ಹಣಕಾಸು ಸಚಿವಾಲಯ

ಹೊಸ ಡಿಜಿಟಲ್ ಪಾವತಿ ವಿಧಾನ ಇ-ರುಪಿ ಬಗ್ಗೆ ತಿಳಿಯಿರಿ

Posted On: 06 AUG 2021 10:57AM by PIB Bengaluru

(ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 2ರಂದು ಡಿಜಿಟಲ್ ಪಾವತಿ ಪರಿಹಾರ -ರುಪಿ, ಡಿಜಿಟಲ್ ಪಾವತಿಗಾಗಿ ನಗದು ರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಸಾಧನಕ್ಕೆ ಚಾಲನೆ ನೀಡಿದರು. ದೇಶದ ಡಿಜಿಟಲ್ ವಹಿವಾಟಿನಲ್ಲಿ ನೇರ ನಗದು ವರ್ಗಾವಣೆ(ಡಿಬಿಟಿ)ಯನ್ನು ಇನ್ನೂ ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುವಲ್ಲಿ  -ರುಪಿ ವೋಚರ್ ಮತ್ತು ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮ ನೀಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. -ರುಪಿ ಜನರ ಜೀವನವನ್ನು ತಂತ್ರಜ್ಞಾನದೊಂದಿಗೆ ಹೇಗೆ ಬೆಸೆಯುವ ಮೂಲಕ ಭಾರತವು ಹೇಗೆ ಮುಂದುವರಿಯುತ್ತಿದೆ ಎಂಬುದರ ಸಂಕೇತವಾಗಿದೆ ಎಂದು ಅವರು ಹೇಳಿದರು.)

-ರುಪಿ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

-ರುಪಿ ಮೂಲತಃ ಡಿಜಿಟಲ್ ವೋಚರ್ ಆಗಿದ್ದು, ಇದರಲ್ಲಿ ಫಲಾನುಭವಿ ಎಸಎಂಎಸ್ ಅಥವಾ ಕ್ಯೂಆರ್ ಕೋಡ್ ವಿಧಾನ ಮೂಲಕ ತಮ್ಮ ಮೊಬೈಲ್ ಫೋನ್ ಗೆ ಡಿಜಿಟಲ್ ವೋಚರ್ ಅನ್ನು ಪಡೆದುಕೊಳ್ಳಲಿದ್ದಾರೆ. ಇದು ಪ್ರೀ ಪೇಯ್ಡ್  ವೋಚರ್ ಆಗಿದ್ದು, ಆತ ಅಥವಾ ಆಕೆ ಯಾವುದೇ ಕೇಂದ್ರಕ್ಕೆ ಹೋಗಿ ಅದನ್ನು ಮರಳಿಸಿದರೂ ಅಲ್ಲಿ ಅದನ್ನು ಸ್ವೀಕರಿಸಲಾಗುವುದು.

ಉದಾಹರಣೆಗೆ ಸರ್ಕಾರ ಯಾವುದಾದರೂ ಉದ್ಯೋಗಿಗೆ ನಿರ್ದಿಷ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಬಯಸಿದರೆ ಅದು ಪಾಲುದಾರ ಬ್ಯಾಂಕ್ ಮೂಲಕ ನಿಗದಿತ ಮೊತ್ತಕ್ಕೆ -ರುಪಿ ವೋಚರ್ ಅನ್ನು ವಿತರಿಸಬಹುದು. ಉದ್ಯೋಗಿ ತನ್ನ ಮೊಬೈಲ್ ಫೋನ್/ಸ್ಮಾರ್ಟ್ ಫೋನ್ ನಲ್ಲಿ ಎಸ್ಎಂಎಸ್ ಅಥವಾ ಕ್ಯೂಆರ್ ಕೋಡ್ ಅನ್ನು ಸ್ವೀಕರಿಸುವರು. ಆತ ಅಥವಾ ಆಕೆ ನಿರ್ದಿಷ್ಟ ಆಸ್ಪತ್ರೆಗೆ ತೆರಳಿ ಸೇವೆಗಳನ್ನು ಪಡೆದುಕೊಂಡು ತಮ್ಮು ಫೋನ್ ಗೆ ಸ್ವೀಕರಿಸಿರುವ -ರುಪಿ ವೋಚರ್ ಮೂಲಕ ಪಾವತಿಸಬಹುದು.

