸಾಧನಗಳ ಅಡಿಯಲ್ಲಿ ಬಾಧ್ಯತೆಯ ಅನುಸರಣೆಯನ್ನು ಖಚಿತಪಡಿಸುತ್ತದೆ.

ಒಳನಾಡಿನ ಹಡಗುಗಳ ಮಸೂದೆ, 2021 ಒಳನಾಡಿನ ಜಲಮಾರ್ಗಗಳು ಮತ್ತು ನೌಕಾಯಾನಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಏಕರೂಪತೆಯನ್ನು ತರಲು ಆರ್ಥಿಕ ಮತ್ತು ಸುರಕ್ಷಿತ ಸಾಗಾಣಿಕೆ ಮತ್ತು ಒಳನಾಡಿನ ನೀರಿನ ಮೂಲಕ ವ್ಯಾಪಾರವನ್ನು ಉತ್ತೇಜಿಸುತ್ತದೆ, ಸಂಚರಣೆ ಸುರಕ್ಷತೆ, ಜೀವನ ಮತ್ತು ಸರಕು ರಕ್ಷಣೆ ಮತ್ತು ಮಾಲಿನ್ಯ ತಡೆಗಟ್ಟುವಿಕೆ ಒಳನಾಡಿನ ಹಡಗುಗಳ ಬಳಕೆ ಅಥವಾ ಸಂಚರಣೆ, ಒಳನಾಡಿನ ಹಡಗುಗಳನ್ನು ನಿಯಂತ್ರಿಸುವ ಕಾರ್ಯವಿಧಾನಗಳನ್ನು ಬಲಪಡಿಸಲು, ಅವುಗಳ ನಿರ್ಮಾಣ, ಸಮೀಕ್ಷೆ, ನೋಂದಣಿ, ನಿರ್ವಹಣೆ, ಸಂಚರಣೆಗಳಲ್ಲಿ ಒಳನಾಡಿನ ಜಲ ಸಾರಿಗೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುತ್ತದೆ. 

ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2021 "ಪ್ರಮುಖ ವಿಮಾನ ನಿಲ್ದಾಣ" ದ ವ್ಯಾಖ್ಯಾನವನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸುತ್ತದೆ, ಇದರಿಂದಾಗಿ ಒಂದು ಗುಂಪಿನ ವಿಮಾನ ನಿಲ್ದಾಣಗಳ ತೆರಿಗೆಯನ್ನು ನಿರ್ಧರಿಸಲು ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ, ಇದು ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಸಿ. ಶೈಕ್ಷಣಿಕ ಸುಧಾರಣೆಗಳು

ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆ ಮಸೂದೆ, 2021 ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆಯ  ಕೆಲವು ಸಂಸ್ಥೆಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸಿದೆ ಮತ್ತು ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆಗೆ ಪಠ್ಯಕ್ರಮ  ಮತ್ತು ಸಂಶೋಧನೆಗೆ ಒತ್ತು ನೀಡುತ್ತದೆ. 

ಕೇಂದ್ರೀಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕ, 2021 ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆ 2009 ಕ್ಕೆ ತಿದ್ದುಪಡಿ ಮೂಲಕ, ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ "ಸಿಂಧು ಸೆಂಟ್ರಲ್ ಯೂನಿವರ್ಸಿಟಿ" ಹೆಸರಿನಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಅವಕಾಶ ಒದಗಿಸುತ್ತದೆ.

ಡಿ. ಸಾಮಾಜಿಕ ನ್ಯಾಯದ ಸುಧಾರಣೆಗಳು 

ಸಂವಿಧಾನ (ನೂರ ಇಪ್ಪತ್ತೇಳನೇ ತಿದ್ದುಪಡಿ) ವಿಧೇಯಕ, 2021 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ತಮ್ಮ ರಾಜ್ಯ ಪಟ್ಟಿ/ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯನ್ನು ತಯಾರಿಸಲು ಮತ್ತು ನಿರ್ವಹಿಸಲು ಅಧಿಕಾರ ನೀಡುತ್ತದೆ.

ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ತಿದ್ದುಪಡಿ ವಿಧೇಯಕ, 2021 ನ್ಯಾಯಾಲಯದ ಬದಲಾಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ (ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ) ಅಂತಹ ಆದೇಶಗಳನ್ನು ನೀಡುತ್ತಾರೆ. ಮಸೂದೆಯು ಗಂಭೀರ ಅಪರಾಧಗಳಿಗೆ ಏಳು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆ ಸೂಚಿಸಿದೆ ಮತ್ತು ಕನಿಷ್ಠ ಶಿಕ್ಷೆಯನ್ನು ಸೂಚಿಸಿಲ್ಲ.

ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ, 2021, ಅರುಣಾಚಲ ಪ್ರದೇಶ ರಾಜ್ಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಮಾರ್ಪಡಿಸುವುದು.

6. ರಾಜ್ಯಸಭೆಯಲ್ಲಿ, ನಿಯಮ 176 ರ ಅಡಿಯಲ್ಲಿ "ಕೋವಿಡ್ -19 ಸಾಂಕ್ರಾಮಿಕ ರೋಗ ನಿರ್ವಹಣೆ, ಲಸಿಕೆ ನೀತಿ ಜಾರಿ ಮತ್ತು ಮೂರನೇ ಅಲೆಯ ಸವಾಲುಗಳು" ಮತ್ತು "ಕೃಷಿ ಸಮಸ್ಯೆಗಳು ಮತ್ತು ಪರಿಹಾರಗಳು" (ಅನಿರ್ದಿಷ್ಟವಾಗಿ ಉಳಿದಿವೆ) ಕುರಿತು ಎರಡು ಸಣ್ಣ ಅವಧಿಯ ಚರ್ಚೆಗಳು ನಡೆದವು.

