ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಆಗಸ್ಟ್ 13 ರಂದು ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 2.0 ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವ ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಎಚ್. ಅನುರಾಗ್ ಸಿಂಗ್ ಠಾಕೂರ್


ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0ರಲ್ಲಿ ಭಾಗವಹಿಸಿ, ಅದನ್ನು ಜನಾಂದೋಲನವನ್ನಾಗಿ ಮಾಡುವಂತೆ ನಾನು ಪ್ರತಿಯೊಬ್ಬರನ್ನೂ ಆಗ್ರಹಿಸುತ್ತೇನೆ: ಶ್ರೀ ಅನುರಾಗ್ ಠಾಕೂರ್

Posted On: 10 AUG 2021 5:04PM by PIB Bengaluru

ಪ್ರಮುಖ ಮುಖ್ಯಾಂಶಗಳು:

• ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ ಆಯೋಜಿಸಲಾಗಿದೆ

• 2021 ರ ಅಕ್ಟೋಬರ್ 2 ರವರೆಗೆ 75 ಜಿಲ್ಲೆಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 75 ಹಳ್ಳಿಗಳಲ್ಲಿ ಪ್ರತಿ ವಾರ ಕಾರ್ಯಕ್ರಮಗಳು ನಡೆಯಲಿವೆ.

• ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟಗಳನ್ನು 744 ಜಿಲ್ಲೆಗಳು, 744 ಜಿಲ್ಲೆಗಳ 75 ಗ್ರಾಮಗಳಲ್ಲಿ ಮತ್ತು ದೇಶಾದ್ಯಂತ 30,000 ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗುವುದು

• ಈ ಉಪಕ್ರಮದ ಮೂಲಕ 7.50 ಕೋಟಿಗೂ ಹೆಚ್ಚು ಯುವಕರು ಮತ್ತು ನಾಗರಿಕರನ್ನು ತಲುಪಿ ಈ ಓಟದಲ್ಲಿ ಭಾಗವಹಿಸುವಂತೆ ಮಾಡಲಾಗುವುದು.

ಸ್ವಾತಂತ್ರ್ಯದ ಅಮೃತ ಮಹೋತ್ಸವ-India@75 ಆಚರಣೆಯ ಭಾಗವಾಗಿ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಅನ್ನು ಆಯೋಜಿಸುತ್ತಿದೆ. 2021ರ ಮಾರ್ಚ್ 12ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿಯವರ ಉದ್ಘಾಟನಾ ಭಾಷಣದಿಂದ ಸ್ಫೂರ್ತಿ ಪಡೆದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು @75ರ ಕ್ರಮಗಳು ಮತ್ತು ಸಂಕಲ್ಪಗಳ ಅಡಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಪರಿಕಲ್ಪನೆಯನ್ನು ರೂಪಿಸಿದೆ.

ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಕಾರ್ಯದರ್ಶಿ, ಶ್ರೀಮತಿ ಉಷಾ ಶರ್ಮಾ, ಕೇಂದ್ರ ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 2021ರ ಆಗಸ್ಟ್ 13ರಂದು ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ರಾಜ್ಯ, ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವ, ಶ್ರೀ ನಿಸಿತ್ ಪ್ರಮಾಣಿಕ್ ಕೂಡ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ದೇಶದ ಸ್ಮಾರಕ ತಾಣಗಳಿಂದ ಜೊತೆಗೂಡುವ ಬಿಎಸ್ ಎಫ್, ಸಿಐಎಸ್ಎಫ್, ಸಿಆರ್.ಪಿಎಫ್, ರೈಲ್ವೆ, ಎನ್.ವೈಕೆಎಸ್, ಐಟಿಬಿಪಿ, ಎನ್.ಎಸ್.ಜಿ, ಎಸ್.ಎಸ್.ಬಿ ಯಂತಹ ಸಂಸ್ಥೆಗಳೊಂದಿಗೆ ಭಾಗಿಯಾಗಲಿದ್ದಾರೆ. ಉದ್ಘಾಟನಾ ದಿನದಂದು ಅಂದರೆ 2021ರ ಆಗಸ್ಟ್ 13ರಂದು ದೇಶಾದ್ಯಂತದ ಐತಿಹಾಸಿಕ ತಾಣಗಳಲ್ಲಿ 75 ಭೌತಿಕ ಕಾರ್ಯಕ್ರಮವನ್ನೂ ನಡೆಸಲಾಗುವುದು. 