ಹಾಗಾಗಿ -ರುಪಿ ಒಂದು ಭಾರಿಯ ಸಂಪರ್ಕವಿಲ್ಲದ, ನಗದುರಹಿತ ಚೀಟಿ ಆಧಾರಿತ ಪಾವತಿ ವಿಧಾನವಾಗಿದ್ದು, ಬಳಕೆದಾರರು ಯಾವುದೇ ಕಾರ್ಡ್, ಡಿಜಿಟಲ್ ಪಾವತಿ ಆಪ್ ಅಥವಾ ಅಂತರ್ಜಾಲ ಬ್ಯಾಂಕಿಂಗ್ ಲಭ್ಯತೆ ಅಗತ್ಯವಿಲ್ಲದೆ ವೋಚರ್ ಅನ್ನು ರಿಡೀಮ್ ಮಾಡಲು ಸಹಾಯ ಮಾಡುತ್ತದೆ.

-ರುಪಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯೊಂದಿಗೆ ಹೋಲಿಸಿ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. -ರುಪಿಗೆ ಬದಲಾಗಿ ನಿರ್ದಿಷ್ಟ ವ್ಯಕ್ತಿ ಮತ್ತು ವಿಶಿಷ್ಟ ಉದ್ದೇಶಕ್ಕಾಗಿ ಡಿಜಿಟಲ್ ವೋಚರ್ ನೀಡಲಾಗುವುದು

-ರುಪಿ ಹೇಗೆ ಗ್ರಾಹಕರಿಗೆ ಅನುಕೂಲಕರವಾಗಿದೆ?

-ರುಪಿಗೆ ಫಲಾನುಭವಿ ಯಾವುದೇ ಬ್ಯಾಂಕ್ ಖಾತೆ ಹೊಂದಿರುವ ಅಗತ್ಯವಿಲ್ಲ, ಇದು ಇತರೆ ಡಿಜಿಟಲ್ ಪಾವತಿ ವಿಧಾನಗಳಿಗೆ ಹೋಲಿಸಿದರೆ ಅತ್ಯಂತ ಪ್ರಮುಖ ವಿನೂತನ ಅಂಶವಾಗಿದೆ. ಇದು ಸುಲಭ, ಸಂಪರ್ಕರಹಿತ ಎರಡು ಹಂತದ ವಿಮೋಚನಾ ಪ್ರಕ್ರಿಯೆ ಒಳಗೊಂಡಿದೆವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ.

-ರುಪಿಯ ಮತ್ತೊಂದು ಅನುಕೂಲ ಎಂದರೆ ಅದನ್ನು ಸಾಮಾನ್ಯ ಫೋನ್ ನಲ್ಲೂ ಬಳಕೆ ಮಾಡಬಹುದು ಮತ್ತು ಅದರಿಂದ ಸ್ಮಾರ್ಟ್ ಫೋನ್ ಇಲ್ಲದವರೂ ಅಥವಾ ಅಂತರ್ಜಾಲ ಸಂಪರ್ಕ ಕೊರತೆ ಇರುವ ಪ್ರದೇಶಗಳಲ್ಲೂ ಸಹ ಬಳಕೆ ಮಾಡಬಹುದಾಗಿದೆ.

ಪ್ರಾಯೋಜಕರಿಗೆ -ರುಪಿಯ ಪ್ರಯೋಜನಗಳೇನು?

ನೇರ ನಗದು ವರ್ಗಾವಣೆ ಬಲವರ್ಧನೆಯಲ್ಲಿ ಮತ್ತು ಇನ್ನು ಹೆಚ್ಚು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ -ರುಪಿ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ. ಭೌತಿಕವಾಗಿ ವೋಚರ್ ವಿತರಣೆ ಅಗತ್ಯವಿಲ್ಲದಿರುವುದರಿಂದ ಇದು ಸ್ವಲ್ಪ ಪ್ರಮಾಣದ ವೆಚ್ಚವನ್ನೂ ಸಹ ಉಳಿತಾಯ ಮಾಡುತ್ತದೆ.

ಸೇವಾ ಪೂರೈಕೆದಾರರಿಗೆ ಯಾವ ರೀತಿಯ ಲಾಭಗಳು ದೊರೆಯಲಿವೆ?

