ಹಣಕಾಸು ಸಚಿವಾಲಯ
17 ರಾಜ್ಯಗಳಿಗೆ 9,871 ಕೋಟಿ ರೂ.ಗಳ ಆದಾಯ ಕೊರತೆ ಅನುದಾನ ಬಿಡುಗಡೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟು 49,355 ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ
Posted On:
10 AUG 2021 11:15AM by PIB Bengaluru
ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು 2021ರ ಆಗಸ್ಟ್ 9ರಂದು ರಾಜ್ಯಗಳಿಗೆ ತೆರಿಗೆ ಹಂಚಿಕೆ ನಂತರದ ಆದಾಯ ಕೊರತೆ (ಪೋಸ್ಟ್ ಡಿವಲ್ಯೂಷನ್ ರೆವೆನ್ಯೂ ಡಿಫಿಸಿಟ್ – ಪಿಡಿಆರ್‌ಡಿ) ಅನುದಾನದ 5ನೇ ಮಾಸಿಕ ಕಂತಿನ ಭಾಗವಾಗಿ 9,871 ಕೋಟಿ ರೂ. ಗಳನ್ನು ಬಿಡುಗಡೆಮಾಡಿದೆ. ಈ ಕಂತು ಬಿಡುಗಡೆಯೊಂದಿಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 49,355 ಕೋಟಿ ರೂ. ತೆರಿಗೆ ನಂತರದ ಆದಾಯ ಕೊರತೆ ಅನುದಾನವನ್ನು (ಪಿಡಿಆರ್‌ಡಿ) ಅರ್ಹ ರಾಜ್ಯಗಳಿಗೆ ಬಿಡುಗಡೆ ಮಾಡಿದಂತಾಗಿದೆ.
ಈ ತಿಂಗಳು ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2021-22ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಪಿಡಿಆರ್‌ಡಿ ಅನುದಾನದ ಒಟ್ಟು ಮೊತ್ತದ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ.
ತೆರಿಗೆ ವರ್ಗಾವಣೆ ನಂತರದ ಆದಾಯ ಕೊರತೆ ಅನುದಾನವನ್ನು ಸಂವಿಧಾನದ ಅನುಚ್ಛೇದ 275ರ ಅಡಿಯಲ್ಲಿ ರಾಜ್ಯಗಳಿಗೆ ನೀಡಲಾಗಿದೆ. ತೆರಿಗೆ ವರ್ಗಾವಣೆ ನಂತರ ರಾಜ್ಯಗಳ ಆದಾಯ ಖೋತಾವನ್ನು ತುಂಬಲು ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳ ಅನುಸಾರ ಮಾಸಿಕ ಕಂತುಗಳಲ್ಲಿ ಅನುದಾನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆಯೋಗವು 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ ಪಿಡಿಆರ್‌ಡಿ ಅನುದಾನವನ್ನು ಶಿಫಾರಸು ಮಾಡಿದೆ.
ಈ ಅನುದಾನವನ್ನು ಸ್ವೀಕರಿಸಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ಆದಾಯದ ಮೌಲ್ಯಮಾಪನ ಮತ್ತು ರಾಜ್ಯದ ಖರ್ಚಿನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸುತ್ತದೆ. 2021-22ನೇ ಆರ್ಥಿಕ ವರ್ಷಕ್ಕೆ ತೆರಿಗೆ ಹಂಚಿಕೆ ಮೌಲ್ಯಮಾಪನವನ್ನು ಆಯೋಗವು ಗಣನೆಗೆ ತೆಗೆದುಕೊಂಡಿದೆ.
ಹದಿನೈದನೇ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ.ಗಳ ತೆರಿಗೆ ಹಂಚಿಕೆ ನಂತರದ ಆದಾಯ ಕೊರತೆ ಅನುದಾನವನ್ನು ಶಿಫಾರಸು ಮಾಡಿದೆ. ಇದರಲ್ಲಿ ಈವರೆಗೆ 49,355 ಕೋಟಿ ರೂ(41.67%) ಹಣ ಬಿಡುಗಡೆಯಾಗಿದೆ.
ಹದಿನೈದನೇ ಹಣಕಾಸು ಆಯೋಗವು ಪಿಡಿಆರ್‌ಡಿ ಅನುದಾನಕ್ಕೆ ಶಿಫಾರಸು ಮಾಡಿದ ರಾಜ್ಯಗಳು: ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.
ರಾಜ್ಯವಾರು ತೆರಿಗೆ ಹಂಚಿಕೆ ನಂತರದ ಆದಾಯ ಕೊರತೆ ಅನುದಾನ ಬಿಡುಗಡೆ
ಕ್ರ.ಸಂ
|
ರಾಜ್ಯದ ಹೆಸರು
|
ಜುಲೈ 2021ರಲ್ಲಿ ಬಿಡುಗಡೆಯಾದ ಮೊತ್ತ
(5ನೇ ಕಂತು)
(ಕೋಟಿ ರೂ. ಗಳಲ್ಲಿ)
|
2021-22ರ ಅವಧಿಯಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ
(ಕೋಟಿ ರೂ.ಗಳಲ್ಲಿ)
|
1
|
ಆಂಧ್ರ ಪ್ರದೇಶ
|
1438.08
|
7190.42
|
2
|
ಅಸ್ಸಾಂ
|
531.33
|
2656.67
|
3
|
ಹರಿಯಾಣ
|
11.00
|
55.00
|
4
|
ಹಿಮಾಚಲ ಪ್ರದೇಶ
|
854.08
|
4270.42
|
5
|
ಕರ್ನಾಟಕ
|
135.92
|
679.58
|
6
|
ಕೇರಳ
|
1657.58
|
8287.92
|
7
|
ಮಣಿಪುರ
|
210.33
|
1051.67
|
8
|
ಮೇಘಾಲಯ
|
106.58
|
532.92
|
9
|
ಮಿಜೋರಾಂ
|
149.17
|
745.83
|
10
|
ನಾಗಾಲ್ಯಾಂಡ್
|
379.75
|
1898.75
|
11
|
ಪಂಜಾಬ್
|
840.08
|
4200.42
|
12
|
ರಾಜಸ್ಥಾನ
|
823.17
|
4115.83
|
13
|
ಸಿಕ್ಕಿಂ
|
56.50
|
282.50
|
14
|
ತಮಿಳುನಾಡು
|
183.67
|
918.33
|
15
|
ತ್ರಿಪುರಾ
|
378.83
|
1894.17
|
16
|
ಉತ್ತರಾಖಂಡ
|
647.67
|
3238.33
|
17
|
ಪಶ್ಚಿಮ ಬಂಗಾಳ
|
1467.25
|
7336.25
|
|
ಒಟ್ಟು
|
9,871.00
|
49,355.00
|
***
(Release ID: 1744377)
Visitor Counter : 377