ತದನಂತರ, ಪ್ರತಿ ವಾರ ಕಾರ್ಯಕ್ರಮಗಳು 75 ಜಿಲ್ಲೆಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 75 ಹಳ್ಳಿಗಳಲ್ಲಿ 2021 ರ ಅಕ್ಟೋಬರ್ 2 ರವರೆಗೆ ನಡೆಯಲಿವೆ. ಹೀಗಾಗಿ, ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟಗಳನ್ನು 744 ಜಿಲ್ಲೆಗಳು, 744 ಜಿಲ್ಲೆಗಳ 75 ಗ್ರಾಮಗಳು ಮತ್ತು ದೇಶಾದ್ಯಂತ 30,000 ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗುವುದು. ಈ ಉಪಕ್ರಮದ ಮೂಲಕ, 7.50 ಕೋಟಿಗೂ ಹೆಚ್ಚು ಯುವಕರು ಮತ್ತು ನಾಗರಿಕರನ್ನು ತಲುಪಿ ಈ ಓಟದಲ್ಲಿ ಭಾಗವಹಿಸುವಂತೆ ಮಾಡಲಾಗುವುದು.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ತಮ್ಮ ಸಂದೇಶದಲ್ಲಿ, "ನಾವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವಾಗ, ನಾವು ಸದೃಢ ಮತ್ತು ಆರೋಗ್ಯಕರ ಭಾರತಕ್ಕಾಗಿ ಸಂಕಲ್ಪ ಮಾಡಬೇಕು ಏಕೆಂದರೆ ಸದೃಢ ಮತ್ತು ಆರೋಗ್ಯಕರ ಭಾರತದಿಂದ ಮಾತ್ರವೇ ಬಲಿಷ್ಠ ಭಾರತ ಮಾಡಲು ಸಾಧ್ಯ. ಆದ್ದರಿಂದ, ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ರಲ್ಲಿ ಭಾಗವಹಿಸಿ ಅದನ್ನು ಜನಾಂದೋಲನವನ್ನಾಗಿ ಮಾಡುವಂತೆ ನಾನು ಪ್ರತಿಯೊಬ್ಬರನ್ನೂ ಆಗ್ರಹಿಸುವುದಾಗಿ" ತಿಳಿಸಿದ್ದಾರೆ.

ಈ ಬಾರಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 2021ರ ಆಗಸ್ಟ್ 13ರಂದು ಪ್ರಾರಂಭವಾಗುತ್ತದೆ ಮತ್ತು 2 ಅಕ್ಟೋಬರ್ 2021 ರಂದು ಮುಕ್ತಾಯಗೊಳ್ಳುತ್ತದೆ. ಜನರು ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಗಳಂತಹ ಫಿಟ್ನೆಸ್ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದು ಮತ್ತು ಬೊಜ್ಜು, ಸೋಮಾರಿತನ, ಒತ್ತಡ, ಆತಂಕ, ರೋಗಗಳು ಇತ್ಯಾದಿಗಳಿಂದ ಮುಕ್ತಿ ಪಡೆಯುವುದು ಇದರ ಉದ್ದೇಶವಾಗಿದೆ. ಈ ಅಭಿಯಾನದ ಮೂಲಕ, ನಾಗರಿಕರಿಗೆ ತಮ್ಮ ಜೀವನದಲ್ಲಿ ಪ್ರತಿದಿನ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಸೇರಿಸುವ "ಫಿಟ್ನೆಸ್ ನ ಪ್ರಮಾಣ, ನಿತ್ಯ ಅರ್ಧ ಗಂಟೆ ಮಾಡೋಣ" ಸಂಕಲ್ಪವನ್ನು ಮಾಡಲು ಕರೆ ನೀಡಲಾಗುವುದು. 

ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0ರ ಪ್ರಮುಖ ಚಟುವಟಿಕೆಗಳಲ್ಲಿ ಪ್ರತಿಜ್ಞೆ, ರಾಷ್ಟ್ರಗೀತೆಯ ಗಾಯನ, ಸ್ವಾತಂತ್ರ್ಯದ ಓಟ, ವಿವಿಧ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಗಳು, ಯುವ ಸ್ವಯಂ ಸೇವಕರಲ್ಲಿ ಜಾಗೃತಿ ಮತ್ತು ಅವರ ಹಳ್ಳಿಗಳಲ್ಲಿ ಇದೇ ರೀತಿಯ ಸ್ವಾತಂತ್ರ್ಯದ ಓಟಗಳನ್ನು ಆಯೋಜಿಸಲು ಪ್ರೇರೇಪಿಸುವುದು ಸೇರಿವೆ. ಜನರು ಫಿಟ್ ಇಂಡಿಯಾ ಪೋರ್ಟಲ್ https://fitindia.gov.in ನಲ್ಲಿ ತಮ್ಮ ಓಟವನ್ನು ನೋಂದಾಯಿಸಬಹುದು ಮತ್ತು ಅಪ್ ಲೋಡ್ ಮಾಡಬಹುದು ಮತ್ತು #Run4India ಮತ್ತು #AzadikaAmritMahotsav ತಮ್ಮ ಸಾಮಾಜಿಕ ಮಾಧ್ಯಮ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಓಟವನ್ನು ಉತ್ತೇಜಿಸಬಹುದು.