ಪೂರ್ವ ಪಾವತಿ ವೋಚರ್ ಆಗಿರುವುದರಿಂದ -ರುಪಿಯಲ್ಲಿ ಸೇವಾ ಪೂರೈಕೆದಾರರಿಗೆ ಖಚಿತ ರಿಯಲ್ ಟೈಮ್, (ಸಕಾಲಿಕ) ಪಾವತಿಯಾಗಲಿದೆ.

-ರುಪಿಯನ್ನು ಯಾರು ಅಭಿವೃದ್ಧಿಪಡಿಸಿದ್ದಾರೆ?

ಭಾರತದಲ್ಲಿ ಡಿಜಿಟಲ್ ಪಾವತಿ ಪೂರಕ ವ್ಯವಸ್ಥೆಯ ಮೇಲೆ ನಿಗಾ ಇರಿಸುತ್ತಿರುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್ ಪಿಸಿಐ) -ರುಪಿಯನ್ನು ಆರಂಭಿಸಿದೆ. ನಗದುರಹಿತ ವಹಿವಾಟನ್ನುಉತ್ತೇಜಿಸಲು ವೋಚರ್ ಆಧಾರಿತ ಪಾವತಿ ವ್ಯವಸ್ಥೆಯಾಗಿದೆ

ಇದನ್ನು ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

-ರುಪಿಯನ್ನು ಯಾವ ಬ್ಯಾಂಕುಗಳು ವಿತರಿಸುತ್ತವೆ?

-ರುಪಿ ವಹಿವಾಟುಗಳಿಗಾಗಿ ಎನ್ ಪಿಸಿಐ 11 ಬ್ಯಾಂಕುಗಳ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಅವುಗಳೆಂದರೆ ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಕೊಟಾಕ್ ಮಹೇಂದ್ರ ಬ್ಯಾಂಕ್, ಪಂಜಾಬ್ ರಾಷ್ಟ್ರೀಯ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ.

ಭಾರತ್ ಪೆ, ಭೀಮ ಬರೋಡಾ ಮರ್ಚೆಂಟ್ ಪೆ, ಪೈನ್ ಲ್ಯಾಬ್ಸ್, ಪಿಎನ್ ಬಿ ಮರ್ಚೆಂಟ್ ಪೆ ಮತ್ತು ಯುನೊ ಎಸ್ ಬಿಐ ಮರ್ಚೆಂಟ್ ಪೆ ಮೂಲಕ ಪಡೆಯಬಹುದಾಗಿದೆ

ಸದ್ಯದಲ್ಲೇ -ರುಪಿ ಉಪಕ್ರಮದಲ್ಲಿ ಹಲವು ಬ್ಯಾಂಕುಗಳು ಹಾಗೂ ಆಪ್ ಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ.

ಈಗ -ರುಪಿಯನ್ನು ಎಲ್ಲಿ ಬಳಸಬಹುದು?

ಆರಂಭಿಕವಾಗಿ ಎನ್ ಸಿಪಿಐ, -ರುಪಿಯನ್ನು ಮಾನ್ಯ ಮಾಡುವ `1,600ಕ್ಕೂ ಅಧಿಕ ಆಸ್ಪತ್ರೆಗಳ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.

ಮುಂದಿನ ದಿನಗಳಲ್ಲಿ -ರುಪಿ ಬಳಕೆದಾರರ ವ್ಯಾಪ್ತಿ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ತಜ್ಞರು. ಅಲ್ಲದೆ ಖಾಸಗಿ ವಲಯದವರು ತಮ್ಮ ಸಹೋದ್ಯೋಗಿಗಳಿಗೆ ಪ್ರಯೋಜನಗಳನ್ನು ತಲುಪಿಸಲು ಇದನ್ನು ಬಳಸುತ್ತಾರೆ  ಮತ್ತು ಎಂಎಸ್ಎಂಇಗಳಿಗೆ ಬಿಸಿನೆಸ್ ಟು ಬಿಸಿನೆಸ್(ಬಿ2ಬಿ) ವಹಿವಾಟುಗಳನ್ನು ನಡೆಸಲು ನೆರವಾಗಲಿದೆ.

☆☆☆



(Release ID: 1743103) Visitor Counter : 620