7. ಇದಲ್ಲದೆ, ಒಂದು ವಿಧೇಯಕ ಅಂದರೆ "ನ್ಯಾಯಮಂಡಳಿ ಸುಧಾರಣೆಗಳು (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ನಿಯಮಗಳು) ವಿಧೇಯಕ, 2021" ಮತ್ತು ಒಂದು ಬಾಕಿಯಿದ್ದ ವಿಧೇಯಕ ಅಂದರೆ "ಮಹಿಳೆಯರ ಬಗೆಗಿನ ಅಸಭ್ಯ ನಡವಳಿಕೆ (ನಿಷೇಧ) ತಿದ್ದುಪಡಿ ಮಸೂದೆ, 2012" ಅನ್ನು ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಿಂಪಡೆಯಲಾಗಿದೆ. 

 

ಲಗತ್ತು 

17 ನೇ ಲೋಕಸಭೆಯ 6 ನೇ ಅಧಿವೇಶನ ಮತ್ತು ರಾಜ್ಯಸಭೆಯ 254 ನೇ ಅಧಿವೇಶನ (ಮುಂಗಾರು ಅಧಿವೇಶನ, 2021) ನಡೆದವು. ಸಂತ್ತಿನ ಉಭಯ ಸದನಗಳಲ್ಲಿ 22 ಮಸೂದೆಗಳು ಅಂಗೀಕಾರ ಪಡೆದವು.

1. ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆ ಮಸೂದೆ, 2021

2. ನ್ಯಾವಿಗೇಷನ್ ಗೆ ಕಡಲ ನೆರವು ಮಸೂದೆ, 2021

3. ಬಾಲನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ತಿದ್ದುಪಡಿ ವಿಧೇಯಕ, 2021

4. ಫ್ಯಾಕ್ಟರಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ, 2021

5. ಒಳನಾಡು ಹಡಗುಗಳ ಮಸೂದೆ , 2021

6. ಋಣಭಾರ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ, 2021

7. ತೆಂಗು  ಮಂಡಳಿ (ತಿದ್ದುಪಡಿ) ವಿಧೇಯಕ, 2021

8. ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2021

9. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಪಕ್ಕದ ಪ್ರದೇಶಗಳ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಮಸೂದೆ, 2021

10. ಅಗತ್ಯ ರಕ್ಷಣಾ ಸೇವೆಗಳ ವಿಧೇಯಕ, 2021

11. ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆ, 2021

12. ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ, 2021.

13. ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ಮಸೂದೆ, 2021.

14. ನ್ಯಾಯಮಂಡಳಿ ಸುಧಾರಣೆಗಳ ವಿಧೇಯಕ, 2021

15. ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆ, 2021

16. ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ, 2021

17. ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ವಿಧೇಯಕ, 2021

18. ರಾಷ್ಟ್ರೀಯ ಹೋಮಿಯೋಪತಿ ಆಯೋಗ (ತಿದ್ದುಪಡಿ) ಮಸೂದೆ, 2021

19. ಭಾರತೀಯ ವೈದ್ಯ ಪದ್ಧತಿ ರಾಷ್ಟ್ರೀಯ ಆಯೋಗ (ತಿದ್ದುಪಡಿ) ಮಸೂದೆ, 2021

20. ಸಂವಿಧಾನ (ನೂರಾ ಇಪ್ಪತ್ತೇಳನೇ ತಿದ್ದುಪಡಿ) ಮಸೂದೆ, 2021

21. *ಧನ ವಿನಿಯೋಗ (ಸಂ.3) ವಿಧೇಯಕ, 2021

22. *ಧನ ವಿನಿಯೋಗ (ಸಂ.4) ವಿಧೇಯಕ, 2021 

 

II -  ಹಿಂಪಡೆದ ಎರಡು ಹಳೆಯ ಮಸೂದೆಗಳು

1. ನ್ಯಾಯಮಂಡಳಿ ಸುಧಾರಣೆಗಳು (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ನಿಯಮಗಳು) ವಿಧೇಯಕ, 2021

2. ಮಹಿಳೆಯರ ಬಗೆಗಿನ ಅಸಭ್ಯ ನಡವಳಿಕೆ (ನಿಷೇಧ) ತಿದ್ದುಪಡಿ ಮಸೂದೆ, 2012

 

*ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ಎರಡು ವಿಧೇಯಕಗಳನ್ನು ರಾಜ್ಯಸಭೆಗೆ ಅಂಗೀಕಾರಕ್ಕಾಗಿ ಕಳುಹಿಸಲಾಯಿತು, ರಾಜ್ಯಸಭೆಯಲ್ಲಿ ಸ್ವೀಕೃತಿಯ ದಿನಾಂಕದಿಂದ ಹದಿನಾಲ್ಕು ದಿನಗಳ ಅವಧಿಯಲ್ಲಿ ಲೋಕಸಭೆಗೆ ಅವುಗಳನ್ನು ಹಿಂತಿರುಗಿಸುವ ಸಾಧ್ಯತೆಯಿಲ್ಲ. ಆದ್ದರಿಂದ ಸಂವಿಧಾನದ 109 ನೇ ವಿಧಿಯ ಕಲಂ (5) ರ ಅಡಿಯಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಲಾದ ರೂಪದಲ್ಲಿ ಸದನದ ಅವಧಿಯ ಮುಕ್ತಾಯದ ಸಮಯದಲ್ಲಿ ಮಸೂದೆಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.



(Release ID: 1745272) Visitor Counter : 363