ಗಣ್ಯರು, ಜನ ಪ್ರತಿನಿಧಿಗಳು, ಪಿ.ಆರ್.ಐ ನಾಯಕರು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾಪಟುಗಳು, ಮಾಧ್ಯಮ ವ್ಯಕ್ತಿಗಳು, ವೈದ್ಯರು, ರೈತರು ಮತ್ತು ಸೇನಾ ಸಿಬ್ಬಂದಿ ವಿವಿಧ ಹಂತಗಳಲ್ಲಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಮತ್ತು ಪ್ರೇರೇಪಿಸುವಂತೆ ಮನವಿ ಮಾಡಲಾಗುತ್ತಿದೆ. ಕೋವಿಡ್-19 ಶಿಷ್ಟಾಚಾರಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಭೌತಿಕವಾಗಿ ಮತ್ತು ವರ್ಚುವಲ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಕೇಂದ್ರ ಸರ್ಕಾರದ ಸಚಿವಾಲಯಗಳು, ರಾಜ್ಯಗಳು ಸರ್ಕಾರಗಳು ಮತ್ತು ಇತರ ಸಂಸ್ಥೆಗಳಿಗೆ 2021ರ ಅಕ್ಟೋಬರ್ 2 ರವರೆಗೆ ಅಭಿಯಾನದುದ್ದಕ್ಕೂ ಭೌತಿಕ /ವರ್ಚುವಲ್ ಸ್ವಾತಂತ್ರ್ಯದ ಓಟ ಕಾರ್ಯಕ್ರಮಗಳನ್ನು ನಡೆಸುವಂತೆ ಕೋರಲಾಗಿದೆ. ಅಭಿಯಾನವನ್ನು ಜನರನ್ನು ಪ್ರೇರೇಪಿಸಲು, ಸ್ನೇಹಿತರು, ಕುಟುಂಬಗಳು ಮತ್ತು ಸಮಾನ ಮನಸ್ಕ ಗುಂಪುಗಳು ಇತ್ಯಾದಿಗಳನ್ನು ಗರಿಷ್ಠ ಪ್ರಮಾಣದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಪ್ರಯತ್ನಿಸಲಾಗುತ್ತಿದೆ.

ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವು 'ಹೊಸ ಸಾಮಾನ್ಯ ಜೀವನಶೈಲಿ' ಆದಾಗ 'ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟವನ್ನು ರೂಪಿಸಲಾಯಿತು, ಇದರಿಂದ ಸಾಮಾಜಿಕ ಅಂತರ ಮಾನದಂಡಗಳನ್ನು ಅನುಸರಿಸುವಾಗಲೂ ಫಿಟ್ನೆಸ್ ನ ಅಗತ್ಯವನ್ನು ಸಕ್ರಿಯವಾಗಿಡಲು, ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟವನ್ನು ವರ್ಚುವಲ್ ರನ್ ಪರಿಕಲ್ಪನೆಯ ಮೇಲೆ ಪ್ರಾರಂಭಿಸಲಾಯಿತು, ಅಂದರೆ 'ಇದನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ನಡೆಸಬಹುದು! ನಿಮಗೆ ಸೂಕ್ತವಾದ ಸಮಯದಲ್ಲಿ ನೀವು ನಿಮ್ಮ ಆಯ್ಕೆಯ ಮಾರ್ಗವನ್ನು ನಡೆಸುತ್ತೀರಿ. ಮೂಲತಃ, ನೀವು ನಿಮ್ಮ ಸ್ವಂತ ಓಟವನ್ನು ನಡೆಸುತ್ತೀರಿ ಮತ್ತು ನಿಮ್ಮ ಸ್ವಂತ ಓಟದ ಸ್ಪರ್ಧೆಗೆ ಸಮಯ ಮಾಡಿಕೊಳ್ಳುತ್ತೀರಿ'.

ಅಭಿಯಾನದ ಮೊದಲ ಆವೃತ್ತಿಯನ್ನು ಆಗಸ್ಟ್ 15ರಿಂದ ಅಕ್ಟೋಬರ್ 2,2020 ರವರೆಗೆ ಆಯೋಜಿಸಲಾಗಿತ್ತು. ಕೇಂದ್ರ ಸಶಸ್ತ್ರ ಪಡೆಗಳು, ಎನ್.ಜಿಒಗಳು, ಖಾಸಗಿ ಸಂಸ್ಥೆಗಳು, ಶಾಲೆಗಳು, ವ್ಯಕ್ತಿಗಳು, ಯುವ ಕ್ಲಬ್ ಗಳು ಸೇರಿದಂತೆ ಕೇಂದ್ರ/ರಾಜ್ಯ ಇಲಾಖೆಗಳು ಮತ್ತು ಸಂಘಟನೆಗಳ 5 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಸುಮಾರು 18 ಕೋಟಿ ಕಿ.ಮೀ ದೂರವನ್ನು ಕ್ರಮಿಸಿದ್ದರು.

***



(Release ID: 1744579) Visitor Counter : 250